For Quick Alerts
  ALLOW NOTIFICATIONS  
  For Daily Alerts

  ವಾರಿಸು ಬಳಿಕ 200 ಕೋಟಿ ಕ್ಲಬ್ ಸೇರಿದ 'ವಾಲ್ತೇರು ವೀರಯ್ಯ'!

  |

  ಸಂಕ್ರಾಂತಿ ಬಂತೆಂದರೆ ಸಾಕು ತೆಲುಗು ಹಾಗೂ ತಮಿಳು ಚಿತ್ರರಂಗಗಳ ದೊಡ್ಡ ದೊಡ್ಡ ಸ್ಟಾರ್ ನಟರ ಚಿತ್ರಗಳು ಬಿಡುಗಡೆಯಾಗಿ ಬಾಕ್ಸ್ ಆಫೀಸ್‌ನಲ್ಲಿ ಜಿದ್ದಾಜಿದ್ದಿ ನಡೆಸಲು ಸಜ್ಜಾಗಿಬಿಡುತ್ತವೆ. ಈ ದಿನಗಳಂದು ಸಾಲು ಸಾಲು ರಜೆಗಳು ಇರುವುದರಿಂದ ಚಿತ್ರಗಳು ದೊಡ್ಡ ಕಲೆಕ್ಷನ್ ಮಾಡಲಿವೆ. ಹೀಗಾಗಿಯೇ ಸಂಕ್ರಾಂತಿ ಪ್ರಯುಕ್ತ ತೆಲುಗು ಹಾಗೂ ತಮಿಳು ಮಂದಿ ಸ್ಟಾರ್ ನಟರ ಚಿತ್ರಗಳನ್ನು ಬಿಡುಗಡೆ ಮಾಡಿ ದೊಡ್ಡ ಕಲೆಕ್ಷನ್ ಮಾಡಿಕೊಳ್ಳುತ್ತಾರೆ.

  ಇದೇ ರೀತಿ ಈ ವರ್ಷದ ಸಂಕ್ರಾಂತಿ ಪ್ರಯುಕ್ತವೂ ಸಹ ತೆಲುಗು ಹಾಗೂ ತಮಿಳಿನ ಸ್ಟಾರ್ ನಟರ ಚಿತ್ರಗಳು ಬಿಡುಗಡೆಗೊಂಡವು. ತಮಿಳಿನಲ್ಲಿ ವಿಜಯ್ ನಟನೆಯ ವಾರಿಸು ಹಾಗೂ ಅಜಿತ್ ಕುಮಾರ್ ನಟನೆಯ ತುನಿವು ಚಿತ್ರಗಳು ತೆರೆಗೆ ಬಂದವು. ಅತ್ತ ತೆಲುಗಿನಲ್ಲಿ ನಂದಮೂರಿ ಬಾಲಕೃಷ್ಣ ನಟನೆಯ ವೀರಸಿಂಹ ರೆಡ್ಡಿ ಹಾಗೂ ಚಿರಂಜೀವಿ ನಟನೆಯ ವಾಲ್ತೇರು ವೀರಯ್ಯ ಚಿತ್ರಗಳು ಬಿಡುಗಡೆಗೊಂಡವು.

  ಈ ಮೂಲಕ ವಾರಿಸು vs ತುನಿವು ಚಿತ್ರಗಳ ನಡುವೆ ತಮಿಳುನಾಡು ಬಾಕ್ಸ್ ಆಫೀಸ್ ಪೈಪೋಟಿ ಉಂಟಾದರೆ, ತೆಲುಗಿನಲ್ಲಿ ವೀರಸಿಂಹ ರೆಡ್ಡಿ ಹಾಗೂ ವಾಲ್ತೇರು ವೀರಯ್ಯ ಚಿತ್ರಗಳಲ್ಲಿ ಯಾವ ಚಿತ್ರ ಹೆಚ್ಚು ಗಳಿಕೆ ಮಾಡಿ ಗೆಲ್ಲಬಹುದು ಎಂಬ ಕುತೂಹಲ ಮೂಡಿತ್ತು. ಅತ್ತ ತಮಿಳಿನಲ್ಲಿ ವಿಜಯ್ ನಟನೆಯ ವಾರಿಸು ಚಿತ್ರ ಬಿಡುಗಡೆಯಾದ 12 ದಿನಗಳಲ್ಲಿ 250 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿ ಗೆಲುವು ಸಾಧಿಸಿದ್ದರೆ, ತೆಲುಗಿನಲ್ಲಿ ಚಿರಂಜೀವಿ ನಟನೆಯ ವಾಲ್ತೇರು ವೀರಯ್ಯ ಬಿಡುಗಡೆಯಾದ 10 ದಿನಗಳಲ್ಲಿ 200 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿ ಸಂಕ್ರಾಂತಿ ವಿನ್ನರ್ ಎನಿಸಿಕೊಂಡಿದೆ.

  ಈ ಕಲೆಕ್ಷನ್ ವರದಿಯನ್ನು ಚಿತ್ರದ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಸಾಮಾಜಿಕ ಜಾಲತಾಣದಲ್ಲಿನ ತನ್ನ ಅಧಿಕೃತ ಖಾತೆಗಳಲ್ಲಿ ಹಂಚಿಕೊಂಡಿದೆ. ಈ ಮೂಲಕ ಕಳೆದ ಚಿತ್ರ ಆಚಾರ್ಯದಲ್ಲಿ ಹೀನಾಯವಾಗಿ ಸೋತಿದ್ದ ಚಿರಂಜೀವಿ ಕಮ್‌ಬ್ಯಾಕ್ ಮಾಡಿದ್ದಾರೆ.

  English summary
  Chiranjeevi starrer Waltair Veerayya crossed 200 crores gross collection at box office. Read on
  Monday, January 23, 2023, 18:33
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X