For Quick Alerts
  ALLOW NOTIFICATIONS  
  For Daily Alerts

  ಕನ್ನಡ, ತಮಿಳಿನ ನಂತರ ತೆಲುಗಿಗೆ ಆಶಿಕಾ; ಜೂ. ಎನ್‌ಟಿಆರ್ ಸೋದರನ ಜತೆ ರೊಮ್ಯಾನ್ಸ್?

  |

  2016ರಲ್ಲಿ ಬಿಡುಗಡೆಗೊಂಡ ಕ್ರೇಜಿ ಬಾಯ್ ಚಿತ್ರದ ಮೂಲಕ ನಾಯಕಿಯಾಗಿ ಸಿನಿಮಾರಂಗಕ್ಕೆ ಪ್ರವೇಶ ಪಡೆದುಕೊಂಡ ಆಶಿಕಾ ರಂಗನಾಥ್ ನಂತರ ಶಿವರಾಜ್ ಕುಮಾರ್ ಅಭಿನಯದ ಮಾಸ್ ಲೀಡರ್ ಚಿತ್ರದಲ್ಲೂ ಬಣ್ಣ ಹಚ್ಚಿದ್ದರು. ಆದರೆ ಆಶಿಕಾ ರಂಗನಾಥ್ ಅವರಿಗೆ ಐಡೆಂಟಿಟಿ ತಂದು ಕೊಟ್ಟದ್ದು ಮಾತ್ರ ಗಣೇಶ್ ಅಭಿನಯದ ಮುಗುಳುನಗೆ ಚಿತ್ರ.

  ಮುಗುಳುನಗೆ ಚಿತ್ರದಲ್ಲಿ ವೈಶಾಲಿ ಎಂಬ ಪಾತ್ರದಲ್ಲಿ ಅಭಿನಯಿಸಿದ್ದ ಆಶಿಕಾ ರಂಗನಾಥ್ ಚಿತ್ರದಲ್ಲಿನ ಮೂವರು ನಾಯಕಿಯರ ಪೈಕಿ ಓರ್ವರಾಗಿದ್ದರು. ಚಿತ್ರದುದ್ದಕ್ಕೂ ಇರುವ ಪಾತ್ರವಲ್ಲದಿದ್ದರೂ ಸಹ ಆಶಿಕಾ ರಂಗನಾಥ್ ಕಡಿಮೆ ಸಮಯದಲ್ಲಿಯೇ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಹೀಗೆ ಮುಗುಳುನಗೆ ಚಿತ್ರದ ಮೂಲಕ ಸಿನಿಮಾ ರಂಗದಲ್ಲಿ ದೊಡ್ಡ ತಿರುವು ಪಡೆದುಕೊಂಡ ಆಶಿಕಾ ರಂಗನಾಥ್ ಕೆಲವು ಆಫರ್ ಪಡೆದುಕೊಂಡರು.

  ಹೈದರಾಬಾದ್‌ನಲ್ಲಿ 'ಕಾಂತಾರ'ಕ್ಕಾಗಿ ಕೇವಲ ಎರಡು ದಿನಗಳ ಹಿಂದೆ ಬಿಡುಗಡೆಯಾಗಿದ್ದ ತೆಲುಗು ಚಿತ್ರ ಎತ್ತಂಗಡಿ!ಹೈದರಾಬಾದ್‌ನಲ್ಲಿ 'ಕಾಂತಾರ'ಕ್ಕಾಗಿ ಕೇವಲ ಎರಡು ದಿನಗಳ ಹಿಂದೆ ಬಿಡುಗಡೆಯಾಗಿದ್ದ ತೆಲುಗು ಚಿತ್ರ ಎತ್ತಂಗಡಿ!

  ಶ್ರೀ ಮುರಳಿ, ಶರಣ್ ಹಾಗೂ ಅಜಯ್ ರಾವ್ ಚಿತ್ರಗಳಲ್ಲಿ ಅಭಿನಯಿಸಿರುವ ಆಶಿಕಾ ರಂಗನಾಥ್ ಅವರಿಗೆ ಕನ್ನಡದ ಸ್ಟಾರ್ ನಟರಾದ ಪುನೀತ್, ಯಶ್, ಸುದೀಪ್ ಹಾಗೂ ದರ್ಶನ್ ಅವರ ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯಿಸುವ ಅವಕಾಶ ಲಭಿಸಲಿಲ್ಲ. ಸುದೀಪ್ ಅಭಿನಯದ ಕೋಟಿಗೊಬ್ಬ 3 ಚಿತ್ರದ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದು ಹಾಗೂ ಜೇಮ್ಸ್ ಚಿತ್ರದ ಹಾಡೊಂದರಲ್ಲಿ ಕುಣಿದದ್ದನ್ನು ಬಿಟ್ಟರೆ ಆಶಿಕಾ ರಂಗನಾಥ್ ಕನ್ನಡದ ಬಿಗ್ ನಟರ ಚಿತ್ರಗಳಲ್ಲಿ ನಟಿಸಿಲ್ಲ. ಹೀಗೆ ಕನ್ನಡದ ದಿಗ್ಗಜ ನಟರ ಚಿತ್ರಗಳಲ್ಲಿ ನಟಿಸುವ ಅವಕಾಶ ಸಿಗದ ಆಶಿಕಾ ರಂಗನಾಥ್ ಇದೀಗ ಪರಭಾಷೆಯತ್ತ ಮುಖ ಮಾಡಿದ್ದಾರೆ.

