For Quick Alerts
  ALLOW NOTIFICATIONS  
  For Daily Alerts

  ಚಿತ್ರೀಕರಣ ಹಂತದಲ್ಲೇ ಚಾರುಲತಾ ಚುಕುಪುಕು ರೈಲು

  |

  ಕನ್ನಡದ ಕುಳ್ಳ ದ್ವಾರಕೀಶ್ ನಿರ್ಮಿಸುತ್ತಿರುವ 'ಚಾರುಲತಾ' ಚಿತ್ರೀಕರಣ ನಡೆಯುತ್ತಿದೆ. ಪ್ರಿಯಾಮಣಿ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರ, ಶೂಟಿಂಗ್ ಹಂತದಲ್ಲಿರುವಾಗಲೇ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ಅಂದರೆ ಈಗಾಗಲೇ ತಮಿಳು ಹಾಗೂ ತೆಲುಗು ಡಬ್ಬಿಂಗ್ ಹಕ್ಕುಗಳು ಮಾರಾಟವಾಗಿವೆ.

  ಚಾರುಲತಾ ಚಿತ್ರದ ತಮಿಳು ಡಬ್ಬಿಂಗ್ ಹಕ್ಕನ್ನು ಭಾರೀ ಮೊತ್ತಕ್ಕೆ ರಮೇಶ್ ಕೃಷ್ಣಮೂರ್ತಿ ಎಂಬುವವರು ಖರೀದಿಸಿದ್ದಾರೆ. ಇನ್ನು ತೆಲುಗು ಹಕ್ಕನ್ನು 'ಅಲ್ಲು ಅರವಿಂದ್' ಅವರ 'ಗೀತಾ ಆರ್ಟ್ಸ್' ಖರೀದಿಸಿದೆ. ಈ ಮೂಲಕ ಚಿತ್ರ ನಿರ್ಮಾಣದ ಹಂತದಲ್ಲೇ ದ್ವಾರಕೀಶ್ ಜೇಬು ಸಾಕಷ್ಟು ಭರ್ತಿಯಾಗಿದೆ. ನಿರ್ಮಾಪಕ ದ್ವಾರಕೀಶ್ ನಗು ಇನ್ನೂ ಜೋರಾಗಿದೆ.

  ಆದರೆ ಈ ಚಿತ್ರ ನಾಯಕಿ ಪ್ರಿಯಾಮಣಿ ಹೇಳುವುದೇ ಬೇರೆ. "ಚಾರುಲತಾ' ತಮಿಳಿಗೆ ಡಬ್ ಆಗುತ್ತಿಲ್ಲ. ಬದಲಿಗೆ ಕನ್ನಡದ ಜೊತೆಯಲ್ಲೇ, (ಏಕಕಾಲದಲ್ಲಿ) ತಮಿಳಿನಲ್ಲೂ ನಿರ್ಮಾಣವಾಗುತ್ತಿದೆ" ಎಂದಿದ್ದಾರೆ ಪ್ರಿಯಾ. ಏನೇ ಆಗಲಿ, ಪ್ರಿಯಾಮಣಿ ಖುಷಿಗಂತೂ ಪಾರವೇ ಇಲ್ಲ. ಕಾರಣ, ಅವರು ತಮಿಳು ಚಿತ್ರದಲ್ಲಿ ನಾಯಕಿಯಾಗಿ ನಟಿಸಿ ಬಹಳಷ್ಟು ಕಾಲವಾಗಿತ್ತು.

