Don't Miss!
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ರೋಹಿತ್ ಬಳಗದ ಅಭ್ಯಾಸಕ್ಕೆ ಭಾನುವಾರ ರಜೆ ನೀಡಿದ ಕೋಚ್ ದ್ರಾವಿಡ್
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ವಾಲ್ತೇರು ವೀರಯ್ಯ' ಪವರ್‌ಫುಲ್ ಟ್ರೈಲರ್; ಚಿರಂಜೀವಿ, ರವಿತೇಜಾ ಖದರ್, ಕಿಕ್ ಕೊಡ್ತಿದೆ ಡೈಲಾಗ್ಸ್, ಆಕ್ಷನ್ ಸೀನ್ಸ್
ಈ ಬಾರಿಯ ಸಂಕ್ರಾಂತಿ ಹಬ್ಬದ ಪ್ರಯುಕ್ತ ಚಿತ್ರಮಂದಿರದ ಅಂಗಳಕ್ಕೆ ತೆಲುಗು ಹಾಗೂ ತಮಿಳಿನ ಸ್ಟಾರ್ ನಟರ ಚಿತ್ರಗಳು ತೆರೆಗೆ ಬರ್ತಿವೆ. ತಮಿಳಿನಲ್ಲಿ ವಿಜಯ್ ಹಾಗೂ ಅಜಿತ್ ನಟನೆಯ ಚಿತ್ರಗಳು ತೆರೆಗೆ ಬರುತ್ತಿದ್ದರೆ, ತೆಲುಗಿನಲ್ಲಿ ಹಿರಿಯ ನಟರಾದ ಚಿರಂಜೀವಿ ಹಾಗೂ ಬಾಲಕೃಷ್ಣ ನಟನೆಯ ಚಿತ್ರಗಳು ಬಿಡುಗಡೆಯಾಗಲಿವೆ. ಇನ್ನು ಈ ಬಾರಿಯ ಪೈಪೋಟಿಯ ಕಾವು ಹೆಚ್ಚಾಗಿದ್ದು, ಚಿತ್ರಗಳ ಮೇಲಿನ ಹೈಪ್ ಹೆಚ್ಚಿಸಲು ಚಿತ್ರತಂಡಗಳು ಟ್ರೈಲರ್‌ಗಳನ್ನು ಬಿಡುಗಡೆ ಮಾಡುತ್ತಿವೆ.
ಈ ಪೈಕಿ ಚಿರಂಜೀವಿ ನಟನೆಯ 'ವಾಲ್ತೇರು ವೀರಯ್ಯ' ಹೊರತುಪಡಿಸಿ ಉಳಿದ ಎಲ್ಲಾ ಚಿತ್ರಗಳ ಟ್ರೈಲರ್‌ಗಳೂ ಸಹ ಬಿಡುಗಡೆಗೊಂಡಿದ್ದವು. ಇದೀಗ ವಾಲ್ತೇರು ವೀರಯ್ಯ ಚಿತ್ರದ ಟ್ರೈಲರ್ ಅಂತಿಮವಾಗಿ ಬಿಡುಗಡೆಗೊಂಡಿದೆ. ಟ್ರೈಲರ್ ವೀಕ್ಷಿಸಿದರೆ ಇದೊಂದು ಪಕ್ಕಾ ಕಮರ್ಷಿಯಲ್ ಚಿತ್ರ ಎಂಬುದು ಖಚಿತವಾಗಿದ್ದು, ಚಿರಂಜೀವಿ ನಟನೆಯ ಇತ್ತೀಚೆಗಿನ ಚಿತ್ರಗಳಿಗಿಂತ ಈ ಚಿತ್ರ ಬಲು ವಿಭಿನ್ನವಾಗಿರಲಿದೆ ಎಂಬುದು ಖಚಿತವಾಗಿದೆ.
