For Quick Alerts
  ALLOW NOTIFICATIONS  
  For Daily Alerts

  ಜಗನ್ V/s ಪವನ್: ತೆಲುಗು ಸಿನಿಮಾರಂಗ ಜಗನ್ ಜೊತೆಗೆ ನಿಂತಿದ್ದು ಯಾಕೆ?

  By ರವೀಂದ್ರ ಕೊಟಕಿ
  |

  ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಪ್ರತ್ಯರ್ಥಿ ಜನಸೇನಾ ನಾಯಕ ಪವನ್ ಕಲ್ಯಾಣ್ ಮಧ್ಯೆ ರಾಜಕೀಯ ವೈರತ್ವ ತುಂಬಾ ಹಳೆಯದು. ಒಬ್ಬರ ಮುಖ ಮತ್ತೊಬ್ಬರು ನೋಡಲು ಇಚ್ಚಿಸದಷ್ಟು ಜಿದ್ದಾಜಿದ್ದಿ ರಾಜಕೀಯ ಇವರಿಬ್ಬರ ಮಧ್ಯೆ ನಡೆಯುತ್ತಿದೆ. ಒಂದೆಡೆ ಪ್ರಧಾನ ಪ್ರತಿಪಕ್ಷವಾದ ಟಿಡಿಪಿ ಹೋರಾಟದ ಮನೋಭಾವದಿಂದ ಹಿಂದೆ ಸರಿದಿದ್ದು, ಜಗನ್ ಸರ್ಕಾರದ ವಿರುದ್ಧ ಹೋರಾಟ ಮಾಡಲಾಗದಷ್ಟು ಅಸಹಾಯಕ ಸ್ಥಿತಿಗೆ ತಲುಪಿದೆ.

  ಪವನ್ ಪ್ರಶ್ನಿಸುವ ಧ್ವನಿ?

  ಆಂಧ್ರಪ್ರದೇಶದಲ್ಲಿ ತೆಲುಗುದೇಶಂ ಅಧಿಕೃತ ಪ್ರತಿಪಕ್ಷವಾದರೂ ಇತ್ತೀಚಿನ ದಿನಗಳಲ್ಲಿ ಅದರ ಜನಪ್ರಿಯತೆ ಪಾತಾಳಕ್ಕೆ ಕುಸಿದಿದೆ. ಇತ್ತೀಚೆಗೆ ನಡೆದ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ರಾಜ್ಯಾದ್ಯಂತ ಹೀನಾಯವಾಗಿ ಸೋತು ಹೋಗಿರುವ ಪಕ್ಷ ಕೊನೆಗೆ ಸ್ವತಃ ಚಂದ್ರಬಾಬು ನಾಯ್ಡು ಪ್ರತಿನಿಧಿಸುತ್ತಿರುವ ಕುಪ್ಪಂ ವಿಧಾನಸಭಾ ಕ್ಷೇತ್ರದಲ್ಲೂ ಕೂಡ ಪಕ್ಷ ಇನ್ನಿಲ್ಲದಂತೆ ನೆಲಕಚ್ಚಿದೆ. ರಾಜ್ಯದಲ್ಲಿ ಶೇಕಡ 98ರಷ್ಟು ಸ್ಥಾನಗಳಲ್ಲಿ ಜಗನ್ ಪಕ್ಷ ಜಯಭೇರಿ ಬಾರಿಸಿದೆ. ಆದರೂ ವೈ ಸಿ ಪಿ ಕಾರ್ಯಕರ್ತರು ಮತ್ತು ನಾಯಕರಲ್ಲಿ ಆತಂಕ ಮನೆಮಾಡಿದೆ. ಆ ಆತಂಕಕ್ಕೆ ಕಾರಣವಾಗಿರುವುದು ಪವನ್ ಕಲ್ಯಾಣ್.

