For Quick Alerts
  ALLOW NOTIFICATIONS  
  For Daily Alerts

  ಕೊಲೆ ಮಾಡುವ 'ಕೋಳಿ ತಲೆ': ಭಯ ಹುಟ್ಟಿಸುತ್ತಿದೆ ಹಿಟ್ ಸಿನಿಮಾ ಸೀಕ್ವೆಲ್ ಟ್ರೈಲರ್

  |

  ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳು ಇತ್ತೀಚೆಗೆ ಹೆಚ್ಚು ಸದ್ದು ಮಾಡುತ್ತಿವೆ. ಹಲವು ಹೊಸ ನಿರ್ದೇಶಕರು ಗುಣಮಟ್ಟದ ಸಸ್ಪೆನ್ಸ್ ಥ್ರಿಲ್ಲರ್ ಕತೆಗಳನ್ನು ದಕ್ಷಿಣ ಭಾರತದಲ್ಲಿ ಕಟ್ಟಿಕೊಡುತ್ತಿದ್ದಾರೆ. 'ದೃಶ್ಯಂ' ಸಿನಿಮಾ ಭರ್ಜರಿ ಯಶಸ್ಸು ಗಳಿಸಿದ ಬಳಿಕ ಈ ಮಾದರಿಯ ಸಿನಿಮಾ ನಿರಮಿಸುವವರ ಸಂಖ್ಯೆ ಹೆಚ್ಚಾಗಿದೆ.

  ಬಹುತೇಕ ಹೊಸಬರೇ ಈ ಮಾದರಿಯ ಸಿನಿಮಾಗಳಿಗೆ ಕೈ ಹಾಕುತ್ತಿದ್ದು ಯಶಸ್ಸನ್ನೂ ಕಾಣುತ್ತಿದ್ದಾರೆ. 2020 ರಲ್ಲಿ ತೆರೆ ಕಂಡಿದ್ದ 'ಹಿಟ್' ಹೆಸರಿನ ಇದಕ್ಕೆ ಉದಾಹರಣೆ. ಈ ಸಿನಿಮಾ ನೇರವಾಗಿ ಒಟಿಟಿ ಬಿಡುಗಡೆ ಆಗಿ ಭಾರಿ ದೊಡ್ಡ ಪ್ರಶಂಸೆಗೆ ಪಾತ್ರವಾಯಿತು.

  'ಗಂಧದ ಗುಡಿ' ಸಿನಿಮಾ ನೋಡಿದ ಜಪಾನಿನ ಅಪ್ಪು ಅಭಿಮಾನಿಗಳು!'ಗಂಧದ ಗುಡಿ' ಸಿನಿಮಾ ನೋಡಿದ ಜಪಾನಿನ ಅಪ್ಪು ಅಭಿಮಾನಿಗಳು!

  ಮಹಿಳೆಯರನ್ನು ಅರಸಿ ಕೊಲೆ ಮಾಡುವ ಪೊಲೀಸ್ ಅಧಿಕಾರಿಯೊಬ್ಬನನ್ನು ಇನ್ನೊಬ್ಬ ಪೊಲೀಸ್ ಅಧಿಕಾರಿ ಹುಡುಕುವ ಕತೆಯನ್ನು ಸಿನಿಮಾ ಒಳಗೊಂಡಿತ್ತು. ಈ ಸಿನಿಮಾ ಹಿಂದಿಗೂ ರೀಮೇಕ್ ಆಗಿ ಗಮನ ಸೆಳೆಯಿತು. ಇದೀಗ ಈ ಸಿನಿಮಾದ ಸೀಕ್ವೆಲ್ ತಯಾರಾಗಿದ್ದು, ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಮೊದಲ ಸಿನಿಮಾಕ್ಕಿಂತಲೂ ಹೆಚ್ಚಿನ ಥ್ರಿಲ್ಲರ್ ಅಂಶಗಳನ್ನು ಸಿನಿಮಾ ಒಳಗೊಂಡಿರುವ ಸುಳಿವನ್ನು ಟ್ರೈಲರ್ ನೀಡಿದೆ.

