For Quick Alerts
  ALLOW NOTIFICATIONS  
  For Daily Alerts

  ಜನಸೇನಾನಿನ ಹಿಂಬಾಲಿಸುತ್ತಿರುವ ಅನುಮಾನಾಸ್ಪದ ವ್ಯಕ್ತಿಗಳು? ಝೆಡ್ ಪ್ಲಸ್‌ ಭದ್ರತೆಗೆ ಫ್ಯಾನ್ಸ್ ಆಗ್ರಹ!

  |

  ತೆಲುಗು ನಟ, ಜನಸೇನಾ ಪಕ್ಷದ ಅಧ್ಯಕ್ಷ ಪವನ್‌ ಕಲ್ಯಾಣ್‌ ಭದ್ರತೆಯ ಬಗ್ಗೆ ಅಭಿಮಾನಿಗಳು, ಜನಸೇನಾ ಕಾರ್ಯಕರ್ತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಜನಸೇನಾನಿಗೆ ಝೆಡ್‌ ಪ್ಲಸ್ ಭದ್ರತೆ ನೀಡಬೇಕು ಎಂದು ಕೇಂದ್ರ ಸರ್ಕಾರದ ಬಳಿ ಆಗ್ರಹಿಸುತ್ತಿದ್ದಾರೆ. ಕಳೆದೆರಡು ದಿನಗಳಿಂದ ಕೆಲ ಆಗಂತುಕರು ಪವನ್‌ ಕಲ್ಯಾಣ್‌ ಅವರನ್ನು ಹಿಂಬಾಲಿಸುತ್ತಿದ್ದಾರೆ. ಅವರ ಚಲನವಲನಗಳನ್ನು ಗಮನಿಸುತ್ತಿದ್ದಾರೆ ಎಂದು ಪವನ್ ಭದ್ರತಾ ಸಿಬ್ಬಂದಿ ಹೇಳುತ್ತಿದ್ದಾರೆ.

  ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್‌ಗೆ ಪ್ರಾಣಹಾನಿ ಇದೆ ಎಂದು ಆ ಪಕ್ಷ ಸಂಚಲನ ಆರೋಪ ಮಾಡಿದೆ. ಅನುಮಾನಾಸ್ಪದ ವಾಹನಗಳು ಕೆಲವು ದಿನಗಳಿಂದ ಪವನ್ ಕಲ್ಯಾಣ್‌ರನ್ನು ಅನುಸರಿಸುತ್ತಿದ್ದಾರೆ. ಹೈದರಾಬಾದ್‌ನಲ್ಲಿರುವ ಪವನ್ ನಿವಾಸದ ಸುತ್ತಾಮುತ್ತಾ ಅನುಮಾನಾಸ್ಪದ ವ್ಯಕ್ತಿಗಳು ಓಡಾಡುವುದು ಹೆಚ್ಚಾಗಿದೆ ಎಂದು ಆರೋಪಿಸುತ್ತಿದ್ದಾರೆ. ಕೆಲವು ವ್ಯಕ್ತಿಗಳು ಪವರ್ ಸ್ಟಾರ್ ಭದ್ರತಾ ಸಿಬ್ಬಂದಿ ಜೊತೆ ಗಲಾಟೆ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಅದಕ್ಕೆ ಸಂಬಂಧಿಸಿದ ವಿಡಿಯೋವನ್ನು ತೆಲಂಗಾಣ ಜನಸೇನಾ ಮುಖ್ಯಸ್ಥರು ಜೂಬ್ಲಿ ಹಿಲ್ಸ್ ಪೊಲೀಸ್‌ ಠಾಣೆಗೆ ನೀಡಿದ್ದಾರೆ. ಈ ಬಗ್ಗೆ ಪಕ್ಷದ ಹಿರಿಯ ನಾಯಕ ನಾದೆಂಡ್ಲ ಮನೋಹರ್ ಪ್ರೆಸ್ ನೋಟ್ ಬಿಡುಗಡೆ ಮಾಡಿದ್ದಾರೆ.

