For Quick Alerts
  ALLOW NOTIFICATIONS  
  For Daily Alerts

  "ನನ್ನ ತಂದೆ ದೇವರ ಸ್ವರೂಪ.. ಅದಕ್ಕೆ ಅವರ ಬಯೋಪಿಕ್‌ನಲ್ಲಿ ನಟಿಸಲ್ಲ": ಮಹೇಶ್ ಬಾಬು

  |

  ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ಈ ವರ್ಷ ಯಾಕೋ ಸರಿಯಿಲ್ಲ. ಅವರ ಕುಟುಂಬದಲ್ಲಿ ಒಂದರ ಹಿಂದೊಂದು ದುರ್ಘಟನೆ ನಡೆಯುತ್ತಲೇ ಇದೆ. ಇವರ ಮಹೇಶ್ ಬಾಬು ತುಂಬಾನೇ ಇಷ್ಟ ಪಡುತ್ತಿದ್ದ ಮೂವರು ನಟರನ್ನು ಕಳೆದುಕೊಂಡು ದು:ಖದಲ್ಲಿದ್ದಾರೆ.

  ಮಹೇಶ್ ಬಾಬುಗೆ ದೇವರ ಸ್ವರೂಪದಂತಿದ್ದ ತಂದೆಯನ್ನು ಕಳೆದುಕೊಂಡು ಅತೀವ ದು:ಖದಲ್ಲಿದ್ದಾರೆ. ಇದೇ ವೇಳೆ ಮಹೇಶ್ ಬಾಬು ಅವರ ತಂದೆಯ ಬಯೋಪಿಕ್‌ ಆಡಿದ ಮಾತುಗಳು ವೈರಲ್ ಆಗುತ್ತಿವೆ. ಈ ವಿಡಿಯೋ ಬಗ್ಗೆ ಈಗ ಚೆರ್ಚೆಯಾಗುತ್ತಿದೆ.

  ಮಹೇಶ್ ಬಾಬು ತಂದೆ ಸೂಪರ್ ಸ್ಟಾರ್ ಕೃಷ್ಣ ನಿಧನಮಹೇಶ್ ಬಾಬು ತಂದೆ ಸೂಪರ್ ಸ್ಟಾರ್ ಕೃಷ್ಣ ನಿಧನ

   'ತಂದೆ ಬಯೋಪಿಕ್‌ನಲ್ಲಿ ನಟಿಸಲ್ಲ'

  'ತಂದೆ ಬಯೋಪಿಕ್‌ನಲ್ಲಿ ನಟಿಸಲ್ಲ'

  ಮಹೇಶ್ ಬಾಬು ತಂದೆ ಟಾಲಿವುಡ್‌ನಲ್ಲಿ ಸೂಪರ್‌ಸ್ಟಾರ್ ಆಗಿ ಮೆರೆದವರು. ಅವರ ಜೀವಿತಾವಧಿಯಲ್ಲಿ ಸುಮಾರು 350ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಪ್ರಿನ್ಸ್ ತಂದೆ ಕೃಷ್ಣ ಹೀರೊ ಆಗಿ ಅಷ್ಟೇ ಅಲ್ಲದೆ, ನಿರ್ಮಾಪಕರಾಗಿ, ನಿರ್ದೇಶಕರಾಗಿಯೂ ಗೆದ್ದವರು. ಹೀಗಾಗಿ 'ಮೇಜರ್' ಸಿನಿಮಾದ ಪ್ರಮೋಷನ್ ವೇಳೆ ನಿಮ್ಮ ತಂದೆಯ ಬಯೋಪಿಕ್‌ನಲ್ಲಿ ನಟಿಸುತ್ತೀರಾ ಎಂದು ಪ್ರಶ್ನೆ ಮಾಡಲಾಗಿತ್ತು. ಈ ವೇಳೆ " ನನಗೆ ನನ್ನ ತಂದೆ ದೇವರ ಸ್ವರೂಪ. ಹಾಗಾಗಿ ಅವರ ಬಯೋಪಿಕ್‌ನಲ್ಲಿ ನಟಿಸುವುದಿಲ್ಲ. ಯಾರಾದರೂ ಸಿನಿಮಾ ಮಾಡಿದರೆ ನಾನು ಆ ಸಿನಿಮಾ ನೋಡುವ ಮೊದಲ ವ್ಯಕ್ತಿಯಾಗಿರುತ್ತೇನೆ. " ಎಂದು ಮಹೇಶ್ ಬಾಬು ಹೇಳಿದ್ದರು. ಆ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

