ಸೂಪರ್ ಹಿಟ್ ಸಿನಿಮಾ ಕೈಬಿಟ್ಟು ಕೈ-ಕೈ ಹಿಸುಕಿಕೊಂಡಿದ್ದ ಜೂ.ಎನ್‌ಟಿಆರ್
ಜೂ.ಎನ್‌ಟಿಆರ್ ತೆಲುಗಿನ ಸೂಪರ್ ಸ್ಟಾರ್ ನಟ. ಅವರ ಸಿನಿಮಾಗಳಿಗಾಗಿ ಅಭಿಮಾನಿಗಳು ತುದಿಗಾಲಲ್ಲಿ ನಿಂತು ಕಾಯುತ್ತಾರೆ.
ಈವರೆಗೆ ಹಲವಾರು ಹಿಟ್ ಸಿನಿಮಾಗಳನ್ನು ನೀಡಿರುವ ಜೂ.ಎನ್‌ಟಿಆರ್, ಒಂದು ಸೂಪರ್-ಡೂಪರ್ ಹಿಟ್ ಸಿನಿಮಾವನ್ನು ಕೈಬಿಟ್ಟಿದ್ದರು. ಈ ಸಿನಿಮಾ ಕೈಬಿಟ್ಟಿದ್ದಕ್ಕೆ ಭಾರಿ ನೊಂದುಕೊಂಡಿದ್ದರಂತೆ ಜೂ.ಎನ್‌ಟಿಆರ್.
ಹೌದು, ಅದೇ ತೆಲುಗಿನ 'ಬೊಮ್ಮರಿಲ್ಲು' ಸಿನಿಮಾ. ಈ ಸಿನಿಮಾಕ್ಕೆ ಜೂ.ಎನ್‌ಟಿಆರ್ ನಾಯಕರಾಗಿರಬೇಕಿತ್ತು. ಕತೆಯನ್ನು ಮೊದಲಿಗೆ ಅವರಿಗೇ ಹೇಳಲಾಗಿತ್ತು. ಆದರೆ ಜೂ.ಎನ್‌ಟಿಆರ್ ಸಿನಿಮಾದಲ್ಲಿ ನಟಿಸಲು ನಿರಾಕರಿಸಿದರು. ನಂತರ ಅದು ನಟ ಸಿದ್ಧಾರ್ಥ್ ಪಾಲಿಗೆ ಹೋಯಿತು.

ಮೊದಲಿಗೆ ಜೂ.ಎನ್‌ಟಿಆರ್‌ಗೆ ಕತೆ ಹೇಳಲಾಗಿತ್ತು
'ಬೊಮ್ಮರಿಲ್ಲು' ಸಿನಿಮಾದ ನಿರ್ದೇಶಕ ಭಾಸ್ಕರ್ ಮೊದಲಿಗೆ ಜೂ.ಎನ್‌ಟಿಆರ್ ಗೆ ಕತೆ ಹೇಳಿದ್ದರು. ಕತೆಯ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದ ಜೂ.ಎನ್‌ಟಿಆರ್ ತಾವೇ ನಟಿಸುವುದಾಗಿ ಹೇಳಿದ್ದರು. ಆದರೆ ಕೆಲವು ದಿನಗಳ ನಂತರ ನಿರ್ಧಾರ ಬದಲಿಸಿದರು.

ಮಾಸ್ ಇಮೇಜ್‌ಗೆ ಧಕ್ಕೆಯಾಗುತ್ತದೆ ಎಂದು ಬೇಡವೆಂದರು
ಆಗಷ್ಟೆ ತಮ್ಮ ದೇಹತೂಕ ಕಳೆದುಕೊಂಡಿದ್ದ ಎನ್‌ಟಿಆರ್. ಅದಕ್ಕೆ ಮುನ್ನಾ ರಾಖಿ, ಅಶೋಕ್ ಅಂತಹಾ ಮಾಸ್ ಸಿನಿಮಾಗಳನ್ನು ಮಾಡಿದ್ದರು. ಬೊಮ್ಮರಿಲ್ಲು ಸಿನಿಮಾಕ್ಕಾಗಿ ಕೇಳಿದಾಗ ಅವರು ಯಮದೊಂಗ ಸಿನಿಮಾಕ್ಕೆ ಸಹಿ ಹಾಕಿದ್ದರು. ತಮ್ಮ ಮಾಸ್ ಇಮೇಜಿಗೆ ವಿರುದ್ಧವಾಗಿ ಬೊಮ್ಮರಿಲ್ಲು ಸಿನಿಮಾ ನಾಯಕನ ಪಾತ್ರವಿದೆಯೆಂದು ಸಿನಿಮಾ ಬೇಡವೆಂದಿದ್ದರು ಜೂ.ಎನ್‌ಟಿಆರ್.

ದೊಡ್ಡ ಮ್ಯಾಜಿಕ್ ಮಾಡಿದ ಬೊಮ್ಮರಿಲ್ಲು
ಆದರೆ ಸಿನಿಮಾ ಬಿಡುಗಡೆ ಆದಮೇಲೆ ದೊಡ್ಡ ಮ್ಯಾಜಿಕ್ ನಡೆದುಬಿಟ್ಟಿತು. ಸಿನಿಮಾ ಅತ್ಯದ್ಭುತ ಹಿಟ್ ಆಯಿತು. ಬೇರೆ ರಾಜ್ಯಗಳಲ್ಲಿಯೂ ಸಹ ಸಿನಿಮಾ ಸೂಪರ್-ಡೂಪರ್ ಹಿಟ್ ಎನಿಸಿಕೊಂಡಿತು. ಆಗ ನಾನು ಈ ಸಿನಿಮಾ ಮಾಡಲಿಲ್ಲವಲ್ಲ ಎಂದು ನೊಂದುಕೊಂಡಿದ್ದರಂತೆ ಜೂ.ಎನ್‌ಟಿಆರ್.

ಬೊಮ್ಮರಿಲ್ಲು ಸಿನಿಮಾವನ್ನು ಹೊಗಳಿದ್ದ ಜೂ.ಎನ್‌ಟಿಆರ್
ಬೊಮ್ಮರಿಲ್ಲು ಸಿನಿಮಾದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಜೂ.ಎನ್‌ಟಿಆರ್. 'ಸೂಪರ್ ಹಿಟ್ ಸಿನಿಮಾಗಳನ್ನು ನೋಡಿದ್ದೀನಿ, ಸೂಪರ್ ಹಿಟ್ ಸಿನಿಮಾಗಳನ್ನು ಮಾಡಿದ್ದೀನಿ. ಆದರೆ ಇಂಥಹಾ ಸಿನಿಮಾವನ್ನು ನಾನು ನೋಡಿಲ್ಲ' ಎಂದು ಬೊಮ್ಮರಿಲ್ಲು ಸಿನಿಮಾವನ್ನು ಹೊಗಳಿದ್ದರು.


Click it and Unblock the Notifications











