For Quick Alerts
  ALLOW NOTIFICATIONS  
  For Daily Alerts

  "ನಾನು ಸಿನಿಮಾ ಮಾಡೋದು ದುಡ್ಡಿಗಾಗಿ, ಪ್ರಶಸ್ತಿ‌ಗಾಗಿ ಅಲ್ಲ": ಮೌಳಿ ಟಾಂಗ್ ಕೊಟ್ಟಿದ್ದು ಯಾರಿಗೆ?

  |

  ಸಿನಿಮಾ ಸಕ್ಸಸ್ ಅಂದ್ರೆ ಏನು ಎಂದು ಕೇಳಿದರೆ ಒಬ್ಬೊಬ್ಬರು ಒಂದೊಂದು ಉತ್ತರ ಕೊಡ್ತಾರೆ. ಆದರೆ ಬಹುತೇಕರು ಹೇಳುವುದು ಬಾಕ್ಸಾಫೀಸ್ ಕಲೆಕ್ಷನ್. ಯಾವ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೆಚ್ಚು ಕಲೆಕ್ಷನ್ ಮಾಡುತ್ತೋ ಅದೇ ಯಶಸ್ವಿ ಸಿನಿಮಾ. ಯಾಕಂದ್ರೆ ಬಾಕ್ಸಾಫೀಸ್‌ನಲ್ಲಿ ಗೆದ್ದ ಚಿತ್ರದಿಂದ ನಿರ್ಮಾಪಕ ಸೇಫ್, ನಿರ್ದೇಶಕ, ನಟ-ನಟಿಯರಿಗೆ ಸಂಭಾವನೆ ಜೊತೆ ಮತ್ತಷ್ಟು ಅವಕಾಶಗಳು ಸಿಗುತ್ತದೆ.

  ನಿರ್ದೇಶಕ ರಾಜಮೌಳಿ ಕೂಡ ಇದೇ ಮಾತನ್ನು ಒಪ್ಪುತ್ತಾರೆ. ನಾನು ದುಡ್ಡಿಗಾಗಿಯೇ ಸಿನಿಮಾ ಮಾಡುವುದು ಎಂದು ಹೇಳಿದ್ದಾರೆ. ನನ್ನ ಪ್ರತಿ ಸಿನಿಮಾದ ಗುರಿ ಕಲೆಕ್ಷನ್ ಎಂದಿದ್ದಾರೆ. ಇತ್ತೀಚೆಗೆ ಜಕ್ಕಣ್ಣ ನಿರ್ದೇಶನದ RRR ಚಿತ್ರದ 'ನಾಟು ನಾಟು' ಹಾಡಿಗೆ ಗೋಲ್ಡನ್ ಗ್ಲೋಬ್ ಅವಾರ್ಡ್ ಸಿಕ್ಕಿತ್ತು. ಕಳೆದ ವರ್ಷ ಬಿಡುಗಡೆಯಾಗಿದ್ದ RRR ಸಿನಿಮಾ ಬಾಕ್ಸಾಫೀಸ್‌ನಲ್ಲಿ 1200 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ಮೌಳಿ, ಕೀರವಾಣಿ, ಚರಣ್, ತಾರಕ್ ದಂಪತಿ ಸಮೇತ ಅವಾರ್ಡ್ ಸೆರೆಮನಿಯಲ್ಲಿ ಭಾಗಿ ಆಗಿದ್ದರು. ಪ್ರಧಾನಿ ಮೋದಿ ಆದಿಯಾಗಿ ಇಡೀ ದೇಶವೇ ಈ ಸಾಧನೆಗೆ ಅಭಿನಂದನೆ ಸಲ್ಲಿಸಿತ್ತು.

  ಮೆಗಾ vs ಅಲ್ಲು: ಚಿರಂಜೀವಿ ಛಾಯೆಯಿಂದ ಹೊರ ಬರ್ತಿದ್ದಾರಾ ಅಲ್ಲು ಅರ್ಜುನ್? ಚಿರು ಹೇಳಿದ್ದಿಷ್ಟುಮೆಗಾ vs ಅಲ್ಲು: ಚಿರಂಜೀವಿ ಛಾಯೆಯಿಂದ ಹೊರ ಬರ್ತಿದ್ದಾರಾ ಅಲ್ಲು ಅರ್ಜುನ್? ಚಿರು ಹೇಳಿದ್ದಿಷ್ಟು

  ರಾಜಮೌಳಿ ಸೋಲಿಲ್ಲದ ಸರದಾರ ಎಂದೇ ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದಾರೆ. ಒಂದಕ್ಕಿಂತ ಒಂದು ಅದ್ಭುತ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ನೊಣವನ್ನು, ಹಾಸ್ಯ ನಟನನ್ನು ಹೀರೊ ಆಗಿ ಸಕ್ಸಸ್ ಕಂಡಿದ್ದಾರೆ.

