twitter
    For Quick Alerts
    ALLOW NOTIFICATIONS  
    For Daily Alerts

    ಬೆಳ್ಳಿತೆರೆಯಲ್ಲಿ ಮೂಡಿ ಬರಲಿದೆ ಪ್ರಣಯ್- ಅಮೃತಾ ಮನಕಲುಕುವ ಕತೆ

    By ಜೇಮ್ಸ್ ಮಾರ್ಟಿನ್
    |

    ದಲಿತ ಯುವಕ ಪ್ರಣಯ್ ಪ್ರೀತಿಸಿ ವಿವಾಹವಾಗಿದ್ದ ಆರ್ಯವೈಶ್ಯ ಸಮುದಾಯದ ಅಮೃತಾಳಿಗೆ ತನ್ನ ತಂದೆಯಿಂದಲೇ ವೈಧ್ಯವ್ಯ ಪ್ರಾಪ್ತಿಯಾಗುತ್ತದೆ ಎಂದು ಕನಸು ಕಂಡಿರಲಿಲ್ಲ. ಕುಟುಂಬದ ವಿರೋಧವಾಗಿ ಮದುವೆಯಾದ ಕಾರಣಕ್ಕೆ ಅಳಿಯನನ್ನು ಕೊಲ್ಲಿಸಿದ್ದ ಮಾರುತಿ ರಾವ್ ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಗೊಂದಲದ ನಡುವೆ ಮಾರುತಿ ರಾವ್ ಅಂತ್ಯಕ್ರಿಯೆ ನೆರವೇರಿದೆ. ಆದರೆ, ಕೊನೆಯ ಬಾರಿಗೆ ಅಪ್ಪನ ಮುಖ ಕಾಣಲಾಗದೆ ಮಗಳು ಅಮೃತಾ ಕಣ್ಣೀರಿಟ್ಟಿದ್ದಾಳೆ. ಇಡೀ ದೇಶದಲ್ಲಿ ಕಂಡ ಎಷ್ಟೋ ಮರ್ಯಾದಾ ಹತ್ಯಾ ಪ್ರಕರಣದಲ್ಲಿ ಹೆಚ್ಚು ಸಂಚಲನ ಮೂಡಿಸಿದ್ದು ಪ್ರಣಯ್- ಅಮೃತಾ ದುರಂತ ಪ್ರೇಮ ಕಹಾನಿ. ಈಗ ನೈಜ ಕಥೆ ಆಧಾರಿತ ಸಿನಿಮಾವೊಂದು ಮಾರ್ಚ್ 20ರಂದು ತೆರೆಗೆ ಬರುತ್ತಿದೆ.

    ಕೊನೆ ಬಾರಿ ಅಪ್ಪನ ಮುಖ ಕಾಣದೆ ಕಣ್ಣೀರಿಟ್ಟ ಅಮೃತಾ

    ಪ್ರಣಯ್ ಪೆರುಮಲ್ಲಾ ಮರ್ಯಾದಾ ಹತ್ಯೆ ಪ್ರಕರಣ ಆಧಾರಿತ ಚಿತ್ರದ ಹೆಸರು ಅನ್ನಪೂರ್ಣಮ್ಮಗಾರಿ ಮನವಡು. ಬಾಲಾದಿತ್ಯ ಹಾಗೂ ಅರ್ಚನಾ ಪ್ರಮುಖ ಪಾತಧಾರಿಗಳಾಗಿದ್ದು, ನರಾ ಶಿವನಾಗೇಶ್ವರ್ ರಾವ್ ಅವರು ನಿರ್ದೇಶನ ಮಾಡುತ್ತಿದ್ದಾರೆ.

