For Quick Alerts
  ALLOW NOTIFICATIONS  
  For Daily Alerts

  ತೆಲುಗು ಚಿತ್ರರಂಗದ ಅನಿಷ್ಟವೊಂದರ ಬಗ್ಗೆ ಅನುಷ್ಕಾ ಶೆಟ್ಟಿ ಹೇಳಿಕೆ

  |

  ಕಾಸ್ಟಿಂಗ್ ಕೌಚ್ (ಪಾತ್ರಕ್ಕಾಗಿ ಪಲ್ಲಂಗ) ಇತ್ತೀಚಿನ ದಿನಗಳಲ್ಲಿ ಎಲ್ಲಾ ಸಿನಿರಂಗದಲ್ಲಿ ಸದ್ದು ಮಾಡುತ್ತಿರುವ ಪದ. ಬಹುತೇಕ ಸ್ಟಾರ್ ನಟ-ನಟಿಯರು ವಿವಾದಕ್ಕೆ ಗುರಿಯಾಗುವ ಕಾರಣದಿಂದಾಗಿ ಇದರ ಬಗ್ಗೆ ಮಾತನಾಡದೆ ದೂರ ಉಳಿದಿದ್ದರು.

  Anushka Shetty Speaks On Casting Couch In Tollywood | Casting Couch | Me Too | Oneindia kannada

  ಆದರೆ ಅಪರೂಪ ಎಂಬಂತೆ ಅಲ್ಲೊಬ್ಬ-ಇಲ್ಲೊಬ್ಬ ಸ್ಟಾರ್ ನಟಿಯರು ಕಾಸ್ಟಿಂಗ್ ಕೌಚ್ ಬಗ್ಗೆ ಮುಕ್ತವಾಗಿ ಮಾತನಾಡುತ್ತಾರೆ. ಇದಕ್ಕೆ ಹೊಸ ಸರ್ಪಡೆ ಸ್ಟಾರ್ ನಟಿ ಅನುಷ್ಕಾ ಶೆಟ್ಟಿ.

  ತೆಲುಗು ಚಿತ್ರರಂಗದಲ್ಲೂ ಸಹ ಅನಿಷ್ಟ ಕಾಸ್ಟಿಂಗ್ ಕೌಚ್ (ಪಾತ್ರಕ್ಕಾಗಿ ಪಲ್ಲಂಗ) ಪದ್ಧತಿ ಇದೆ ಎಂದು ಬಹಿರಂಗವಾಗಿ ಅನುಷ್ಕಾ ಶೆಟ್ಟಿ ಹೇಳಿದ್ದಾರೆ. ಹೆಚ್ಚಿನ ವಿವರಗಳಿಗೆ ಮುಂದೆ ಓದಿರಿ...

  ತೆಲುಗು ಚಿತ್ರರಂಗದಲ್ಲಿ ಅನಿಷ್ಟ ಪದ್ಧತಿ ಇದೆ

  ತೆಲುಗು ಚಿತ್ರರಂಗದಲ್ಲಿ ಅನಿಷ್ಟ ಪದ್ಧತಿ ಇದೆ

  ತೆಲುಗು ಚಿತ್ರರಂಗದಲ್ಲೂ ಅನಿಷ್ಟ ಕಾಸ್ಟಿಂಗ್ ಕೌಚ್ ಇದೆ. ಆದರೆ ನನಗೆ ಅದರ ಅನುಭವ ಎಂದಿಗೂ ಆಗಿಲ್ಲ ಎಂದು ನಟಿ ಅನುಷ್ಕಾ ಶೆಟ್ಟಿ ಹೇಳಿದ್ದಾರೆ.

