Don't Miss!
- News
K Viswanath: ಖ್ಯಾತ ತೆಲುಗು ನಿರ್ದೇಶಕ ಕೆ. ವಿಶ್ವನಾಥ್ ನಿಧನ
- Finance
ಕರ್ನಾಟಕದಲ್ಲಿ ಇ-ಬಸ್ಗಳ ಮಾರಾಟವೆಷ್ಟು? ಭಾರತದಲ್ಲಿ ಹೆಚ್ಚಿದ ಬೇಡಿಕೆ ಪ್ರಮಾಣವೆಷ್ಟು? ತಿಳಿಯಿರಿ
- Sports
ಕಮ್ಬ್ಯಾಕ್ಗೆ ಸಜ್ಜಾದ ಬೂಮ್ರಾ: ಎನ್ಸಿಎನಲ್ಲಿ ಬೌಲಿಂಗ್ ಅಭ್ಯಾಸ ಆರಂಭಿಸಿದ ಭಾರತದ ವೇಗಿ
- Lifestyle
Horoscope Today 3 Feb 2023: ಶುಕ್ರವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Automobiles
ಭಾರತದಲ್ಲಿ ಮಾರುತಿ ಜಿಮ್ನಿ ಎಸ್ಯುವಿಗೆ ಭಾರೀ ಡಿಮ್ಯಾಂಡ್: ಪ್ರತಿಸ್ಪರ್ಧಿಗಳಿಗೆ ಹೆಚ್ಚಿದ ಆತಂಕ
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ನೀಲಿ ಚಿತ್ರಗಳಲ್ಲಿ ನಟಿಸಿದ್ದ ವಿಷಯ ಬಹಿರಂಗಪಡಿಸಿದ ಖ್ಯಾತ ನಟ, ನಿರ್ಮಾಪಕ!
ಚಿತ್ರರಂಗದಲ್ಲಿ ಖ್ಯಾತಿಯ ಉತ್ತುಂಗಕ್ಕೇರಿರುವ ಹಲವು ನಟ, ನಿರ್ಮಾಪಕ, ನಿರ್ದೇಶಕರು ಒಂದಾನೊಂದು ಕಾಲದಲ್ಲಿ ತೀರಾ ಸಂಕಷ್ಟದ ಪರಿಸ್ಥಿತಿಯಿಂದ ಬಂದವರು. ಬದುಕು ನಡೆಸಲು ನಾನಾ ಕಸರತ್ತುಗಳನ್ನು ಮಾಡಿ ಹೇಗೋ ಇಂದು ದೊಡ್ಡ ವ್ಯಕ್ತಿಗಳಾಗಿ ನೆಲೆ ನಿಂತವರು.
ಹಲವು ನಟ, ನಿರ್ಮಾಪಕರು ತಮ್ಮ ಪ್ರಾರಂಭದ ದಿನಗಳಲ್ಲಿ ಬದುಕು ನಡೆಸಲು ಭಿನ್ನ ಭಿನ್ನ ಉದ್ಯೋಗಗಳನ್ನು ಮಾಡಿದ್ದಾರೆ. ಮೈಲಿಗಲ್ಲು ಬರೆದವರು, ಹೋಟೆಲ್ ನಲ್ಲಿ, ಬಾರ್‌ನಲ್ಲಿ ಕೆಲಸ ಮಾಡಿದವರು ಇದ್ದಾರೆ. ಆದರೆ ತೆಲುಗಿನ ಖ್ಯಾತ ಹಾಸ್ಯನಟ ಹಾಗೂ ನಿರ್ಮಾಪಕ ಬಂಡ್ಲ ಗಣೇಶ್‌ನದ್ದು ಮಾತ್ರ ತುಸು ಭಿನ್ನ.
ಸಂಷಕ್ಟದ ಸಮಯದಲ್ಲಿ ಜೀವನ ನಡೆಸಲು ಬಂಡ್ಲ ಗಣೇಶ್ ಆಯ್ದುಕೊಂಡಿದ್ದು ವಯಸ್ಕರ ಚಿತ್ರಗಳನ್ನು! ಹೌದು, ಈಗಿನ ಜನಪ್ರಿಯ ನಟ, ನಿರ್ಮಾಪಕ ಬಂಡ್ಲ ಗಣೇಶ್ ಹಿಂದೊಮ್ಮೆ ವಯಸ್ಕರ ಚಿತ್ರಗಳಲ್ಲಿ ನಟಿಸಿದ್ದರಂತೆ. ಈ ಬಗ್ಗೆ ಸ್ವತಃ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಪ್ರೊಡಕ್ಷನ್ ಮ್ಯಾನೇಜರ್ ಆಗಿದ್ದ ಬಂಡ್ಲ
ಸಿನಿಮಾದಲ್ಲಿ ಮುಖ್ಯ ಹಾಸ್ಯನಟ, ಪೋಷಕ ನಟರಾಗಿ ನಟಿಸುತ್ತಿರುವ ಬಂಡ್ಲ ಗಣೇಶ್ ಪ್ರೊಡಕ್ಷನ್ ಮ್ಯಾನೇಜರ್ ಆಗಿಯೂ ಕೆಲಸ ಮಾಡಿದ್ದರು. ಈಗ ನಿರ್ಮಾಪಕರೂ ಆಗಿದ್ದಾರೆ. ಮುಖ್ಯ ಕಮಿಡಿಯನ್ ಪಾತ್ರಗಳಲ್ಲಿ ನಟಿಸುವ ಮುನ್ನ ತೀರ ಸಣ್ಣ-ಪುಟ್ಟ ಪಾತ್ರಗಳಲ್ಲಿ, ದೃಶ್ಯಗಳಲ್ಲಿ ಎಕ್ಸ್ಟ್ರಾ ಆಗಿಯೂ ಬಂಡ್ಲ ಗಣೇಶ್ ಕಾಣಿಸಿಕೊಂಡಿದ್ದರು.

