For Quick Alerts
  ALLOW NOTIFICATIONS  
  For Daily Alerts

  ತೆಲುಗು ಹಾಸ್ಯನಟನ ಪುತ್ರಿಯ ಮದುವೆಗೆ ಸ್ಟಾರ್ ನಟರ ದಂಡು

  By ಫಿಲ್ಮಿಬೀಟ್ ಡೆಸ್ಕ್
  |

  ಸಿನಿಮಾ ರಂಗದ ಸೆಲೆಬ್ರಿಟಿಗಳ ಮದುವೆಗಳು ಭಾರಿ ಗಮನ ಸೆಳೆಯುತ್ತವೆ. ಮಾಧ್ಯಮಗಳ ಕಣ್ಣುಗಳಂತೂ ಮದುವೆಯ ಮೇಲೆ ನೆಟ್ಟಿರುತ್ತವೆ. ಹಲವು ದಿಗ್ಗಜ ನಟ-ನಟಿಯರು ಮದುವೆ, ಮದುವೆ ಮುಂಚಿನ ಆ ನಂತರದ ಪಾರ್ಟಿಗಳಲ್ಲಿ ಪಾಲ್ಗೊಳ್ಳುತ್ತಾರೆ.

  ಆದರೆ ಮದುವೆಯಾಗುತ್ತಿರುವವರು ಸ್ಟಾರ್ ನಟ ಅಥವಾ ನಟಿಯರಾದರಷ್ಟೆ ಹೀಗೆಲ್ಲ ದೊಡ್ಡದಾಗಿ ಸುದ್ದಿಯಾಗುತ್ತದೆ. ದೊಡ್ಡ ದೊಡ್ಡ ಸ್ಟಾರ್ ನಟರು, ರಾಜಕಾರಣಿಗಳು ಆಗಮಿಸುತ್ತಾರೆ. ಅದೇ ಪೋಷಕ ನಟರು, ಹಾಸ್ಯ ನಟರ ಮದುವೆಗಳು ಅಥವಾ ಅವರ ಕುಟುಂಬದ ಮದುವೆಗಳು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುವುದಿಲ್ಲ. ಆದರೆ ತೆಲುಗು ಚಿತ್ರರಂಗದಲ್ಲಿ ಹೀಗಾಗಿಲ್ಲ.

  ತೆಲುಗು ಚಿತ್ರರಂಗದ ಜನಪ್ರಿಯ ಹಾಸ್ಯನಟರೊಬ್ಬರ ಮಗಳ ಮದುವೆ ನಿನ್ನೆ ನಡೆದಿದ್ದು, ಚಿತ್ರರಂಗದ ದೊಡ್ಡ-ದೊಡ್ಡ ಸ್ಟಾರ್ ನಟರು ಮದುವೆಗೆ ಹಾಜರಾಗಿದ್ದಾರೆ ಮಾತ್ರವಲ್ಲದೆ ಆಂಧ್ರದ ಕೆಲವು ರಾಜಕಾರಣಿಗಳು ಸಹ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

  ಹಲವು ದಶಕಗಳಿಂದಲೂ ತೆಲುಗು ಚಿತ್ರರಂಗದಲ್ಲಿ ಹಾಸ್ಯ ಪಾತ್ರಗಳಲ್ಲಿ ನಟಿಸುತ್ತಾ ಬಂದಿರುವ ನಟ ಆಲಿ ಅವರ ಪುತ್ರಿ ಫಾತಿಮಾ ರಮೀಜುನ್‌ರ ವಿವಾಹ ನಡೆದಿದ್ದು ಹಲವು ಗಣ್ಯರು ಈ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ.

  ಮೆಗಾಸ್ಟಾರ್ ಚಿರಂಜೀವಿ ಹಾಗೂ ಅವರ ಕುಟುಂಬದವರು, ನಟ ನಾಗಾರ್ಜುನ್ ಅವರ ಪತ್ನಿ ಅಮಲಾ ಸೇರಿದಂತೆ ಚಿತ್ರರಂಗದ ಇತರೆ ಗಣ್ಯರುಗಳು ಮದುವೆಗೆ ಆಗಮಿಸಿದ್ದರು. ನಟಿ ಅನುಷ್ಕಾ ಶೆಟ್ಟಿ ಸಹ ಆಲಿ ಮಗಳ ಮದುವೆಗೆ ಆಗಮಿಸಿದ್ದರು ಎನ್ನಲಾಗುತ್ತಿದೆ. ನಟ ರವಿತೇಜ, ನಟಿ, ರಾಜಕಾರಣಿ ರೋಜ. ಕೆಲವು ಹೊಸ ನಟರು ಜೊತೆಗೆ ಖ್ಯಾತ ಕಮಿಡಿಯನ್ ಬ್ರಹ್ಮಾನಂದಂ, ರಾಜಮೌಳಿಯವರ ತಂದೆ ವಿಜಯೇಂದ್ರ ಪ್ರಸಾದ್ ಸಹ ಆಲಿ ಮಗಳ ವಿವಾಹಕ್ಕೆ ಬಂದಿದ್ದರಂತೆ!

   Chiranjeevi, Nagarjuna And Many More Stars Attend Comedian Ali Daughters Wedding

  ಅಷ್ಟೇ ಅಲ್ಲದೆ, ಆಂಧ್ರ ಪ್ರದೇಶದ ಆಡಳಿತಾರೂಢ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಸಕ್ರಿಯ ಸದಸ್ಯರೂ ಆಲಿ ಆಗಿರುವ ಕಾರಣ ಕೆಲವು ರಾಜಕಾರಣಿಗಳು ಸಹ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆದರೆ ಆಲಿಯ ಆತ್ಮೀಯ ಗೆಳೆಯ ಎಂದೇ ಹೇಳಲಾಗುವ ಪವನ್ ಕಲ್ಯಾಣ್ ಅವರು ವಿವಾಹಕ್ಕೆ ಬಂದಿರಲಿಲ್ಲ ಎನ್ನಲಾಗುತ್ತಿದೆ.

  ನಟ ಆಲಿ ಹಲವು ದಶಕಗಳಿಂದಲೂ ತೆಲುಗು ಚಿತ್ರರಂಗದಲ್ಲಿ ಹಾಸ್ಯನಟರಾಗಿ ಗುರುತಿಸಿಕೊಂಡಿದ್ದಾರೆ. 1000 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಆಲಿ ಈ ವರೆಗೆ ನಟಿಸಿದ್ದಾರೆ. ಪವನ್ ಕಲ್ಯಾಣ್, ಚಿರಂಜೀವಿ, ನಾಗಾರ್ಜುನ ಸೇರಿದಂತೆ ಹಲವು ಸ್ಟಾರ್ ನಟರ ಜೊತೆ ಆಲಿ ನಟಿಸಿದ್ದಾರೆ. ಆಲಿ ಕೆಲವು ಹಾಸ್ಯ ಪ್ರಧಾನ ಸಿನಿಮಾಗಳಲ್ಲಿ ನಾಯಕ ನಟನ ಪಾತ್ರಗಳಲ್ಲಿಯೂ ನಟಿಸಿರುವುದು ವಿಶೇಷ.

  English summary
  Megastar Chiranjeevi, Nagarjuna and many more stars of Telugu movie industry attend Ali daughter's wedding.
  Monday, November 28, 2022, 9:56
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X