Don't Miss!
- Lifestyle
ಗರುಡ ಪುರಾಣ ಪ್ರಕಾರ ಈ 9 ಬಗೆಯ ವ್ಯಕ್ತಿಗಳ ಮನೆಯಲ್ಲಿ ಆಹಾರ ತಿನ್ನಲೇಬಾರದು
- Sports
ಟಿ20 ವಿಶ್ವಕಪ್ ಗೆದ್ದ ಶಫಾಲಿ ವರ್ಮಾ ಪಡೆಗೆ ಬಿಸಿಸಿಐ ಸನ್ಮಾನ: 5 ಕೋಟಿ ರುಪಾಯಿ ಬಹುಮಾನ
- News
ತಂಬಾಕು ನಿಯಂತ್ರಣಕ್ಕೆ ಮೈಸೂರು ಜಿಲ್ಲಾಧಿಕಾರಿ ತೆಗೆದುಕೊಂಡ ಕ್ರಮಗಳು, ಇಲ್ಲಿದೆ ವಿವರ
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ದಿಲ್ ರಾಜು ಮಾತಿನ ಕಾರಣದಿಂದ ವಿಜಯ್ ಸಿನಿಮಾಕ್ಕೆ ಚಿತ್ರಮಂದಿರ ಸಮಸ್ಯೆ!
ಡಿಸೆಂಬರ್ ತಿಂಗಳು ದಕ್ಷಿಣ ಭಾರತ ಚಿತ್ರರಂಗದಲ್ಲಿ ತುಂಬಾ ಲಾಭದಾಯಕವಾಗೇನೂ ಇರಲಿಲ್ಲ. ಯಾವ ದೊಡ್ಡ ಸ್ಟಾರ್ ನಟರ ಸಿನಿಮಾಗಳು ಈ ತಿಂಗಳು ಬಿಡುಗಡೆ ಆಗಲಿಲ್ಲ. ಆದರೆ ಡಿಸೆಂಬರ್ ರೀತಿ ಡ್ರೈ ಆಗಿರುವುದಿಲ್ಲ ಜನವರಿ. ದೊಡ್ಡ ಮಟ್ಟದ ಸಿನಿಮಾ ಫೈಟ್‌ಗೆ ಜನವರಿ ಸಾಕ್ಷಿಯಾಗಲಿದೆ.
ದಕ್ಷಿಣ ಭಾರತ ಚಿತ್ರರಂಗದ ಸಾಲು-ಸಾಲು ಸಿನಿಮಾಗಳು ಜನವರಿ ತಿಂಗಳಲ್ಲಿ ಬಿಡುಗಡೆಗೆ ಕಾದು ಕೂತಿವೆ. ಅದರಲ್ಲೂ ಸಂಕ್ರಾಂತಿ ಹಬ್ಬಕ್ಕೆ ದೊಡ್ಡ ಸ್ಟಾರ್ ನಟರ ಸಿನಿಮಾಗಳು ತೆರೆಗೆ ಬರಲಿವೆ. ಸಂಕ್ರಾಂತಿ ಹಬ್ಬಕ್ಕೆ ಸಿನಿಮಾಗಳ ಮಧ್ಯೆ ಫೈಟ್ ನಡೆಯಲಿದ್ದು, ಚಿತ್ರಮಂದಿರಗಳಿಗಾಗಿ ಈಗಿನಿಂದಲೇ ಫೈಟ್ ಪ್ರಾರಂಭವಾಗಿದೆ.
Veerayya
Vs
Veerasimha:
ಒಂದೇ
ಸಂಸ್ಥೆಯ
2
ಚಿತ್ರಗಳ
ಮಧ್ಯೆ
ಫೈಟ್:
ಏನಿದು
ಸಂಕ್ರಾಂತಿ
ಲೆಕ್ಕಾಚಾರ?