ಟ್ರೈಲರ್‌ನಲ್ಲಿ ಚಿರಂಜೀವಿಯ ಪಾತ್ರವನ್ನು ( ವಾಲ್ತೇರು ವೀರಯ್ಯ ) ಪೊಲೀಸ್ ಇಲಾಖೆಗೆ ಬೇಕಾದ ಅತಿಮುಖ್ಯವಾದ, ಡೇಂಜರಸ್ ಸ್ಮಗ್ಲರ್ ಎಂದು ತೋರಿಸಲಾಗಿದೆ. ಇನ್ನು ಪ್ರಕಾಶ್ ರಾಜ್ ಚಿತ್ರದಲ್ಲಿ ವಿಲನ್ ಪಾತ್ರ ನಿರ್ವಹಿಸುತ್ತಿದ್ದು, ರವಿತೇಜಾ ಕಮಿಷನರ್ ಪಾತ್ರ ನಿರ್ವಹಿಸಿದ್ದಾರೆ. ನಾಯಕ ವಾಲ್ತೇರು ವೀರಯ್ಯನಿಗಾಗಿ ಪೊಲೀಸರು ಹುಡುಕಾಡುವ ಹಾಗೂ ಆತ ಅತಿ ಭಯಂಕರ ಎಂದು ಬಿಲ್ಡಪ್ ಕೊಡುವ ದೃಶ್ಯಗಳಿಂದ ಆರಂಭವಾಗುವ ಟ್ರೈಲರ್ ಬಳಿಕ ನಾಯಕ ಹಾಗೂ ನಾಯಕಿ ಶೃತಿ ಹಾಸನ್ ನಡುವಿನ ಕೆಲ ಹಾಸ್ಯಮಯ ದೃಶ್ಯಗಳನ್ನೂ ಹೊಂದಿದೆ. ನಂತರ ವೀರಯ್ಯ ನೆಲೆಸಿರುವ ಊರಿಗೆ ಕಮಿಷನರ್ ಆಗಿ ರವಿತೇಜಾ ಎಂಟ್ರಿಯಾಗುತ್ತೆ. ಕಮಿಷನರ್ ರವಿತೇಜಾ vs ಸ್ಮಗ್ಲರ್ ಚಿರಂಜೀವಿ ಜಟಾಪಟಿ ಒಂದೆಡೆಯಾದರೆ ಖಳನಾಯಕನ ಜತೆಗೂ ಚಿರಂಜೀವಿ ಹೋರಾಟ ನಡೆಸುವ ದೃಶ್ಯಗಳು ಟ್ರೈಲರ್‌ನಲ್ಲಿ ಇವೆ. ಟ್ರೈಲರ್‌ನಲ್ಲಿರುವ ದೃಶ್ಯಗಳ ಆಧಾರದ ಮೇಲೆ ಈ ಚಿತ್ರದಲ್ಲಿ ನಾಯಕ ತನ್ನ ಊರಿನ ಜನರ ಪರ ಖಳನಾಯಕನ ವಿರುದ್ಧ ಹೋರಾಡಲಿದ್ದು, ಅಲ್ಲಿಗೆ ರವಿತೇಜಾ ಪ್ರವೇಶಿಸಿ ಆರಂಭದಲ್ಲಿ ನಾಯಕನ ವಿರುದ್ಧ ಇದ್ದು, ಬಳಿಕ ಆತನಿಗೆ ಬೆಂಬಲ ನೀಡಿ ಖಳನಾಯಕನ ವಿರುದ್ಧ ನಿಲ್ಲಬಹುದು ಎಂಬುದನ್ನು ಊಹಿಸಬಹುದು.

ಡೈಲಾಗ್ಸ್ ಆಕ್ಷನ್ ಸೀನ್ಸ್ ಸಖತ್
ಇನ್ನು ಈ ಟ್ರೈಲರ್‌ನ ಡೈಲಾಗ್ಸ್ ಹಾಗೂ ಆಕ್ಷನ್ ದೃಶ್ಯಗಳು ಪ್ಲಸ್ ಪಾಯಿಂಟ್ ಎನ್ನಬಹುದು. ಚಿತ್ರದ ಎಡಿಟಿಂಗ್, ಆಕ್ಷನ್ ದೃಶ್ಯಗಳು ಹಾಗೂ ಸಂಭಾಷಣೆ ತೆಲುಗು ಪ್ರೇಕ್ಷಕರಿಗೆ ಇಷ್ಟವಾದರೆ ರಿಪೀಟ್ ಆದ ಸಾಮಾನ್ಯ ಚಿತ್ರಗಳೂ ಸಹ ಗೆಲ್ಲಲಿದ್ದು, ವಾಲ್ತೇರು ವೀರಯ್ಯ ವಿಚಾರದಲ್ಲೂ ಸಹ ಇದು ನೆರವೇರುವ ಸಾಧ್ಯತೆಗಳಿವೆ. 