  ಮೊದಲ ಸಿನಿಮಾದಲ್ಲಿ ನಾಯಕ ನಟನಾಗಿ ನಟಿಸಿದ್ದ ವಿಶ್ವಕ್ ಸೇನ್ ಬದಲಾಗಿ 'ಹಿಟ್ 2' ನಲ್ಲಿ ಅಡವಿಶೇಷ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಮೊದಲ ಸಿನಿಮಾದಲ್ಲಿರುವಂತೆಯೇ ಇಲ್ಲೂ ಸಹ ಪೊಲೀಸ್ ಹಾಗೂ ಕೊಲೆಗಾರನ ನಡುವಿನ 'ಕ್ಯಾಟ್ ಆಂಡ್ ಮೌಸ್' ಆಟಗಳು ನಡೆಯುತ್ತಿವೆ. ಆದರೆ ಮೊದಲ ಸಿನಿಮಾಕ್ಕಿಂತಲೂ ಭೀಕರ, ನಿರ್ಧಯಿ ಕೊಲೆಗಾರನ ಬೆನ್ನುಹತ್ತಿದ್ದಾರೆ ಪೊಲೀಸರು.

  'ಕೋಳಿ ತಲೆ' ಕೊಲೆಗಾರ!

  'ಕೋಳಿ ತಲೆ' ಕೊಲೆಗಾರ!

  ಟ್ರೈಲರ್‌ನಲ್ಲಿ ತೋರಿಸಲಾಗಿರುವ ಕೆಲವು ದೃಶ್ಯ ಹಾಗೂ ಸಂಭಾಷಣೆಗಳೇ ಬೆನ್ನುಮೂಳೆಯಲ್ಲಿ ಭಯ ಏಳುವಂತಿವೆ. 'ಈ ರೀತಿಯ ಕೊಲೆಗಾರರು ಬಹಳ ದಡ್ಡರಾಗಿರುತ್ತಾರೆ, ಕೋಳಿ ತಲೆಯಂಥಹಾ ಬುದ್ಧಿಮತ್ತೆ ಇವರದ್ದು, ಐದು ನಿಮಿಷದಲ್ಲಿ ಇಂಥಹವರನ್ನು ಹಿಡಿದುಬಿಡುತ್ತೀವಿ' ಎಂದು ಪೊಲೀಸ್ ಅಧಿಕಾರಿ ಪಾತ್ರಧಾರಿ ಅಡವಿಶೇಷ್ ಹೇಳಿದ್ದನ್ನು ಅವಮಾನವಾಗಿ ಪರಿಗಣಿಸುವ ಹಂತಕ ಕೊಲೆ ಮಾಡಿ 'ಕೋಳಿ ತಲೆ' (ಕೋಡಿ ಬುರ್ಲು) ಎಂದು ರಕ್ತದಲ್ಲಿ ಬರೆವ ವಿಕೃತ ಕೊಲೆಗಾರನನ್ನು ಪೊಲೀಸ್ ಬೆನ್ನಟ್ಟುವ ಕತೆಯನ್ನು ಸಿನಿಮಾ ಒಳಗೊಂಡಿದೆ.

  ಪೊಲೀಸ್ ಅಧಿಕಾರಿಗೆ ಹಲವು ಆತಂಕ

  ಪೊಲೀಸ್ ಅಧಿಕಾರಿಗೆ ಹಲವು ಆತಂಕ

  ತನ್ನದೇ ಹೇಳಿಕೆಯನ್ನು ಇಟ್ಟುಕೊಂಡು ಹಗೆ ಸಾಧಿಸುತ್ತಿರುವ ಅತ್ಯಂತ ಅಮಾನುಷವಾಗಿ ಕೊಲೆಗಳನ್ನು ಮಾಡುತ್ತಿರುವ ವ್ಯಕ್ತಿಯ ಹುಡುಕಾಟಕ್ಕೆ ಅಡವಿಶೇಷ್‌ ನಿರ್ವಹಿಸಿರುವ ಪೊಲೀಸ್ ಅಧಿಕಾರಿ ಪಾತ್ರಕ್ಕೆ ಹಲವು ಅಡ್ಡಿಗಳು ಎದುರಾಗುತ್ತವೆ. ಇಲಾಖೆಯಲ್ಲಿನ ಸಮಸ್ಯೆಗಳು, ಅಧಿಕಾರದ ಮಿತಿಯ ಸಮಸ್ಯೆ, ಕೊಲೆಗಾರನ ಅದ್ಭುತ ಬುದ್ಧಿಮತ್ತೆ, ಕೊಲೆಗಾರ ತನ್ನನ್ನೇ ಗುರಿ ಮಾಡಿಕೊಳ್ಳುವ ಆತಂಕ ಎಲ್ಲವನ್ನೂ ಮೀರಿ ಪೊಲೀಸ್ ಅಧಿಕಾರಿ ಕೊಲೆಗಾರನನ್ನು ಹೇಗೆ ಹಿಡಿಯುತ್ತಾನೆಂಬುದು ಸಿನಿಮಾದ ಕತೆ.

