For Quick Alerts
  ALLOW NOTIFICATIONS  
  For Daily Alerts

  ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಗೆ ಕೊರೊನಾ ಸೋಂಕು ತಗುಲಿದ್ದು ಯಾರಿಂದ?

  |

  ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯದ ಬಗ್ಗೆ ವಾರದ ಹಿಂದೆ ಇದ್ದ ಆತಂಕ ಇಂದು (ಆಗಸ್ಟ್ 24) ಕ್ಕೆ ತುಸು ಕಡಿಮೆಯಾಗಿದೆ. ಎಸ್‌ಪಿಬಿ ಅವರ ಹೊಸ ಕೊರೊನಾ ಪರೀಕ್ಷೆ ವರದಿ ನೆಗೆಟಿವ್ ಬಂದಿದ್ದು, ಎಸ್‌ಪಿಬಿ ಚೇತರಿಸಿಕೊಳ್ಳುತ್ತಿದ್ದಾರೆ ಎಂಬ ವಾರ್ತೆ ಕೋಟ್ಯಂತರ ಅಭಿಮಾನಿಗಳಿಗೆ ನೆಮ್ಮದಿ ತಂದಿದೆ.

  Brahma ಚಿತ್ರದಲ್ಲಿನ ರೋಮಾಂಚಕ ಫೈಟ್ ಸೀನ್ ತಯಾರಾಗಿದ್ದು ಹೀಗೆ | Action Scene Making | Filmibeat Kannada

  ಆದರೆ ಇದೇ ಸಮಯದಲ್ಲಿ ಎಸ್‌.ಬಿ.ಬಾಲಸುಬ್ರಹ್ಮಣ್ಯಂ ಅವರಿಗೆ ಕೊರೊನಾ ಸೋಂಕು ತಗುಲಲು ಕಾರಣ ಯಾರು? ಎಂಬ ಚರ್ಚೆ ಆರಂಭವಾಗಿದೆ. ದಿನವೊಂದಕ್ಕೆ 60,000 ಕ್ಕೂ ಹೆಚ್ಚು ಪ್ರಕರಣಗಳು ದೇಶದಾದ್ಯಂತ ವರದಿ ಆಗುತ್ತಿರುವ ಸಂದರ್ಭದಲ್ಲಿ ಯಾರಿಂದ ಯಾರಿಗೆ ಸೋಂಕು ತಗುಲಿದೆ ಎಂದು ನಿಖರವಾಗಿ ಹೇಳುವುದು ಅಸಾಧ್ಯ. ಆದರೂ ಎಸ್‌ಪಿಬಿಗೆ ಸೋಂಕು ತಗುಲಲು ಯಾರು ಕಾರಣ ಎಂಬ ಚರ್ಚೆ ನಡೆಯುತ್ತಿದೆ.

  ಎಸ್ ಪಿ ಬಾಲಸುಬ್ರಹ್ಮಣ್ಯಂ ಆರೋಗ್ಯ ಕುರಿತು ಹರಿದಾಡುತ್ತಿದ್ದ ವದಂತಿಗೆ ತೆರೆ ಎಳೆದ ಪುತ್ರ ಚರಣ್ಎಸ್ ಪಿ ಬಾಲಸುಬ್ರಹ್ಮಣ್ಯಂ ಆರೋಗ್ಯ ಕುರಿತು ಹರಿದಾಡುತ್ತಿದ್ದ ವದಂತಿಗೆ ತೆರೆ ಎಳೆದ ಪುತ್ರ ಚರಣ್

  ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ಕೊರೊನಾ ಪಾಸಿಟಿವ್ ಆಗುವ ಮುನ್ನಾ ಅವರು ಹೈದರಾಬಾದ್‌ನಲ್ಲಿ ಒಂದು ಟಿವಿ ಶೋ ನ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಅಲ್ಲಿಯೇ ಅವರಿಗೆ ಕೋವಿಡ್ ಸೋಂಕು ತಗುಲಿದೆ ಎನ್ನಲಾಗುತ್ತಿದೆ. ಆ ಶೋನಲ್ಲಿ ಭಾಗವಹಿಸಿದ್ದ ಇತರರಿಗೂ ಕೊರೊನಾ ಸೋಂಕು ತಗುಲಿದೆಯಂತೆ.

