twitter
    For Quick Alerts
    ALLOW NOTIFICATIONS  
    For Daily Alerts

    10 ವರ್ಷಗಳ ನಂತರ ತೆಲುಗಿಗೆ ಡಬ್ ಆಗಿ ಚಿರಂಜೀವಿ ಚಿತ್ರಕ್ಕಿಂತ ಹೆಚ್ಚು ಕಲೆಕ್ಟ್ ಮಾಡಿದ ಧನುಷ್ ತಮಿಳು ಸಿನಿಮಾ!

    |

    ಸದ್ಯ ಟಾಲಿವುಡ್ ಅಂಗಳದಲ್ಲಿ ರಿರಿಲೀಸ್ ಪರ್ವ ನಡೆಯುತ್ತಿದೆ. ಯಾವುದಾದರೂ ಸ್ಟಾರ್ ನಟನ ಹುಟ್ಟು ಹಬ್ಬ ಬಂತೆಂದರೆ ಸಾಕು ಆ ನಟನ ಸೂಪರ್ ಹಿಟ್ ಚಲನ ಚಿತ್ರವನ್ನು ಪುನಃ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಈ ಹಿಂದೆ ಸಣ್ಣಪುಟ್ಟ ಸಂಖ್ಯೆಯಲ್ಲಿ ಈ ಟ್ರೆಂಡ್ ಇತ್ತು. ಆದರೆ ಈ ವರ್ಷ ಮಹೇಶ್ ಬಾಬು ಹುಟ್ಟುಹಬ್ಬದ ಅಂಗವಾಗಿ ಪೋಕಿರಿ ಚಿತ್ರವನ್ನು 370 ಪರದೆಗಳಲ್ಲಿ ಮರು ಬಿಡುಗಡೆ ಮಾಡಲಾಗಿತ್ತು.

    ತದನಂತರ ಪವನ್ ಕಲ್ಯಾಣ್ ಹುಟ್ಟುಹಬ್ಬದ ಅಂಗವಾಗಿ ಈ ಹಿಂದೆ ಬಿಡುಗಡೆಯಾಗಿದ್ದ ಪವನ್ ಕಲ್ಯಾಣ್ ಅಭಿನಯದ ಸೂಪರ್ ಹಿಟ್ ಚಲನಚಿತ್ರವಾದ ಜಲ್ಸಾವನ್ನು 700ಕ್ಕೂ ಅಧಿಕ ತೆರೆಗಳಲ್ಲಿ ಮರು ಬಿಡುಗಡೆ ಮಾಡಲಾಗಿತ್ತು. ಹಾಗೂ ಪವನ್ ಕಲ್ಯಾಣ್ ಅಭಿನಯದ ಜಲ್ಸಾ ಮರು ಬಿಡುಗಡೆಯ ಕಲೆಕ್ಷನ್ ಪೋಕಿರಿ ಕಲೆಕ್ಷನ್ ಅನ್ನು ಹಿಂದಿಕ್ಕಿ ನೂತನ ದಾಖಲೆಯನ್ನು ಕೂಡ ಬರೆದಿತ್ತು. ಆಗಲೇ ನೋಡಿ ತೆಲುಗು ಚಿತ್ರರಂಗದಲ್ಲಿ ಈ ರೀ ರಿಲೀಸ್ ಕ್ರೇಜ್ ಹೆಚ್ಚಾಗಿದ್ದು.

    ನಾಯಕಿ ಆಗ್ತಾಳಂತೆ ನಟಿ ರೋಜಾ ಪುತ್ರಿ: ಸ್ಟಾರ್ ನಟನ ಪುತ್ರನೇ ಹೀರೊ ಅಂತಿದೆ ಟಾಲಿವುಡ್!ನಾಯಕಿ ಆಗ್ತಾಳಂತೆ ನಟಿ ರೋಜಾ ಪುತ್ರಿ: ಸ್ಟಾರ್ ನಟನ ಪುತ್ರನೇ ಹೀರೊ ಅಂತಿದೆ ಟಾಲಿವುಡ್!

