Don't Miss!
- News
Breaking: ಖ್ಯಾತ ತೆಲುಗು ನಿರ್ದೇಶಕ ಕೆ. ವಿಶ್ವನಾಥ್ ನಿಧನ
- Finance
ಕರ್ನಾಟಕದಲ್ಲಿ ಇ-ಬಸ್ಗಳ ಮಾರಾಟವೆಷ್ಟು? ಭಾರತದಲ್ಲಿ ಹೆಚ್ಚಿದ ಬೇಡಿಕೆ ಪ್ರಮಾಣವೆಷ್ಟು? ತಿಳಿಯಿರಿ
- Sports
ಕಮ್ಬ್ಯಾಕ್ಗೆ ಸಜ್ಜಾದ ಬೂಮ್ರಾ: ಎನ್ಸಿಎನಲ್ಲಿ ಬೌಲಿಂಗ್ ಅಭ್ಯಾಸ ಆರಂಭಿಸಿದ ಭಾರತದ ವೇಗಿ
- Lifestyle
Horoscope Today 3 Feb 2023: ಶುಕ್ರವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Automobiles
ಭಾರತದಲ್ಲಿ ಮಾರುತಿ ಜಿಮ್ನಿ ಎಸ್ಯುವಿಗೆ ಭಾರೀ ಡಿಮ್ಯಾಂಡ್: ಪ್ರತಿಸ್ಪರ್ಧಿಗಳಿಗೆ ಹೆಚ್ಚಿದ ಆತಂಕ
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ವಾಲ್ತೇರು ವೀರಯ್ಯ' Vs 'ವೀರ ಸಿಂಹ ರೆಡ್ಡಿ':ಸಂಕ್ರಾಂತಿ ವೀಕೆಂಡ್‌ನಲ್ಲಿ ಗೆದ್ದೋರು ಯಾರು?
ತೆಲುಗು ಹಾಗೂ ತಮಿಳು ಸಿನಿಮಾಗಳಿಗೆ ಸಂಕ್ರಾಂತಿ ತುಂಬಾನೇ ಮುಖ್ಯ. ಎರಡೂ ಕಡೆ ಈ ಹಬ್ಬವನ್ನು ಜೋರಾಗಿ ಆಚರಣೆ ಮಾಡುತ್ತಾರೆ. ಸುಗ್ಗಿಯ ಸಂಭ್ರಮದಲ್ಲಿರೋ ಜನರಿಗಾಗಿ ಸಿನಿಮಾ ಮಂದಿ ದೊಡ್ಡ ದೊಡ್ಡ ಸಿನಿಮಾಗಳನ್ನು ರಿಲೀಸ್ ಮಾಡುತ್ತಾರೆ.
ಈ ಸಂಕ್ರಾಂತಿಗೆ ಕೂಡ ಟಾಲಿವುಡ್ ಹಾಗೂ ಕಾಲಿವುಡ್‌ನಲ್ಲಿ ಸೂಪರ್‌ಸ್ಟಾರ್ ಸಿನಿಮಾಗಳೇ ರಿಲೀಸ್ ಆಗಿವೆ. ಮೆಗಾಸ್ಟಾರ್ ಚಿರಂಜೀವಿ ಸಿನಿಮಾ 'ವಾಲ್ತೇರು ವೀರಯ್ಯ', ಬಾಲಕೃಷ್ಣ ಅಭಿನಯದ 'ವೀರ ಸಿಂಹ ರೆಡ್ಡಿ', ವಿಜಯ್ ಅಭಿನಯದ 'ವಾರಿಸು' ಹಾಗೂ ಅಜಿತ್ ಸಿನಿಮಾ 'ಥುನಿವು' ಬಿಡುಗಡೆಯಾಗಿದೆ.
'ವಾಲ್ತೇರು
ವೀರಯ್ಯ'
2ನೇ
ದಿನದ
ಕಲೆಕ್ಷನ್
ಬಾಲಯ್ಯದ
ಸಿನಿಮಾದ
2
&
3ನೇ
ದಿನ
ಗಳಿಕೆಗೆ
ಸಮ!
ಸಂಕ್ರಾಂತಿ ಹಬ್ಬಕ್ಕೆ ಬಿಗ್ ಬಜೆಟ್ ಸಿನಿಮಾಗಳು ರಿಲೀಸ್ ಆಗೋದು ನಿಜ. ಆದರೆ, ಕೆಲವೊಮ್ಮೆ ಇದು ಪ್ರತಿಷ್ಠೆಯ ಕಣವಾಗಿಬಿಡುತ್ತೆ. ಸದ್ಯ ಚಿರಂಜೀವಿ ಅಭಿನಯದ 'ವಾಲ್ತೇರು ವೀರಯ್ಯ' ಹಾಗೂ ಬಾಲಕೃಷ್ಣ ಸಿನಿಮಾ 'ವೀರ ಸಿಂಹ ರೆಡ್ಡಿ' ಗಳಿಕೆಯಲ್ಲಿ ಜಿದ್ದಾಜಿದ್ದಿಗೆ ಬಿದ್ದಿವೆ. ಹಾಗಿದ್ದರೆ, ಸಂಕ್ರಾಂತಿ ವೀಕೆಂಡ್ ಬಳಿಕ ಎರಡೂ ಸಿನಿಮಾಗಳಲ್ಲಿ ಗೆದ್ದಿದ್ಯಾರು? ಅನ್ನೋದನ್ನು ನೋಡೋಣ.

