Don't Miss!
- News
ಕೆಲವೇ ಕ್ಷಣಗಳಲ್ಲಿ ತುಮಕೂರಿಗೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ, ಸಿದ್ಧತೆ ಹೇಗಿದೆ ತಿಳಿಯಿರಿ
- Finance
ಅದಾನಿ ಡಾಲರ್ ಬಾಂಡ್ ವಿರುದ್ಧ ಸಾಲ ನೀಡಲು ಸ್ಟಾಡರ್ಡ್ ಚಾರ್ಟೆಡ್ ನಕಾರ: ವರದಿ
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ಭಾರತವನ್ನು ಮಣಿಸಲು ಆಸಿಸ್ ತಂಡಕ್ಕೆ ಮಿಚೆಲ್ ಜಾನ್ಸನ್ ಸಲಹೆ
- Technology
PVRನಿಂದ ಭರ್ಜರಿ ಸಿಹಿಸುದ್ದಿ; ಸಿನಿಮಾ ಪ್ರಿಯರ ಕಣ್ಣಿಗೆ ಹಬ್ಬದ ಸಂಭ್ರಮ!
- Automobiles
ಸೆಲ್ಟೋಸ್ನ ಗೇರ್ಬಾಕ್ಸ್ನಲ್ಲಿ ದೋಷ ಕಂಡು ಬಂದಾಗ ಉಚಿತವಾಗಿ ಬದಲಾಯಿಸಿ ಕೊಟ್ಟ ಕಿಯಾ
- Lifestyle
ಮಕ್ಕಳನ್ನು 'ಅಮ್ಮ' ದಡಾರದಿಂದ ರಕ್ಷಿಸಲು ಇದೇ ತಿಂಗಳು ತಪ್ಪದೆ ಕೊಡಿಸಿ MR ಲಸಿಕೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಲಾಕ್‌ಡೌನ್‌ನಲ್ಲಿ ತರಕಾರಿ ಮಾರಿದ್ದ ಜನಪ್ರಿಯ ಹಾಸ್ಯನಟನಿಂದ ಈಗ ಮದ್ಯ ಮಾರಾಟ!
ಹಾಸ್ಯ ನಟ ರಘು ಹೆಸರು ತೆಲುಗು ಚಿತ್ರರಂಗದಲ್ಲಿ ಜನಪ್ರಿಯ. 2002 ರಲ್ಲಿ ಬಿಡುಗಡೆ ಆದ ಜೂ ಎನ್‌ಟಿಆರ್ ನಟಿಸಿದ ಸೂಪರ್ ಡೂಪರ್ ಹಿಟ್ 'ಆದಿ' ಸಿನಿಮಾದಿಂದ ನಟನೆ ಆರಂಭಿಸಿದ ರಘು ಹಾಸ್ಯ ನಟನಾಗಿ, ವಿಲನ್ ಆಗಿ ಈವರೆಗೆ 60 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಜನಪ್ರಿಯ ನಟನಾಗಿದ್ದರೂ ಸಹ ಲಾಕ್‌ಡೌನ್ ಅವಧಿಯಲ್ಲಿ ಕೆಲಸವಿಲ್ಲದೆ ಕಷ್ಟಗಳಿಗೆ ಸಿಲುಕಿದ್ದ ರಘು ತನ್ನ ಊರಿನಲ್ಲಿ ಮನೆಯ ಸುತ್ತ ತರಕಾರಿ ಬೆಳೆದು ಅವನ್ನು ಮಾರಾಟ ಮಾಡುವ ಕಾರ್ಯ ಪ್ರಾರಂಭಿಸಿದ್ದರು. ನಂತರ ಲಾಕ್‌ಡೌನ್ ಮುಂದುವರೆದಂತೆ ಜಮೀನು ಭೋಗ್ಯಕ್ಕೆ ಪಡೆದು ಅದೇ ಕಾರ್ಯ ಮುಂದುವರೆಸಿದರು. ಈಗ ಮದ್ಯ ಮಾರಾಟ ಪ್ರಾರಂಭ ಮಾಡಿದ್ದಾರೆ.
ಆರ್ಗ್ಯಾನಿಕ್ ತರಕಾರಿ ಬೆಳೆದು ಅದರಲ್ಲಿ ಒಳ್ಳೆಯ ಆದಾಯ ಗಳಿಸಿದ ರಘು ಅದರಲ್ಲಿ ಬಂದ ಹಣವನ್ನು ಮದ್ಯದ ಅಂಗಡಿ ತೆರೆಯಲು ವಿನಿಯೋಗಿಸಿದ್ದಾರೆ. ಆಂಧ್ರ ಪ್ರದೇಶ ಸರ್ಕಾರ ಇತ್ತೀಚೆಗೆ ಮದ್ಯದ ಅಂಗಡಿ ಪರವಾನಗಿಗಳಿಗೆ ಹರಾಜು ಕರೆದಿತ್ತು. ಹರಾಜಿನಲ್ಲಿ ಭಾಗವಹಿಸಿದ್ದ ರಘು ಮತ್ತು ಗೆಳೆಯರು ಸಹ ಟೆಂಡರ್ ಹಾಕಿದ್ದರು. ಅದರಲ್ಲಿ ಎರಡು ಟೆಂಡರ್ ರಘು ಅವರಿಗೆ ದೊರೆತಿದೆ.