   ತಮಿಳಿನ ನಂತರ ತೆಲುಗು ಕಡೆ ಆಶಿಕಾ ರಂಗನಾಥ್

  ತಮಿಳಿನ ನಂತರ ತೆಲುಗು ಕಡೆ ಆಶಿಕಾ ರಂಗನಾಥ್

  ತಮಿಳಿನ ಖ್ಯಾತ ನಟ ಸಿದ್ಧಾರ್ಥ್ ಅಭಿನಯದ ಮುಂದಿನ ಚಿತ್ರಕ್ಕೆ ನಾಯಕಿಯಾಗಿ ಆಶಿಕಾ ರಂಗನಾಥ್ ಆಯ್ಕೆಯಾಗಿದ್ದರು. ಈ ಸುದ್ದಿಯನ್ನು ಸ್ವತಃ ಆಶಿಕಾ ರಂಗನಾಥ್ ಅವರೇ ತಮ್ಮ ಅಧಿಕೃತ ಇನ್ ಸ್ಟಾಗ್ರಾಂ ಖಾತೆಯಲ್ಲಿ ಚಿತ್ರದ ಮುಹೂರ್ತ ಸಮಾರಂಭದ ಚಿತ್ರಗಳನ್ನು ಹಂಚಿಕೊಳ್ಳುವುದರ ಮೂಲಕ ತಿಳಿಸಿದ್ದರು. ಸಿದ್ಧಾರ್ಥ್ ತನ್ನ ಬಾಲ್ಯದ ನೆಚ್ಚಿನ ನಟ, ಅಂಥ ನೆಚ್ಚಿನ ನಟನ ಜತೆಗೆ ನಾಯಕಿಯಾಗಿ ಕಾರ್ಯನಿರ್ವಹಿಸುವುದು ನಿಜಕ್ಕೂ ಅದೃಷ್ಟ ಎಂದು ಆಶಿಕಾ ರಂಗನಾಥ್ ಬರೆದುಕೊಂಡಿದ್ದರು. ಹೀಗೆ ಈ ಚಿತ್ರದ ಚಿತ್ರೀಕರಣ ಮುಗಿಯುವ ಮುನ್ನವೇ ಇದೀಗ ಆಶಿಕಾ ರಂಗನಾಥ್ ತೆಲುಗು ಚಿತ್ರದಲ್ಲಿ ನಟಿಸುವ ಸುದ್ದಿ ಹೊರಬಿದ್ದಿದೆ.

   ಜೂ. ಎನ್‌ಟಿಆರ್ ತಮ್ಮನ ಚಿತ್ರಕ್ಕೆ ನಾಯಕಿ

  ಜೂ. ಎನ್‌ಟಿಆರ್ ತಮ್ಮನ ಚಿತ್ರಕ್ಕೆ ನಾಯಕಿ

  ಇತ್ತೀಚೆಗಷ್ಟೇ ಬಿಂಬಿಸಾರ ಎಂಬ ಚಿತ್ರದ ಮೂಲಕ ಭರ್ಜರಿ ಯಶಸ್ಸು ಸಾಧಿಸಿರುವ ನಟ ನಂದಮೂರಿ ಕಲ್ಯಾಣ್ ರಾಮ್ ಅಭಿನಯದ ಮುಂದಿನ ಚಿತ್ರಕ್ಕೆ ಆಶಿಕಾ ರಂಗನಾಥ್ ನಾಯಕಿಯಾಗಿ ಆಯ್ಕೆಗೊಂಡಿದ್ದಾರೆ ಎಂಬ ಸುದ್ದಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟಕ್ಕೆ ಹರಿದಾಡುತ್ತಿದೆ. ಟ್ವಿಟರ್ ಹಾಗೂ ಫೇಸ್ ಬುಕ್ ಖಾತೆಗಳ ಕೆಲ ಮೀಮ್ ಪೇಜ್ ಕೂಡ ಈ ವಿಷಯವನ್ನು ಪೋಸ್ಟ್ ಮಾಡಿವೆ. ಸದ್ಯ ಸಕ್ಸಸ್ ಹಾದಿಯಲ್ಲಿರುವ ನಂದಮೂರಿ ಕಲ್ಯಾಣ್ ರಾಮ್ ಜತೆಗೆ ಆಶಿಕಾ ರಂಗನಾಥ್ ನಾಯಕಿಯಾಗಿ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟರೆ ಫೇಮ್ ಬರುವುದು ಖಚಿತ.

   ಯಾವ ಚಿತ್ರಗಳು ಕೈಯಲ್ಲಿವೆ?

  ಯಾವ ಚಿತ್ರಗಳು ಕೈಯಲ್ಲಿವೆ?

  ಆಶಿಕಾ ರಂಗನಾಥ್ ಪವನ್ ಒಡೆಯರ್ ನಿರ್ದೇಶನದ ರೇಮೋ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದು, ಚಿತ್ರದ ಚಿತ್ರೀಕರಣ ಸಂಪೂರ್ಣಗೊಂಡಿದೆ ಹಾಗೂ ಚಿತ್ರ ಇನ್ನೂ ಬಿಡುಗಡೆಯಾಗಬೇಕಿದೆ. ಈ ಚಿತ್ರವನ್ನು ಹೊರತುಪಡಿಸಿ ಇನ್ನುಳಿದಂತೆ ಓ2, ತಮಿಳು ನಟ ಅಥರ್ವ ಜತೆಗಿನ ಚಿತ್ರ ಹಾಗೂ ಸಿಂಪಲ್ ಸುನಿ ನಿರ್ದೇಶನದ ಗತವೈಭವ ಚಿತ್ರದಲ್ಲಿ ಆಶಿಕಾ ರಂಗನಾಥ್ ನಾಯಕಿಯಾಗಿ ಅಭಿನಯಿಸಲಿದ್ದಾರೆ.

  English summary
  Ashika Ranganath to romance with Nandamuri Kalyan Ram in her debut Telugu movie. Read on
  Monday, October 17, 2022, 18:02
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X