ವಯಸ್ಕರ ಸಿನಿಮಾದಲ್ಲಿ ನಟಿಸಿದ್ದು
ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಲು ಆರಂಭಿಸಿದ ಬಳಿಕ ಬಂಡ್ಲ ಗಣೇಶ್‌ಗೆ ಒಂದು ಅವಕಾಶ ಬಂದಂತೆ. ಸಿನಿಮಾದಲ್ಲಿ ನಿನಗೆ ನಾಯಕನ ಪಾತ್ರ ನೀಡುತ್ತಿದ್ದೇನೆ ಎಂದು ನಿರ್ಮಾಪಕ ಹೇಳಿದ್ದರಂತೆ. ಆಗಷ್ಟೆ ನಟನೆ ಆರಂಭಿಸಿದ್ದ ಬಂಡ್ಲ ಗಣೇಶ್, ನಾಯಕನ ಪಾತ್ರ ಎಂದ ಕೂಡಲೇ ಖುಷಿಯಿಂದ ನಟಿಸಲು ಒಪ್ಪಿಕೊಂಡಿದ್ದಾರೆ. ಆದರೆ ಸಿನಿಮಾ ಶೂಟಿಂಗ್ ಪ್ರಾರಂಭವಾದ ಮೇಲೆ ಗೊತ್ತಾಯ್ತಂತೆ ಅದು ವಯಸ್ಕರ ಸಿನಿಮಾ ಎಂದು. ಹಣ ಪಡೆದುಕೊಂಡು ಬಿಟ್ಟಿದ್ದ ಕಾರಣಕ್ಕೆ ಸುಮ್ಮನೆ ನಟಿಸಿದರಂತೆ ಬಂಡ್ಲ ಗಣೇಶ್. ಅಂದಹಾಗೆ ಆ ಸಿನಿಮಾದ ಹೆಸರು 'ಆಂಟಿ'.

ರಿಯಲ್ ಎಸ್ಟೇಟ್ ಉದ್ಯಮ
ತಾವು ಹಣ ಸಂಪಾದನೆ ಮಾಡಿದ ಬಗ್ಗೆ ಹೇಳಿಕೊಂಡಿರುವ ಬಂಡ್ಲ ಗಣೇಶ್, ''ಸಿನಿಮಾ ನಿರ್ಮಾಪಕನಾಗಲು ನನಗೆ ಹಲವರು ಬೆಂಬಲ ನೀಡಿದರು. ಅದರಲ್ಲಿಯೂ ಪವನ್ ಕಲ್ಯಾಣ್ ನನಗೆ ಬೆನ್ನೆಲುಬಾಗಿ ನಿಂತರು. ಅವರ 'ಗಬ್ಬರ್ ಸಿಂಗ್' ಸಿನಿಮಾ ಮೂಲಕ ನಿರ್ಮಾಪಕನಾದೆ. ಅದಕ್ಕೆ ಮುಂಚೆಯೇ ರಾಜಶೇಖರ್ ರೆಡ್ಡಿ ಸರ್ಕಾರದ ಸಮಯದಲ್ಲಿ ರಿಯಲ್ ಎಸ್ಟೇಟ್‌ಗೆ ಬೇಡಿಕೆ ಹೆಚ್ಚಿತ್ತು. ಆಗ ನಾನು ರಿಯಲ್ ಎಸ್ಟೇಟ್ ನಡೆಸಿ ಒಳ್ಳೆಯ ಹಣ ಸಂಪಾದನೆ ಮಾಡಿದೆ'' ಎಂದಿದ್ದಾರೆ ಬಂಡ್ಲ ಗಣೇಶ್.

ಪೌಲ್ಟ್ರಿ ಫಾರಂ ಆರಂಭಿಸಿದ ಬಂಡ್ಲ
ಆ ನಂತರ ದೊಡ್ಡ ಪೌಲ್ಟ್ರಿ ಫಾರಂ ಅನ್ನು ಪ್ರಾರಂಭ ಮಾಡಿದೆ. ಇನ್ನೂ ಕೆಲವು ಬ್ಯುಸಿನೆಸ್‌ಗಳನ್ನು ಪ್ರಾರಂಭ ಮಾಡಿದೆ. ಆರ್ಥಿಕವಾಗಿ ಸಬಲನಾದೆ. ಅದೇ ಸಮಯದಲ್ಲಿ ಹಲವು ರಾಜಕೀಯ ವ್ಯಕ್ತಿಗಳೊಟ್ಟಿಗೂ ಒಳ್ಳೆಯ ಸಂಪರ್ಕ ಏರ್ಪಟ್ಟಿತು. ಈಗಲೂ ಹಲವು ಮಂದಿ ರಾಜಕಾರಣಿಗಳು ನನ್ನ ಜೊತೆ ಟಚ್‌ನಲ್ಲಿದ್ದಾರೆ. ಆದರೆ ಯಾರೊಂದಿಗೂ ನನಗೆ ಭಿನ್ನಾಭಿಪ್ರಾಯವಿಲ್ಲ. ಎಲ್ಲರೊಟ್ಟಿಗೂ ಚೆನ್ನಾಗಿದ್ದೇನೆ ಎಂದಿದ್ದಾರೆ ಬಂಡ್ಲ ಗಣೇಶ್.