'ವಾಲ್ತೇರು ವೀರಯ್ಯ' ಸಂಕ್ರಾಂತಿ ಕಲೆಕ್ಷನ್ ಎಷ್ಟು?
ಮೆಗಾಸ್ಟಾರ್ ಚಿರಂಜೀವಿ ಮಾಸ್ ಲುಕ್ ಕೊಟ್ಟ ಸಿನಿಮಾ 'ವಾಲ್ತೇರು ವೀರಯ್ಯ'. ಈ ಸಿನಿಮಾಗೆ ಫಸ್ಟ್ ಡೇ ಫಸ್ಟ್ ಶೋನೇ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೂ ಜನರು ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಿ ಎಂಜಾಯ್ ಮಾಡುತ್ತಿದ್ದಾರೆ. 'ವಾಲ್ತೇರು ವೀರಯ್ಯ' ಮೊದಲ ಸಿನಿಮಾ ಹಿಂದೆಬಿದ್ದಿದ್ದರೂ, ಎರಡು ಹಾಗೂ ಮೂರನೇ ದಿನ ಗಳಿಕೆಯಲ್ಲಿ ಏರಿಕೆಯಾಗಿದೆ. ನಿನ್ನೆ(ಜನವರಿ 15) ಸಂಕ್ರಾಂತಿ ದಿನ ಮೆಗಾಸ್ಟಾರ್ ಚಿರಂಜೀವಿ ಸಿನಿಮಾ 20 ಕೋಟಿ ರೂ. ಗಳಿಕೆ ಕಂಡಿದೆ ಎಂದು ಟ್ರೇಡ್ ಎಕ್ಸ್‌ಪರ್ಟ್ಸ್ ಲೆಕ್ಕಕೊಟ್ಟಿದ್ದಾರೆ.

ಮೂರು ದಿನಗಳ ಕಾಲ ಗಳಿಸಿದ್ದೆಷ್ಟು?
ಮೆಗಾಸ್ಟಾರ್ ಚಿರಂಜೀವಿಯ 'ವಾಲ್ತೇರು ವೀರಯ್ಯ' ಸಿನಿಮಾ ಮೂರು ದಿನಗಳಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ವಿಶ್ವದಾದ್ಯಂತ ಈ ಮೂರು ದಿನಗಳಲ್ಲಿ ಸುಮಾರು108 ಕೋಟಿ ರೂ. ಗಳಿಕೆ ಮಾಡಿದೆ. ಭಾರತದಲ್ಲಿ 69.40 ಕೋಟಿ ರೂ. ಎಂದು ವರದಿಯಾಗಿದೆ.
ಮೊದಲ
ದಿನ
29.6
ಕೋಟಿ
ರೂ.
ಎರಡನೇ
ದಿನ
19.8
ಕೋಟಿ
ರೂ.
ಮೂರನೇ
ದಿನ
20
ಕೋಟಿ
ರೂ.
ಒಟ್ಟು
69.40
ಕೋಟಿ
ರೂ.
(ಭಾರತ)

'ವೀರ ಸಿಂಹ ರೆಡ್ಡಿ' ಕಲೆಕ್ಷನ್ ಎಷ್ಟು?
ಬಾಲಕೃಷ್ಣ ಅಭಿನಯದ ಮೊದಲ ದಿನದ ಗಳಿಕೆ ಚಿರಂಜೀವಿ ಸಿನಿಮಾ 'ವಾಲ್ತೇರು ವೀರಯ್ಯ'ಗಿಂತ ಹೆಚ್ಚಿತ್ತು. ಮೊದಲ ದಿನವೇ ಸುಮಾರು 33 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಎರಡನೇ ದಿನದಿಂದ ಕಲೆಕ್ಷನ್ ಡ್ರಾಪ್ ಆಗಿದೆ. ಇನ್ನು ನಾಲ್ಕನೇ ದಿನ ಈ ಸಿನಿಮಾ ಸುಮಾರು 11 ಕೋಟಿ ರೂ. ಕಲೆಕ್ಷನ್ ಮಾಡಿದೆ. ಒಟ್ಟು ನಾಲ್ಕು ದಿನಗಳಲ್ಲಿ ದೇಶಾದ್ಯಂತ 70 ಕೋಟಿ ರೂ. ಗಳಿಕೆ ಕಂಡಿದ್ರೆ, ವಿಶ್ವದಾದ್ಯಂತ 104 ಕೋಟಿ ರೂ.ಕಲೆಕ್ಷನ್ ಮಾಡಿದೆ.

ಇಬ್ಬರಲ್ಲಿ ಗೆದ್ದೋರು ಯಾರು?
ಮೆಗಾಸ್ಟಾರ್ ಚಿರಂಜೀವಿ ಹಾಗೂ ಬಾಲಕೃಷ್ಣ ಸಿನಿಮಾಗಳು ಸಂಕ್ರಾಂತಿ ಹಬ್ಬಕ್ಕೆ ಆರು ಬಾರಿ ಮುಖಾಮುಖಿಯಾಗಿವೆ. ಈ ಬಾರಿ ಮೊದಲ ಮೂರು ದಿನ ಮೆಗಾಸ್ಟಾರ್ ಚಿರಂಜೀವಿಯ 'ವಾಲ್ತೇರು ವೀರಯ್ಯ' ಗೆದ್ದಿದೆ. 'ವೀರ ಸಿಂಹ ರೆಡ್ಡಿ' ಸಿನಿಮಾ ಬಾಕ್ಸಾಫೀಸ್ ಕಲೆಕ್ಷನ್ ಚೆನ್ನಾಗಿದ್ದರೂ, ಚಿರಂಜೀವಿ ಸಿನಿಮಾ ಮುಂದೆ ತಣ್ಣಗಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಕಲೆಕ್ಷನ್ ಹೇಗಿರುತ್ತೆ? ಅನ್ನೋದರ ಮೇಲೆ ಗೆದ್ದರು ಯಾರು? ಅನ್ನೋದು ಗೊತ್ತಾಗುತ್ತೆ.