For Quick Alerts
  ALLOW NOTIFICATIONS  
  For Daily Alerts

  ಪ್ರಭಾಸ್‌ಗಾಗಿ ತೆಲುಗು ಕಲಿಯುತ್ತಿರುವ ಬಾಲಿವುಡ್ ನಟಿ ಕೃತಿ ಸನೂನ್

  By ಫಿಲ್ಮ್ ಡೆಸ್ಕ್
  |

  ಇತ್ತೀಚಿಗಷ್ಟೆ ಬಾಲಿವುಡ್ ಖ್ಯಾತ ನಟಿ ಅಲಿಯಾ ಭಟ್ ತೆಲುಗು ಕಲಿಯುತ್ತಿರುವ ಬಗ್ಗೆ ಕೇಳಿದ್ರಿ. ಆರ್‌ಆರ್‌ಆರ್ ಸಿನಿಮಾದಲ್ಲಿ ನಟಿಸುತ್ತಿರುವ ಅಲಿಯಾ ಈ ಚಿತ್ರಕ್ಕಾಗಿ ಅನೇಕ ತಿಂಗಳಿಂದ ತೆಲುಗು ಕಲಿತಿದ್ದಾರೆ. ಇದೀಗ ಮತ್ತೋರ್ವ ಬಾಲಿವುಡ್ ನಟಿ ತೆಲುಗು ಕಲಿಯುತ್ತಿದ್ದಾರೆ.

  ಪ್ರಭಾಸ್‌ಗೆ ನಾಯಕಿಯಾಗಿ ನಟಿಸುತ್ತಿರುವ ಬಾಲಿವುಡ್ ಸುಂದರಿ ಕೃತಿ ಸನೂನ್ ಇದೀಗ ತೆಲುಗು ಕಲಿಯುತ್ತಿದ್ದಾರಂತೆ. ಅಂದ ಹಾಗೆ ಕೃತಿ ಪ್ರಭಾಸ್ ನಟನೆಯ ಆದಿಪುರುಷ್ ಸಿನಿಮಾದಲ್ಲಿ ಸೀತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷ ಪಾತ್ರದಲ್ಲಿ ನಟಿಸುತ್ತಿರುವ ಕೃತಿ ತನ್ನ ಪಾತ್ರಕ್ಕಾಗಿ ಸಖತ್ ತಯಾರಿ ನಡೆಸುತ್ತಿದ್ದಾರೆ.

  ಸುಶಾಂತ್ ಸಾವಿನ ಕುರಿತು ಮೌನವಹಿಸಿದ್ದು ಏಕೆ ಎಂದು ಬಹಿರಂಗ ಪಡಿಸಿದ ಕೃತಿ ಸನೂನ್

  ಕೃತಿಗೆ ತೆಲುಗು ಸಿನಿಮಾರಂಗ ಹೊಸದೇನು ಅಲ್ಲ. ಕೃತಿ ಬಣ್ಣದ ಲೋಕದ ಪಯಣ ಪ್ರಾರಂಭ ಮಾಡಿದ್ದೆ ತೆಲುಗು ಸಿನಿಮಾದಿಂದ. ಬಳಿಕ ಬಾಲಿವುಡ್ ಕಡೆ ಹೊರಟ ಕೃತಿ ಮತ್ತೆ ತಿರುಗಿ ನೋಡಿಲ್ಲ. ಉತ್ತರ ಭಾರತದ ಮೂಲದವರಾದ ಕೃತಿಗೆ ತೆಲುಗು ಬರಲ್ಲ. ಇದೀಗ ಅನೇಕ ವರ್ಷಗಳ ಬಳಿಕ ಮತ್ತೆ ಟಾಲಿವುಡ್‌ನಲ್ಲಿ ಕಾಣಿಸಿಕೊಳ್ಳುತ್ತಿರುವ ಕೃತಿ ತೆಲುಗು ಕಲಿತು ಬರಲು ಸಿದ್ಧರಾಗಿದ್ದಾರೆ.

  ಆದಿಪುರುಷ್‌ಗಾಗಿ ತೆಲುಗು ಕಲಿಯುತ್ತಿರುವ ಕೃತಿ, ಭಾಷಾತಜ್ಞರನ್ನು ನೇಮಿಸಿಕೊಂಡಿದ್ದಾರಂತೆ. ಭಾಷಾತಜ್ಞರ ಸಹಾಯದೊಂದಿಗೆ ಚಿತ್ರೀಕರಣದಲ್ಲಿ ಕೃತಿ ತೆಲುಗು ಮಾತನಾಡಲು ಪ್ರಯತ್ನಿಸುತ್ತಿದ್ದಾರಂತೆ. ಅಂದಹಾಗೆ ಆದಿಪುರುಷ್ ತೆಲುಗು ಜೊತೆಗೆ ಹಿಂದಿಯಲ್ಲೂ ಏಕಕಾಲಕ್ಕೆ ಚಿತ್ರೀಕರಣ ನಡೆಯುತ್ತಿದೆ.

  ಇನ್ನು ಕೇವಲ ಕೃತಿ ಮಾತ್ರವಲ್ಲದೆ ನಿರ್ದೇಶಕ ಓಂ ರಾವತ್ ಕೂಡ ತೆಲುಗು ಭಾಷಾತಜ್ಞರನ್ನು ನೇಮಿಸಿಕೊಂಡಿದ್ದಾರಂತೆ. ಸದ್ಯ ಮುಂಬೈನಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಬಹುತೇಕ ಚಿತ್ರೀಕರಣ ಗ್ರೀನ್ ಮ್ಯಾಟ್‌ನಲ್ಲೇ ಮಾಡಲು ಸಿನಿಮಾತಂಡ ಪ್ಲಾನ್ ಮಾಡಿದೆ.

  ನಿರ್ದೇಶಕ ಮಹೇಶ್ ಗೆ ಭರ್ಜರಿ ಉಡುಗೊರೆ ಕೊಟ್ಟ ರಾಬರ್ಟ್ ನಿರ್ಮಾಪಕ | Filmibeat Kannada

  ಚಿತ್ರದಲ್ಲಿ ಪ್ರಭಾಸ್ ರಾಮನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸೀತೆಯಾಗಿ ಕೃತಿ ನಟಿಸಿದ್ದಾರೆ. ರಾವಣ ಪಾತ್ರದಲ್ಲಿ ಬಾಲಿವುಡ್ ಖ್ಯಾತ ನಟ ಸೈಫ್ ಅಲಿ ಖಾನ್ ಬಣ್ಣ ಹಚ್ಚುತ್ತಿದ್ದಾರೆ. ಚಿತ್ರೀಕರಣದ ಬಗ್ಗೆ ಮಾತನಾಡಿರುವ ಕೃತಿ, ಪ್ರಭಾಸ್ ಅವರ ಜೊತೆ ಶೂಟಿಂಗ್ ಎಂಜಾಯ್ ಮಾಡುತ್ತಿರುವುದಾಗಿ ಹೇಳಿದ್ದಾರೆ. ಅಲ್ಲದೆ, ಪ್ರಭಾಸ್ ಹೃದಯವಂತ ನಟ ಎಂದಿದ್ದಾರೆ.

  English summary
  Bollywood Actress Kriti Sanon hires Telugu tutor for Adipurush movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X