ಇನ್ಮುಂದೆ ನಾನು ಸಾಮಾಜಿಕ ಜಾಲತಾಣದಲ್ಲಿ ಇರಲ್ಲ: ಸ್ಟಾರ್ ನಿರ್ದೇಶಕ

ತೆಲುಗು ಸ್ಟಾರ್ ನಿರ್ದೇಶಕ ಕೊರಟಾಲ ಶಿವ ಸಾಮಾಜಿಕ ಜಾಲತಾಣದಿಂದ ಹೊರಬಂದಿದ್ದಾರೆ. ಈ ಕುರಿತು ಸ್ವತಃ ಕೊರಟಾಲ ಶಿವ ಪ್ರಕಟಣೆ ಮಾಡಿದ್ದು, ಸೂಕ್ತ ಕಾರಣ ತಿಳಿಸಿಲ್ಲ.

''ನಾನು ಸಾಮಾಜಿಕ ಜಾಲತಾಣದಿಂದ ಹೊರಬರುತ್ತಿದ್ದೇನೆ ಎಂದು ಎಲ್ಲರಿಗೂ ತಿಳಿಸುತ್ತಿದ್ದೇನೆ. ಸೋಶಿಯಲ್ ಮೀಡಿಯಾ ಜೊತೆ ಸಾಕಷ್ಟು ನೆನಪಿದೆ. ಆದರೆ ಇದರಿಂದ ದೂರ ಸರಿಯುವ ಸಮಯ ಬಂದಿದೆ. ಮಾಧ್ಯಮಗಳ ಮೂಲಕ ನಾನು ನಿಮ್ಮೊಂದಿಗೆ ಸಂಪರ್ಕದಲ್ಲಿರುತ್ತೇನೆ. ಮಾತುಕತೆ ಮುಂದುವರಿಸೋಣ, ಮಾಧ್ಯಮ ಬದಲಾಗಬಹುದು, ಬಂಧನ ಬದಲಾಗಲ್ಲ'' ಎಂದು ತಿಳಿಸಿದರು.

ನಿರ್ದೇಶಕ ಕೊರಟಾಲ ಶಿವ ಇದ್ದಕ್ಕಿದ್ದಂತೆ ಸೋಶಿಯಲ್ ಮೀಡಿಯಾದಿಂದ ಹೊರಗೆ ಬಂದಿದ್ದಕ್ಕೆ ಸ್ಪಷ್ಟ ಕಾರಣ ತಿಳಿದಿಲ್ಲ. ನಿರ್ದೇಶಕರ ಈ ನಿರ್ಧಾರ ಹಿಂಬಾಲಕರಿಗೆ ಬೇಸರ ಮೂಡಿಸಿದೆ.

Director Koratala Siva Quit from Social Media

ಆಚಾರ್ಯ ಚಿತ್ರ ನಿರ್ದೇಶಿಸುತ್ತಿರುವ ಕೊರಟಾಲ ಶಿವ

ಕೊರಟಾಲ ಶಿವ ಪ್ರಸ್ತುತ ಮೆಗಾಸ್ಟಾರ್ ಚಿರಂಜೀವಿ ನಟಿಸುತ್ತಿರುವ 'ಆಚಾರ್ಯ' ಸಿನಿಮಾ ನಿರ್ದೇಶನ ಮಾಡ್ತಿದ್ದಾರೆ. ಕಾಜಲ್ ಅಗರ್‌ವಾಲ್, ಸೋನು ಸೂದ್, ರಾಮ್ ಚರಣ್ ತೇಜ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

ಮೇ 13, 2021ರಂದು 'ಆಚಾರ್ಯ' ಸಿನಿಮಾ ತೆರೆಗೆ ಬರುವುದಾಗಿ ಘೋಷಿಸಿದ್ದರು. ಆದರೆ, ಕೋವಿಡ್ ಎರಡನೇ ಅಲೆ ಹಿನ್ನೆಲೆ ಬಿಡುಗಡೆ ದಿನಾಂಕ ಮುಂದೂಡಲಾಯಿತು. ಕೊನೆಯ ಹಂತದ ಚಿತ್ರೀಕರಣ ಬಾಕಿ ಉಳಿದಿದ್ದು, ಅಕ್ಟೋಬರ್‌ನಲ್ಲಿ ಮತ್ತೆ ಶೂಟಿಂಗ್ ಶುರು ಮಾಡುವ ನಿರ್ಧಾರ ಮಾಡಲಾಗಿದೆ.

Director Koratala Siva Quit from Social Media

ಆಚಾರ್ಯ ಸಿನಿಮಾ ಮುಗಿದ ಬಳಿಕ ಜೂನಿಯರ್ ಎನ್‌ಟಿಆರ್ ಜೊತೆ ಹೊಸ ಪ್ರಾಜೆಕ್ಟ್ ಆರಂಭಿಸಲಿದ್ದಾರೆ.

ಕೊರಟಾಲ ಶಿವ ಇದುವರೆಗೂ ಮಾಡಿರುವುದು ಕೇವಲ ನಾಲ್ಕು ಸಿನಿಮಾ ಮಾತ್ರ. ಎಲ್ಲವೂ ಬ್ಲಾಕ್ ಬಸ್ಟರ್. ಪ್ರಭಾಸ್ ಜೊತೆ 'ಮಿರ್ಚಿ', ಮಹೇಶ್ ಬಾಬು ಜೊತೆ 'ಶ್ರೀಮಂತಡು', ಎನ್‌ಟಿಆರ್ ಜೊತೆ 'ಜನತಾ ಗ್ಯಾರೇಜ್', ಮತ್ತೆ ಮಹೇಶ್ ಬಾಬು ಜೊತೆ 'ಭರತ್ ಅನೇ ನೇನು' ನಿರ್ದೇಶಿಸಿದ್ದರು.

More from Filmibeat

English summary
Telugu Star Director Koratala Siva decides to move away from social media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X