  ಸಿಎಂ ಜಗನ್ ವಿರುದ್ಧ ಏಕವನಚನದ ವಾಗ್ದಾಳಿ ನಡೆಸಿದ ಪವನ್ ಕಲ್ಯಾಣ್ಸಿಎಂ ಜಗನ್ ವಿರುದ್ಧ ಏಕವನಚನದ ವಾಗ್ದಾಳಿ ನಡೆಸಿದ ಪವನ್ ಕಲ್ಯಾಣ್

  ಉಭಯ ಗೋದಾವರಿ ಜಿಲ್ಲೆಗಳಲ್ಲಿ ಪವನ್ ಅವರ ಪಕ್ಷ ನಿರೀಕ್ಷೆಗೂ ಮೀರಿ ತಾಲೂಕು ಪಂಚಾಯಿತಿ ಸ್ಥಾನಗಳನ್ನು ಗಳಿಸಿದೆ. ಜನ ಸೈನಿಕರಲ್ಲಿ ಇದು ಒಂದು ರೀತಿಯ ಉತ್ಸಾಹಕ್ಕೆ ಕಾರಣವಾಗಿದೆ. ಕ್ರಮೇಣ ಪವನ್ ಕ್ರಮೇಣ ಪ್ರತಿಪಕ್ಷದ ಧ್ವನಿಯಾಗುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಸರ್ಕಾರದ ವಿರುದ್ಧ anti-incumbency ಕ್ರಿಯೇಟ್ ಆಗುವ ಲಕ್ಷಣಗಳು ಕಾಣುತ್ತಿದೆ. ಇದನ್ನು ಪವನ್ ಎನ್ ಕ್ಯಾಶ್ ಮಾಡಿಕೊಳ್ಳುವ ಲಕ್ಷಣಗಳು ಈಗಾಗಲೇ ಗೋಚರಿಸತೊಡಗಿವೆ. ಹೀಗಾಗಿಯೇ ಪವನ್ ವಿರುದ್ಧ ಬಹುತೇಕ ಜಗನ್ ಸರ್ಕಾರದ ಮಂತ್ರಿಗಳು ಮಾಧ್ಯಮಗಳ ಮೂಲಕ ನಿತ್ಯ ಹರಿಹಾಯುತ್ತಿದ್ದಾರೆ. ಮುಂದೆ ಓದಿ...

  ಪವರ್ ಸ್ಟಾರ್ ಎಂದು ಕರೆಯಬೇಡಿ ಎಂದ ಪವನ್ ಕಲ್ಯಾಣ್: ಕಾರಣ?ಪವರ್ ಸ್ಟಾರ್ ಎಂದು ಕರೆಯಬೇಡಿ ಎಂದ ಪವನ್ ಕಲ್ಯಾಣ್: ಕಾರಣ?

  ಜಗನ್ ಮುಂದೆ ಸಿನಿಮಾರಂಗ ಮಂಡೂರಿದ್ದು ಯಾಕೆ?

  ಜಗನ್ ಮುಂದೆ ಸಿನಿಮಾರಂಗ ಮಂಡೂರಿದ್ದು ಯಾಕೆ?

  ಇತ್ತ ಪವನ್ ಕಲ್ಯಾಣ್ ತಮ್ಮ ರಾಜಕೀಯ ಶಕ್ತಿಯನ್ನು ವೃದ್ಧಿಗೊಳಿಸುವ ಪ್ರಯತ್ನದಲ್ಲಿ ನೇರವಾಗಿ ಜಗನ್ ವಿರುದ್ಧ ತೊಡೆತಟ್ಟಿ ಹೋರಾಟ ಹಾದಿ ಹಿಡಿದಿದ್ದೆ ತಡ, ಸಿನಿಮಾ ಮಂದಿಯ ವಿರುದ್ಧ ಪರೋಕ್ಷ ಸಮರವನ್ನು ಜಗನ್ ಸರ್ಕಾರ ಆರಂಭಿಸಿತು. ಅದರ ಮೊದಲ ಹೆಜ್ಜೆಯಾಗಿ ಥಿಯೇಟರ್ ಗಳಲ್ಲಿ ಟಿಕೆಟ್ ಗಳನ್ನು ನೇರವಾಗಿ ಸರ್ಕಾರ ಆನ್ ಲೈನ್ ಮೂಲಕ ಮಾರಾಟ ಮಾಡುವ ನಿರ್ಧಾರಕ್ಕೆ ಬಂತು. ಜೊತೆಗೆ ಭಾರಿ ಬಜೆಟ್ ಸಿನೆಮಾಗಳ, ಸುಳ್ಳು ಲೆಕ್ಕಗಳನ್ನು ಕೂಡ ಅಂಕಿ-ಅಂಶಗಳ ಸಮೇತ ಬಹಿರಂಗಪಡಿಸಿತು. ಇದಲ್ಲದೆ ಮುಂಬರುವ ದಿನಗಳಲ್ಲಿ ಸಿನಿಮಾರಂಗದ ವಿರುದ್ಧ ಕೆಲವೊಂದು ಕಠಿಣ ಕ್ರಮಗಳನ್ನು ಕೈಗೊಳ್ಳುವ ಮುನ್ನೆಚ್ಚರಿಕೆಯನ್ನು ಸಹ ನೀಡಿತು. ಇದರಿಂದ ಬೆಚ್ಚಿಬಿದ್ದ ತೆಲುಗು ಸಿನಿಮಾ ರಂಗ ಜಗನ್ ಮುಂದೆ ಈಗ ಮಂಡೂರಿದೆ.

