For Quick Alerts
  ALLOW NOTIFICATIONS  
  For Daily Alerts

  8 ವರ್ಷಗಳ ಬಳಿಕ ನಟ ಉದಯ್ ಕಿರಣ್ ಆತ್ಮಹತ್ಯೆಗೆ ಟ್ವಿಸ್ಟ್; ನನಗೆಲ್ಲಾ ಕಾರಣ ಗೊತ್ತಿದೆ ಎಂದ ನಿರ್ದೇಶಕ ತೇಜಾ!

  |

  2000ನೇ ಇಸವಿಯಲ್ಲಿ ತೆಲುಗು ಚಿತ್ರರಂಗಕ್ಕೆ ಪ್ರತಿಭಾವಂತ ನಟ ದೊರೆತಿದ್ದ. ಚಿತ್ರಮ್ ಎಂಬ ಚಿತ್ರದಲ್ಲಿ ರಮಣ ಎಂಬ ಪಾತ್ರ ನಿರ್ವಹಿಸಿದ್ದ ನಟ ಉದಯ್ ಕಿರಣ್ ಅಭಿನಯ ಕಂಡ ಹಲವರು ಈತ ಮುಂದೊಂದು ದಿನ ಟಾಲಿವುಡ್‌ನ ಸ್ಟಾರ್ ನಟನಾಗುವುದು ಖಚಿತ ಎಂದು ಭವಿಷ್ಯ ನುಡಿದಿದ್ದರು. ಅದರಂತೆ ನಟ ಉದಯ್ ಕಿರಣ್ ಸಾಲು ಸಾಲು ಹಿಟ್ ಚಿತ್ರಗಳಲ್ಲಿ ನಟಿಸಿ ಬಹುಬೇಗನೆ ಸ್ಟಾರ್‌ಡಂ ಕಂಡರು.

  ನುವ್ವು ನೇನು, ಚಿತ್ರಮ್, ಮನಸಂತ ನುವ್ವೆ, ನೀ ಸ್ನೇಹಮ್, ಕಲುಸುಕೋವಾಲನಿ, ನೀಕು ನೇನು ನಾಕು ನುವ್ವು ಹೀಗೆ ಸಾಲು ಸಾಲು ಹಿಟ್ ಚಿತ್ರಗಳಲ್ಲಿ ಉದಯ್ ಕಿರಣ್ ಅಭಿನಯಿಸಿ ಆಗಾಗಲೇ ಟಾಲಿವುಡ್‌ನಲ್ಲಿ ಸ್ಟಾರ್ ನಟರಾಗಿದ್ದ ಇತರೆ ಕಲಾವಿದರಿಗೆ ಪೈಪೋಟಿ ನೀಡುವ ಮಟ್ಟಕ್ಕೆ ಬೆಳೆದುಬಿಟ್ಟರು. ಯಾವುದೇ ಫ್ಯಾಮಿಲಿ ಬ್ಯಾಕ್‌ಗ್ರೌಂಡ್ ಇಲ್ಲದೇ ತೆಲುಗು ಚಿತ್ರರಂಗದಲ್ಲಿ ಈತ ಬೆಳೆದದ್ದನ್ನು ಕಂಡು ತೆಲುಗು ಸಿನಿ ಪ್ರೇಕ್ಷಕರು ಮಾತ್ರವಲ್ಲದೇ ಇತೆರ ಭಾಷೆಯ ಸಿನಿ ಪ್ರೇಕ್ಷಕರೂ ಸಹ ಆಶ್ಚರ್ಯಕ್ಕೊಳಗಾಗಿದ್ದರು.

  ಕೇರಳದಲ್ಲೇ 'ಕಾಂತಾರ' ಬಜೆಟ್ ವಾಪಸ್: ಭಾರೀ ಮೊತ್ತಕ್ಕೆ ತೆಲುಗು, ಮಲಯಾಳಂ ಸ್ಯಾಟಲೈಟ್ ರೈಟ್ಸ್ ಮಾರಾಟ! ಕೇರಳದಲ್ಲೇ 'ಕಾಂತಾರ' ಬಜೆಟ್ ವಾಪಸ್: ಭಾರೀ ಮೊತ್ತಕ್ಕೆ ತೆಲುಗು, ಮಲಯಾಳಂ ಸ್ಯಾಟಲೈಟ್ ರೈಟ್ಸ್ ಮಾರಾಟ!

