For Quick Alerts
  ALLOW NOTIFICATIONS  
  For Daily Alerts

  "ಯಾವುದನ್ನು ಕೂಡ ನಿರೀಕ್ಷೆ ಮಾಡಬಾರದು.. ರಶ್ಮಿಕಾ ಬ್ಯಾನ್ ಮಾಡಿದ್ರೆ ಕನ್ನಡ ಇಂಡಸ್ಟ್ರಿಗೆ ನಷ್ಟ": ಮೈನಾ ನಾಗಶೇಖರ್

  |

  ಕರ್ನಾಟಕದಲ್ಲಿ ರಶ್ಮಿಕಾ ಮಂದಣ್ಣ ನಟನೆಯ ಸಿನಿಮಾ ನೋಡಬಾರದು, ರಾಜ್ಯದಲ್ಲಿ ರಶ್ಮಿಕಾ ಸಿನಿಮಾಗಳನ್ನು ಬ್ಯಾನ್ ಮಾಡಬೇಕು, ಬಾಯ್ಕಟ್ ರಶ್ಮಿಕಾ ಎನ್ನುವ ಪೋಸ್ಟರ್‌ಗಳು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಈ ಬಗ್ಗೆ ನಿರ್ದೇಶಕ ನಾಗಶೇಖರ್ ಪ್ರತಿಕ್ರಿಯಿಸಿದ್ದು "ಆಕೆಯನ್ನು ಬ್ಯಾನ್ ಮಾಡಿದರೆ ಚಿತ್ರರಂಗಕ್ಕೆ ನಷ್ಟ" ಎಂದಿದ್ದಾರೆ.

  ಕೆಲ ದಿನಗಳ ಹಿಂದೆ ರಶ್ಮಿಕಾ ಮಂದಣ್ಣ ಪರಂವಃ ಪ್ರೊಡಕ್ಷನ್ ಹೌಸ್ ಹೆಸರು ಹೇಳದೇ ಕೋಟ್ ಆಕ್ಷನ್ ಮಾಡಿ ತೋರಿಸಿದ್ದರು. ಈ ವಿಡಿಯೋ ನೋಡಿದ್ದ ರಿಷಬ್ ಶೆಟ್ಟಿ ಕೂಡ ರಶ್ಮಿಕಾ ಹೆಸರು ಹೇಳದೇ ಆಕೆಯ ಸ್ಟೈಲ್‌ನಲ್ಲೇ ಪರೋಕ್ಷವಾಗಿ ಟಾಂಗ್ ನೀಡಿದ್ದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಹತ್ತಿದ ಏಣಿಯಲ್ಲೇ ಒದ್ದ ರಶ್ಮಿಕಾಗೆ ತಕ್ಕ ಪಾಠ ಕಲಿಸಬೇಕು. ಆಕೆಯ ಸಿನಿಮಾಗಳನ್ನು ನೋಡುವುದು ಬೇಡ, ಆಕೆಯ ಸಿನಿಮಾಗಳನ್ನು ರಾಜ್ಯದಲ್ಲಿ ಬಿಡುಗಡೆ ಮಾಡಬಾರದು ಎನ್ನುವ ಅರ್ಥದಲ್ಲಿ ಕೆಲವರು ಬ್ಯಾನ್ ರಶ್ಮಿಕಾ ಎಂದು ಟ್ರೋಲ್ ಮಾಡಲು ಆರಂಭಿಸಿದ್ದಾರೆ.

  ಕ್ರೇಜಿ ಪ್ರಾಜೆಕ್ಟ್‌ನಲ್ಲಿ ರಶ್ಮಿಕಾ ಐಟಂ ಸಾಂಗ್: ಬಿಂದಾಸ್ ಆಗಿ ಕುಣಿಯಲು ಭಾರೀ ಸಂಭಾವನೆ ಕೇಳಿದ ಕಿರಿಕ್ ಬೆಡಗಿ?ಕ್ರೇಜಿ ಪ್ರಾಜೆಕ್ಟ್‌ನಲ್ಲಿ ರಶ್ಮಿಕಾ ಐಟಂ ಸಾಂಗ್: ಬಿಂದಾಸ್ ಆಗಿ ಕುಣಿಯಲು ಭಾರೀ ಸಂಭಾವನೆ ಕೇಳಿದ ಕಿರಿಕ್ ಬೆಡಗಿ?