ಸಂಕ್ರಾಂತಿ ಹಬ್ಬಕ್ಕೆ ಮೆಗಾಸ್ಟಾರ್ ಚಿರಂಜೀವಿ, ಬಾಲಕೃಷ್ಣ ಅವರ ಸಿನಿಮಾಗಳು ಬಿಡುಗಡೆ ಆಗಲಿದ್ದು, ತೆಲುಗು ರಾಜ್ಯಗಳಲ್ಲಿ ಚಿತ್ರಮಂದಿರಗಳಿಗಾಗಿ ಕಿತ್ತಾಟ ಪ್ರಾರಂಭವಾಗಿದ್ದು, ಈ ನಡುವೆ ಡಬ್ಬಿಂಗ್ ಸಿನಿಮಾಗಳಿಗೆ ಸಂಕ್ರಾಂತಿ ಸಮಯದಲ್ಲಿ ಚಿತ್ರಮಂದಿರಗಳನ್ನು ಕೊಡುವುದಿಲ್ಲ ಎಂದು ಕೆಲವು ನಿರ್ಮಾಪಕರು, ಚಿತ್ರಮಂದಿರದವರು ಹೇಳಿದ್ದಾರೆ. ಆದ ಕಾರಣ ಈಗ ತಮಿಳಿನ ವಿಜಯ್ ನಟನೆಯ 'ವಾರಿಸು' ಸಿನಿಮಾಕ್ಕೆ ಚಿತ್ರಮಂದಿರ ಸಿಗುವುದು ಸಮಸ್ಯೆಯಾಗಿದೆ. ಅಂದಹಾಗೆ ಈ ಸಿನಿಮಾ ನಿರ್ಮಾಣವಾಗುತ್ತಿರುವುದು ತೆಲುಗು ಬ್ಯಾನರ್‌ನಲ್ಲಿ!

'ವಾರಿಸು' ಸಿನಿಮಾಕ್ಕೆ ಚಿತ್ರಮಂದಿರ ಸಮಸ್ಯೆ
'ವಾರಿಸು' ಸಿನಿಮಾವನ್ನು ತೆಲುಗಿನ ಜನಪ್ರಿಯ ನಿರ್ಮಾಪಕ ದಿಲ್ ರಾಜು ನಿರ್ಮಾಣ ಮಾಡುತ್ತಿದ್ದು, ತೆಲುಗಿನಲ್ಲಿ 'ವಾರಸುಡು' ಹೆಸರಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ಆದರೆ ಸಂಕ್ರಾಂತಿ ಹಬ್ಬದ ಸಮಯದಲ್ಲಿ ತೆಲುಗು ಸಿನಿಮಾಗಳಿಗೆ ಮೊದಲ ಆದ್ಯತೆ ನೀಡಬೇಕು ಎಂದು ಕೆಲವು ನಿರ್ಮಾಪಕರು, ಸಿನಿಮಾ ವಿತರಕರು ಒತ್ತಾಯಿಸಿದ್ದು, ಹಬ್ಬದ ಸಮಯದಲ್ಲಿ ಡಬ್ಬಿಂಗ್ ಸಿನಿಮಾಗಳಿಗೆ ಚಿತ್ರಮಂದಿರಗಳನ್ನು ನೀಡಬಾರದು ಎಂದಿದ್ದಾರೆ.
ಕೆಲ ನಿರ್ಮಾಪಕರು, ವಿತರಕರು 'ವಾರಿಸು' ವಿರುದ್ಧ ಖ್ಯಾತೆ ತೆಗೆಯಲು ಕಾರಣವೂ ಇದೆ. ಕೆಲ ತಿಂಗಳ ಹಿಂದೆ ನಿರ್ಮಾಪಕರ ಸಂಘದ ಒತ್ತಾಯದಿಂದ ತೆಲುಗು ಸಿನಿಮಾಗಳ ಚಿತ್ರೀಕರಣ ಬಂದ್ ಮಾಡಿದ್ದಾಗ ನಿರ್ಮಾಪಕ ದಿಲ್ ರಾಜು ತಮ್ಮ ನಿರ್ಮಾಣದ 'ವಾರಿಸು' ಸಿನಿಮಾದ ಚಿತ್ರೀಕರಣ ಬಂದ್ ಮಾಡಿರಲಿಲ್ಲ. ಕಾರಣ ಕೇಳದಾಗ ಅದು ತೆಲುಗು ಸಿನಿಮಾ ಅಲ್ಲ ತಮಿಳು ಸಿನಿಮಾ ಎಂದಿದ್ದರು. ಹಾಗಾಗಿ ಈಗ ಕೆಲ ನಿರ್ಮಾಪಕರು 'ವಾರಿಸು' ಅನ್ನು ತಮಿಳು ಸಿನಿಮಾ ಆಗಿಯೇ ನೋಡುತ್ತಿದ್ದು, ನಾವು ಮೊದಲ ಆದ್ಯತೆಯನ್ನು ತೆಲುಗು ಸಿನಿಮಾ ನೀಡುತ್ತೇವೆ ಎಂದಿದ್ದಾರೆ.