  ಮೊನ್ನೆ ಜೈ ಕೆಸಿಆರ್- ಇಂದು ಜೈ ಜಗನ್

  ಮೊನ್ನೆ ಜೈ ಕೆಸಿಆರ್- ಇಂದು ಜೈ ಜಗನ್

  ಜಗನ್ ಸರ್ಕಾರ ಕಠಿಣ ನಿಲುವಿಗೆ ಬಂದಿರುವುದನ್ನು ಗಮನಿಸಿ, ಬೆಚ್ಚಿಬಿದ್ದ ತೆಲುಗು ಸಿನಿಮಾರಂಗ ಈಗ ಜಗನ್ ಮೋಹನ್ ರೆಡ್ಡಿಗೆ ಜೈ ಎಂದಿದೆ. ಹಿಂದೆ ಕೆಸಿಆರ್ ಅವರ ಕೈಯಲ್ಲಿ ಕೂಡ ಅವಮಾನಿತರಾಗಿದ್ದ ತೆಲುಗು ಸಿನಿಮಾದ ಹಿರಿಯ ತಲೆಗಳು ಜೈ ಕೆಸಿಆರ್ ಎಂದಿದ್ದರು. ಪವನ್ ಕಲ್ಯಾಣ್ ವಿಷಯದಲ್ಲಿ ಸರ್ಕಾರದ ವಿರುದ್ಧ ನಿಲ್ಲುವ ಶಕ್ತಿ ಕೂಡ ತೆಲುಗು ಸಿನಿಮಾರಂಗದವರಿಗೆ ಇಲ್ಲ. ಹೀಗಾಗಿಯೇ 'ರಿಪಬ್ಲಿಕ್' ಸಿನಿಮಾದ ಆಡಿಯೋ ಬಿಡುಗಡೆ ಸಮಯದಲ್ಲಿ ಪವನ್ ಕಲ್ಯಾಣ್ ಜಗನ್ ಸರ್ಕಾರದ ವಿರುದ್ಧ ಮಾಡಿದ ಆರೋಪಗಳಿಗೆ ತಕ್ಷಣ ಪ್ರತಿಕ್ರಿಯಿಸಿರುವ ತೆಲುಗು ಫಿಲಂ ಚೇಂಬರ್ ಆಫ್ ಕಾಮರ್ಸ್ ತನ್ನ ಅಧಿಕೃತ ನಿಲುವನ್ನು ಒಂದು ಪ್ರೆಸ್ ನೋಟ್ ರಿಲೀಸ್ ಮಾಡಿ ಅದರ ಮೂಲಕ ಸ್ಪಷ್ಟಪಡಿಸಿದೆ. ಕೆಲವರ ವೈಯಕ್ತಿಕ ಅಭಿಪ್ರಾಯಗಳೊಂದಿಗೆ ನಮಗೆ ಯಾವುದೇ ಸಂಬಂಧವಿಲ್ಲ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಹೇಳಲಾಗಿದೆ.

  ಪ್ರೆಸ್ ನೋಟ್ ಸಾರಾಂಶ

  ಪ್ರೆಸ್ ನೋಟ್ ಸಾರಾಂಶ

  ತೆಲುಗು ಚಲನಚಿತ್ರೋದ್ಯಮಕ್ಕೆ ಎರಡೂ ಸರ್ಕಾರಗಳ ಬೆಂಬಲ ಬೇಕು. ಸರ್ಕಾರಗಳ ಬೆಂಬಲವಿಲ್ಲದೆ ಚಿತ್ರೋದ್ಯಮ ಉಳಿಯಲು ಸಾಧ್ಯವಿಲ್ಲ. ಚಿತ್ರೋದ್ಯಮ ಪ್ರಸ್ತುತ ಅತ್ಯಂತ ಕಷ್ಟದ ಪರಿಸ್ಥಿತಿಯಲ್ಲಿದೆ. ಪ್ರತಿಯೊಬ್ಬರೂ ಉದ್ಯಮದ ಮೇಲೆ ತಮ್ಮದೇ ಆದ ಅಭಿಪ್ರಾಯ ಮತ್ತು ವೇದನೆಯನ್ನು ಹೊಂದಿದ್ದಾರೆ. ಅವರು ವಿವಿಧ ವೇದಿಕೆಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ತೆಲುಗು ಚಲನಚಿತ್ರ ವಾಣಿಜ್ಯ ಮಂಡಳಿಗೆ ವೈಯಕ್ತಿಕ ಅಭಿಪ್ರಾಯಗಳೊಂದಿಗೆ ಯಾವುದೇ ಸಂಬಂಧವಿಲ್ಲ.