     ಪ್ರೇಮ ಕಥೆ-ಮರ್ಯದಾ ಹತ್ಯೆ ಪ್ರಕರಣ

    ಪ್ರೇಮ ಕಥೆ-ಮರ್ಯದಾ ಹತ್ಯೆ ಪ್ರಕರಣ

    ಈ ಮರ್ಯದಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮಾರುತಿರಾವ್ ಆತ್ಮಹತ್ಯೆ ಮಾಡಿಕೊಂಡಿದ್ದು, ಸಾಯುವುದಕ್ಕೂ ಮುನ್ನ ಮಗಳಿಗೆ ಭಾವನಾತ್ಮಕ ಸಂದೇಶ ಬರೆದಿಟ್ಟು ಹೋಗಿದ್ದಾರೆ. ಎರಡು ಕುಟುಂಬದ ನಡುವೆ ಇನ್ನೂ ವೈಮನಸ್ಯ ಮುಂದುವರೆದಿದೆ. ಈ ನಡುವೆ ನಿರ್ದೇಶಕ ಶಿವನಾಗೇಶ್ವರ್ ರಾವ್ ಅವರು ಮಿರ್ಯಾಲಗುಡದ ಪ್ರಣಯ್- ಅಮೃತಾ ಪಾತ್ರದಲ್ಲಿ ಬಾಲಾದಿತ್ಯ ಹಾಗೂ ಅರ್ಚನಾ ನಟಿಸುತ್ತಿದ್ದರೆ, ಹಿರಿಯ ನಟ ಬ್ಯಾನರ್ಜಿ ಮಾರುತಿ ರಾವ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

     ಮಿರ್ಯಾಲಗುಡ ನಿವಾಸಿ ಮಾರುತಿರಾವ್ ಆತ್ಮಹತ್ಯೆ

    ಮಿರ್ಯಾಲಗುಡ ನಿವಾಸಿ ಮಾರುತಿರಾವ್ ಆತ್ಮಹತ್ಯೆ

    ಆಂಧ್ರಪ್ರದೇಶದ ನಲ್ಗೊಂಡ ಜಿಲ್ಲೆಯ ಮಿರ್ಯಾಲಗುಡ ನಿವಾಸಿ ಮಾರುತಿರಾವ್ ರಿಯಲ್ ಎಸ್ಟೇಟ್ ಉದ್ಯಮಿ. 2018ರ ಸೆಪ್ಟೆಂಬರ್ 15ರಂದು ಪುತ್ರಿ ಅಮೃತಾ ಪತಿ ಪ್ರಣಯ್ ಪೆರುಮಲ್ಲಾರನ್ನು ಸುಪಾರಿ ನೀಡಿ ಹತ್ಯೆ ಮಾಡಿಸಿದ್ದರು. ಈ ಪ್ರಕರಣದಲ್ಲಿ ಜೈಲು ಸೇರಿದ್ದ ಅವರು ಕೆಲವು ದಿನಗಳ ಹಿಂದೆ ಬಿಡುಗಡೆಯಾಗಿದ್ದರು. ಆದರೆ, ಕಳೆದ ವಾರ ಹೈದರಾಬಾದ್‌ನ ಖೈರತಾಬಾದ್ ಆರ್ಯವೈಶ್ಯ ಭವನದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಅಮೃತಾ ನೋವಿಗೆ ಮಿಡಿದ ಶ್ರೀ ರೆಡ್ಡಿ; ಸ್ಟೇಟಸ್ ವೈರಲ್ಅಮೃತಾ ನೋವಿಗೆ ಮಿಡಿದ ಶ್ರೀ ರೆಡ್ಡಿ; ಸ್ಟೇಟಸ್ ವೈರಲ್