  ಟಿವಿ ಶೋನಲ್ಲಿ ಎಸ್‌ಪಿಬಿ ಜೊತೆಗೆ ಭಾಗವಹಿಸಿದ್ದ ಮಾಳವಿಕಾ

  ಟಿವಿ ಶೋನಲ್ಲಿ ಎಸ್‌ಪಿಬಿ ಜೊತೆಗೆ ಭಾಗವಹಿಸಿದ್ದ ಮಾಳವಿಕಾ

  ಅದೇ ಟಿವಿ ಶೋನಲ್ಲಿ ಭಾಗವಹಿಸಿದ್ದ ಹಿನ್ನೆಲೆ ಗಾಯಕಿ ಮಾಳವಿಕಾ ಅವರಿಂದಲೇ ಎಸ್‌.ಪಿ.ಬಿ ಅವರಿಗೆ ಕೊರೊನಾ ಸೋಂಕು ತಗುಲಿದೆ ಎಂಬ ಆರೋಪ ಸಾಮಾಜಿಕ ಜಾಲತಾಣದಲ್ಲಿ ಕೇಳಿಬರುತ್ತಿದೆ. ಮಾಳವಿಕಾ ಕೊರೊನಾ ಪಾಸಿಟಿವ್ ಇದ್ದರೂ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು ಹಾಗಾಗಿಯೇ ಎಸ್‌ಪಿಬಿಗೆ ಕೊರೊನಾ ಬಂತು ಎಂದು ಆರೋಪ ಮಾಡಲಾಗಿದೆ.

  ಅಲ್ಲಗಳೆದಿರುವ ಗಾಯಕಿ ಮಾಳವಿಕಾ

  ಅಲ್ಲಗಳೆದಿರುವ ಗಾಯಕಿ ಮಾಳವಿಕಾ

  ಆದರೆ ಇದನ್ನು ತೀವ್ರವಾಗಿ ಅಲ್ಲಗಳೆದಿರುವ ಗಾಯಕಿ ಮಾಳವಿಕಾ, 'ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಅವರು ಆಸ್ಪತ್ರೆಯಲ್ಲಿ ದಾಖಲಾದ ಮೇಲೆ ನನಗೆ ಕೊರೊನಾ ಪಾಸಿಟಿವ್ ಇರುವ ವಿಷಯ ಗೊತ್ತಾಯಿತು. ಅದಕ್ಕೆ ಮುನ್ನಾ ನನಗೆ ಕೊರೊನಾ ಇರಲಿಲ್ಲ' ಎಂದು ಮಾಳವಿಕಾ ಫೇಸ್‌ಬುಕ್‌ನಲ್ಲಿ ದೀರ್ಘವಾದ ಪೋಸ್ಟ್ ಹಾಕಿದ್ದಾರೆ.

  ಜುಲೈ 30 ರಂದು ಚಿತ್ರೀಕರಣ ಪ್ರಾರಂಭವಾಯಿತು

  ಜುಲೈ 30 ರಂದು ಚಿತ್ರೀಕರಣ ಪ್ರಾರಂಭವಾಯಿತು

  ಜುಲೈ 30 ರಂದು ಎಸ್‌ಪಿಬಿ ಅವರೊಂದಿಗೆ ಕಾರ್ಯಕ್ರಮದ ಚಿತ್ರೀಕರಣ ಪ್ರಾರಂಭವಾಯಿತು. ನಾನು ಎರಡನೇಯ ದಿನ ಅಂದರೆ ಜುಲೈ 31 ರಂದು ಕಾರ್ಯಕ್ರಮದಲ್ಲಿ ಭಾಗವಹಿಸಿದೆ. ಆಗ ನನಗೆ ಕೊರೊನಾ ಇರಲಿಲ್ಲ. ಆ ಚಿತ್ರೀಕರಣದಲ್ಲಿ ಗಾಯಕರಾದ ಹೇಮಚಂದ್ರ, ಅನುದೀಪ್, ಪ್ರಣವಿ, ಲಿಪ್ಸಿಕಾ, ಕಾರುಣ್ಯ, ದಾಮಿನಿ, ಸತ್ಯ ಯಾಮಿನಿ ಸಹ ಭಾಗವಹಿಸಿದ್ದರು ಎಂದಿದ್ದಾರೆ ಮಾಳವಿಕಾ.

  'ನನ್ನೊಂದಿಗಿದ್ದ ಮೂವರಿಗೆ ಏಕೆ ಪಾಸಿಟಿವ್ ಬರಲಿಲ್ಲ?'