  ಮೈನಾ ನಾಗಶೇಖರ್ ಕನ್ನಡದ 'ಲವ್ ಮಾಕ್ಟೇಲ್' ಚಿತ್ರವನ್ನು ತೆಲುಗಿಗೆ ರೀಮೆಕ್ ಮಾಡಿದ್ದಾರೆ. ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು ನಾಗಶೇಖರ್ ಸಂದರ್ಶನಗಳಲ್ಲಿ ಭಾಗಿಯಾಗಿ ಸಿನಿಮಾ ಪ್ರಚಾರ ಮಾಡುತ್ತಿದ್ದಾರೆ. ಇದೇ ವೇಳೆ ಕರ್ನಾಟಕದಲ್ಲಿ ರಶ್ಮಿಕಾ ಬ್ಯಾನ್ ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿರುವ ಬಗ್ಗೆ ನಿರ್ದೇಶಕರಿಗೆ ಪ್ರಶ್ನೆ ಎದುರಾಗಿದೆ. ಈ ವೇಳೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

   ಯಾವುದನ್ನು ನಿರೀಕ್ಷೆ ಮಾಡಬಾರದು

  ಯಾವುದನ್ನು ನಿರೀಕ್ಷೆ ಮಾಡಬಾರದು

  ಅವಕಾಶ ಕೊಟ್ಟವರನ್ನು ಮರೆಯಬಾರದು ಅಲ್ವಾ? ಎನ್ನುವ ಪ್ರಶ್ನೆಗೆ ಉತ್ತರಿಸಿರುವ ನಾಗಶೇಖರ್, "ನೀವು ನಿರೀಕ್ಷೆ ಮಾಡುವುದೇ ತಪ್ಪು. ನಾನು ಒಂದು ಸಿನಿಮಾದಲ್ಲಿ ಒಬ್ಬರಿಗೆ ಅವಕಾಶ ನೀಡಿದೆ. 'ಸಂಜು ವೆಡ್ಸ್ ಗೀತಾ' ಚಿತ್ರದಲ್ಲಿ ನಟಿಸಿದ ಹೀರೊ ದೊಡ್ಡ ಸ್ಟಾರ್ ಆಗಿಬಿಟ್ಟರು. ನಂತರ ಅವರು ನನ್ನನ್ನು ನೆನಪಿನಲ್ಲಿ ಇಟ್ಟುಕೊಳ್ಳುತ್ತಾರಾ? ಗೌರವ ಕೊಡುತ್ತಾರಾ ? ಇಲ್ವಾ? ಅದು ನಮಗೆ ಬೇಕಾಗಿಲ್ಲ. ಕೃತಜ್ಞತೆ ಇಟ್ಟುಕೊಳ್ಳುವುದು ಬಿಡುವುದು ಅವರಿಗೆ ಬಿಟ್ಟದ್ದು. ನಾನು ನನ್ನ ಮುಂದಿನ ಸಿನಿಮಾ ಕಡೆ ಹೋಗುತ್ತಿರುತ್ತೀನಿ ಅಷ್ಟೆ. ನನ್ನದು ನನಗೆ. ಅವರದ್ದು ಅವರಿಗೆ. ಅದನ್ನೆಲ್ಲಾ ನಿರೀಕ್ಷಿಸಬಾರದು. ನಿರೀಕ್ಷೆ ಮಾಡಿದರೆ ನೋಚವಾಗುತ್ತದೆ. ಇಲ್ಲ ಅಂದರೆ ಇಲ್ಲ"

   ರಶ್ಮಿಕಾನ ಬ್ಯಾನ್ ಮಾಡಿದ್ರೆ ಇಂಡಸ್ಟ್ರಿಗೆ ನಷ್ಟ

  ರಶ್ಮಿಕಾನ ಬ್ಯಾನ್ ಮಾಡಿದ್ರೆ ಇಂಡಸ್ಟ್ರಿಗೆ ನಷ್ಟ

  ಕರ್ನಾಟಕದಲ್ಲಿ ರಶ್ಮಿಕಾನ ಬ್ಯಾನ್ ಮಾಡಬೇಕು ಎನ್ನುವ ಕೂಗು ಕೇಳಿಬರುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ನಾಗಶೇಖರ್ ಹೇಳಿದ್ದು ಹೀಗೆ. "ನನಗೆ ಆ ಬಗ್ಗೆ ಗೊತ್ತಿಲ್ಲ. ಒಂದು ವೇಳೆ ಆ ರೀತಿ ಬ್ಯಾನ್ ಮಾಡಿದರೆ ಅದರಿಂದ ಚಿತ್ರರಂಗಕ್ಕೆ ನಷ್ಟ. ಒಬ್ಬ ಒಳ್ಳೆ ಕಲಾವಿದರನ್ನು ಬ್ಯಾನ್ ಮಾಡುವುದು ಸರಿಯಲ್ಲ. ಅದಕ್ಕೆ ಕಾರಣ ಏನೋ ನನಗೆ ಗೊತ್ತಿಲ್ಲ. ಯಾರೇ ಮಾಡಿದರೂ ನಷ್ಟ ಅಲ್ಲವೇ. ಉದಾಹರಣೆಗೆ ನಾನು ಕನ್ನಡದಲ್ಲಿ ಒಂದು ಸಿನಿಮಾ ಕೈಗೆತ್ತಿಕೊಳ್ಳುತ್ತೀನಿ. ರಶ್ಮಿಕಾ ಮಂದಣ್ಣ ರೀತಿ ನಟಿ ಬೇಕು ಎಂದುಕೊಳ್ಳುತ್ತೇನೆ. ನೀವು ಆಕೆಯನ್ನು ಬ್ಯಾನ್ ಮಾಡಿದರೆ ಫಿಲ್ಮ್ ಮೇಕರ್ ಕ್ರಿಯೇಟಿವಿಟಿಗೆ ತೊಂದರೆ ಆಗುತ್ತದೆ." ಎಂದು ನಾಗಶೇಖರ್ ಹೇಳಿದ್ದಾರೆ.

