For Quick Alerts
  ALLOW NOTIFICATIONS  
  For Daily Alerts

  ಫಸ್ಟ್ ಲುಕ್ ರಿಲೀಸ್ ವೇಳೆ ಫೋನ್ ಬಂದಿದ್ದಕ್ಕೆ ಮೊಬೈಲ್ ಎಸೆದೆಬಿಟ್ಟರು ಬಾಲಕೃಷ್ಣ!

  |

  ತೆಲುಗು ನಟ ಬಾಲಕೃಷ್ಣ ತೆರೆಮೇಲೆ ಎಷ್ಟು ಪವರ್‌ಫುಲ್ ಪಾತ್ರ ಮಾಡ್ತಾರೋ ನಿಜ ಜೀವನದಲ್ಲೂ ಅವರ ವ್ಯಕ್ತಿತ್ವ ಸಹ ಅಂತಹದ್ದೇ. ಕೋಪ ಬಂದ್ರೆ ಜಾಗ ಯಾವುದು, ಯಾರಿದ್ದಾರೆ ಎಂದು ನೋಡುವುದೇ ಇಲ್ಲ.

  ಎಷ್ಟೋ ಬಾರಿ ಅಭಿಮಾನಿಗಳಿಗೆ ಕಪಾಳಮೋಕ್ಷ ಮಾಡಿರುವ ಘಟನೆಗಳು ಸಹ ನಡೆದಿದೆ. ಸಾರ್ವಜನಿಕವಾಗಿ ಅಭಿಮಾನಿಗಳ ಮೇಲೆ ಕೈ ಮಾಡಿದ್ದಾರೆ. ಇದೀಗ, ಚಿತ್ರವೊಂದರ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ವೇಳೆ ಫೋನ್ ಬಂದಿದ್ದಕ್ಕೆ ಕೋಪಗೊಂಡ ಬಾಲಕೃಷ್ಣ ತಮ್ಮ ಮೊಬೈಲನ್ನು ಎಸೆದಿರುವ ಘಟನೆ ವರದಿಯಾಗಿದೆ.

  ಅಣ್ಣಾವ್ರ ಮೊಮ್ಮಗನ 'ಕಂಠೀರವ' ಟೀಸರ್ ಕಂಡು ಬೆರಗಾದ ಬಾಲಕೃಷ್ಣಅಣ್ಣಾವ್ರ ಮೊಮ್ಮಗನ 'ಕಂಠೀರವ' ಟೀಸರ್ ಕಂಡು ಬೆರಗಾದ ಬಾಲಕೃಷ್ಣ

  ಗಂಗಾಸಾಗರ್ ದ್ವಾರಕ ನಿರ್ದೇಶನದ 'ಸೆಹರಿ' ಚಿತ್ರದ ಫಸ್ಟ್ ಲುಕ್ ಬಿಡುಗಡೆ ಕಾರ್ಯಕ್ರಮಕ್ಕೆ ಅತಿಥಿಯಾಗಿ ನಟ ಬಾಲಕೃಷ್ಣ ಆಗಮಿಸಿದ್ದರು. ಹರ್ಷ ಕನುಮಲ್ಲಿ ಮತ್ತು ಸಿಮ್ರನ್ ಚೌಧರಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಬಾಲಕೃಷ್ಣ ಕೋಪದ ಮುಖ ಮತ್ತೊಮ್ಮೆ ಪ್ರದರ್ಶನವಾಗಿದೆ.

  ಫಸ್ಟ್ ಲುಕ್ ಪೋಸ್ಟರ್ ಅನಾವರಣ ಮಾಡಲು ಬಾಲಕೃಷ್ಣ ಮುಂದಾದ ಸರಿಯಾದ ಸಮಯಕ್ಕೆ ಜೇಬಿನಲ್ಲಿ ಫೋನ್ ರಿಂಗಾಗಲು ಶುರು ಮಾಡಿತು. ಪೋಸ್ಟರ್ ಒಂದು ಕೈಯಲ್ಲಿ ಹಿಡಿದು ಫೋನ್ ತೆಗೆದು ನೋಡಿದ ಬಾಲಕೃಷ್ಣ ಕೋಪಗೊಂಡು ನೋಡು ನೋಡುತ್ತಿದ್ದಂತೆ ವೇದಿಕೆಯಿಂದ ಪಕ್ಕಕ್ಕೆ ಎಸೆದೆ ಬಿಟ್ಟರು.

  ಬಾಲಕೃಷ್ಣ ಅವರು ಫೋನ್ ಎಸೆದಿದ್ದನ್ನು ಗಮನಿಸಿದ ನಟಿ ಸಿಮ್ರನ್ ಚೌಧರಿ ಒಂದು ಕ್ಷಣ ಆತಂಕಗೊಂಡರು. ಫೋನ್ ಬಂದಾಗ ಕೋಪಗೊಂಡ ಬಾಲಕೃಷ್ಣ ಅಲ್ಲೇ ಇದ್ದ ತಮ್ಮ ಸಹಾಯಕರ ಕಡೆ ಫೋನ್ ಎಸೆದರು ಎಂದು ತಿಳಿದು ಬಂದಿದೆ.

  ಕೊವಿಡ್ ವಿರಾಮದ ನಂತರ ನಂದಮೂರಿ ಬಾಲಕೃಷ್ಣ ಅವರನ್ನು ಮರಳಿ ನೋಡಿ ಅಭಿಮಾನಿಗಳು ಥ್ರಿಲ್ ಆದರು. ಪೋಸ್ಟರ್ ಬಿಡುಗಡೆಯ ಸಮಯದಲ್ಲಿ ಗ್ಲೌಸ್ ಹಾಕಿಕೊಂಡಿದ್ದು ಗಮನ ಸೆಳೆಯಿತು.

  English summary
  Telugu actor Nandamuri Balakrishna throws his mobile during Sehari movie First look event.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X