For Quick Alerts
  ALLOW NOTIFICATIONS  
  For Daily Alerts

  2 ಸಿನಿಮಾ ಸೋತ್ರೂ ಪ್ರಭಾಸ್‌ಗೆ ಕಮ್ಮಿಯಾಗಿಲ್ಲ ಡಿಮ್ಯಾಂಡ್: 'ಪ್ರಾಜೆಕ್ಟ್ ಕೆ'ಗೆ ಬೆಂಕಿ ಬೆಲೆ!

  |

  'ಬಾಹುಬಲಿ' ಸಿರೀಸ್ ಬಳಿಕ ಪ್ರಭಾಸ್ ಲಕ್ ಯಾಕೋ ಸರಿಯಾಗಿಲ್ಲ. ರಿಲೀಸ್ ಆದ ಸಿನಿಮಾಗಳೆಲ್ಲಾ ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿವೆ. ನೀರಿನಂತೆ ಹಣ ಸುರಿದು ನಿರ್ಮಿಸಿದ್ದ 'ಸಾಹೋ' ಹಾಗೂ 'ರಾಧೆ ಶ್ಯಾಮ್' ಸಿನಿಮಾಗಳು ಸೋಲಿನ ರುಚಿ ನೋಡಬೇಕಾಯ್ತು.

  ಎರಡೂ ಸಿನಿಮಾಗಳಲ್ಲಿ ಪ್ರಭಾಸ್ ಹೀನಾಯವಾಗಿ ಸೋತಿದ್ದು ಕಂಡು ಡಿಮ್ಯಾಂಡ್ ಕಮ್ಮಿಯಾಗೇ ಬಿಡ್ತು ಅಂತ ಮಾತಾಡಿಕೊಂಡುವರು ಅದೆಷ್ಟೋ ಮಂದಿ. ಮುಂಬರುವ ಎರಡು ಸಿನಿಮಾಗಳ ಕಥೆ ಕೂಡ ಇದೇನೆ ಎಂದು ಭವಿಷ್ಯ ನುಡಿದಿದ್ದರು.

  ರಾಜಮೌಳಿ ಸಿನಿಮಾದಲ್ಲಿ ಪ್ರಭಾಸ್ - ಜೂ.ಎನ್‌ಟಿಆರ್? ಯಂಗ್ ಟೈಗರ್ ಫ್ಯಾನ್ಸ್ ಆಕ್ರೋಶ!ರಾಜಮೌಳಿ ಸಿನಿಮಾದಲ್ಲಿ ಪ್ರಭಾಸ್ - ಜೂ.ಎನ್‌ಟಿಆರ್? ಯಂಗ್ ಟೈಗರ್ ಫ್ಯಾನ್ಸ್ ಆಕ್ರೋಶ!

  ಯಾರು ಏನೇ ಲೆಕ್ಕಹಾಕಿದ್ದರೂ, ಪ್ರಭಾಸ್‌ಗೆ ಡಿಮ್ಯಾಂಡ್ ಮಾತ್ರ ಕಮ್ಮಿಯಾಗಿಲ್ಲ ಅಂತಿದೆ ಇಲ್ಲೊಂದು ವರದಿ. ಪ್ರಭಾಸ್ ಮುಂದಿನ ಸಿನಿಮಾಗೆ ನೀರಿನಂತೆ ಹಣ ಸುರಿದು ಥಿಯೇಟರ್‌ ಹಕ್ಕುಗಳನ್ನು ಖರೀದಿ ಮಾಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರಂತೆ. ಹಾಗಿದ್ರೆ, ಪ್ರಭಾಸ್ ಸಿನಿಮಾಗೆ ಈ ಮಟ್ಟಿಗೆ ಬೇಡಿಕೆ ಬಂದಿದ್ಯಾಕೆ ಅನ್ನೋದನ್ನು ತಿಳಿಯಲು ಮುಂದೆ ಓದಿ.

