Don't Miss!
- News
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪತ್ರ ನಕಲಿ ಎಂದ ಸಿದ್ದರಾಮಯ್ಯ.! ಆ ಪತ್ರದಲ್ಲಿ ಏನಿದೆ.?
- Sports
IND-W vs SA-W T20 Tri-series Final: ಭಾರತ ವನಿತೆಯರ ವಿರುದ್ಧ ದಕ್ಷಿಣ ಆಫ್ರಿಕಾಗೆ ಜಯ
- Lifestyle
ಮಗುವಿಗೆ ತುಂಬಾ ಜ್ವರ ಇದ್ದಾಗ ಏನು ಮಾಡಬೇಕು?
- Finance
6 ತಿಂಗಳಲ್ಲಿ 2ನೇ ಬಾರಿಗೆ ಉದ್ಯೋಗಿಗಳನ್ನು ವಜಾಗೊಳಿಸಿದ Byju's: ಈ ಬಾರಿ ಎಷ್ಟು ನೌಕರರು?
- Automobiles
ಭಾರತದಲ್ಲಿ ಮಾರುತಿ ಜಿಮ್ನಿ ಎಸ್ಯುವಿಗೆ ಭಾರೀ ಡಿಮ್ಯಾಂಡ್: ಪ್ರತಿಸ್ಪರ್ಧಿಗಳಿಗೆ ಹೆಚ್ಚಿದ ಆತಂಕ
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಜ್ಯೂ. ಎನ್‌ಟಿಆರ್ ಮಾಡಬೇಕಿದ್ದ ಆ ರೀಮೆಕ್ ಸಿನಿಮಾ ಚಿರು ಮಾಡಿ ಗೆದ್ದಿದ್ದು ಹೇಗೆ?
ಚಿತ್ರರಂಗದಲ್ಲಿ ಯಾರೋ ಮಾಡಬೇಕಿದ್ದ ಸಿನಿಮಾವನ್ನು ಮತ್ಯಾರೋ ಮಾಡುವುದು ಸರ್ವೇ ಸಾಮಾನ್ಯ. ಒಂದು ಕಥೆಯನ್ನು ನಾಲ್ಕೈದು ಜನ ಹೀರೊಗಳಿಗೆ ನಿರ್ದೇಶಕರು ಹೇಳುತ್ತಾರೆ. ಯಾರು ಒಪ್ಪಿ ಕೊಳ್ಳುತ್ತಾರೋ ಅವರು ನಟಿಸುತ್ತಾರೆ. ಹೀಗೆ ಸಾಕಷ್ಟು ಒಳ್ಳೆ ಸಿನಿಮಾಗಳು ಸ್ಟಾರ್ ನಟರ ಕೈ ತಪ್ಪಿದ್ದು ಇದೆ. ಅದೇ ರೀತಿ ಆ ಕಥೆಯಲ್ಲಿ ಮತ್ತೊಬ್ಬರು ನಟಿಸಿ ಗೆದ್ದಿರುವ ಉದಾಹರಣೆಯೂ ಇದೆ. ತಮಿಳಿನ ಆ ಸೂಪರ್ ಹಿಟ್ ಚಿತ್ರವನ್ನು ಜ್ಯೂ. ಎನ್‌ಟಿಆರ್ ರೀಮೇಕ್ ಮಾಡಬೇಕಿತ್ತು. ಆದರೆ ಚಿರಂಜೀವಿ ಮಾಡಿ ಗೆದ್ದರು.
'ವೀರ ಸಿಂಹರೆಡ್ಡಿ' ಸಿನಿಮಾ ನಿರ್ದೇಶಿಸಿ ಗೆದ್ದಿರುವ ನಿರ್ದೇಶಕ ಗೋಪಿಚಂದ್ ಮಲಿನೇನಿ ತಮಿಳಿನ 'ಕತ್ತಿ' ಚಿತ್ರವನ್ನು ತೆಲುಗಿಗೆ ರೀಮೆಕ್ ಮಾಡಬೇಕು ಎಂದುಕೊಂಡಿದ್ದರು. ನಾಯಕನಾಗಿ ಜ್ಯೂ. ಎನ್‌ಟಿಆರ್ ನಟಿಸಬೇಕಿತ್ತು. 'ಕತ್ತಿ' ಸಿನಿಮಾ ಸಕ್ಸಸ್ ಬೆನ್ನಲ್ಲೇ ಈ ಬಗ್ಗೆ ಟಾಲಿವುಡ್‌ನಲ್ಲಿ ಗುಸುಗುಸು ಕೇಳಿಬಂದಿತ್ತು. ಆದರೆ ಕಾರಣಾಂತರಗಳಿಂದ ಆಗ ಆ ಅವಕಾಶ ಮಿಸ್ ಆಗಿತ್ತು ಎಂದು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. "ಕತ್ತಿ ರೀಮೆಕ್ ನಾನು ಮಾಡಬೇಕಿತ್ತು. ಮುರುಗದಾಸ್ ಕೂಡ ತಾರಕ್ ಜೊತೆ ಮಾತನಾಡಿದ್ದರು. ಈ ಚರ್ಚೆ ನಡೆಯುತ್ತಿದ್ದ ಸಮಯದಲ್ಲೇ ನಿರ್ಮಾಪಕರು ಚಿರಂಜೀವಿಗೆ ರೀಮೇಕ್ ರೈಟ್ಸ್ ಕೊಟ್ಟುಬಿಟ್ಟರು. ಅದೇ ಸಮಯದಲ್ಲಿ ಈ ಚಿತ್ರವನ್ನು ತೆಲುಗಿಗೆ ಡಬ್ ಮಾಡಿ ರಿಲೀಸ್ ಮಾಡಲು ವಿಜಯ್ ನಿರ್ಧರಿಸಿದ್ದರು. ಈ ಕನ್‌ಫ್ಯೂಷನ್‌ನಿಂದ ನಾನು ಸಿನಿಮಾ ಮಾಡಲು ಆಗಲಿಲ್ಲ" ಎಂದಿದ್ದಾರೆ.