  ಹೀಗೆ ಒಂದರ ಹಿಂದೊರಂತೆ ಹಿಟ್ ಚಿತ್ರಗಳನ್ನು ನೀಡಿ ಯಶಸ್ಸಿನ ಶಿಖರವೇರಿದ್ದ ಉದಯ್ ಕಿರಣ್ ಸಾಲು ಸಾಲು ವಿಫಲತೆಗಳನ್ನೂ ಸಹ ಕಂಡರು. ಆ ಸಂದರ್ಭದಲ್ಲಿ ಉದಯ್ ಕಿರಣ್ ಕಮ್‌ಬ್ಯಾಕ್ ನೀಡಲಿದ್ದಾರೆ ಎಂದು ಅವರ ಅಭಿಮಾನಿಗಳು ಹಾಗೂ ತೆಲುಗು ಸಿನಿ ರಸಿಕರು ಕಾಯುತ್ತಿದ್ದರು. ಆದರೆ 2014ರ ಜನವರಿ 5ರಂದು ಉದಯ್ ಕಿರಣ್ ಹೈದರಾಬಾದ್‌ನ ಶ್ರೀನಗರ ಕಾಲೊನಿಯಲ್ಲಿ ತಾವು ವಾಸವಿದ್ದ ಅಪಾರ್ಟ್‌ಮೆಂಟ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ದೊಡ್ಡ ಮಟ್ಟದ ಸಕ್ಸಸ್ ಕಂಡು ಹಾಗೆಯೇ ವಿಫಲರಾಗಿದ್ದ ಉದಯ್ ಕಿರಣ್ ಸಾವಿನ ಸುದ್ದಿ ತಿಳಿದು ಇಡೀ ಆಂಧ್ರ ಪ್ರದೇಶ ರಾಜ್ಯವೇ ಆ‍ಶ್ಚರ್ಯಕ್ಕೊಳಗಾಗಿದ್ದರು ಹಾಗೂ ದೊಡ್ಡ ಮಟ್ಟದ ಅನುಮಾನವೂ ಹುಟ್ಟುಕೊಂಡಿತು. ಈ ವೇಳೆ ಸಾವಿಗೆ ಕಾರಣವೇನೆಂಬುದರ ಕುರಿತು ನಾನಾ ರೀತಿಯ ಅಭಿಪ್ರಾಯ ಹಾಗೂ ಸುದ್ದಿಗಳು ಹರಿದಾಡಿದ್ದವು. ಆದರೆ ಇದೀಗ ಈ ವಿಷಯದ ಕುರಿತಾಗಿ ಉದಯ್ ಕಿರಣ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದ ನಿರ್ದೇಶಕ ತೇಜಾ ಮಾತನಾಡಿದ್ದು ಕಾರಣವೇನೆಂಬುದು ತನಗೆ ಗೊತ್ತಿದೆ ಎಂದಿದ್ದಾರೆ.