ಪರವಾನಗಿ ಸಿಕ್ಕ ಕೂಡಲೇ ಕಾರ್ಯಪ್ರವೃತ್ತರಾದ ರಘು, ನಲ್ಲಂಕೊಡ ಜಿಲ್ಲೆಯ ಗಡಿಭಾಗದಲ್ಲಿರುವ ಮರ್ರೆಗೂಡ ಬೈಪಾಸ್ ರಸ್ತೆಯಲ್ಲಿ ಎರಡು ಅಂಗಡಿಗಳನ್ನು ತೆಗೆದುಕೊಂಡು ಮದ್ಯದ ಅಂಗಡಿ ಇಟ್ಟಿದ್ದಾರೆ. ರಘು ಸ್ವತಃ ಅಂಗಡಿ ನೋಡಿಕೊಳ್ಳುತ್ತಿದ್ದು, ರಘು ಮದ್ಯ ಮಾರಾಟ ಮಾಡುತ್ತಿರುವ ವಿಡಿಯೋಗಳು ಇದೀಗ ವೈರಲ್ ಆಗಿವೆ. ರಘು ಕೆಲಸಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಜೂ.ಎನ್‌ಟಿಆರ್, ಮಹೇಶ್ ಬಾಬು, ಅಲ್ಲು ಅರ್ಜುನ್, ಅಲ್ಲರಿ ನರೇಶ್ ಸೇರಿದಂತೆ ದೊಡ್ಡ ಸ್ಟಾರ್ ನಟರ ಸಿನಿಮಾಗಳಲ್ಲಿ ಮುಖ್ಯ ಹಾಸ್ಯ ನಟನಾಗಿ, ಕೆಲವು ಸಿನಿಮಾಗಳಲ್ಲಿ ವಿಲನ್ ಆಗಿ ನಟಿಸಿದ್ದಾರೆ. ಜೊತೆಗೆ ತೆಲುಗು ಟಿವಿ ಉದ್ಯಮದ ನಂಬರ್ 1 ಶೋ ಜಬರ್‌ದಸ್ತ್‌ನಲ್ಲಿಯೂ ಭಾಗವಹಿಸಿ ಅಲ್ಲಿಯೂ ಸೂಪರ್ ಹಿಟ್ ಆಗಿದ್ದರು. ಆದರೆ ಲಾಕ್‌ಡೌನ್ ನಲ್ಲಿ ಬಂದ ಕಷ್ಟಗಳನ್ನು ವ್ಯಾಪಾರದ ಮೂಲಕ ಎದುರಿಸಿದ ರಘು ಇನ್ನು ಮುಂದೆಯೂ ವ್ಯಾಪಾರದಲ್ಲಿಯೇ ಮುಂದುವರೆಯುವ ನಿರ್ಣಯ ಮಾಡಿದ್ದಾರೆ.
ಕೊರೊನಾವು ಚಿತ್ರರಂಗವನ್ನು ಇನ್ನಿಲ್ಲದಂತೆ ಕಾಡಿದೆ. ರಘು ಅಂಥ ಅನೇಕ ನಟರು, ತಂತ್ರಜ್ಞರು, ಚಿತ್ರರಂಗದ ದಿನಗೂಲಿ ನೌಕರರು ಕೊರೊನಾ ಲಾಕ್‌ಡೌನ್‌ನಿಂದ ಹೈರಾಣಾಗಿದ್ದಾರೆ. ಕೆಲವರು ರಘು ರೀತಿಯಲ್ಲಿ ಪರ್ಯಾಯ ಆರ್ಥಿಕ ಮೂಲವನ್ನು ಸೃಷ್ಟಿಸಿಕೊಂಡು ಉತ್ತಮ ಜೀವನ ನಡೆಸುತ್ತಿದ್ದಾರೆ. ಸಿನಿಮಾ ರಂಗದ ಅನಿಶ್ಚಿತ ವೃತ್ತಿಯಲ್ಲಿರುವವರು ರಘು ರೀತಿ ಪರ್ಯಾಯ ಆದಾಯ ಮೂಲ ಸೃಷ್ಟಿಸಿಕೊಳ್ಳುವುದು ಅಗತ್ಯವೂ ಆಗಿದೆ.