For Quick Alerts
  ALLOW NOTIFICATIONS  
  For Daily Alerts

  ನಟ ಮಹೇಶ್ ಬಾಬು ಪಾತ್ರದ ಹೆಸರನ್ನೇ ಮಗನಿಗೆ ಇರಿಸಿದ ಖ್ಯಾತ ನಿರ್ದೇಶಕ

  |

  ಸಾಮಾನ್ಯವಾಗಿ ಖ್ಯಾತನಾಮರ ಹೆಸರನ್ನು ಅವರ ಅಭಿಮಾನಿಗಳು ತಮ್ಮ ಮಕ್ಕಳಿಗೆ ಇರಿಸುವುದನ್ನು ನೋಡಿರುತ್ತೀರಿ. ತಮಗೆ ಸಹಾಯ ಮಾಡಿದವರು, ತಮ್ಮ ಮೇಲೆ ಪ್ರಭಾವ ಬೀರಿದವರ ಹೆಸರನ್ನು ಮಕ್ಕಳಿಗೆ ಇರಿಸಿ ಅಭಿಮಾನದ ಪರಾಕಾಷ್ಠೆ ಮೆರೆಯುವ ಜನರಿದ್ದಾರೆ. ಆದರೆ ತೆಲುಗಿನ ಬ್ಲಾಕ್ ಬಸ್ಟರ್ ಚಿತ್ರ 'ಸರಿಲೇರು ನೀಕೆವ್ವರು' ಸಿನಿಮಾದ ನಿರ್ದೇಶಕ ಅನಿಲ್ ರವಿಪುಡಿ, ನಾಯಕ ಮಹೇಶ್ ಬಾಬು ಅವರ ಪಾತ್ರದ ಹೆಸರನ್ನೇ ತಮ್ಮ ಮಗನಿಗೆ ಇರಿಸಿದ್ದಾರೆ.

  ನಮ್ಮ ಮಕ್ಕಳಿಗಾಗಿ ಕೊರೊನ ವಿರುದ್ಧ ಹೊರಡೋಣ ಅಂತಾರೆ ನಿರ್ದೇಶಕ ಮಹೇಶ್ | Mahesh | Beatcorona | Awareness

  ಸರಿಲೇರು ನೀಕೆವ್ವರು ಚಿತ್ರ ಬಿಡುಗಡೆಯಾದ ಸಂದರ್ಭದಲ್ಲಿ ಅನಿಲ್ ರವಿಪುಡಿ ಗಂಡು ಮಗುವಿಗೆ ತಂದೆಯಾಗಿದ್ದರು. ಆಗ ಮಹೇಶ್ ಬಾಬು ಸೇರಿದಂತೆ ಅನೇಕರು ಸಾಮಾಜಿಕ ಜಾಲತಾಣಗಳ ಮೂಲಕ ಅನಿಲ್ ಅವರಿಗೆ ಶುಭಾಶಯಗಳನ್ನು ಕಳುಹಿಸಿದ್ದರು. ಈ ಚಿತ್ರ ಅನಿಲ್ ಅವರ ಬದುಕಿನ ಅದೃಷ್ಟದ ಸಿನಿಮಾ ಎನ್ನಲಾಗುತ್ತಿದೆ. ಅವರ ವೃತ್ತಿ ಜೀವನದ ಅತಿ ದೊಡ್ಡ ಹಿಟ್ ಈ ಚಿತ್ರದ ಮೂಲಕ ಸಿಕ್ಕಿದ್ದರೆ, ಇದೇ ವೇಳೆ ಅವರು ತಂದೆಯಾದ ಸಂಭ್ರಮ ಅನುಭವಿಸಿದ್ದರು. ಮುಂದೆ ಓದಿ...

  ಭರ್ಜರಿ ಹಿಟ್ ಆದ ಸರಿಲೇರು ನೀಕೆವ್ವರು

  ಭರ್ಜರಿ ಹಿಟ್ ಆದ ಸರಿಲೇರು ನೀಕೆವ್ವರು

  ಬ್ಲಾಕ್ ಬಸ್ಟರ್ ಚಿತ್ರ 'ಸರಿಲೇರು ನೀಕೆವ್ವರು' ಚಿತ್ರದಲ್ಲಿ ನಟ ಮಹೇಶ್ ಬಾಬು ಮೇಜರ್ ಅಜಯ್ ಕೃಷ್ಣ ಎಂಬ ಪಾತ್ರವನ್ನು ನಿರ್ವಹಿಸಿದ್ದರು. ರಶ್ಮಿಕಾ ಮಂದಣ್ಣ, ವಿಜಯಶಾಂತಿ, ಪ್ರಕಾಶ್ ರಾಜ್ ಮುಂತಾದವರು ನಟಿಸಿರುವ ಚಿತ್ರ ಈ ವರ್ಷದ ಆರಂಭದಲ್ಲಿ ಭರ್ಜರಿ ಹಿಟ್ ಚಿತ್ರ ಎನಿಸಿತ್ತು.

