Don't Miss!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Sports
IND VS AUS Test: ಟೆಸ್ಟ್ ಸರಣಿಯಲ್ಲಿ ಕೆಎಲ್ ರಾಹುಲ್ ವಿಕೆಟ್ ಕೀಪರ್ ಅಲ್ಲ: ಪದಾರ್ಪಣೆ ಮಾಡಲು ಸಜ್ಜಾದ ವಿಕೆಟ್ ಕೀಪರ್
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ನರೇಶ್-ಪವಿತ್ರಾ ಮದುವೆಯಾಗಲು ಬಿಡೆನು: ಗುಡುಗಿದ ಮಾಜಿ ಪತ್ನಿ ರಮ್ಯಾ
ತೆಲುಗು ನಟ ನರೇಶ್ ಹಾಗೂ ಕನ್ನಡತಿ ಪವಿತ್ರಾ ಲೋಕೇಶ್‌ರ ಲಿಪ್‌ಲಾಕ್ ವಿಡಿಯೋ ವೈರಲ್ ಆಗುತ್ತಿದ್ದಂತೆ ಅವರ ವಿವಾದಾತ್ಮಕ ಸಂಬಂಧದ ಕುರಿತ ಚರ್ಚೆಗಳು ಮತ್ತೆ ಮುನ್ನೆಲೆಗೆ ಬಂದಿದೆ. ಕಳೆದ ಕೆಲ ಸಮಯದಿಂದ ಮೌನವಾಗಿದ್ದ ನರೇಶ್‌ರ ಮೂರನೇ ಪತ್ನಿ ರಮ್ಯಾ ರಘುಪತಿ, ಮತ್ತೊಮ್ಮೆ ನರೇಶ್ ವಿರುದ್ಧ ಗುಡುಗಿದ್ದಾರೆ.
ಪವಿತ್ರಾ ಲೋಕೇಶ್ ಹಾಗೂ ನರೇಶ್ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದು, ಕೆಲವು ದಿನಗಳ ಹಿಂದಷ್ಟೆ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದರು. ವಿಡಿಯೋದಲ್ಲಿ ನರೇಶ್ ಹಾಗೂ ಪವಿತ್ರಾ ಲೋಕೇಶ್ ಇಬ್ಬರೂ ಶಾಂಪೇನ್ ಗ್ಲಾಸ್ ಹಿಡಿದುಕೊಂಡು ಪರಸ್ಪರ ತುಟಿಗೆ ತುಟಿಯೊತ್ತಿದ್ದರು. ಈ ವಿಡಿಯೋ ನೋಡಿದ ಹಲವರು ಟೀಕೆ ವ್ಯಕ್ತಪಡಿಸಿದ್ದರು. ಈ ವಯಸ್ಸಿನಲ್ಲಿ ಇದೇನಿದು? ಎಂದು ಮೂಗುಮುರಿದಿದ್ದರು. ಇಬ್ಬರೂ ಮದುವೆಯಾಗುತ್ತಿರುವುದನ್ನು ಘೋಷಿಸಲು ಹೀಗೆ ಮಾಡಿದ್ದಾರೆ ಎಂಬ ಚರ್ಚೆಯೂ ನಡೆದಿತ್ತು. ಕೊನೆಗೆ ಇದು ಸಿನಿಮಾ ಒಂದರ ಪ್ರಮೋಷನ್‌ಗೆ ಮಾಡಿದ ಲಿಪ್‌ಲಾಕ್ ಎಂಬ ಸುದ್ದಿ ಹೊರಬಿತ್ತು.
ಆದರೆ ಲಿಪ್‌ಲಾಕ್ ವಿಡಿಯೋ ವೈರಲ್ ಆಗುತ್ತಿದ್ದಂತೆ ನರೇಶ್‌ರ ಮೂರನೇ ಪತ್ನಿ, ಕನ್ನಡತಿಯಾದ ರಮ್ಯಾ ರಘುಪತಿ ನರೇಶ್ ಹಾಗೂ ಪವಿತ್ರಾ ಲೋಕೇಶ್ ವಿರುದ್ಧ ಆಕ್ರೋಶ ಹೊರಹಾಕಿದ್ದು, ನರೇಶ್ ಹಾಗೂ ಪವಿತ್ರಾ ಲೋಕೇಶ್ ಮದುವೆಯಾಗಲು ಬಿಡುವುದಿಲ್ಲ ಎಂದಿದ್ದಾರೆ.