  ನಾನು ಸಾಯುವ ಮುನ್ನ ಉದಯ್ ಕಿರಣ್ ಸಾವಿನ ಕಾರಣ ಬಿಚ್ಚಿಡುತ್ತೇನೆ

  ನಾನು ಸಾಯುವ ಮುನ್ನ ಉದಯ್ ಕಿರಣ್ ಸಾವಿನ ಕಾರಣ ಬಿಚ್ಚಿಡುತ್ತೇನೆ

  'ಸಾಲು ಸಾಲು ಹಿಟ್ ಕಂಡ ಉದಯ್ ಕಿರಣ್‌ಗೆ ಸ್ಟಾರ್‌ಡಂ ತಡೆದುಕೊಳ್ಳಲಾಗಲಿಲ್ಲ ಹಾಗೂ ಸೋಲು ಕಂಡ ನಂತರ ಕೆಳಗೆ ಬಿದ್ದದ್ದನ್ನೂ ಸಹ ಸಹಿಸಿಕೊಳ್ಳಲಾಗಲಿಲ್ಲ, ಆತ ಎರಡನ್ನೂ ಸಮನಾಗಿ ತೆಗೆದುಕೊಳ್ಳುವಲ್ಲಿ ವಿಫಲವಾಗಿದ್ದ. ಆತನ ಸಾವಿಗೆ ಕಾರಣವಾಗುವಂತೆ ನಡೆದದ್ದೇನು ಎಂಬುದು ನನಗೆ ಗೊತ್ತಿದೆ. ಆತ ತನ್ನನ್ನು ಕಾಡುತ್ತಿದ್ದ ವಿಷಯಗಳ ಬಗ್ಗೆ ನನ್ನ ಬಳಿ ಹೇಳಿಕೊಂಡಿದ್ದ. ಆದರೆ ಅದನ್ನು ನಾನು ಈಗ ಹೇಳುವುದಿಲ್ಲ, ನಾನು ಸಾಯುವ ಮುನ್ನ ಅದನ್ನು ಬಿಚ್ಚಿಡುತ್ತೇನೆ' ಎಂದು ನಿರ್ದೇಶಕ ತೇಜಾ ಇತ್ತೀಚೆಗೆ ನಡೆದ ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ತಿಳಿಸಿದರು.

  ಸಾವಿನ ಹಿಂದೆ ಯಾರಾದರೂ ಪ್ರಭಾವಿ ವ್ಯಕ್ತಿ ಇದ್ದಾರಾ?

  ಸಾವಿನ ಹಿಂದೆ ಯಾರಾದರೂ ಪ್ರಭಾವಿ ವ್ಯಕ್ತಿ ಇದ್ದಾರಾ?

  ಉದಯ್ ಕಿರಣ್ ಸಾವಿನ ರಹಸ್ಯ ಬಿಚ್ಚಿಡುತ್ತೇನೆ ಎಂಬ ಹೇಳಿಕೆಯನ್ನು ನಿರ್ದೇಶಕ ತೇಜಾ ಹೇಳಿದ ಬೆನ್ನಲ್ಲೇ ಸಂದರ್ಶಕರು ಈ ಸಾವಿನ ಹಿಂದೆ ಯಾರಾದರೂ ಪ್ರಭಾವಿ ವ್ಯಕ್ತಿಗಳ ಕೈವಾಡವಿದೆಯಾ ಎಂಬ ಪ್ರಶ್ನೆಯನ್ನು ಇಟ್ಟರು. ಆದರೆ ಈ ಪ್ರಶ್ನೆಗೆ 'ನೋ ಕಾಮೆಂಟ್ಸ್' ಎಂದು ಹೇಳಿದ ತೇಜಾ ವಿಷಯದ ಬಗ್ಗೆ ಹೆಚ್ಚು ಮಾತನಾಡಲು ಇಚ್ಛಿಸಲಿಲ್ಲ. ಆದರೆ ಇಲ್ಲಿ ಯಾವ ಪ್ರಭಾವ ವ್ಯಕ್ತಿಗಳ ಕೈವಾಡವೂ ಇಲ್ಲ ಎಂದು ತೇಜಾ ಹೇಳದೇ ಇರುವುದು ಸಾವಿನ ಸುತ್ತ ಇದ್ದ ಅನುಮಾನಗಳಿಗೆ ಪುಷ್ಟಿ ನೀಡಿದಂತಾಗಿದೆ.

