For Quick Alerts
  ALLOW NOTIFICATIONS  
  For Daily Alerts

  "ಚರಣ್ ಮಾಡಿದ್ದಾನೆ ಸಾಕು, ನಾನು ಮಾತ್ರ ಮೌಳಿ ಜೊತೆ ಸಿನಿಮಾ ಮಾಡುವ ರಿಸ್ಕ್ ತಗೊಳ್ಳಲ್ಲ"- ಚಿರು

  |

  ರಾಜಮೌಳಿ ನಿರ್ದೇಶನದಲ್ಲಿ ನಟಿಸಬೇಕು ಎನ್ನುವುದು ಸಾಕಷ್ಟು ನಟ- ನಟಿಯರು ಕನಸಾಗಿರುತ್ತದೆ. ಆದರೆ ಮೆಗಾಸ್ಟಾರ್ ಚಿರಂಜೀವಿ ಮಾತ್ರ ನಾನು ಯಾವುದೇ ಕಾರಣಕ್ಕೂ ಜಕ್ಕಣ್ಣನ ಜೊತೆ ಸಿನಿಮಾ ಮಾಡೋದಿಲ್ಲ ಎಂದಿದ್ದಾರೆ. ನನ್ನ ಮಗ ರಾಮ್‌ಚರಣ್ ನಟಿಸಿದ್ದಾನೆ, ಅಷ್ಟೇ ಸಾಕು ನಾನು ಮಾತ್ರ ಆ ರಿಸ್ಕ್ ತಗೊಳ್ಳೋದಿಲ್ಲ ಎಂದು ಚಿರು ಪುನರುಚ್ಚರಿಸಿದ್ದಾರೆ.

  ಮೆಗಾಸ್ಟಾರ್ ಚಿರಂಜೀವಿ ನಟನೆಯ 'ಗಾಡ್‌ಫಾದರ್' ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಮಲಯಾಳಂನ 'ಲೂಸಿಫರ್' ರೀಮೆಕ್ ಆಗಿರುವ ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಕೂಡ ಬಣ್ಣ ಹಚ್ಚಿದ್ದಾರೆ. ಸದ್ಯ ಚಿತ್ರದ ಟ್ರೈಲರ್ ರಿಲೀಸ್ ಆಗಿ ಧೂಳೆಬ್ಬಿಸಿದೆ. ದಸರಾ ಸಂಭ್ರಮದಲ್ಲಿ ಅಕ್ಟೋಬರ್ 5ಕ್ಕೆ ಸಿನಿಮಾ ವಿಶ್ವದಾದ್ಯಂತ ತೆರಗಪ್ಪಳಿಸ್ತಿದೆ. ಚಿತ್ರದ ಪ್ರಮೋಷನ್‌ಗಾಗಿ ಸಾಕಷ್ಟು ಸಂದರ್ಶನಗಳಲ್ಲಿ ಚಿರು ಮಾತನಾಡುತ್ತಿದ್ದಾರೆ. ಫಿಲ್ಮ್ ಕಂಪಾನಿಯನ್‌ಗೆ ನೀಡಿದ ಸಂದರ್ಶನದಲ್ಲಿ ಸಾಕಷ್ಟು ಇಂಟ್ರೆಸ್ಟಿಂಗ್ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

  ರಾಜಮೌಳಿ- ಮಹೇಶ್ ಬಾಬು ಚಿತ್ರದಲ್ಲಿ ಕ್ರಿಸ್​ ಹ್ಯಾಮ್ಸ್​ವರ್ಥ್: ಅಭಿಮಾನಿಗಳಿಗೆ ಸಿಕ್ಕೇಬಿಡ್ತು ಸಾಕ್ಷ್ಯ!ರಾಜಮೌಳಿ- ಮಹೇಶ್ ಬಾಬು ಚಿತ್ರದಲ್ಲಿ ಕ್ರಿಸ್​ ಹ್ಯಾಮ್ಸ್​ವರ್ಥ್: ಅಭಿಮಾನಿಗಳಿಗೆ ಸಿಕ್ಕೇಬಿಡ್ತು ಸಾಕ್ಷ್ಯ!