  "ಜೀವನಾಂಶ ನೀಡಿ ಯಾರು ಎಷ್ಟು ಮದುವೆ ಆದರೂ ಆಗಬಹುದಾ?" ತಮ್ಮ ಹೇಳಿಕೆಗೆ ಕ್ಷಮೆ ಕೇಳುವಂತೆ ಪವನ್ ಕಲ್ಯಾಣ್‌ಗೆ ನೋಟೀಸ್

  ವಿಶಾಪಟ್ಟಣದಲ್ಲಿ ನಡೆದ ಘಟನೆಯ ನಂತರ ಪವನ್ ಕಲ್ಯಾಣ್ ಮನೆ, ಪಕ್ಷದ ಕಚೇರಿ ಬಳಿ ಅನುಮಾನಾಸ್ಪದವಾಗಿ ಓಡಾಡುವವರ ಸಂಖ್ಯೆ ಹೆಚ್ಚಾಗಿದೆ ಎಂದು ನಾದೆಂಡ್ಲ ಮನೋಹರ್ ಹೇಳುತ್ತಿದ್ದಾರೆ. ಪವನ್ ಮನೆಯಿಂದ ಹೊರ ಹೋಗುವಾಗ ಮತ್ತೆ ತಿರುಗಿ ಬರುವಾಗ ವಾಹನವನ್ನು ಅನುಸರಿಸಿ ಬರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

   ಅವರು ಯಾರು ಅಭಿಮಾನಿಗಳಲ್ಲ!

  ಅವರು ಯಾರು ಅಭಿಮಾನಿಗಳಲ್ಲ!

  ಕಾರಿನಲ್ಲಿ ಪವನ್‌ ಕಲ್ಯಾಣ್ ಅವರನ್ನು ಹಿಂಬಾಲಿಸುತ್ತಿರುವ ವ್ಯಕ್ತಿಗಳು ನಿಜವಾಗಿಯೂ ಪವನ್ ಕಲ್ಯಾನ್ ಚಲನವಲಗ ಗಮನಿಸುತ್ತಿದ್ದಾರೆ. ಅವರು ಪವರ್ ಸ್ಟಾರ್ ಅಭಿಮಾನಿಗಳು ಖಂಡಿತ ಅಲ್ಲ. ಅವರು ಕದಲಿಕೆ ಅನುಮಾನ ಮೂಡಿಸುತ್ತಿದೆ. ಮಂಗಳವಾರ ದ್ವಿಚಕ್ರ ವಾಹನದಲ್ಲಿ ಬುಧವಾರ ಕಾರಿನಲ್ಲಿ ಪವನ್ ಕಲ್ಯಾಣ್ ಅವರ ಕಾರನ್ನು ಅಪರಿತ ವ್ಯಕ್ತಿಗಳು ಹಿಂಬಾಲಿಸಿದ್ದಾರೆ ಎಂದು ನಾದೆಂಡ್ಲ ಮನೋಹರ್ ಆರೋಪಿಸಿದ್ದಾರೆ.

   ಪವನ್ ಮನೆ ಎದುರು ಗಲಾಟೆ

  ಪವನ್ ಮನೆ ಎದುರು ಗಲಾಟೆ

  ಇನ್ನು ಸೋಮವಾರ ಮಧ್ಯರಾತ್ರಿ ಮೂವರು ವ್ಯಕ್ತಿಗಳು ಪವನ್ ಕಲ್ಯಾಣ್ ಮನೆ ಬಳಿ ಬಂದು ಗಲಾಟೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಪವನ್ ಮನೆ ಮುಂದೆ ಬಂದು ಅವರು ಕಾರು ನಿಲ್ಲಿಸಿದ್ದಾರೆ. ಅಲ್ಲಿಂದ ಹೊರಟು ಹೋಗುವಂತೆ ಪವನ್ ಭದ್ರತಾ ಸಿಬ್ಬಂದಿ ಹೇಳಿದ್ದಕ್ಕೆ ಅವಾಚ್ಯ ಶಬ್ಧಗಳಿಂದ ನಿಂದಿಸಿದರು, ಪವನ್ ಕಲ್ಯಾಣ್‌ನ ಕೂಡ ಬೈಯುತ್ತಾ ಗಲಾಟೆ ಮಾಡಿದರು. ಭದ್ರತಾ ಸಿಬ್ಬಂದಿಯನ್ನು ಕೆಣಕುವ ಪ್ರಯತ್ನ ಮಾಡಿದ್ದಾರೆ, ಆದರೂ ಸಿಬ್ಬಂದಿ ಸಂಯಮ ಪಾಲಿಸಿದ್ದಾರೆ ಎಂದರು. ಈ ಘಟನೆ ಬಗ್ಗೆ ತೆಲಂಗಾಣದ ಜನಸೇನಾ ಮುಖ್ಯಸ್ಥ ಶಂಕರ್ ಗೌಡ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