  'ನನ್ನೊಂದಿಗಿದ್ದ ಮೂವರಿಗೆ ಏಕೆ ಪಾಸಿಟಿವ್ ಬರಲಿಲ್ಲ?'

  ಒಂದೊಮ್ಮೆ ನನ್ನಿಂದಲೇ ಎಸ್‌ಪಿಬಿ ಅವರಿಗೆ ಕೊರೊನಾ ಬಂದಿದ್ದಾದರೆ. ನಾನು ಅಂದು ಮೂವರು ಇತರ ಗಾಯಕಿಯರೊಂದಿಗೆ ಸಂಪರ್ಕದಲ್ಲಿದ್ದೆ. ಒಂದೇ ಕೋಣೆ, ಒಂದೇ ಮೇಕಪ್‌ ಟೇಬಲ್‌, ಮೈಕ್‌ ಅನ್ನು ಬಳಸಿದ್ದೆವು ಹಾಗಿದ್ದರೆ ಅವರಿಗೇಕೆ ಕೊರೊನಾ ಬರಲಿಲ್ಲ' ಎಂದು ಪ್ರಶ್ನೆ ಮಾಡಿದ್ದಾರೆ ಮಾಳವಿಕಾ.

  ಆಗಸ್ಟ್ 8 ರಂದು ನನ್ನ ವರದಿ ಪಾಸಿಟಿವ್ ಬಂತು: ಮಾಳವಿಕಾ

  ಆಗಸ್ಟ್ 8 ರಂದು ನನ್ನ ವರದಿ ಪಾಸಿಟಿವ್ ಬಂತು: ಮಾಳವಿಕಾ

  ಎಸ್‌ಪಿಬಿ ಅವರು ಆಗಸ್ಟ್ 5 ರಂದು ಆಸ್ಪತ್ರೆಗೆ ದಾಖಲಾದ ಮೇಲೆ ಆಗಸ್ಟ್ 8 ರಂದು ನಾನು ಪರೀಕ್ಷೆಗೆ ಒಳಗಾದೆ ನನಗೆ ಪಾಸಿಟಿವ್ ಬಂತು. ನಂತರ ನನ್ನ ಮನೆಯಲ್ಲಿರುವವರಿಗೆ ಪರೀಕ್ಷೆ ಮಾಡಲಾಗಿ, ನನ್ನ ತಾಯಿ, ತಂದೆ, ಮಗಳಿಗೆ ಕೊರೊನಾ ಇರುವುದು ಗೊತ್ತಾಯಿತು. ನನ್ನ ಪತಿಗೆ ನೆಗೆಟಿವ್ ವರದಿ ಬಂತು ಎಂದು ಮಾಹಿತಿ ನೀಡಿದ್ದಾರೆ ಮಾಳವಿಕಾ.

  ಸುಳ್ಳು ಸುದ್ದಿಗಳ ವಿರುದ್ಧ ಪೊಲೀಸರಿಗೆ ದೂರು

  ಸುಳ್ಳು ಸುದ್ದಿಗಳ ವಿರುದ್ಧ ಪೊಲೀಸರಿಗೆ ದೂರು

  ನನ್ನ ತಂದೆಯವರನ್ನು ಆಸ್ಪತ್ರೆಗೆ ದಾಖಲಿಸಿದ್ದೇವೆ. ನಾನು ಮತ್ತು ನನ್ನ ಕುಟುಂಬ ಬಹಳ ಕಠಿಣ ಪರಿಸ್ಥಿತಿಯನ್ನು ಈಗ ಎದುರಿಸುತ್ತಿದ್ದೇವೆ. ಈ ಸಮಯದಲ್ಲಿ ಇಂಥಹಾ ಸುಳ್ಳು ಸಂದೇಶಗಳನ್ನು ಹರಿಬಿಟ್ಟು ಮತ್ತಷ್ಟು ಘಾಸಿಗೊಳಿಸುವ ಪ್ರಯತ್ನ ಬೇಡ. ಇದು ಮುಂದುವರೆದರೆ ಸುಳ್ಳು ಸುದ್ದಿಗಳ ವಿರುದ್ಧ ಸೈಬರ್ ಪೊಲೀಸರಿಗೆ ದೂರು ನೀಡುತ್ತೇನೆ ಎಂದಿದ್ದಾರೆ ಮಾಳವಿಕಾ.

  English summary
  SP Balasubrahmanyam tested coronavirus positive. In Social Media people saying that he got coronavirus from a tv shooting set.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X