  ಮಹೇಶ್ ಬಾಬು ನಟಿಸಬೇಕಿದ್ದ 'ಪುಷ್ಪ' ಚಿತ್ರ ಅಲ್ಲು ಅರ್ಜುನ್ ಪಾಲಾಯಿತು: ಕಾರಣ ಇದು..ಮಹೇಶ್ ಬಾಬು ನಟಿಸಬೇಕಿದ್ದ 'ಪುಷ್ಪ' ಚಿತ್ರ ಅಲ್ಲು ಅರ್ಜುನ್ ಪಾಲಾಯಿತು: ಕಾರಣ ಇದು..

  ಮಗನಿಗೆ ಪಾತ್ರದ ಹೆಸರು

  ಮಗನಿಗೆ ಪಾತ್ರದ ಹೆಸರು

  ಅನಿಲ್ ರವಿಪುಡಿ ಎಫ್ 2- ಫನ್ ಆಂಡ್ ಫ್ರಸ್ಟ್ರೇಷನ್, ರಾಜಾ ದಿ ಗ್ರೇಟ್, ಪಟಾಕಿ, ಪಟಾಸ್, ಸುಪ್ರೀಂ ಮತ್ತು ಮಸಾಲಾ ಚಿತ್ರಗಳನ್ನು ನಿರ್ದೇಶಿಸಿದ್ದರು. ಸರಿಲೇರು... ಚಿತ್ರ ನಿರ್ದೇಶಕ ಅನಿಲ್ ಅವರಿಗೆ ದೊಡ್ಡ ಯಶಸ್ಸು ನೀಡಿತು. ಆ ಖುಷಿಯಲ್ಲಿ ಅವರು ತಮ್ಮ ಮಗನಿಗೆ ಮಹೇಶ್ ಬಾಬು ಅವರ ಪಾತ್ರದ ಹೆಸರನ್ನೇ ಇರಿಸಿದ್ದಾರೆ. ಈ ಬಗ್ಗೆ ಅವರು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

  ಪ್ರಿನ್ಸ್ ಮಹೇಶ್ ಬಾಬು ಮುಂದಿನ ಸಿನಿಮಾದ ಕಥೆ ಲೀಕ್ಪ್ರಿನ್ಸ್ ಮಹೇಶ್ ಬಾಬು ಮುಂದಿನ ಸಿನಿಮಾದ ಕಥೆ ಲೀಕ್

  ಅಜಯ್ ಸೂರ್ಯವಂಶ್

  ಅಜಯ್ ಸೂರ್ಯವಂಶ್

  ಮಹೇಶ್ ಬಾಬು ಅವರಿಂದ ಪ್ರಭಾವಗೊಂಡು ಮಗನಿಗೆ ಅಜಯ್ ಸೂರ್ಯವಂಶ್ ಎಂಬ ಹೆಸರಿಸಿದ್ದಾಗಿ ತಿಳಿಸಿದ್ದಾರೆ. ಮಹೇಶ್ ಬಾಬು ನಟಿಸಿದ 'ಸರಿಲೇರು ನೀಕೆವ್ವರು' ಯಶಸ್ಸಿನ ಬಳಿಕ ಅನಿಲ್ ನಿರ್ದೇಶಕರಾಗಿ ಮತ್ತೊಂದು ಮಟ್ಟಕ್ಕೆ ಬೆಳೆದರು. ಹಾಗಾಗಿ ವಿಶೇಷ ಸಮರ್ಪಣೆಯಾಗಿ ಅವರು ಮಗನಿಗೆ ಆ ಪಾತ್ರದ ಹೆಸರನ್ನೇ ಇರಿಸಿದ್ದಾರೆ.

  ವದಂತಿ ನಿರಾಕರಿಸಿದ ಅನಿಲ್

  ವದಂತಿ ನಿರಾಕರಿಸಿದ ಅನಿಲ್

  ಎಫ್ 2ದ ಮುಂದುವರಿದ ಸರಣಿಯ ಎರಡನೆಯ ಚಿತ್ರ ಎಫ್ 3ಗೆ ಅನಿಲ್ ಕಥೆ ಬರೆಯುತ್ತಿದ್ದಾರೆ. ಈ ಚಿತ್ರದಲ್ಲಿ ತಮನ್ನಾ ಮತ್ತು ಮೆಹ್ರೀನ್ ನಟಿಸುವುದಿಲ್ಲ ಎಂಬ ವದಂತಿಗಳನ್ನು ಅನಿಲ್ ನಿರಾಕರಿಸಿದ್ದಾರೆ. ಈ ಚಿತ್ರದಲ್ಲಿ ವೆಂಕಟೇಶ್, ವರುಣ್ ತೇಜ್, ತಮನ್ನಾ ಮತ್ತು ಮೆಹ್ರೀನ್ ಮತ್ತೆ ನಟಿಸಲಿದ್ದಾರೆ. ಜತೆಗೆ ಇನ್ನೂ ಹೊಸ ಪಾತ್ರಧಾರಿಗಳು ಇದರಲ್ಲಿ ಇರಲಿದ್ದಾರೆ ಎಂದೂ ತಿಳಿಸಿದ್ದಾರೆ.

  English summary
  Director Anil Ravipudi has named his son after Mahesh Babu's role in Sarileru Neekevvuru movie Ajay Suryavansh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X