  ಚಿಕ್ಕ ಕಲಾವಿದರಿಂದ ಹಿಡಿದು ಸ್ಟಾರ್ ಹೀರೋಗಳವರೆಗೆ ಜಕಣ್ಣನ ಸಿನಿಮಾದಲ್ಲಿ ನಟಿಸಲು ಕಾತುರರಾಗಿದ್ದಾರೆ. ಆದರೆ ಮೆಗಾಸ್ಟಾರ್ ಚಿರಂಜೀವಿ ಅವರನ್ನು ರಾಜಮೌಳಿ ಜೊತೆ ಸಿನಿಮಾ ಮಾಡುತ್ತೀರಾ ಎಂದು ಕೇಳಿದ್ರೆ, ಆ ಆಸೆ ನನಗಿಲ್ಲ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ. ತಮ್ಮ ಹಿಂದಿನ ಮಾತಿಗೆ ಬದ್ಧರಾಗಿರುವ ಚಿರಂಜೀವಿ ಅದಕ್ಕೆ ಕಾರಣವನ್ನೂ ವಿವರಿಸಿದ್ದಾರೆ.

  ರಾಜಮೌಳಿ ಒಬ್ಬ ಮಹಾನ್ ನಿರ್ದೇಶಕ. ಅವರು ಅಂದ್ರೆ ನನಗೆ ಬಹಳ ಇಷ್ಟ. ಆದರೆ, ಅವರ ನಿರ್ದೇಶನದಲ್ಲಿ ನಟಿಸುವ ಆಸೆ ನನಗಿಲ್ಲ ಎಂದು ಚಿರಂಜೀವಿ ಹೇಳಿದ್ದಾರೆ. ಭಾರತೀಯ ಚಿತ್ರರಂಗದ ಕೀರ್ತಿಯನ್ನು ಜಗತ್ತಿಗೆ ಸಾರಿದ ಮಹಾನ್ ವ್ಯಕ್ತಿ ರಾಜಮೌಳಿ, ತೆಲುಗು ಸಿನಿ ಇಂಡಸ್ಟ್ರಿಯನ್ನು ದೊಡ್ಡ ಮಟ್ಟಕ್ಕೆ ಕೊಂಡೊಯ್ದಿರುವ ನಿರ್ದೇಶಕ ಜಕ್ಕಣ್ಣ ಅವರನ್ನು ಮೆಚ್ಚುತ್ತೇನೆ. ಆದರೆ ಅವರ ಜೊತೆ ಸಿನಿಮಾ ಮಾಡುವುದು ಕಷ್ಟ ಎಂದಿದ್ದಾರೆ.

  ತಂದೆಯ ಜೊತೆ ರಾಜಮೌಳಿ ಕೆಲಸ ಮಾಡುವುದು ಹೇಗೆ? ತಂದೆ ಮಾತು ಕೇಳ್ತಾರಾ ರಾಜಮೌಳಿತಂದೆಯ ಜೊತೆ ರಾಜಮೌಳಿ ಕೆಲಸ ಮಾಡುವುದು ಹೇಗೆ? ತಂದೆ ಮಾತು ಕೇಳ್ತಾರಾ ರಾಜಮೌಳಿ