ನರೇಶ್‌ಗೆ ಆಸ್ತಿಯಲ್ಲಿ ಭಾಗವಿಲ್ಲ: ರಮ್ಯಾ
ನರೇಶ್ ತಮ್ಮ ಮೂರನೇ ಪತ್ನಿ ರಮ್ಯಾ ರಘುಪತಿಗೆ ವಿಚ್ಛೇದನ ನೀಡಿಲ್ಲ. ಇವರಿಬ್ಬರ ವಿವಾಹ ಪ್ರಕರಣ ಪ್ರಸ್ತುತ ಕೋರ್ಟ್‌ನಲ್ಲಿದೆ. ಆತ ನನ್ನನ್ನು ಮದುವೆಯಾಗಿದ್ದಿದ್ದೆ ತಮ್ಮ ರಾಜಕೀಯ ಮಹಾತ್ವಾಕಾಂಕ್ಷೆ ಪೂರೈಸಿಕೊಳ್ಳಲು. ಆಗಲೇ ನರೇಶ್‌ರ ತಾಯಿ ವಿಜಯ ನಿರ್ಮಲಾ ನರೇಶ್‌ಗೆ ಎಚ್ಚರಿಕೆ ಕೊಟ್ಟಿದ್ದರು, ರಮ್ಯಾ ರಘುಪತಿಗೆ ಹಿಂಸೆ ಕೊಡುವುದು ಮಾಡಿದರೆ ಆಸ್ತಿಯಲ್ಲಿ ಒಂದು ಪೈಸೆಯೂ ಕೊಡುವುದಿಲ್ಲವೆಂದು. ಅದೇ ಕಾರಣಕ್ಕೆ ತಾಯಿ ತೀರಿ ಹೋಗುವವರೆಗೆ ಸುಮ್ಮನಿದ್ದು ಬಳಿಕ ಪವಿತ್ರಾ ಜೊತೆ ಸಂಬಂಧ ಬೆಳೆಸಿದ್ದಾನೆ ಎಂದಿದ್ದಾರೆ.

ಲಿಪ್ ಲಾಕ್ ವಿಡಿಯೋ ಬಗ್ಗೆ ರಮ್ಯಾ ಮಾತು
ಈಗ ವೈರಲ್ ನರೇಶ್-ಪವಿತ್ರಾ ಲಿಪ್‌ಲಾಕ್ ವಿಡಿಯೋ ಬಗ್ಗೆಯೂ ಮಾತನಾಡಿರುವ ರಮ್ಯಾ ರಘುಪತಿ, ''ನನಗೆ ಇದನ್ನು ನೋಡಿ ಅಚ್ಚರಿ ಅನ್ನಿಸಲಿಲ್ಲ. ನರೇಶ್ ಅವರನ್ನು ನಮ್ಮ ಮನೆಯ ಮುಸುರೆ ತೊಳೆಯುವವಳ ಜೊತೆ ನೋಡಿದಾಗ ಮೊದಲು ಶಾಕ್ ಆಗಿತ್ತು. ಅವರ ಫೋನ್‌ನಲ್ಲಿ ಕಾಲ್ ರೆಕಾರ್ಡಿಂಗ್ ಎಲ್ಲಾ ಕೇಳಿದ್ದಾಗ ಶಾಕ್ ಆಗಿತ್ತು. ದಿನಕ್ಕೊಂದು ಸತ್ಯ ಹೊರಬೀಳುತ್ತಿತ್ತು, ದಿನ ಇದೇ ಕಥೆನೇ, ಇವತ್ತು ವಿಡಿಯೋ ನೋಡಿದ್ದೇವೆ ಅಷ್ಟೆ. ನಾನು ಇದನ್ನೆಲ್ಲಾ ಬಹಳ ನೋಡಿದ್ದೇನೆ. ಹಾಗಾಗಿ ಅಚ್ಚರಿ ಅನ್ನಿಸಲಿಲ್ಲ'' ಎಂದಿದ್ದಾರೆ.

