For Quick Alerts
  ALLOW NOTIFICATIONS  
  For Daily Alerts

  ಮಹೇಶ್ ಬಾಬು ಸಿನಿಮಾದಲ್ಲಿ ಅನುಷ್ಕಾ ಶೆಟ್ಟಿ: ವೈರಲ್ ಆದ ಟ್ವೀಟ್‌ನಲ್ಲಿ ಏನಿದೆ?

  |

  ಒಂದು ಕಾಲದ ಬಹುಬೇಡಿಕೆಯ ನಟಿ ಅನುಷ್ಕಾ ಶೆಟ್ಟಿಗೆ ಇತ್ತೀಚೆಗೆ ಅವಕಾಶಗಳ ಕೊರತೆ ಕಾಡುತ್ತಿದೆ. ಆದರೆ ಪ್ರತಿಭಾವಂತೆ ಅನುಷ್ಕಾ ನಾಯಕಿ ಪಾತ್ರವೇ ಅಲ್ಲ ಯಾವುದೇ ಪಾತ್ರವಾದರೂ ಲೀಲಾಜಾಲವಾಗಿ ನಿರ್ವಹಿಸಬಲ್ಲರು.

  ಸ್ಟಾರ್ ನಟ ಮಹೇಶ್ ಬಾಬು ಹೊಸ ಸಿನಿಮಾದಲ್ಲಿ ನಟಿ ಅನುಷ್ಕಾ ಶೆಟ್ಟಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಹೀಗೆ ಸುದ್ದಿ ಹರಿದಾಡಲು ಕಾರಣವಾಗಿರುವುದು ಒಂದು ಟ್ವೀಟ್.

  ಮಹೇಶ್ ಬಾಬು ನಟಿಸುತ್ತಿರುವ 'ಸರ್ಕಾರು ವಾರಿ ಪಾಟ' ಸಿನಿಮಾದಲ್ಲಿ ನಟಿ ಅನುಷ್ಕಾ ಶೆಟ್ಟಿ ನಟಿಸುತ್ತಿದ್ದಾರೆ. ಇದು ಮಹೇಶ್ ಬಾಬು ಹಾಗೂ ಅನುಷ್ಕಾ ಶೆಟ್ಟಿ ಅಭಿಮಾನಿಗಳಿಗೆ ಭಾರಿ ಸಂತಸ ತಂದಿದೆ. ಮಹೇಶ್ ಬಾಬು ಜೊತೆಗೆ ಅನುಷ್ಕಾ ಶೆಟ್ಟಿ ನಟಿಸುತ್ತಿರುವ ಎರಡನೇ ಸಿನಿಮಾ ಇದಾಗಲಿದೆ.

  ಟ್ವೀಟ್ ಮಾಡಿ ಸ್ವಾಗತ ಕೋರಿದ ನಿರ್ದೇಶಕ

  ಟ್ವೀಟ್ ಮಾಡಿ ಸ್ವಾಗತ ಕೋರಿದ ನಿರ್ದೇಶಕ

  ಸರ್ಕಾರು ವಾರಿ ಪಾಠ ಸಿನಿಮಾದ ನಿರ್ದೇಶಕ ಪರಶುರಾಮ್ ಟ್ವೀಟ್ ಮಾಡಿ ಅನುಷ್ಕಾ ಶೆಟ್ಟಿಗೆ ಸಿನಿಮಾಕ್ಕೆ ಸ್ವಾಗತ ಕೋರಿದ್ದಾರೆ. ಅಲ್ಲಿಗೆ ನಟಿ ಅನುಷ್ಕಾ ಶೆಟ್ಟಿ, ಮಹೇಶ್ ಬಾಬು ಸಿನಿಮಾದಲ್ಲಿ ನಟಿಸುತ್ತಿರುವುದು ಖಾಯಂ ಆಗಿದೆ.

  ಬ್ಯಾಂಕ್ ಮ್ಯಾನೇಜರ್ ಪಾತ್ರದಲ್ಲಿ ಅನುಷ್ಕಾ

  ಬ್ಯಾಂಕ್ ಮ್ಯಾನೇಜರ್ ಪಾತ್ರದಲ್ಲಿ ಅನುಷ್ಕಾ

  'ಸರ್ಕಾರು ವಾರಿ ಪಾಠ' ಸಿನಿಮಾಕ್ಕೆ ಅನುಷ್ಕಾ ಶೆಟ್ಟಿಗೆ ಸ್ವಾಗತ. ನಮ್ಮ ಸಿನಿಮಾದಲ್ಲಿ ಪವರ್‌ಫುಲ್ ಪಾತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಕ್ಕೆ ಧನ್ಯವಾದ. ಬ್ಯಾಂಕ್ ಆಫೀಸರ್ ಪಾತ್ರದಲ್ಲಿ ನೀವು ಮಿಂಚಲಿದ್ದೀರಿ ಎಂದು ಸಿನಿಮಾದ ನಿರ್ದೇಶಕ ಪರಶುರಾಮ್ ಟ್ವೀಟ್ ಮಾಡಿದ್ದಾರೆ.

  ಕೀರ್ತಿ ಸುರೇಶ್ ನಾಯಕಿ

  ಕೀರ್ತಿ ಸುರೇಶ್ ನಾಯಕಿ

  ಸರ್ಕಾರು ವಾರಿ ಪಾಠ ಸಿನಿಮಾದಲ್ಲಿ ಅನುಷ್ಕಾ ಶೆಟ್ಟಿ ನಾಯಕಿ ಅಲ್ಲ, ಈ ಸಿನಿಮಾದಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ನಟಿ ಕೀರ್ತಿ ಸುರೇಶ್ ನಾಯಕಿ. ಅನುಷ್ಕಾ ಶೆಟ್ಟಿ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ.

  2010 ರಲ್ಲಿ ಖಲೇಜಾ ಸಿನಿಮಾದಲ್ಲಿ ನಟನೆ

  2010 ರಲ್ಲಿ ಖಲೇಜಾ ಸಿನಿಮಾದಲ್ಲಿ ನಟನೆ

  ಈ ಹಿಂದೆ 2010 ರಲ್ಲಿ ಅನುಷ್ಕಾ ಶೆಟ್ಟಿ ಹಾಗೂ ಮಹೇಶ್ ಬಾಬು 'ಖಲೇಜಾ' ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಆ ಸಿನಿಮಾ ಸೂಪರ್ ಹಿಟ್ ಆಗಿತ್ತು. ಬರೋಬ್ಬರಿ ಹತ್ತು ವರ್ಷದ ನಂತರ ಇಬ್ಬರೂ ಒಟ್ಟಿಗೆ ನಟಿಸುತ್ತಿದ್ದಾರೆ. ಸರ್ಕಾರು ವಾರಿ ಪಾಠ ಸಿನಿಮಾವನ್ನು ಮೈತ್ರಿ ಮೂವೀಸ್ ನಿರ್ಮಿಸುತ್ತಿದ್ದಾರೆ.

  English summary
  Actress Anushka Shetty is part of Mahesh Babu starer Sarkaru Vari Paata. They both sharing screen after 10 years.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X