For Quick Alerts
  ALLOW NOTIFICATIONS  
  For Daily Alerts

  'ಗಾಡ್ ಫಾದರ್' ಕಾರ್ಯಕ್ರಮಕ್ಕೆ ತಡವಾಗಿ ಬಂದ ಚಿರಂಜೀವಿ: ಮೆಗಾ ಸ್ಟಾರ್ ನಡೆಗೆ ಫ್ಯಾನ್ಸ್ ಫಿದಾ!

  |

  ಮೆಗಾಸ್ಟಾರ್ ಚಿರಂಜೀವಿಯ ಬಹು ನಿರೀಕ್ಷೆಯ ಸಿನಿಮಾ 'ಗಾಡ್ ಫಾದರ್' ಈ ಸಿನಿಮಾದ ನವರಾತ್ರಿ ಹಬ್ಬರಕ್ಕೆ ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದೆ. ಇದೇ ಅಕ್ಟೋಬರ್ 5ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ಹೀಗಾಗಿ ಚಿತ್ರತಂಡ ಪ್ರೀ ರಿಲೀಸ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

  ಮೆಗಾಸ್ಟಾರ್ ಚಿರಂಜೀವಿ ಸಿನಿಮಾದ ಕಾರ್ಯಕ್ರಮ ಅಂದರೆ, ಅಭಿಮಾನಿಗಳೇನು ಕಮ್ಮಿಯಿರಲ್ಲ. 'ಗಾಡ್ ಫಾದರ್' ಪ್ರೀ ರಿಲೀಸ್ ಕಾರ್ಯಕ್ರಮಕ್ಕೂ ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಅನಂತಪುರದ ಸರ್ಕಾರಿ ಕಲಾ ಕಾಲೇಜಿನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

  ಚಿರಂಜೀವಿ ಈ ಪ್ರೀ-ರಿಲೀಸ್ ಈವೆಂಟ್‌ಗೆ ಬರೋದು ಸ್ವಲ್ಪ ತಡವಾಗಿತ್ತು. ಇತ್ತ ಅಭಿಮಾನಿಗಳು ಮೊದಲೇ ಬಂದು ಕಾಯುತ್ತಿದ್ದರು. ತಮ್ಮ ನೆಚ್ಚಿನ ನಟನನ್ನು ನೋಡಲು ತುದಿಗಾಲಲ್ಲಿ ನಿಂತಿದ್ದರು. ಆದರೆ, ಚಿರಂಜೀವಿ ಸರಿಯಾದ ಸಮಯಕ್ಕೆ ಬರೋಕೆ ಸಾಧ್ಯವಾಗಿರಲಿಲ್ಲ. ಹೀಗಾಗಿ ಅಭಿಮಾನಿಗಳಿಗೆ ಆಡಿಯೋ ಒಂದನ್ನು ಕಳುಹಿಸಿಕೊಟ್ಟಿದ್ದರು.

  "ಅನಂತಪುರದ ಸಮಸ್ತ ನಾಗರೀಕರಿಗೂ ನಮಸ್ಕಾರ.. ನಾನು ನಿಮ್ಮ ಚಿರಂಜೀವಿ.. ಈ ಕಾರ್ಯಕ್ರಮ ಬರುತ್ತಿದ್ದು, ಸ್ವಲ್ಪ ತಡವಾಗುತ್ತಿದೆ. ಬಹಳಷ್ಟು ಮಂದಿ ನನಗಾಗಿ ಕಾಯುತ್ತಿದ್ದಾರೆಂದು ನನಗೆ ತಿಳಿದಿದೆ. ನಾನು ಆ ಎಲ್ಲಾ ಜನರಿಗೆ ವಿಶೇಷವಾಗಿ ಕೃತಜ್ಞನಾಗಿದ್ದೇನೆ. ಇಂದು ವಿಶಾಖಪಟ್ಟಣದಲ್ಲಿ ಶೂಟಿಂಗ್ ಇತ್ತು. ಅದನ್ನು ಮುಗಿಸಿ ಮಧ್ಯಾಹ್ನದ ಫ್ಲೈಟ್ ಹಿಡಿಯಲು ಸ್ವಲ್ಪ ತಡವಾಯಿತು. ದಯವಿಟ್ಟು ತಪ್ಪಾಗಿ ಭಾವಿಸಬೇಡಿ. ನಿಮ್ಮಂಥೆ ನಾನೂ ನಿಮ್ಮನ್ನು ಭೇಟಿಯಾಗಿ ಉತ್ಸುಕನಾಗಿದ್ದೇನೆ." ಎಂದು ಆಡಿಯೋ ಒಂದನ್ನು ಕಳುಹಿಸಿದ್ದರು.

  ಇಷ್ಟೇ ಅಲ್ಲದೆ "ಆದಷ್ಟು ನಿಮ್ಮನ್ನು ಕಾಣಲು ಪ್ರಯತ್ನಿಸುತ್ತಿದ್ದೇನೆ. ಈ ಸಿನಿಮಾದ ಟ್ರೈಲರ್ ನೋಡಿ ನೀವೆಲ್ಲರೂ ಮೆಚ್ಚಿಕೊಂಡಿದ್ದೀರಿ. ದಯವಿಟ್ಟು ನನಗಾಗಿ ಕಾಯಿರಿ. ನಾನು ಆದಷ್ಟು ಬೇಗ ನಿಮ್ಮನ್ನು ಸೇರಿಕೊಳ್ಳುತ್ತೇನೆ." ಎಂದು ಮನವಿ ಮಾಡಿಕೊಂಡಿದ್ದರು. ಮೆಗಾಸ್ಟಾರ್ ಚಿರಂಜೀವಿ ವಿಳಂಬವಾಗಿದ್ದಕ್ಕೆ ತಮ್ಮ ಅಭಿಮಾನಿಗಳ ಜೊತೆ ನಡೆದುಕೊಂಡ ರೀತಿಗೆ ಮೆಚ್ಚುಗೆ ವ್ಯಕ್ತವಾಗಿತ್ತಿದೆ.

  God Father Pre Release Event Chiranjeevi Sent Apology Audio The Delay

  ಮೆಗಾಸ್ಟಾರ್ ಆಗಿದ್ದರೂ, ಚಿರಂಜೀವಿ ತಮ್ಮ ಅಭಿಮಾನಿಗಳೊಂದಿಗೆ ನಡೆದುಕೊಂಡ ರೀತಿಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಚಿರಂಜೀವಿ ನಡೆದುಕೊಂಡ ರೀತಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇನ್ನು 'ಗಾಡ್ ಫಾದರ್' ಟ್ರೈಲರ್‌ಗೆ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.

  English summary
  God Father Pre Release Event Chiranjeevi Sent Apology Audio The Delay, Know More.
  Thursday, September 29, 2022, 0:34
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X