ಡಬ್ಬಿಂಗ್ ಸಿನಿಮಾಗಳನ್ನು ವಿರೋಧಿಸಿದ್ದ ದಿಲ್ ರಾಜು
ಅದು ಮಾತ್ರವೇ ಅಲ್ಲದೆ 2019 ರಲ್ಲಿ ರಜನೀಕಾಂತ್‌ರ 'ಪೇಟಾ' ಸಿನಿಮಾ ಸಂಕ್ರಾಂತಿ ಸಮಯದಲ್ಲಿ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆದಾಗ ಇದೇ ದಿಲ್ ರಾಜು ವಿರೋಧಿಸಿದ್ದರು. ಡಬ್ಬಿಂಗ್ ಸಿನಿಮಾ ಬದಲಿಗೆ ತೆಲುಗು ಸಿನಿಮಾಗಳಿಗೆ ಆದ್ಯತೆ ನೀಡಿ ಎಂದಿದ್ದರು. ಅದೇ ಹೇಳಿಕೆಯನ್ನು ಆಧಾರವಾಗಿಟ್ಟುಕೊಂಡು ದಿಲ್ ರಾಜುಗೆ ಪಾಠ ಕಲಿಸಲು ಕೆಲವು ನಿರ್ಮಾಪಕರು ಮುಂದಾಗಿದ್ದು, 'ವಾರಿಸು' ಸಿನಿಮಾದ ಡಬ್ಬಿಂಗ್ ಆವೃತ್ತಿಗೆ ಹೆಚ್ಚು ಚಿತ್ರಮಂದಿರಗಳು ಸಿಗದಂತೆ ತಡೆಯುವ ಯತ್ನ ಮಾಡುತ್ತಿದ್ದಾರೆ.

ಚಿತ್ರಮಂದಿರಗಳನ್ನು ಬ್ಲಾಕ್ ಮಾಡುತ್ತಿರುವ ದಿಲ್ ರಾಜು
ಆದರೆ ದಿಲ್ ರಾಜು ಸಹ ಬಹಳ ಚಾಣಾಕ್ಷ ವಿತರಕ ಮತ್ತು ನಿರ್ಮಾಪಕ. ತಮ್ಮ ಸಿನಿಮಾಕ್ಕಾಗಿ ಈಗಿನಿಂದಲೇ ಚಿತ್ರಮಂದಿರಗಳನ್ನು ಬುಕ್ ಮಾಡಿಕೊಳ್ಳುತ್ತಿದ್ದಾರೆ. ಎಲ್ಲ ಪ್ರಮುಖ ನಗರಗಳ ಪ್ರಮುಖ ಚಿತ್ರಮಂದಿರಗಳನ್ನು ತಮ್ಮ ಸಿನಿಮಾಕ್ಕಾಗಿ ಬುಕ್ ಮಾಡಿಕೊಂಡು, ಬೇರೆ ತೆಲುಗು ಸಿನಿಮಾಗಳಿಗೆ ಮುಖ್ಯ ಚಿತ್ರಮಂದಿರಗಳು ಸಿಗದಂತೆ ತಡೆಯುತ್ತಿದ್ದಾರೆ. ಸಂಕ್ರಾಂತಿ ಹಬ್ಬದಂದು ತೆಲುಗಿನ ಸ್ಟಾರ್ ನಟ ಚಿರಂಜೀವಿ ನಟನೆಯ 'ವಾಲ್ತೇರು ವೀರಯ್ಯ' ಹಾಗೂ ನಂದಮೂರಿ ಬಾಲಕೃಷ್ಣ ನಟನೆಯ 'ವೀರ ಸಿಂಹ ರೆಡ್ಡಿ' ಸಿನಿಮಾಗಳು ಬಿಡುಗಡೆ ಆಗಲಿವೆ.