  'ಪ್ರಾಜೆಕ್ಟ್‌ ಕೆ'ಗೆ ಮಸ್ತ್ ಡಿಮ್ಯಾಂಡ್

  'ಪ್ರಾಜೆಕ್ಟ್‌ ಕೆ'ಗೆ ಮಸ್ತ್ ಡಿಮ್ಯಾಂಡ್

  ಪ್ರಭಾಸ್ ನಟಿಸುತ್ತಿರುವ 'ಪ್ರಾಜೆಕ್ಟ್ ಕೆ' ಸಿನಿಮಾಗೆ ಭಾರಿ ಡಿಮ್ಯಾಂಡ್ ಬಂದಿದೆಯಂತೆ. ನಿಜಾಂ ಏರಿಯಾದಲ್ಲಿ ಈ ಸಿನಿಮಾ ರಿಲೀಸ್ ಮಾಡುವುದಕ್ಕೆ ವಿತರಕರು ತುದಿಗಾಲಲ್ಲಿ ನಿಂತಿದ್ದಾರಂತೆ. ಹೀಗೊಂದು ಸುದ್ದಿ ಟಾಲಿವುಡ್‌ ಮಾಧ್ಯಮಗಳಲ್ಲಿ ಸುದ್ದಿಯಾಗಿದೆ. ನಿಜಾಂ ಜೊತೆ ಆಂಧ್ರ ಹಾಗೂ ಸೀಡೆಡ್‌ಗಳಲ್ಲೂ ಬೇಡಿಕೆ ಹೆಚ್ಚಿದೆಯಂತೆ. ಪ್ರಭಾಸ್ ಅಭಿನಯದ ಎರಡು ಸಿನಿಮಾಗಳು ಹೀನಾಯವಾಗಿ ಸೋತರೂ ವಿತರಕರು ಸಿನಿಮಾ ಕೊಂಡು ಕೊಳ್ಳುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ ಎನ್ನಲಾಗುತ್ತಿದೆ.

  ವಿತರಕರು ಇಟ್ಟ ಬೇಡಿಕೆ ಎಷ್ಟು?

  ವಿತರಕರು ಇಟ್ಟ ಬೇಡಿಕೆ ಎಷ್ಟು?

  ನಿಜಾಂ ಏರಿಯಾ ಒಂದರಲ್ಲಿಯೇ 'ಪ್ರಾಜೆಕ್ಟ್‌ ಕೆ' ಸಿನಿಮಾವನ್ನು ವಿತರಣೆ ಮಾಡುವುದಕ್ಕೆ 70 ರಿಂದ 80 ಕೋಟಿ ರೂ. ಕೊಡೋಕೆ ರೆಡಿಯಾಗಿದ್ದಾರೆ ಅನ್ನೋದು ಸುದ್ದಿ. ಆದರೆ, ನಿರ್ಮಾಪಕರು 80 ಕೋಟಿ ರೂ. ಡಿಮ್ಯಾಂಡ್ ಇಟ್ಟಿದ್ದಾರಂತೆ. ಈ ವಿಷಯಕ್ಕೆ ಸಂಬಂಧಿಸಿದಂತೆ ವಿತರಕರು ಹಾಗೂ ನಿರ್ಮಾಪಕರ ನಡುವೆ ಮಾತುಕತೆ ನಡೆಯುತ್ತಿದೆಯಂತೆ. ಮೂಲಗಳ ಪ್ರಕಾರ, ವಿತರಖ ಸುನಿಲ್ ನಾರಂಗ್ ನಿಜಾಂನಲ್ಲಿ 'ಪ್ರಾಜೆಕ್ಟ್ ಕೆ' ಅನ್ನು ರಿಲೀಸ್ ಮಾಡಬಹುದು ಎನ್ನಲಾಗುತ್ತಿದೆ.