   ಕರ್ನಾಟಕದಲ್ಲಿ ರಶ್ಮಿಕಾ ಬ್ಯಾನ್?

  ಕರ್ನಾಟಕದಲ್ಲಿ ರಶ್ಮಿಕಾ ಬ್ಯಾನ್?

  ರಶ್ಮಿಕಾ ಮಂದಣ್ಣ ಸಿನಿಮಾಗಳನ್ನ ಕರ್ನಾಟಕದಲ್ಲಿ ಬ್ಯಾನ್ ಮಾಡುವುದು ಅಷ್ಟು ಸುಲಭ ಅಲ್ಲ. ಯಾರೋ ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಬ್ಯಾನ್ ಅಂದಾಕ್ಷಣ ಆಕೆಯ ಸಿನಿಮಾಗಳು ರಿಲೀಸ್ ಆಗುವುದನ್ನು ತಡೆಯಲು ಸಾಧ್ಯವಿಲ್ಲ. ಮತ್ತೊಂದ್ಕಡೆ ರಶ್ಮಿಕಾನ ಬ್ಯಾನ್ ಮಾಡಿದ್ರೆ, 'ವಾರೀಸು' ಹಾಗೂ 'ಪುಷ್ಪ- 2' ಸಿನಿಮಾಗಳಿಗೆ ಹಿನ್ನಡೆ ಆಗುತ್ತದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಆದರೆ ಇದೆಲ್ಲಾ ಸುಳ್ಳು. ಆದರೆ ರಶ್ಮಿಕಾ ಹೇಳಿಕೆಗಳ ಬಗ್ಗೆ ಕನ್ನಡ ಸಿನಿರಸಿಕರು ಅಸಮಾಧಾನಗೊಂಡಿರುವುದು ಗೊತ್ತಾಗುತ್ತಿದೆ.

   ಈ ವಾರ 'ಗುರ್ತುಂದಾ ಶೀತಾಕಾಲಂ' ತೆರೆಗೆ

  ಈ ವಾರ 'ಗುರ್ತುಂದಾ ಶೀತಾಕಾಲಂ' ತೆರೆಗೆ

  ಸ್ಯಾಂಡಲ್‌ವುಡ್‌ನಲ್ಲಿ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ನಟನೆಯ 'ಲವ್ ಮಾಕ್ಟೇಲ್' ಸೂಪರ್ ಹಿಟ್ ಆಗಿತ್ತು. ಇದೇ ಚಿತ್ರವನ್ನು 'ಗುರ್ತುಂದಾ ಶೀತಾಕಾಲಂ' ಹೆಸರಿನಲ್ಲಿ ನಾಗಶೇಖರ್ ತೆಲುಗು ಪ್ರೇಕ್ಷಕರ ಮುಂದಿಡುತ್ತಿದ್ದಾರೆ. ಚಿತ್ರದಲ್ಲಿ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಹಾಗೂ ಸತ್ಯದೇವ್ ಲೀಡ್ ರೋಲ್‌ಗಳಲ್ಲಿ ನಟಿಸಿದ್ದಾರೆ. ಈಗಾಗಲೇ ಟ್ರೈಲರ್ ಕೂಡ ರಿಲೀಸ್ ಆಗಿ ಗಮನ ಸೆಳೆದಿದೆ. ಈ ವಾರ ಸಿನಿಮಾ ತೆಲುಗು ಪ್ರೇಕ್ಷಕರ ಮುಂದೆ ಬರ್ತಿದೆ.

  English summary
  Director Nagashekar about Rashmika Mandanna Ban in Kannada Industry issue. Nagashekar Directed Gurthundu Seethakalam Film will be released in theaters on December 9th, 2022. Know more.
  Monday, December 5, 2022, 12:17
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X