  ಸಿನಿಮಾ ಮಾಡುವ ವಿಷಯ ಬಂದಾಗ ರಾಜಮೌಳಿ ಎಲ್ಲವನ್ನೂ ತುಂಬಾ ಆಳವಾಗಿ ನೋಡುತ್ತಾರೆ, ಅವರು ಬಯಸುವ ಔಟ್‌ಫುಟ್ ನನ್ನಿಂದ ಸಾಧ್ಯನಾ ಎನ್ನುವ ಅನುಮಾನ ವ್ಯಕ್ತಪಡಿಸಿದ್ದಾರೆ. ಅಷ್ಟೆ ಅಲ್ಲ ರಾಜಮೌಳಿ ಸಿನಿಮಾ ಅಂದರೆ ಎರಡು ಮೂರು ವರ್ಷ ಆಗುತ್ತದೆ. ಅಷ್ಟರಲ್ಲಿ ನಾನು ಎರಡ್ಮೂರು ಸಿನಿಮಾಗಳನ್ನು ಮಾಡ್ತೀನಿ. ಈ ವಯಸ್ಸಿನಲ್ಲಿ ಒಂದು ಚಿತ್ರಕ್ಕೆ ಅಷ್ಟು ಸಮಯ ಕೊಡಲು ಸಾಧ್ಯವಿಲ್ಲ. ನನ್ನ ಮಗ ಚರಣ್ ಜಕ್ಕಣ್ಣ ಜೊತೆ 2 ಸಿನಿಮಾ ಮಾಡಿದ್ದಾನೆ. ಇನ್ನು ಮುಂದೆ ಕೂಡ ಅವರಿಬ್ಬರ ಕಾಂಬಿನೇಷನ್‌ನಲ್ಲಿ ಸಿನಿಮಾ ಬರುತ್ತೆ ಎನ್ನುವ ನಂಬಿಕೆ ಇದೆ, ನನಗಂತೂ ಮೌಳಿ ಸಿನಿಮಾದಲ್ಲಿ ನಟಿಸ್ಬೇಕು, ಪ್ಯಾನ್ ಇಂಡಿಯಾ ಸ್ಟಾರ್ ಆಗಬೇಕು ಎನ್ನುವ ಆಸೆ ಇಲ್ಲ ಎಂದಿದ್ದಾರೆ.

  Chiranjeevi clarifies that he will not do a film with SS Rajamouli

  ಚಿರಂಜೀವಿ 'ಗಾಡ್‌ಫಾದರ್' ಸಿನಿಮಾ ರಿಲೀಸ್ ಎದುರು ನೋಡುತ್ತಿದ್ದರೆ ಮತ್ತೊಂದ್ಕಡೆ ರಾಜಮೌಳಿ - ಮಹೇಶ್‌ಬಾಬು ಕಾಂಬಿನೇಷನ್‌ ಸಿನಿಮಾ ಬಗ್ಗೆ ಚರ್ಚೆ ನಡೀತಿದೆ. ಬಹುಕೋಟಿ ವೆಚ್ಚದಲ್ಲಿ ಹಾಲಿವುಡ್ ರೇಂಜ್‌ನಲ್ಲಿ ಜಕ್ಕಣ್ಣ ಸಿನಿಮಾ ಪ್ಲ್ಯಾನ್ ಮಾಡ್ತಿದ್ದಾರೆ. ಹಾಲಿವುಡ್ ಕಲಾವಿದರು ಚಿತ್ರದಲ್ಲಿ ನಟಿಸಿದ್ರೆ, ಅಚ್ಚರಿಪಡ್ಬೇಕಿಲ್ಲ. ಸದ್ಯ 'RRR' ಚಿತ್ರ ಜಪಾನ್ ಸೇರಿದಂತೆ ಹಲವು ಕಡೆಗಳಲ್ಲಿ ರಿಲೀಸ್ ಆಗ್ತಿದ್ದು, ರಾಜಮೌಳಿ ಪ್ರಮೋಷನ್‌ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಮಹೇಶ್ ಬಾಬು ಸದ್ಯ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದಲ್ಲಿ ನಟಿಸ್ತಿದ್ದು, ಆ ನಂತರ ಮೌಳಿ ಜೊತೆ ಕೈ ಜೋಡಿಸಲಿದ್ದಾರೆ.

  ಅಭಿಮಾನಿಗಳೇ ನನ್ನ 'ಗಾಡ್ ಫಾದರ್ಸ್': ಮಳೆಯನ್ನು ಲೆಕ್ಕಿಸದೇ ಮೆಗಾಸ್ಟಾರ್ ಪವರ್‌ಫುಲ್ ಸ್ಪೀಚ್!ಅಭಿಮಾನಿಗಳೇ ನನ್ನ 'ಗಾಡ್ ಫಾದರ್ಸ್': ಮಳೆಯನ್ನು ಲೆಕ್ಕಿಸದೇ ಮೆಗಾಸ್ಟಾರ್ ಪವರ್‌ಫುಲ್ ಸ್ಪೀಚ್!

  English summary
  Chiranjeevi clarifies that he will not do a film with SS Rajamouli. know More.
  Saturday, October 1, 2022, 12:18
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X