  ಸಿನಿಮಾ ಕಲೆಕ್ಷನ್ ಮುಖ್ಯ

  ಸಿನಿಮಾ ಕಲೆಕ್ಷನ್ ಮುಖ್ಯ

  ಹಾಲಿವುಡ್ ಪಬ್ಲಿಕೇಷನ್‌ಗೆ ನೀಡಿದ ಸಂದರ್ಶನದಲ್ಲಿ ನಿರ್ದೇಶಕ ರಾಜಮೌಳಿ ತಮ್ಮ ಸಕ್ಸಸ್ ಬಗ್ಗೆ ಮಾತನಾಡಿದ್ದಾರೆ. "ನಾನು ಹಣಕ್ಕಾಗಿ, ಪ್ರೇಕ್ಷಕರಿಗೆ ಸಿನಿಮಾ ಮಾಡುತ್ತೇನೆ. ಅದು ಬಿಟ್ಟು ವಿಮರ್ಶೆ, ಪ್ರಶಂಸೆಗಾಗಿ ಅಲ್ಲ. RRR ಕಮರ್ಷಿಯಲ್ ಸಿನಿಮಾ. ನನ್ನ ಸಿನಿಮಾ ಕಮರ್ಷಿಯಲ್ ಆಗಿ ಗೆದ್ದರೆ ಬಹಳ ಖುಷಿ ಪಡುತ್ತೇನೆ. ಇನ್ನು ಅವಾರ್ಡ್‌ ಕೂಡ ಬಂದರೆ ಆ ಸಂತೋಷ ದುಪ್ಪಟ್ಟಾಗುತ್ತದೆ. ನಮ್ಮ ತಂಡದ ಶ್ರಮಕ್ಕೆ ನಾನು ಬಹಳ ಸಂತಸದಿಂದ ಇದ್ದೇನೆ" ಎಂದಿದ್ದಾರೆ.

  ಆಗಿದ್ದು ಆಯಿತು ಮುಂದೇನು?

  ಆಗಿದ್ದು ಆಯಿತು ಮುಂದೇನು?

  "RRR ಸಿನಿಮಾ ಆಸ್ಕರ್‌ಗೆ ಎಂಟ್ರಿ ಆಗದೇ ಇರುವ ಬಗ್ಗೆ ನಿರಾಸೆ ಆಗಿದ್ದು ನಿಜ. ಆದರೆ ಹಳೆಯದನ್ನೇ ಯೋಚಿಸುತ್ತಾ ಕೂರುವವರು ನಾವಲ್ಲ. ಆಗಿದ್ದು ಆಗಿ ಹೋಯಿತು. ನಾವು ಅದನ್ನು ಮರೆತು ಮುಂದೆ ಸಾಗಬೇಕು. ಇನ್ನೊಂದು ಚಿತ್ರ 'ಚೆಲ್ಲೋ ಶೋ' ಸಿನಿಮಾ ಎಂಟ್ರಿ ಆಗಿದ್ದಕ್ಕೆ ನಾನು ಸಂತೋಷಪಟ್ಟೆ. ವಿದೇಶಿಯರೂ ಕೂಡ RRR ಸಿನಿಮಾ ನಾಮಿನೇಟ್ ಆಗಿದ್ದರೆ ಪ್ರಶಸ್ತಿ ಬರುವ ಅವಕಾಶ ಹೆಚ್ಚಿತ್ತು ಎಂದು ಭಾವಿಸುತ್ತಿದ್ದಾರೆ. ಆದರೆ, ಫಿಲಿಂ ಫೆಡರೇಶನ್ ಆಫ್ ಇಂಡಿಯಾ ನಿಯಮಗಳು ನನಗೆ ತಿಳಿದಿಲ್ಲ. ಆದ್ದರಿಂದ ಅದರ ಬಗ್ಗೆ ನಾನು ಮಾತನಾಡಲು ಬಯಸುವುದಿಲ್ಲ" ಎಂದಿದ್ದಾರೆ.

