Just In
Don't Miss!
- News
ಕೆಂಪೇಗೌಡ ಏರ್ಪೋರ್ಟ್ಗೆ ಆರೋಗ್ಯ ಮಾನ್ಯತೆ ಪ್ರಮಾಣಪತ್ರ
- Lifestyle
"ಗುರುವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ"
- Sports
ಐಎಸ್ಎಲ್: ಬೆಂಗಳೂರಿಗೆ ಸೋಲಿನ ಆಘಾತ ನೀಡಿದ ಕೇರಳ ಬ್ಲಾಸ್ಟರ್ಸ್
- Education
WAPCOS Recruitment 2021: 11 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಇಪ್ಪತ್ತು ದಿನದಲ್ಲಿ 47 ಪರ್ಸೆಂಟ್ ನಷ್ಟು ಏರಿಕೆ ಕಂಡ ಟಾಟಾ ಮೋಟಾರ್ಸ್ ಷೇರು
- Automobiles
ಡ್ಯುಯಲ್ ಟೋನ್ ಬಣ್ಣದ ಆಯ್ಕೆಯೊಂದಿಗೆ ರೋಡ್ ಟೆಸ್ಟಿಂಗ್ ನಡೆಸಿದ ಸಿಟ್ರನ್ ಸಿ5 ಏರ್ಕ್ರಾಸ್ ಕಾರು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಚಿರಂಜೀವಿ ಮೆರೆದ ಮಾನವೀಯತೆಗೆ ಜೈ ಎಂದ ಅಭಿಮಾನಿಗಳು
ನಟ ಮೆಗಾಸ್ಟಾರ್ ಚಿರಂಜೀವಿ ಅಭಿಮಾನಿಗಳ ಪಾಲಿಗೆ ದೇವರು. ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಭಾರತದ ನಟರಲ್ಲೂ ಅವರೂ ಒಬ್ಬರು. ಅಭಿಮಾನಿಗಳನ್ನು ಕುಟುಂಬ ಸದಸ್ಯರಂತೆಯೇ ಕಾಣುತ್ತಾರೆ ಚಿರಂಜೀವಿ.
ಬ್ಲಡ್ ಬ್ಯಾಂಕ್, ಆಸ್ಪತ್ರೆಗಳನ್ನು ಕಟ್ಟಿಸಿ ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿರುವ ಚಿರಂಜೀವಿ, ಪ್ರಕೃತಿ ವಿಕೋಪ, ಚಿತ್ರರಂಗದ ಸಂಕಷ್ಟಗಳಿಗೆ ಸ್ಪಂದಿಸುವುದು ಇನ್ನಿತರ ಕಾರ್ಯಗಳಲ್ಲಿ ತಮ್ಮನ್ನು ಸದಾ ತೊಡಗಿಸಿಕೊಂಡಿರುತ್ತಾರೆ. ಇದರ ಜೊತೆಗೆ ತಮ್ಮ ಅಭಿಮಾನಿಗಳ ವೈಯಕ್ತಿಕ ಕಷ್ಟಕ್ಕೂ ಆಗಾಗ್ಗೆ ಸ್ಪಂದಿಸುತ್ತಿರುತ್ತಾರೆ.
ಸಹೋದರನ ಮಗಳು ನಿಹಾರಿಕಾಗೆ ದುಬಾರಿ ಉಡುಗೊರೆ ನೀಡಿದ ನಟ ಚಿರಂಜೀವಿ
ನಟ ಚಿರಂಜೀವಿ ಅವರ ಅಪ್ಪಟ ಅಭಿಮಾನಿಯೊಬ್ಬನ ವೈಯಕ್ತಿಕ ಕಷ್ಟಕ್ಕೆ ಸ್ಪಂದಿಸಿದ್ದಾರೆ ನಟ ಚಿರಂಜೀವಿ. ಅಭಿಮಾನಿಯೊಬ್ಬನ ಮಗಳ ಮದುವೆಗೆ ಆರ್ಥಿಕ ಸಂಕಷ್ಟ ಎದುರಾಗಿದ್ದಾಗ, ವಿಷಯ ತಿಳಿದ ಚಿರಂಜೀವಿ, ಅಭಿಮಾನಿಗೆ ಆರ್ಥಿಕ ಸಹಾಯ ಮಾಡಿದ್ದಾರೆ.