  ಟ್ರೈಲರ್ ಅದ್ಭುತವಾಗಿದೆ

  ಟ್ರೈಲರ್ ಅದ್ಭುತವಾಗಿದೆ

  'ಹಿಟ್ 2' ಸಿನಿಮಾದ ಟ್ರೈಲರ್, ಇಡೀಯ ಸಿನಿಮಾದ ಸೂಕ್ಷ್ಮ ದರ್ಶನವನ್ನು ಮಾಡಿಸುತ್ತದೆ. ಕತೆ ಹೇಗೆ ಆರಂಭವಾಗುವ ಬಗ್ಗೆ ಒಂದು ಸುಳಿವು, ಕೊಲೆಗಾರ ಎಂಥಹವರನ್ನು ಗುರಿ ಮಾಡಿಕೊಳ್ಳುತ್ತಾನೆ ಎಂಬುದಕ್ಕೊಂದು ಸುಳಿವು, ಕೊಲೆಗಾರ ಎಷ್ಟು ಭೀಕರವಾಗಿ ಕೊಲೆ ಮಾಡುತ್ತಿದ್ದಾನೆ ಎಂಬುದರ ಬಗ್ಗೆ ಒಂದು ದೃಶ್ಯ, ಪೊಲೀಸ್ ತನಿಖಾಧಿಕಾರಿಗೆ ಎದುರಾಗುವ ಅಡ್ಡಿಗಳ ಬಗ್ಗೆ ಒಂದು ದೃಶ್ಯ, ಕೊಲೆಗಾರನ ಬಗ್ಗೆ ಪೊಲೀಸರಿಗೆ ಸಿಕ್ಕ ಸುಳಿವಿನ ಬಗ್ಗೆ ಒಂದು ದೃಶ್ಯ ಹೀಗೆ ಹಲವು ಸಣ್ಣ ಸಣ್ಣ ದೃಶ್ಯಗಳನ್ನು ಸೇರಿಸಿ ಒಟ್ಟಾರೆ ಸಿನಿಮಾದ ಬಗ್ಗೆ ದೊಡ್ಡ ಕುತೂಹಲವನ್ನು ಹುಟ್ಟುಹಾಕಲು ಟ್ರೈಲರ್ ಯಶಸ್ವಿಯಾಗಿದೆ.

  ಸೈಲೇಶ್ ಕೋಲನು ನಿರ್ದೇಶನ

  ಸೈಲೇಶ್ ಕೋಲನು ನಿರ್ದೇಶನ

  'ಹಿಟ್' ಮೊದಲ ಸಿನಿಮಾ ನಿರ್ದೇಶಿಸಿದ್ದ ಸೈಲೇಶ್ ಕೊಲನು ಅವರೇ ಎರಡನೇ ಭಾಗವನ್ನೂ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾವನ್ನು ಪ್ರಶಾಂತ್ ತಿಪ್ಪರಿನೇನಿ ಹಾಗೂ ಸ್ಟಾರ್ ನಟ ನಾನಿ ನಿರ್ಮಾಣ ಮಾಡಿದ್ದಾರೆ. ಸಿನಿಮಾದಲ್ಲಿ ಅಡವಿಶೇಷ್ ಜೊತೆಗೆ ಮೀನಾಕ್ಷಿ ಚೌಧರಿ, ರಾವ್ ರಮೇಶ್, ತನಿಕೇಳ ಭರಣಿ, ಪೋಸಾನಿ ಕೃಷ್ಣ ಮುರಳಿ ನಟಿಸಿದ್ದಾರೆ. ಸಂಗೀತ ಎಂಎಂ ಶ್ರೀಲೇಖ, ಸುರೇಶ್ ಬೊಬ್ಬಿಲಿ ಹಾಗೂ ಜಾನ್ ಸ್ಟಿವರ್ಟ್ ಎಡ್ವೀರಿ ನೀಡಿದ್ದಾರೆ. ಸಿನಿಮಾಕ್ಕೆ ಕ್ಯಾಮೆರಾ ಹಿಡಿದಿರುವುದು ಮಣಿ ಕಂಧನ್. ಈ ಸಿನಿಮಾವು ಡಿಸೆಂಬರ್ 02 ರಂದು ತೆರೆಗೆ ಬರಲಿದೆ.

  English summary
  Hit The second case Telugu movie trailer released. Movie is releasing on December 02. Trailer becoming viral on social media.
  Wednesday, November 23, 2022, 14:51
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X