  ಸಾವಿನ ಹಿಂದೆ ದೊಡ್ಡವರ ಕೈವಾಡವಿದೆ ಎಂಬ ಗಂಭೀರ ಆರೋಪ

  ಸಾವಿನ ಹಿಂದೆ ದೊಡ್ಡವರ ಕೈವಾಡವಿದೆ ಎಂಬ ಗಂಭೀರ ಆರೋಪ

  ಇನ್ನು ತೆಲುಗು ಚಿತ್ರರಂಗದಲ್ಲಿ ಫ್ಯಾಮಿಲಿ ಬ್ಯಾಕ್‌ಗ್ರೌಂಡ್ ಇಲ್ಲದ ನಟರನ್ನು ಬೆಳೆಯಲು ಬಿಡುವುದಿಲ್ಲ ಎಂಬ ದೊಡ್ಡ ಆರೋಪ ಈ ಹಿಂದಿನಿಂದಲೂ ಇದೆ. ಕೇವಲ ಆರೋಪ ಮಾತ್ರವಲ್ಲ ಇದನ್ನು ಪರೀಕ್ಷಿಸಿ ನೋಡಿದರೆ ಈ ಹೇಳಿಕೆ ನಿಜ ಬಿಡಿ ಎನಿಸಿಬಿಡುತ್ತೆ. ಏಕೆಂದರೆ ಫ್ಯಾಮಿಲಿ ಬ್ಯಾಕ್‌ಗ್ರೌಂಡ್ ಇಲ್ಲದೇ ತೆಲುಗಿನಲ್ಲಿ ಗೆದ್ದ ನಟರು ಇತ್ತೀಚೆಗೆ ಇದ್ದಾರೆಯೋ ಹೊರತು ಈ ಹಿಂದೆ ಯಾರೂ ಇರಲಿಲ್ಲ. ಉದಯ್ ಕಿರಣ್ ಆತ್ಮಹತ್ಯೆ ಆದಾಗಲೂ ಇದೇ ವಿಚಾರ ಕೇಳಿಬಂದಿತ್ತು. ಬ್ಯಾಕ್‌ಗ್ರೌಂಡ್ ಇಲ್ಲದೇ ಬಂದ ನಟನನ್ನು ಬೆಳೆಯಲು ಬಿಡಲಿಲ್ಲ, ಈ ಸಾವಿನ ಹಿಂದೆ ಹಲವು ದೊಡ್ಡವರ ಕೈವಾಡವಿದೆ ಎಂದರು.

  ಹಣಕಾಸಿನ ಸಮಸ್ಯೆಯಿಂದ ಸಾವು ಎನ್ನಲಾಗಿತ್ತು

  ಹಣಕಾಸಿನ ಸಮಸ್ಯೆಯಿಂದ ಸಾವು ಎನ್ನಲಾಗಿತ್ತು

  ಸಾವಿನ ಹಿಂದೆ ಕೆಲ ಪ್ರಭಾವಿ ವ್ಯಕ್ತಿಗಳ ಕೈವಾಡವಿದೆ ಎಂಬ ಅಭಿಪ್ರಾಯ ಹೆಚ್ಚಾಗಿ ವ್ಯಕ್ತವಾಗತೊಡಗಿದ ಬೆನ್ನಲ್ಲೇ ಉದಯ್ ಕಿರಣ್ ಹಣಕಾಸಿ ತೊಂದರೆ ಎದುರಿಸಿ ಖಿನ್ನತೆಗೊಳಗಾಗಿದ್ದರು, ಈ ಕಾರಣದಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಬಂಜಾರಾ ಹಿಲ್ಸ್ ಪೊಲೀಸರು ತಿಳಿಸಿದ್ದರು. ಸದ್ಯ ನಿಜ ಕಾರಣವನ್ನು ತಿಳಿಸುತ್ತೇನೆ ಎಂದು ತೇಜಾ ನೀಡಿದ ಹೇಳಿಕೆ ಪೊಲೀಸರು ನೀಡಿದ್ದ ಕಾರಣ ಸುಳ್ಳು ಎಂಬುದನ್ನು ಪರೋಕ್ಷವಾಗಿ ಹೇಳುತ್ತಿದೆ.

  English summary
  I will reveal the reason for Uday Kiran's death soon says director Teja. Read on
  Thursday, November 17, 2022, 18:53
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X