   ಕೃಷ್ಣ ಬದುಕು ಇಂಟ್ರೆಸ್ಟಿಂಗ್

  ಕೃಷ್ಣ ಬದುಕು ಇಂಟ್ರೆಸ್ಟಿಂಗ್

  ತೆಲುಗು ಚಿತ್ರರಂಗದ ಲೆಜೆಂಡ್ ಕೃಷ್ಣ ಅವರ ಬದುಕು ಸಖತ್ ಇಂಟ್ರೆಸ್ಟಿಂಗ್ ಆಗಿದೆ. ಬಯೋಪಿಕ್‌ನಲ್ಲಿ ಹೇಳಲು ಸಾಕಷ್ಟು ವಿಷಯಗಳಿವೆ ಎಂದು ಮಹೇಶ್ ಬಾಬು ಹೇಳಿದ್ದರು. ಸೂಪರ್‌ಸ್ಟಾರ್ ಕೃಷ್ಣ ತೆಲುಗು ಚಿತ್ರರಂಗಕ್ಕೆ ಹೊಸ ಮೆರುಗು ನೀಡಿದವರು. ಹೊಸ ತಂತ್ರಜ್ಞನವನ್ನು ಪರಿಚಯಿಸಿದವರು. ತೆಲುಗು ಅಷ್ಟೇ ಅಲ್ಲ. ಬಾಲಿವುಡ್ ಸಿನಿಮಾಗಳನ್ನೂ ನಿರ್ಮಾಣ ಮಾಡಿದ್ದರು. ಸಿನಿಮಾ ಅಷ್ಟೇ ಯಾಕೆ ರಾಜಕೀಯಕ್ಕೂ ಧುಮುಕ್ಕಿದ್ದವರು. ಹೀಗಾಗಿ ಅವರು ಬದುಕು ತೆರೆಮೇಲೆ ನೋಡಲು ಇಂಟ್ರೆಸ್ಟಿಂಗ್ ಆಗಿರುತ್ತೆ.

   ಸೂಪರ್‌ಸ್ಟಾರ್ ಕೃಷ್ಣಗೆ ಕುಟುಂಬವೇ ಜಗತ್ತು!

  ಸೂಪರ್‌ಸ್ಟಾರ್ ಕೃಷ್ಣಗೆ ಕುಟುಂಬವೇ ಜಗತ್ತು!

  ಟಾಲಿವುಡ್ ದಿಗ್ಗಜನ ಅಗಲಿಕೆ ಸಿನಿಮಾ ಕುಟುಂಬಕ್ಕೆ ನೋವನ್ನುಂಟು ಮಾಡಿದೆ. ಹೀಗಾಗಿ ಅವರ ಕುಟುಂಬ ಸಂದೇಶವನ್ನು ರವಾನೆ ಮಾಡಿತ್ತು. " ಕೃಷ್ಣ ಅವರ ಕೆಲಸದಲ್ಲಿ ಸದಾ ಜೀವಂತವಾಗಿರುತ್ತಾರೆ. ಪ್ರತಿ ದಿನ ಪ್ರತಿ ಕ್ಷಣವನ್ನು ಅವರನ್ನು ಮಿಸ್ ಮಾಡಿಕೊಳ್ಳುತ್ತೇವೆ. ಎಲ್ಲದಕ್ಕಿಂತ ಹೆಚ್ಚಾಗಿ ಅವರು ನಮ್ಮನ್ನು ಪ್ರೀತಿಸಿದ್ರು. ದಿನ ಕಳೆದಂತೆ ನಾವು ಕೂಡ ಅವರನ್ನು ಮತ್ತಷ್ಟು ಮಿಸ್ ಮಾಡಿಕೊಳ್ಳುತ್ತೇವೆ. ಆದರೆ ಅವರು ಹೇಳಿದಂತೆ ಮತ್ತೆ ನಾನು ಭೇಟಿಯಾಗುವವರೆಗೆ ಗುಡ್‌ಬೈ ಅನ್ನೋ ಯಾವಾಗಲೂ ಶಾಶ್ವತವಲ್ಲ." ಎಂದು ಅಭಿಮಾನಿಗಳಿಗೆ ಸಂದೇಶ ಕೊಟ್ಟಿದ್ದಾರೆ.

   ಮೂವರು ಸದಸ್ಯರ ಅಗಲಿಕೆ

  ಮೂವರು ಸದಸ್ಯರ ಅಗಲಿಕೆ

  ಮಹೇಶ್ ಬಾಬು ಈ ವರ್ಷ ತಮ್ಮ ಕುಟುಂಬದ ಮೂವರು ಸದಸ್ಯರನ್ನು ಕಳೆದುಕೊಂಡಿದ್ದಾರೆ. ಮೊದಲು ಹಿರಿಯ ಸಹೋದರ ರಮೇಶ್ ಬಾಬು ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದರು. ಎರಡು ತಿಂಗಳ ಹಿಂದಷ್ಟೇ ತಾಯಿ ಇಂದಿರಾ ದೇವಿ ಅಗಲಿದ್ದರು. ಈಗ ತಂದೆ ಇಹಲೋಕ ತ್ಯಜಿಸಿದ್ದಾರೆ. ಮಹೇಶ್ ಬಾಬು ಈ ವರ್ಷದಲ್ಲಿ ತಾನು ಹೆಚ್ಚು ಪ್ರೀತಿಸುತ್ತಿದ್ದ ಮೂವರು ಸದಸ್ಯರನ್ನು ಕಳೆದುಕೊಂಡು ನೋವಿನಲ್ಲಿದ್ದಾರೆ.

  English summary
  His Father Is God Figure That's Why He Will Not Make Biopic: Mahesh Babu Old Video Goes Viral, Know More.
  Wednesday, November 16, 2022, 6:45
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X