  ಸಿಸಿಎ ಜೊತೆ ಒಪ್ಪಂದ ನಿಜ

  ಸಿಸಿಎ ಜೊತೆ ಒಪ್ಪಂದ ನಿಜ

  "ಪಾಶ್ಚಾತ್ಯ ದೇಶಗಳಲ್ಲಿ RRR ಸಿನಿಮಾಗೆ ಅದ್ಭುತ ಪ್ರತಿಕ್ರಿಯೆ ಸಿಗುವ ಮೊದಲೇ ನಾನು ಮಹೇಶ್ ಬಾಬು ಸಿನಿಮಾ ಘೋಷಿಸಿದ್ದೆ. 10 ವರ್ಷಗಳಿಂದ ಈ ಸಿನಿಮಾ ಮುಂದೂಡಲಾಗುತ್ತಿದೆ. ಗ್ಲೋಬಲ್ ಅಡ್ವೆಂಚರಸ್ ಸಿನಿಮಾ ಆಗಿ ಅದನ್ನು ಮಾಡುತ್ತಿದ್ದೇವೆ. ಸದ್ಯ ಕಥೆ ಹೆಣೆಯುವ ಕೆಲಸ ಚಾಲ್ತಿಯಲ್ಲಿದೆ. ಈ ಸಿನಿಮಾಗಾಗಿ ಸಿಎಎ ಜೊತೆ ಒಪ್ಪಂದ ಮಾಡಿಕೊಂಡಿದ್ದೇನೆ. ಆ ಮೂಲಕ ಪ್ರಪಂಚದ ಸಿನಿಮಾವನ್ನು ಅರ್ಥ ಮಾಡಿಕೊಳ್ಳುವ ಪ್ರತಿಭೆಗಳ ಪರಿಚಯವಾಯಿತು. ಭಾರತದಲ್ಲಿ ಫಿಲ್ಮ್ ಮೇಕಿಂಗ್, ಯೂಎಸ್‌ ಫಿಲ್ಮ್ ಮೇಕಿಂಗ್ ಎರಡು ಕೂಡ ಭಿನ್ನ. ಏನು ಮಾಡಬೇಕು? ಸಿನಿಮಾ ಹೇಗೆ ಮಾಡಬೇಕು? ಎಂದು ಯೋಚಿಸಲು ಇನ್ನು ಸಮಯ ಬೇಕು" ಎಂದು ಮೌಳಿ ತಿಳಿಸಿದ್ದಾರೆ.

  ಏನಿದು ಸಿಎಎ?

  ಏನಿದು ಸಿಎಎ?

  ಬಹಳ ಹಿಂದೆಯೇ ಮೌಳಿ ಸಿಎಎ ಜೊತೆ ಒಪ್ಪಂದ ಮಾಡಿಕೊಂಡಿರುವ ಸುದ್ದಿ ಬಂದಿತ್ತು. ಅದನ್ನು ಈಗ ಒಪ್ಪಿಕೊಂಡಿದ್ದಾರೆ. ಅಷ್ಟಕ್ಕೂ ಏನಿದು ಸಿಸಿಎ ಎಂದು ನೋಡುವುದಾದರೆ, 'ಕ್ರಿಯೇಟಿವ್ ಆರ್ಟಿಸ್ಟ್ ಏಜೆನ್ಸಿ' ಇದು. ಪ್ರಪಂಚದ ನೂರಾರು ಸಿನಿಮಾ ತಂತ್ರಜ್ಞರು, ಕಲಾವಿದರು ಇದರ ಸದಸ್ಯರಾಗಿದ್ದಾರೆ. ಅಂದರೆ ಸಿನಿಮಾ ನಿರ್ಮಾಣದ ವಿವಿಧ ನುರಿತವರಾದ ಇವರೆಲ್ಲಾ ಒಪ್ಪಂದದ ಮೇರೆಗೆ ಯಾವುದೇ ಸಿನಿಮಾದಲ್ಲಿ ಕೆಲಸ ಮಾಡುತ್ತಾರೆ. ಇದೀಗ ಹಾಲಿವುಡ್ ಮಂದಿ ಕೂಡ ಭಾರತದ ಸಿನಿಮಾಗಳಲ್ಲಿ ಕೆಲಸ ಮಾಡಲು ಉತ್ಸುಕರಾಗಿದ್ದಾರೆ. ಈ ಒಪ್ಪಂದದಿಂದ ಮೌಳಿ ತಮ್ಮ ಮುಂದಿನ ಚಿತ್ರಕ್ಕೆ ಹಾಲಿವುಡ್ ಕಲಾವಿದರು, ತಂತ್ರಜ್ಞರನ್ನು ಅಖಾಡಕ್ಕೆ ಇಳಿಸಲಿದ್ದಾರೆ. ಮಹೇಶ್ ಬಾಬು ಜೊತೆ ಹಾಲಿವುಡ್ ರೇಂಜ್ ಸಿನಿಮಾ ಮಾಡೋದು ಪಕ್ಕಾ ಆಗಿದೆ.

  English summary
  I make films for money, not for awards: SS Rajamouli. He also said I signed with CAA For SSMB29. know more.
  Friday, January 20, 2023, 18:56
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X