  ಆಂಧ್ರ–ತೆಲಂಗಾಣದಲ್ಲಿ ಹೇಗಿದೆ ಡಿಮ್ಯಾಂಡ್

  ಆಂಧ್ರ–ತೆಲಂಗಾಣದಲ್ಲಿ ಹೇಗಿದೆ ಡಿಮ್ಯಾಂಡ್

  ನಿಜಾಂ ಅಷ್ಟೇ ಅಲ್ಲ. ಆಂಧ್ರ ಹಾಗೂ ಸೀಡೆಡ್ ಎರಡೂ ಏರಿಯಾಗಳಲ್ಲೂ ಥಿಯೇಟರ್‌ ಹಕ್ಕುಗಳಿಗೆ ಭಾರೀ ಬೇಡಿಕೆ ಇದೆಯಂತೆ. ಮೂಲಗಳ ಪ್ರಕಾರ, ಆಂಧ್ರ ಹಾಗೂ ಸೀಡೆಡ್‌ನಿಂದ 'ಪ್ರಾಜೆಕ್ಟ್ ಕೆ' ಬ್ಯುಸಿನೆಸ್ 100 ಕೋಟಿ ರೂ. ದಾಟಬಹುದು ಎನ್ನಲಾಗಿದೆ. ಅಲ್ಲದೆ ಕೇವಲ ತೆಲುಗು ರಾಜ್ಯಗಳಿಂದಲೇ ಸುಮಾರು 170 ರಿಂದ 180 ಕೋಟಿ ರೂ. ಬ್ಯುಸಿನೆಸ್ ಆಗಬಹುದು ಎಂದು ಅಂದಾಜಿಸಲಾಗಿದೆ. 'RRR' ಹಾಗೂ 'ಬಾಹುಬಲಿ' ಸಿನಿಮಾಗಳಿಗಿಂತ ದೊಡ್ಡ ಮೊತ್ತಕ್ಕೆ ಸೇಲ್ ಆಗಲಿದೆ ಎಂದು ಟ್ರೇಡ್ ಅನಲಿಸ್ಟ್‌ಗಳು ಲೆಕ್ಕಾಚಾರ ಹಾಕಿದ್ದಾರೆ.

  ದಕ್ಷಿಣದ ಭಾಷೆಗಳಲ್ಲೂ 'ಪ್ರಾಜೆಕ್ಟ್‌ ಕೆ'ಗೆ ಬೇಡಿಕೆ

  ದಕ್ಷಿಣದ ಭಾಷೆಗಳಲ್ಲೂ 'ಪ್ರಾಜೆಕ್ಟ್‌ ಕೆ'ಗೆ ಬೇಡಿಕೆ

  400 ಕೋಟಿ ವೆಚ್ಚದಲ್ಲಿ 'ಪ್ರಾಜೆಕ್ಟ್ ಕೆ' ಸಿನಿಮಾ ನಿರ್ಮಾಣ ಆಗುತ್ತಿದೆ. ಹೀಗಾಗಿ ದೊಡ್ಡ ಮೊತ್ತದ ಬ್ಯುಸಿನೆಸ್ ಮಾಡಲೇಬೇಕಿದೆ. ತಮಿಳು, ಕನ್ನಡ ಹಾಗೂ ಮಲಯಾಳಂನಲ್ಲೂ ಬ್ಯುಸಿನೆಸ್‌ ಜೋರಾಗಿಯೇ ಇರುತ್ತೆ ಎಂದು ಅಂದಾಜಿಸಲಾಗಿದೆ. ಅಲ್ಲದೆ ಹಿಂದಿ ಭಾಷೆಯಲ್ಲಿ ಭಾರೀ ಮೊತ್ತಕ್ಕೆ ಸೋಲ್ಡ್ ಔಟ್ ಆಗುವ ಸಾಧ್ಯತೆಯಿದೆ ಎನ್ನಲಾಗಿದೆ.

  English summary
  Even with two failures, Prabhas's film Project K with Deepika Padukone is in high demand, Know More.
  Thursday, January 5, 2023, 17:34
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X