ಬೋಂಡಾ ಅಂಗಡಿ ಇಟ್ಟುಕೊಂಡಿದ್ದ ಶೇಖರ್
ಮೆಹಬೂಬ್ ನಗರದ ಬೋನಗಿರಿ ಶೇಖರ್, 30 ವರ್ಷಗಳಿಂದಲೂ ಚಿರಂಜೀವಿ ಅವರ ಅಪ್ಪಟ ಅಭಿಮಾನಿ. ಬಜ್ಜಿ-ಬೋಂಡಾ ಅಂಗಡಿ ಇಟ್ಟುಕೊಂಡು ವ್ಯಾಪಾರ ನಡೆಸಿ ಜೀವನ ಸಾಗಿಸುತ್ತಿರುವ ಶೇಖರ್, ಮಗಳ ಮದುವೆ ಮಾಡಲು ಆರ್ಥಿಕ ಮುಗ್ಗಟ್ಟು ಎದುರಿಸಿದ್ದರು.

1 ಲಕ್ಷ ರೂಪಾಯಿ ಚೆಕ್ ನೀಡಿದ ನಟ
ಈ ವಿಷಯ ತಿಳಿದ ನಟ ಚಿರಂಜೀವಿ 1 ಲಕ್ಷ ರೂಪಾಯಿ ಚೆಕ್ ಅನ್ನು ಬೋನಗಿರಿ ಶೇಖರ್ ಹೆಸರಿಗೆ ನೀಡಿದ್ದಾರೆ. ಚಿರಂಜೀವಿ ನೀಡಿದ ಚೆಕ್ ಅನ್ನು ಸ್ಥಳೀಯ ಶಾಸಕ ಶಂಕರ್ ನಾಯಕ್ ಶೇಖರ್ ಗೆ ನೀಡಿದ್ದಾರೆ. ಚೆಕ್ ವಿತರಣೆ ಸಂದರ್ಭದಲ್ಲಿ ಮಾತನಾಡಿದ ಮೆಗಾ ಫ್ಯಾನ್ಸ್ ಸಂಘದ ಪ್ರಮುಖ ಸ್ವಾಮಿ ನಾಯ್ಡು 'ಅಭಿಮಾನಿಗಳು ಕಷ್ಟದಲ್ಲಿದ್ದರೆ ಅದರ ಮಾಹಿತಿ ನನಗೆ ನೀಡಿ' ಎಂದು ಚಿರಂಜೀವಿ ಹೇಳಿದ್ದಾರೆ ಎಂದಿದ್ದಾರೆ.
ಚಿರಂಜೀವಿ ಕುಟುಂಬ ಸೇರುತ್ತಿರುವ ಅಳಿಯ ಚೈತನ್ಯ ಯಾರು ಗೊತ್ತೆ?

ನಿಹಾರಿಕಾಗೆ ಎರಡು ಕೋಟಿ ಮೌಲ್ಯದ ಆಭರಣ!?
ಮೆಗಾಸ್ಟಾರ್ ಚಿರಂಜೀವಿ ಎರಡು ದಿನಗಳ ಹಿಂದಷ್ಟೆ ಸಹೋದರ ನಾಗಬಾಬು ಮಗಳು ನಿಹಾರಿಕಾ ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದರು. ನಿಹಾರಿಕಾ ಗೆ ಮದುವೆ ಉಡುಗೊರೆಯಾಗಿ ಎರಡು ಕೋಟಿ ಮೌಲ್ಯದ ಆಭರಣಗಳನ್ನು ನೀಡಿದ್ದಾರೆ ಎನ್ನಲಾಗಿದೆ.

ಹಲವು ಸಿನಿಮಾಗಳಲ್ಲಿ ಚಿರು ಬ್ಯುಸಿ
ಇನ್ನು ನಟ ಚಿರಂಜೀವಿ ಹಲವು ಸಿನಿಮಾಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರ ನಟನೆಯ ಆಚಾರ್ಯ ಸಿನಿಮಾದ ಚಿತ್ರೀಕರಣ ಪ್ರಸ್ತುತ ನಡೆಯುತ್ತಿದೆ. ಇದಾದ ನಂತರ ಮಲಯಾಳಂ ನ ಲುಸೀಫರ್ ಸಿನಿಮಾದ ರೀಮೇಕ್ ನಲ್ಲಿ ಚಿರಂಜೀವಿ ನಟಿಸಲಿದ್ದಾರೆ. ಅದರ ನಂತರ ಆಟೋ ಜಾನಿ ಹೆಸರಿನ ಸಿನಿಮಾದಲ್ಲಿ ನಟಿಸಲಿದ್ದಾರೆ ಚಿರಂಜೀವಿ.