    ಇನ್ನು ಪವನ್ ಕಲ್ಯಾಣ್ ಹುಟ್ಟುಹಬ್ಬಕ್ಕೂ ಮುನ್ನ ಚಿರಂಜೀವಿ ಹುಟ್ಟುಹಬ್ಬ ಇದ್ದ ಕಾರಣ ಮೆಗಾಸ್ಟಾರ್ ಹುಟ್ಟುಹಬ್ಬದ ಅಂಗವಾಗಿ ಘರಾನಾ ಮೊಗುಡು ಚಿತ್ರವನ್ನು ರೀ ರಿಲೀಸ್ ಮಾಡಲಾಗಿತ್ತು. ಆದರೆ ಪೋಕಿರಿ ಮತ್ತು ಜಲ್ಸಾ ರೀತಿ ಘರಾನಾ ಮೊಗುಡು ಚಿತ್ರಮಂದಿರದಲ್ಲಿ ಸದ್ದು ಮಾಡಲೇ ಇಲ್ಲ. ಆದರೆ ಬರೋಬ್ಬರಿ ಹತ್ತು ವರ್ಷಗಳ ಬಳಿಕ ತೆಲುಗು ಡಬ್ಬಿಂಗ್ ಆಗಿ ಬಿಡುಗಡೆಯಾದ ತಮಿಳು ನಟ ಧನುಷ್ ಅಭಿನಯದ 3 ಸಿನಿಮಾ ಘರಾನಾ ಮೊಗುಡುಗಿಂತ ಹೆಚ್ಚು ಕಲೆಕ್ಷನ್ ಮಾಡಿ ತೆಲುಗು ಸಿನಿ ಪ್ರೇಕ್ಷಕರ ಹುಬ್ಬೇರಿಸಿದೆ.

    ಘರಾನಾ ಮೊಗುಡು ಹಿಂದಿಕ್ಕಿದ 3

    ಘರಾನಾ ಮೊಗುಡು ಹಿಂದಿಕ್ಕಿದ 3

    2012ರಲ್ಲಿ ಬಿಡುಗಡೆಯಾಗಿದ್ದ ಧನುಷ್ ಮತ್ತು ಶ್ರುತಿ ಹಾಸನ್ ಅಭಿನಯದ ಹಾಗೂ ರಜನೀಕಾಂತ್ ಪುತ್ರಿ ಐಶ್ವರ್ಯ ಆರ್ ಧನುಷ್ ನಿರ್ದೇಶನದ 3 ಚಿತ್ರದ ತೆಲುಗು ಡಬ್ಬಿಂಗ್ ಅನ್ನು ಇಂದು ( ಸೆಪ್ಟೆಂಬರ್ 8 ) ತೆಲುಗು ರಾಜ್ಯಗಳಾದ್ಯಂತ ಸುಮಾರು 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗಿದೆ. ವಿಶೇಷವೆಂದರೆ ಈ ಚಿತ್ರ ಟಿಕೆಟ್‌ಗೂ ಸಹ ಬಿಡುಗಡೆಗೂ ಹಿಂದಿನ ದಿನದಿಂದಲೇ ಭಾರಿ ಬೇಡಿಕೆಯುಂಟಾಗಿ ಹಲವೆಡೆ ಪ್ರದರ್ಶನಗಳು ಸೋಲ್ಡ್ ಔಟ್ ಆಗಿವೆ. ಈ ಮೂಲಕ ಧನುಷ್ ಸಿನಿಮಾ ಹೈದರಾಬಾದ್ ನಗರದಲ್ಲಿ ಮೊದಲ ದಿನವೇ 30 ಲಕ್ಷ ಕಲೆಕ್ಷನ್ ಮಾಡುವ ಮೂಲಕ ಘರಾನಾ ಮೊಗುಡುಗಿಂತ ಅತಿ ಹೆಚ್ಚು ಹಣವನ್ನು ಮೊದಲ ದಿನ ಸಂಪಾದಿಸಿದೆ. ಹಾಗೂ ತೆಲುಗು ರಾಜ್ಯಗಳಲ್ಲಿ ರೀ ರಿಲೀಸ್ ಆಗಿ ಮೊದಲ ದಿನ ಅತಿ ಹೆಚ್ಚು ಹಣ ಬಾಚಿದ ಡಬ್ಬಿಂಗ್ ಮೂವಿ ಎನಿಸಿಕೊಂಡಿದೆ.