ಪ್ರಕರಣ ದಾಖಲಿಸಿದ್ದೇನೆ: ರಮ್ಯಾ ರಘುಪತಿ
"ನರೇಶ್ ಡಿವೋರ್ಸ್‌ಗಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ. ನಾನು ಅದನ್ನು ಪ್ರಶ್ನಿಸಿ ಪ್ರತಿದೂರು ದಾಖಲಿಸಿದ್ದೀನಿ. ಯಾರು ಬೇಕಾದರೂ ಆನ್‌ಲೈನ್‌ನಲ್ಲಿ ಅದನ್ನು ಪರಿಶೀಲನೆ ಮಾಡಬಹುದು. ಫ್ಯಾಮಿಲಿ ಕೋರ್ಟ್‌ನಲ್ಲಿ ಡಿವೋರ್ಸ್‌ಗೆ ಅಪ್ಲೇ ಮಾಡಿದ್ದಾರೆ. ಅವರ ಪಿಟಿಷನ್‌ಗೆ ನಾನು ಕೌಂಟರ್ ಪೆಟಿಷನ್ ತೆಗೆದುಕೊಂಡಿದ್ದೇನೆ. ರಿಜೆಕ್ಷನ್ ಪೆಟಿಷನ್ ಹಾಕಿದ್ದೀನಿ. ಅದರಲ್ಲಿ ಒಂದಷ್ಟು ಸುಳ್ಳುಗಳನ್ನು ಹೇಳಿದ್ದಾರೆ. ವೈವಾಹಿಕ ಹಕ್ಕುಗಳ ರಕ್ಷಣೆ ಅಡಿಯಲ್ಲೂ ಕೇಸ್ ದಾಖಲಾಗಿದೆ. ಅದಕ್ಕೆ ಅವರು ಪ್ರತಿಕ್ರಿಯಿಸಿಲ್ಲ. ಹಾಗಾಗಿ ಡಿವೋರ್ಸ್ ವಿಚಾರ ಇನ್ನು ದೂರದ ಮಾತು" ಎಂದು ರಮ್ಯಾ ರಘುಪತಿ ಹೇಳಿದ್ದಾರೆ.

ಮೂರು ಮದುವೆಯಾಗಿರುವ ನರೇಶ್
ನಟ ನರೇಶ್ ಈವರೆಗೆ ಮೂರು ಮದುವೆಯಾಗಿದ್ದು ರಮ್ಯಾ ರಘುಪತಿ ಮೂರನೇ ಪತ್ನಿಯಾಗಿದ್ದಾರೆ. ಇದೀಗ ಪವಿತ್ರಾ ಲೋಕೇಶ್ ಜೊತೆ ನಾಲ್ಕನೇ ಮದುವೆಗೆ ಸಜ್ಜಾಗಿದ್ದಾರೆ. ಆದರೆ ರಮ್ಯಾ ರಘುಪತಿ ವಿಚ್ಛೇದನ ನೀಡಿಲ್ಲ. ಇನ್ನು ನಟಿ ಪವಿತ್ರಾ ಲೋಕೇಶ್ ಸಹ ಈವರೆಗೆ ಎರಡು ವಿವಾಹವಾಗಿದ್ದಾರೆ. ಅವರ ಎರಡನೇ ಪತ್ನಿ ಕನ್ನಡದ ಖ್ಯಾತ ನಟ ಸುಚೇಂದ್ರ ಪ್ರಸಾದ್. ಇವರಿಗೂ ಸಹ ಅಧಿಕೃತವಾಗಿ ವಿಚ್ಛೇದನ ಆಗಿಲ್ಲ. ಪವಿತ್ರಾ ಲೋಕೇಶ್ ಇದೀಗ ತೆಲುಗು ಚಿತ್ರರಂಗದಲ್ಲಿಯೇ ಹೆಚ್ಚು ಬ್ಯುಸಿಯಾಗಿದ್ದಾರೆ.