  ತಮಿಳು ಪ್ರೇಕ್ಷಕರು ಎಲ್ಲಿ ತಮ್ಮನ್ನು ಮರೆತುಬಿಡುವರೋ ಎಂಬ ಆತಂಕ ಬಹುಶಃ ಪ್ರಿಯಾಮಣಿಗಿತ್ತೋ ಏನೋ? ಈಗ ಪ್ರಿಯಾಮಣಿ ಆತಂಕ ದೂರವಾಗಿ ಆ ಜಾಗದಲ್ಲಿ ಸಂತೋಷ ಮನೆಮಾಡಿದೆ. "ಸಾಕಷ್ಟು ಒಳ್ಳೆಯ ಚಿತ್ರದ ಮೂಲಕ ಮತ್ತೆ ತಮಿಳು ಪ್ರೇಕ್ಷಕರ ಮುಂದೆ ತಾವು ಹೋಗುತ್ತಿರುವುದಾಗಿ ಪ್ರಿಯಾ ಹೇಳಿಕೊಂಡಿದ್ದಾರೆ.

  ಥಾಯ್ ಭಾಷೆಯ 'ಅಲೋನ್' ಎಂಬ ಚಿತ್ರದಿಂದ ಸ್ಪೂರ್ತಿ ಪಡೆದು ಚಾರುಲತಾ ಚಿತ್ರವನ್ನು ಪಿ. ಕುಮಾರ್ (ಪೊನ್ ಕುಮಾರನ್) ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಪಿ. ಕುಮಾರ್ ಅವರು ಈ ಹಿಂದೆ 'ವಿಷ್ಣುವರ್ಧನ' ಚಿತ್ರ ನಿರ್ಮಿಸಿ ಬಹಳಷ್ಟು ಭರವಸೆ ಮೂಡಿಸಿದವರು.

  ದ್ವಾರಕೀಶ್ ನಿರ್ಮಾಣದ ಈ ಚಿತ್ರದ ಮೂಲಕ ಪ್ರಿಯಾಮಣಿ ಕನ್ನಡ, ತಮಿಳು, ತೆಲುಗು ಚಿತ್ರರಂಗಗಳಲ್ಲಿ ಮತ್ತೆ ಮಿಂಚುವ ಕಾಲ ಸನ್ನಿಹಿತವಾಗಿದೆ ಎನ್ನಬಹುದೇನೋ. ಈ ಚಿತ್ರದ ಉಳಿದ ತಾರಾಬಳಗದಲ್ಲಿ ಕನ್ನಡದ ಸ್ಕಂದ, ತಮಿಳಿನ ಸೀತಾ, ಶರಣ್ಯ, ಸಾಯಿ ಶಶಿ, ರವಿಶಂಕರ್, ಮಾ. ಮಂಜುನಾಥ್, ಸುನೇತ್ರಾ, ಸುದರ್ಶನ್ ಮುಂತಾದವರಿದ್ದಾರೆ.

  ಸುಂದರ್ ಸಿ ಬಾಬು ಸಂಗೀತ, ಪನೀರ್ ಸೆಲ್ವಂ ಛಾಯಾಗ್ರಹಣ ಹೊಂದಿರುವ ಚಾರುಲತಾ ಚಿತ್ರ ವಿಷ್ಣುವರ್ಧನ ನಂತರ ದ್ವಾರಕೀಶ್ ಸಾಕಷ್ಟು ಅಳೆದು-ತೂಗಿ ನಿರ್ಮಿಸುತ್ತಿರುವ ಚಿತ್ರ. ಕುಳ್ಳ ದ್ವಾರಕೀಶ್ ಲೆಕ್ಕಾಚಾರ ಇತ್ತೀಚಿನ ದಿನಗಳಲ್ಲಿ ತಪ್ಪುವುದು ತೀರಾ ಕಡಿಮೆ. ಹಾಗಾಗಿ, ಚಾರುಲತಾ ದಕ್ಷಿಣ ಭಾರತದಲ್ಲಿ ದೊಡ್ಡ ಬಿರುಗಾಳಿ ಎಬ್ಬಿಸಿದರೂ ಆಶ್ಚರ್ಯವಿಲ್ಲ. (ಒನ್ ಇಂಡಿಯಾ ಕನ್ನಡ)

  English summary
  Dwarakish produced Kannada movie Charulatha has allready make a buzz. Even though it is in shooting stage, Its Tamil and Telugu Dabbing Rights Soldout for huge amount. Priyamani is in Lead Role.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X