    ಕೋಟಿ ಕೋಟಿ ಬಾಚಿದ್ವು ಪೋಕಿರಿ, ಜಲ್ಸಾ

    ಕೋಟಿ ಕೋಟಿ ಬಾಚಿದ್ವು ಪೋಕಿರಿ, ಜಲ್ಸಾ

    ಮಹೇಶ್ ಹುಟ್ಟುಹಬ್ಬದ ಅಂಗವಾಗಿ ರೀ ರಿಲೀಸ್ ಆಗಿದ್ದ ಪೋಕಿರಿ ಚಿತ್ರ ಒಂದೇ ದಿನಕ್ಕೆ ತೆಲುಗು ರಾಜ್ಯಗಳಾದ್ಯಂತ 1.76 ಕೋಟಿ ರೂಪಾಯಿಗಳನ್ನು ಕಲೆ ಹಾಕಿತು. ಹಾಗೂ ಪವನ್ ಕಲ್ಯಾಣ್ ಹುಟ್ಟುಹಬ್ಬದ ಅಂಗವಾಗಿ ಮರು ಬಿಡುಗಡೆಯಾಗಿದ್ದ ಜಲ್ಸಾ ಚಿತ್ರ 3.20 ಕೋಟಿ ರೂಪಾಯಿಗಳನ್ನು ಕಲೆಕ್ಟ್ ಮಾಡಿತ್ತು. ಮಹೇಶ್ ಬಾಬು ಪೋಕಿರಿ ಮರು ಬಿಡುಗಡೆಯಾಗಿದ್ದ ಚಿತ್ರಮಂದಿರಗಳಿಗಿಂತ ಜಲ್ಸಾ ಮರು ಬಿಡುಗಡೆಯಾಗಿದ್ದ ಚಿತ್ರಮಂದಿರಗಳ ಸಂಖ್ಯೆ ಹೆಚ್ಚಿದ್ದ ಕಾರಣ ಎರಡೂ ಚಿತ್ರಗಳ ನಡುವಿನ ಗಳಿಕೆಯಲ್ಲಿ ವ್ಯತ್ಯಾಸವಿದೆ ಎನ್ನಬಹುದು.

    ಕನ್ನಡದ ಓಂ ಮರು ಬಿಡುಗಡೆಯಲ್ಲಿ ಶಾಶ್ವತ ದಾಖಲೆ

    ಕನ್ನಡದ ಓಂ ಮರು ಬಿಡುಗಡೆಯಲ್ಲಿ ಶಾಶ್ವತ ದಾಖಲೆ

    ಇನ್ನು ಕನ್ನಡ ಸಿನಿಮಾ ವಿಷಯಕ್ಕೆ ಬಂದರೆ 550ಕ್ಕೂ ಹೆಚ್ಚು ಬಾರಿ ಮರುಬಿಡುಗಡೆಗಳನ್ನು ಕಂಡು ವಿಶ್ವ ದಾಖಲೆ ಬರೆದಿರುವ ಓಂ ಚಿತ್ರವನ್ನು ಮೀರಿಸಿ ಕಲೆಕ್ಷನ್ ಮಾಡಿರುವ ಯಾವುದೇ ಚಿತ್ರ ಇಲ್ಲ ಎನ್ನಬಹುದು. ಹೀಗಾಗಿ ಓಂ ಮರು ಬಿಡುಗಡೆಯಾದಾಗ ಅತಿಹೆಚ್ಚು ಕಲೆಕ್ಟ್ ಮಾಡಿದ ಕನ್ನಡ ಸಿನಿಮಾ ಎನಿಸಿಕೊಂಡಿದೆ. ಅದೇ ರೀತಿ ತಮಿಳು ಚಿತ್ರರಂಗದಲ್ಲಿ ರಜನೀಕಾಂತ್ ಅಭಿನಯದ ಬಾಶಾ ಚಿತ್ರ ಪದೇ ಪದೇ ಬಿಡುಗಡೆಯಾಗಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ತಮಿಳು ಸಿನಿಮಾ ಎನಿಸಿಕೊಂಡಿದೆ.

    English summary
    Dhanush 3 movie surpassed Chiranjeevi's Gharana Mogudu in re release day 1 collection. Know more
    Friday, September 9, 2022, 12:10
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X