'ಮಾಸ್ ಅನ್ನೋ ಪದಕ್ಕೆ ಹೆಸರು ಇಟ್ಟದ್ದೇ ಅವನ್ನನು ನೋಡಿ', 'ರೆಕಾರ್ಡ್ಸ್‌ನಲ್ಲಿ ನನ್ನ ಹೆಸರಿಲ್ಲ, ನನ್ನ ಹೆಸರಿನಲ್ಲೇ ರೆಕಾರ್ಡ್ಸ್ ಇವೆ' ಈ ಡೈಲಾಗ್‌ಗಳು ಹಾಗೂ ಕಾರ್, ಬೈಕ್ ಚೇಸಿಂಗ್ ದೃಶ್ಯಗಳು, ಫೈಟ್ ದೃಶ್ಯಗಳು ಚಿತ್ರದಲ್ಲಿ ಆಕ್ಷನ್ ಹೆಚ್ಚಿರಲಿದೆ ಎಂಬುದನ್ನು ತಿಳಿಸಿವೆ. ಇನ್ನು ಟ್ರೈಲರ್‌ನ ಅಂತಿಮ ದೃಶ್ಯದಲ್ಲಿ ಈಡಿಯಟ್ ಚಿತ್ರದ ಡೈಲಾಗ್ ಒಂದನ್ನು ರಿಕ್ರಿಯೇಟ್ ಮಾಡಿರುವುದು ಸಖತ್ ಕಿಕ್ ಕೊಡ್ತಿದೆ. ಕಮಿಷನರ್ ರವಿತೇಜಾಗೆ ಚಿರಂಜೀವಿ 'ಇಲ್ಲಿಗೆ ನಿನ್ನಂಥ ಕಮಿಷನರ್‌ಗಳು ಬರ್ತಾ ಇರ್ತಾರೆ, ಹೋಗ್ತಾ ಇರ್ತಾರೆ. ಆದರೆ ಇಲ್ಲಿ ವಾಲ್ತೇರು ವಾರಯ್ಯ ಒಬ್ಬನೇ, ಲೋಕಲ್' ಎಂದು ವಾರ್ನಿಂಗ್ ಕೊಡ್ತಾರೆ. ಒಟ್ಟಿನಲ್ಲಿ ನಿರ್ದೇಶಕ ಬಾಬ್ಬಿ ಮಾತ್ರ ಮೆಗಾ ಫ್ಯಾನ್ಸ್ ನಿರೀಕ್ಷೆಯನ್ನು ಟ್ರೈಲರ್ ಮೂಲಕ ಮುಟ್ಟಿದ್ದು, ಚಿತ್ರದಲ್ಲೂ ಸಹ ಮುಟ್ಟುವ ವಿಶ್ವಾಸ ಸೃಷ್ಟಿಸಿದ್ದಾರೆ.

ಡಿಎಸ್‌ಪಿ ಬಿಜಿಎಂ ಸೂಪರ್
ಇನ್ನು ವಾಲ್ತೇರು ವೀರಯ್ಯ ಹಾಡುಗಳು ಬಿಡುಗಡೆಯಾದಾಗ ತೀವ್ರ ಟೀಕೆಗೆ ಒಳಗಾಗಿದ್ದ ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ಟ್ರೈಲರ್‌ನಲ್ಲಿ ನೀಡಿರುವ ಬ್ಯಾಕ್‌ಗ್ರೌಂಡ್ ಮ್ಯೂಸಿಕ್ ನಿಜಕ್ಕೂ ಸೂಪರ್. ಹಾಡುಗಳ ಮೂಲಕ ಉಂಟುಮಾಡಿದ್ದ ಬೇಸರವನ್ನು ಡಿಎಸ್‌ಪಿ ಟ್ರೈಲರ್ ಮೂಲಕ ಅಳಿಸಿಹಾಕುವಲ್ಲಿ ಯಶಸ್ವಿಯಾಗಿದ್ದಾರೆ ಎಂದೇ ಹೇಳಬಹುದು.

ಇದೇ ಸಂಕ್ರಾಂತಿ ವಿನ್ನರ್ ಎನ್ನುತ್ತಿದ್ದಾರೆ ನೆಟ್ಟಿಗರು
ಇನ್ನು ನೆಟ್ಟಿಗರು ಸಂಕ್ರಾಂತಿಗೆ ಬಿಡುಗಡೆಯಾಗಲಿರುವ ಎಲ್ಲಾ ಚಿತ್ರಗಳ ಟ್ರೈಲರ್‌ಗಳನ್ನು ವೀಕ್ಷಿಸಿದ ನಂತರ ವಾಲ್ತೇರು ವೀರಯ್ಯ ಟ್ರೈಲರ್ ಎಲ್ಲಾ ಚಿತ್ರಗಳ ಟ್ರೈಲರ್‌ಗಿಂತ ಚೆನ್ನಾಗಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಚಿರಂಜೀವಿ ಸಿನಿ ಕೆರಿಯರ್‌ನಲ್ಲೇ ಇಂತಹ ಟ್ರೈಲರ್ ಕಟ್ ಅನ್ನು ನೋಡಿರಲಿಲ್ಲ ಎನ್ನುತ್ತಿರುವ ಅಭಿಮಾನಿಗಳ ನಿರೀಕ್ಷೆ ಡಬಲ್ ಆಗಿದ್ದು, ಸಂಕ್ರಾಂತಿ ವಿನ್ನರ್ ಆಗುವ ಸಾಧ್ಯತೆ ದೊಡ್ಡದಾಗಿ ಕಾಣ್ತಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡ್ತಿದ್ದಾರೆ.