     ಸಿನಿಮಾ ಬಗ್ಗೆ ಎರಡು ಕುಟುಂಬಕ್ಕಿಲ್ಲವೇ ಮಾಹಿತಿ

    ಸಿನಿಮಾ ಬಗ್ಗೆ ಎರಡು ಕುಟುಂಬಕ್ಕಿಲ್ಲವೇ ಮಾಹಿತಿ

    ಮಾರುತಿ ರಾವ್ ಕುಟುಂಬ ಹಾಗೂ ತಂದೆಯನ್ನು ಕಳೆದುಕೊಂಡ ಅಮೃತಾಳಿಗೆ ಈ ಸಿನಿಮಾ ಬಗ್ಗೆ ಮಾಹಿತಿ ಇದ್ದಂತೆ ಕಾಣುತ್ತಿಲ್ಲ. ನೈಜ ಕಥೆ ಸಿನಿಮಾ ಮಾಡುವುದಕ್ಕೂ ಮುನ್ನ ಘಟನೆಗೆ ಸಂಬಂಧಿಸಿದವರ ಅನುಮತಿ ಅತ್ಯಗತ್ಯ. ಸದ್ಯ ಪ್ರಣಯ್- ಮಾರುತಿ ರಾವ್ ಮೃತರಾಗಿದ್ದಾರೆ. ಮಾರುತಿರಾವ್ ಸೋದರ ಶ್ರವಣ್ ,ಆರ್ಯ ವೈಶ್ಯ ಸಮುದಾಯದ ವಿರೋಧದ ನಡುವೆ ಪುಟ್ಟ ಮಗುವಿನ ತಾಯಿ ಅಮೃತಾ ಬಾಳ್ವೆ ಸಾಗಿಸಲು ಮುಂದಾಗಿದ್ದಾಳೆ. ಎರಡು ಕುಟುಂಬ ಅವರ ನೋವಿನಲ್ಲಿ ಅವರಿದ್ದಾರೆ. ಸಿನಿಮಾ ಬಗ್ಗೆ ಇನ್ನೂ ಯಾರೂ ಆಕ್ಷೇಪವೆತ್ತಿಲ್ಲ. ಹೀಗಾಗಿ ನಿಗದಿಯಂತೆ ಚಿತ್ರ ತೆರೆ ಕಾಣುವ ಸಾಧ್ಯತೆಯಿದೆ.

     ಅಮೃತಾ ಪ್ರಕರಣದ ಬಗ್ಗೆ ಶ್ರೀರೆಡ್ಡಿ ಪ್ರತಿಕ್ರಿಯೆ

    ಅಮೃತಾ ಪ್ರಕರಣದ ಬಗ್ಗೆ ಶ್ರೀರೆಡ್ಡಿ ಪ್ರತಿಕ್ರಿಯೆ

    "ಅಮೃತಾ ನಿನ್ನ ನೋವು ನನಗೆ ಅರ್ಥವಾಗುತ್ತದೆ. ನಷ್ಟಕ್ಕಾಗಿ ಕ್ಷಮೆ ಇರಲಿ. ದೇವರು ನಿನಗೆ ಮತ್ತು ನಿನ್ನ ಮಗುವಿಗೆ ಒಳ್ಳೆಯದು ಮಾಡಲಿ" ಎಂದು ನಟಿ ಶ್ರೀ ರೆಡ್ಡಿ ಸ್ಟೇಟಸ್ ಹಾಕಿದ್ದಾರೆ. ಶ್ರೀ ರೆಡ್ಡಿಯ ಹಲವಾರು ಅಭಿಮಾನಿಗಳು ಅಮೃತಾ ನೋವಿಗೆ ಮಿಡಿದಿದ್ದಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.

    ಮೆಗಾ ಸ್ಟಾರ್ ಮಾಡಿದ ಒಂದು ಫೋನ್ ಕರೆ ಹಿರಿಯ ನಟನ ಜೀವ ಉಳಿಸಿತುಮೆಗಾ ಸ್ಟಾರ್ ಮಾಡಿದ ಒಂದು ಫೋನ್ ಕರೆ ಹಿರಿಯ ನಟನ ಜೀವ ಉಳಿಸಿತು

    English summary
    Annapurnamma Gari Manavadu Film based on Miryalaguda's Amrutha- Pranay- Maruthi Rao real incident, honor killing story set to release on March 20.
    Thursday, March 12, 2020, 14:21
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X