   ಝೆಡ್ ಪ್ಲಸ್ ಭದ್ರತೆ ನೀಡುವಂತೆ ಮನವಿ

  ಝೆಡ್ ಪ್ಲಸ್ ಭದ್ರತೆ ನೀಡುವಂತೆ ಮನವಿ

  ಈ ಘಟನೆಗಳ ಹಿನ್ನೆಲೆಯಲ್ಲಿ ಪವನ್ ಕಲ್ಯಾಣ್ ಭದ್ರತೆ ಬಗ್ಗೆ ಅವರ ಅಭಿಮಾನಿಗಳು, ಜನಸೇನಾ ಕಾರ್ಯಕರ್ತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಅವರಿಗೆ ಝಡ್ ಪ್ಲಸ್ ಭದ್ರತೆ ಕಲ್ಪಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ. ಪವನ್‌ ಕಲ್ಯಾಣ್‌ ವಿರುದ್ಧ ವೈಸಿಪಿ ಷಡ್ಯಂತ್ರ ನಡೆಸುತ್ತಿದೆ ಎಂದು ಜನಸೇನಾ ಕಾರ್ಯಕರ್ತರು ಆರೋಪಿಸುತ್ತಿದ್ದಾರೆ. ಇನ್ನು ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅಭಿಯಾನ ನಡೆಸುತ್ತಿರುವ ನೆಟ್ಟಿಗರು #APNeedsPawanKalyan ಹಾಗೂ #ZplusSecurityForPawanKalyanni ಹ್ಯಾಷ್‌ಟ್ಯಾಗ್ ಟ್ರೆಂಡ್ ಮಾಡುತ್ತಿದ್ದಾರೆ.

   ಚಿತ್ರರಂಗ, ಪಾಲಿಟಿಕ್ಸ್‌ನಲ್ಲಿ ಪವನ್ ಬ್ಯುಸಿ

  ಚಿತ್ರರಂಗ, ಪಾಲಿಟಿಕ್ಸ್‌ನಲ್ಲಿ ಪವನ್ ಬ್ಯುಸಿ

  ಪವನ್ ಸ್ಟಾರ್ ಪವನ್ ಕಲ್ಯಾಣ್ ಆಂಧ್ರ ರಾಜಕೀಯರಂಗದಲ್ಲಿ ಪರ್ಯಾಯ ಶಕ್ತಿಯಾಗಿ ಬೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಕಳೆದ ಬಾರಿ ಚುನಾವಣೆಯಲ್ಲಿ ಪವನ್ ಹೀನಾಯವಾಗಿ ಸೋತಿದ್ದರು. ಆದರೂ ಕೂಡ ಛಲ ಬಿಡದೇ ಮುಂದಿನ ಚುನಾವಣೆಗಾಗಿ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಆಡಳಿತ ಪಕ್ಷದ ವಿರುದ್ಧ ಸದಾ ಸಂಘರ್ಷಕ್ಕೆ ಇಳಿಯುತ್ತಿದ್ದಾರೆ. ಪಾಲಿಟಿಕ್ಸ್ ಜೊತೆ ಜೊತೆಗೆ ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ. 'ಹರಿಹರ ವೀರಮಲ್ಲು' ಹಾಗೂ 'ಭವದೀಯುಡು ಭಗತ್ ಸಿಂಗ್' ಎನ್ನುವ ಎರಡು ಸಿನಿಮಾಗಳಲ್ಲಿ ಸದ್ಯ ನಟಿಸುತ್ತಿದ್ದಾರೆ.

  ಗಳಿಸಿದ್ದೆಷ್ಟು? ತೆರಿಗೆ ಕಟ್ಟಿದ್ದೆಷ್ಟು? ಪಕ್ಷಕ್ಕೆ ಕೊಟ್ಟಿದ್ದೆಷ್ಟು? ಎಲ್ಲ ಲೆಕ್ಕ ತೆರೆದಿಟ್ಟ ಪವನ್ ಕಲ್ಯಾಣ್ಗಳಿಸಿದ್ದೆಷ್ಟು? ತೆರಿಗೆ ಕಟ್ಟಿದ್ದೆಷ್ಟು? ಪಕ್ಷಕ್ಕೆ ಕೊಟ್ಟಿದ್ದೆಷ್ಟು? ಎಲ್ಲ ಲೆಕ್ಕ ತೆರೆದಿಟ್ಟ ಪವನ್ ಕಲ್ಯಾಣ್

  English summary
  Case filed on two groups for following Pawan Kalyan for last two days. PawanKalyan’s fans appealing the PM Narendra Modi to provide additional security to Janasenani.
  Thursday, November 3, 2022, 13:24
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X