ತಾರಕ್‌ಗಾಗಿ ಮತ್ತೊಂದು ಸಿನಿಮಾ ಕೂಡ ಮಾಡಬೇಕಿತ್ತು. ಕಥೆ ಕೇಳಿದ ಯಂಗ್ ಟೈಗರ್ ಆಕ್ಷನ್ ಜಾಸ್ತಿ ಆಯಿತು. ಸ್ವಲ್ಪ ಕಾಮಿಡಿ ಬೇಕು ಎಂದಿದ್ದರು. ಹಾಗಾಗಿ ಆ ಸಿನಿಮಾ ಸಿನಿಮಾ ಕೂಡ ಸಾಧ್ಯವಾಗಲಿಲ್ಲ ಎಂದಿದ್ದಾರೆ. 'ಕತ್ತಿ' ಚಿತ್ರವನ್ನು ಚಿರಂಜೀವಿ ತಮ್ಮ ರೀಎಂಟ್ರಿಗೆ ಬಳಸಿಕೊಂಡಿದ್ದರು. 'ಖೈದಿ ನಂ 150' ಹೆಸರಿನಲ್ಲಿ ವಿ ವಿ ವಿನಾಯಕ್ ಆಕ್ಷನ್ ಕಟ್ ಹೇಳಿದ್ದರು. ಚಿತ್ರದಲ್ಲಿ ಡಬಲ್ ರೋಲ್‌ನಲ್ಲಿ ಚಿರು ಅಬ್ಬರಿಸಿದ್ದರು. ಆಕ್ಷನ್, ಡ್ಯಾನ್ಸ್‌ನಿಂದ ಬಾಸ್ ಈಸ್ ಬ್ಯಾಕ್ ಎನಿಸಿಕೊಂಡರು. ಸ್ವತಃ ಚಿರು ಪುತ್ರ ರಾಮ್‌ಚರಣ್ ಸಿನಿಮಾ ನಿರ್ಮಿಸಿದ್ದರು. 2014ರಲ್ಲಿ ತಮಿಳಿನಲ್ಲಿ ತೆರೆಕಂಡಿದ್ದ 'ಕತ್ತಿ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು.
'ಸೈರಾ ನರಸಿಂಹ ರೆಡ್ಡಿ' ಚಿತ್ರದ ಮೂಲಕ ಕಂಬ್ಯಾಕ್ ಮಾಡಲು ಮುಂದಾಗಿದ್ದ ಚಿರು, ಕೊನೆ ಕ್ಷಣದಲ್ಲಿ ನಿರ್ಧಾರ ಬದಲಿಸಿದ್ದರು. 'ಕತ್ತಿ' ಸಿನಿಮಾ ರೀಮೆಕ್ ಮಾಡಿ ಗೆದ್ದರು. ಆ ನಂತರ 'ಸೈರಾ' ಸಿನಿಮಾ ಒಪ್ಪಿಕೊಂಡರು. ಒಂದೊಳ್ಳೆ ಸಂದೇಶದ ಜೊತೆಗೆ ಬಂದಿದ್ದ ಆಕ್ಷನ್ ಎಂಟರ್‌ಟೈನರ್ 'ಖೈದಿ ನಂ 150' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ರಾಜಕೀಯರಂಗಕ್ಕೆ ಧುಮುಕಿ ಚಿತ್ರರಂಗದಿಂದ 10 ವರ್ಷ ದೂರಾಗಿದ್ದ ಚಿರು, ಈ ಸಿನಿಮಾ ಮೂಲಕ ಭರ್ಜರಿ ರೀಎಂಟ್ರಿ ಕೊಟ್ಟಿದ್ದರು.
ಟಾಲಿವುಡ್
ನಂಬರ್
ಒನ್
ಸ್ಟಾರ್
ಯಾರು?
ಸಮೀಕ್ಷೆಯಲ್ಲಿ
ಶಾಕಿಂಗ್
ಸೀಕ್ರೆಟ್ಸ್
ರಿವೀಲ್!