  ಈ ಕಾರಣಕ್ಕೆ ಅನುಷ್ಕಾ ಶೆಟ್ಟಿ ಕಾಸ್ಟಿಂಗ್ ಕೌಚ್‌ಗೆ ಬಲಿಯಾಗಿಲ್ಲ

  ಈ ಕಾರಣಕ್ಕೆ ಅನುಷ್ಕಾ ಶೆಟ್ಟಿ ಕಾಸ್ಟಿಂಗ್ ಕೌಚ್‌ಗೆ ಬಲಿಯಾಗಿಲ್ಲ

  ಚಿತ್ರರಂಗಕ್ಕೆ ಬಂದಾಗಿನಿಂದಲೂ ನಾನು ನೇರ ವ್ಯಕ್ತಿತ್ವ ಹಾಗೂ ನೇರ ಮಾತಿನ ನಡುವಳಿಕೆಯಿಂದಲೇ ನಡೆದುಕೊಂಡಿದ್ದೇನೆ. ಹಾಗಾಗಿ ನನಗೆ ಅಂಥಹಾ ಅನುಭವಗಳು ಈವರೆಗೆ ಆಗಿಲ್ಲ ಎಂದು ಅನುಷ್ಕಾ ಶೆಟ್ಟಿ ಹೇಳಿದ್ದಾರೆ.

  ಹೊಸ ನಟಿಯರಿಗೆ ಅನುಷ್ಕಾ ಶೆಟ್ಟಿ ಕಿವಿಮಾತು

  ಹೊಸ ನಟಿಯರಿಗೆ ಅನುಷ್ಕಾ ಶೆಟ್ಟಿ ಕಿವಿಮಾತು

  ಹೊಸ ಹೀರೋಯಿನ್ ಗಳಿಗೆ ಕಿವಿಮಾತು ಹೇಳಿರುವ ಅನುಷ್ಕಾ ಶೆಟ್ಟಿ ಶೀಘ್ರ ಖ್ಯಾತಿಯ ಹಿಂದೆ ಓಡಿ ಕಾಸ್ಟಿಂಗ್ ಕೌಚ್‌ ಗೆ ಬಲಿಯಾಗಬೇಡಿ, ನಿಮ್ಮ ದೇಹಸೌಂದರ್ಯಕ್ಕಿಂತಲೂ ಪ್ರತಿಭೆಯ ಮೇಲೆ ವಿಶ್ವಾಸವಿಡಿ, ಚಿತ್ರರಂಗದಲ್ಲಿ ಹೆಚ್ಚು ಕಾಲ ಉಳಿಯುತ್ತೀರಿ ಎಂದಿದ್ದಾರೆ ಅನುಷ್ಕಾ.

  ಕಾಸ್ಟಿಂಗ್ ಕೌಚ್ ಬಗ್ಗೆ ಮೊದಲು ಮಾತನಾಡಿದ್ದು ಈ ನಟಿ

  ಕಾಸ್ಟಿಂಗ್ ಕೌಚ್ ಬಗ್ಗೆ ಮೊದಲು ಮಾತನಾಡಿದ್ದು ಈ ನಟಿ

  ತೆಲುಗು ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ಮೊದಲು ಬಹಿರಂಗವಾಗಿ ಮಾತನಾಡಿದ್ದು ನಟಿ ಶ್ರೀ ರೆಡ್ಡಿ. ಆಕೆಯ ಹಲವು ಖ್ಯಾತನಮರ ಹೆಸರನ್ನು ಅವರು ಬಹಿರಂಗಗೊಳಿಸಿದ್ದರು. ಶ್ರೀ ರೆಡ್ಡಿ ಹೇಳಿಕೆ ತೆಲುಗು ಸಿನಿರಂಗದಲ್ಲಿ ವಿವಾದದ ಅಲೆ ಎಬ್ಬಿಸಿತ್ತು.

  ಹದಿನೈದು ವರ್ಷ ಪೂರೈಸಿದ ಅನುಷ್ಕಾ ಶೆಟ್ಟಿ

  ಹದಿನೈದು ವರ್ಷ ಪೂರೈಸಿದ ಅನುಷ್ಕಾ ಶೆಟ್ಟಿ

  ತೆಲುಗು ಚಿತ್ರರಂಗದಲ್ಲಿ ಅನುಷ್ಕಾ ಶೆಟ್ಟಿ 15 ವರ್ಷ ಪೂರೈಸಿದ್ದಾರೆ. ಪ್ರಸ್ತುತ ಅವರ ಅಭಿನಯದ ನಿಶ್ಯಬ್ಧಂ ತೆರೆಗೆ ಬರುತ್ತಿದೆ. ಕೊರೊನಾ ಭೀತಿಯಿಂದಾಗಿ ಸಿನಿಮಾ ಬಿಡುಗಡೆ ಮುಂದೂಡಲಾಗಿದೆ.

  English summary
  Actress Anushka Shetty admits that casting couch exist in Telugu film industry.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X