  ಜಗನ್‌ಗೆ ಮೇಲುಗೈ

  ಜಗನ್‌ಗೆ ಮೇಲುಗೈ

  ಕೊರೊನಾ ಸಾಂಕ್ರಾಮಿಕ ಸೇರಿದಂತೆ ವಿವಿಧ ಅಂಶಗಳ ಮೇಲೆ ತೆಲುಗು ಚಲನಚಿತ್ರೋದ್ಯಮವು ಆಂಧ್ರಪ್ರದೇಶ ಸರ್ಕಾರವನ್ನು ಸಂಪರ್ಕಿಸಿದೆ. ತೆಲುಗು ಚಿತ್ರೋದ್ಯಮ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ನಾವು ಸಚಿವ ಪೆರ್ನಿನಾನಿ ಅವರೊಂದಿಗೆ ಚರ್ಚಿಸಿದ್ದೇವೆ. ಮುಖ್ಯಮಂತ್ರಿ ವೈಎಸ್ ಜಗನ್ ಸಿನಿ ಸಮಸ್ಯೆಗಳ ಪರಿಹಾರಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಚಿತ್ರರಂಗದಲ್ಲಿನ ಸಮಸ್ಯೆಗಳನ್ನು ಶೀಘ್ರವೇ ಪರಿಹರಿಸಲಾಗುವುದು ಎಂದು ಸಿಎಂ ಭರವಸೆ ನೀಡಿದರು. ಮಾರ್ಚ್ 2020 ರಿಂದ, ಚಲನಚಿತ್ರ ಉದ್ಯಮವನ್ನು ನಂಬಿರುವ ಸಾವಿರಾರು ಕುಟುಂಬಗಳು ತೀವ್ರವಾಗಿ ಬಾಧಿತವಾಗಿದೆ. ತೆಲುಗು ರಾಜ್ಯಗಳು ಚಲನಚಿತ್ರ ಉದ್ಯಮಕ್ಕೆ ಎರಡು ಕಣ್ಣುಗಳನ್ನು ಹೊಂದಿವೆ. ಇಬ್ಬರು ಮುಖ್ಯಮಂತ್ರಿಗಳು ಕಾಲಕಾಲಕ್ಕೆ ಚಲನಚಿತ್ರ ಉದ್ಯಮವನ್ನು ಬೆಂಬಲಿಸುತ್ತಿದ್ದಾರೆ. ಎರಡು ರಾಜ್ಯಗಳ ಸಿಎಂಗಳು ಚಿತ್ರರಂಗವನ್ನು ಬೆಂಬಲಿಸುವುದನ್ನು ಮುಂದುವರಿಸಬೇಕು.


  ಅಲ್ಲಿಗೆ ಜಗನ್ ವರ್ಸಸ್ ಪವನ್ ಹೋರಾಟದಲ್ಲಿ ಸದ್ಯಕ್ಕಂತೂ ಜಗನ್ ಮೇಲುಗೈ ಸಾಧಿಸಿದ್ದಾರೆ. ಮುಂಬರುವ ದಿನಗಳಲ್ಲಿ ಇದನ್ನು ಪವನ್ ಕಲ್ಯಾಣ್ ಹೇಗೆ ಜಗನ್ ವಿರುದ್ಧದ ಹೋರಾಟವನ್ನು ಮುಂದುವರಿಸುತ್ತಲೇ, ಆಂಧ್ರಪ್ರದೇಶದಲ್ಲಿ ಸಿನಿಮಾಗಳ ಬಿಡುಗಡೆ ಮಾಡುತ್ತಾರೆ ಅಂತ ಕಾದುನೋಡಬೇಕಾಗಿದೆ.

  English summary
  CM YS Jagan VS Pawan Kalyan; Why Did Tollywood Industry Stand by AP CM YS Jagan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X