For Quick Alerts
  ALLOW NOTIFICATIONS  
  For Daily Alerts

  ಕೆಜಿಎಫ್ 2 ಮತ್ತು ಸಲಾರ್ ಚಿತ್ರಕ್ಕೆ ಆನೆಬಲ: ಯಶ್-ಪ್ರಭಾಸ್ ಲೆಕ್ಕಾಚಾರ ಏನು?

  |

  ಪ್ರಶಾಂತ್ ನೀಲ್ ಮತ್ತು ಪ್ರಭಾಸ್ ಕಾಂಬಿನೇಷನ್‌ನಲ್ಲಿ ತಯಾರಾಗಲಿರುವ 'ಸಲಾರ್' ಸಿನಿಮಾ ಹೈದರಾಬಾದ್‌ನಲ್ಲಿ ಇಂದು ಅದ್ಧೂರಿಯಾಗಿ ಆರಂಭವಾಗಿದೆ. ಈ ಮುಹೂರ್ತ ಕಾರ್ಯಕ್ರಮಕ್ಕೆ ರಾಕಿಂಗ್ ಸ್ಟಾರ್ ಯಶ್ ಹಾಗೂ ಕರ್ನಾಟಕ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

  ಅಂದುಕೊಂಡಂತೆ ಆದ್ರೆ ಸಲಾರ್ , KGF 2 ಎರಡೂ ಸೂಪರ್ ಹಿಟ್ | Filmibeat Kannada

  ಪ್ರಭಾಸ್ ಮತ್ತು ಯಶ್ ಈಗ ನ್ಯಾಷನಲ್ ಸ್ಟಾರ್‌ಗಳು. ಇಬ್ಬರಿಗೂ ಬಹುದೊಡ್ಡ ಅಭಿಮಾನಿ ಬಳಗ ಇದೆ. ಇಬ್ಬರನ್ನು ಒಟ್ಟಿಗೆ ನೋಡಿದ ಅಭಿಮಾನಿಗಳು ಬಹಳ ಖುಷಿಯಾಗಿದ್ದಾರೆ. ಇಬ್ಬರು ನ್ಯಾಷನಲ್ ಸ್ಟಾರ್‌ಗಳನ್ನು ಒಂದೇ ಫೋಟೋದಲ್ಲಿ ಕಂಡ ಫ್ಯಾನ್ಸ್ ಅದ್ಯಾವಾಗ ಒಂದೇ ಚಿತ್ರದಲ್ಲಿ ನಟಿಸುತ್ತಾರೆ ಎಂಬ ಲೆಕ್ಕಾಚಾರ ಹಾಕ್ತಿದ್ದಾರೆ.

  'ಸಲಾರ್' ಮುಹೂರ್ತ; ಒಂದೇ ಫ್ರೇಮಿನಲ್ಲಿ ಸೆರೆಯಾದ ಯಶ್ ಮತ್ತು ಪ್ರಭಾಸ್ ಫೋಟೋ ವೈರಲ್

  ಅಂದ್ಹಾಗೆ, ಕೆಜಿಎಫ್ ಬಿಡುಗಡೆಗೂ ಮುಂಚೆಯೇ ಸಲಾರ್ ಆರಂಭಿಸಿದ್ದೇಕೆ? ಸಲಾರ್ ಹಾಗೂ ಕೆಜಿಎಫ್ ಸಿನಿಮಾಗಳ ನಡುವೆ ಪೈಪೋಟಿನಾ ಅಥವಾ ಬೇರೆ ಏನಾದರೂ ಲೆಕ್ಕಾಚಾರ ಇದ್ಯಾ ಎಂಬ ಪ್ರಶ್ನೆಗಳು ಮೂಡುತ್ತಿದೆ. ಮುಂದೆ ಓದಿ...

  ಕೆಜಿಎಫ್ 2 ಪರವಾಗಿ ಪ್ರಭಾಸ್ ಅಭಿಮಾನಿಗಳು?

  ಕೆಜಿಎಫ್ 2 ಪರವಾಗಿ ಪ್ರಭಾಸ್ ಅಭಿಮಾನಿಗಳು?

  ಪ್ರಭಾಸ್ ಜೊತೆ ಪ್ರಶಾಂತ್ ನೀಲ್ ಸಿನಿಮಾ ಆರಂಭಿಸಿರುವುದು ಕೆಜಿಎಫ್ ದೃಷ್ಟಿಯಿಂದ ಪಾಸಿಟಿವ್ ಆಗಿದೆ. ಕೆಜಿಎಫ್ ಚಾಪ್ಟರ್ 2 ಚಿತ್ರವನ್ನು ಪ್ರಭಾಸ್ ಅಭಿಮಾನಿಗಳು ನಮ್ಮ ಸಿನಿಮಾ ಎಂದು ಹೆಚ್ಚು ಪ್ರಮೋಟ್ ಮಾಡಲು ಶುರು ಮಾಡಬಹುದು. ಟಾಲಿವುಡ್‌ನಲ್ಲಿ ಇದು ಕೆಜಿಎಫ್ ಯಶಸ್ಸಿಗೆ ಕಾರಣವೂ ಆಗಬಹುದು.

  ಯಶ್ ಜೊತೆ ಡಾರ್ಲಿಂಗ್ ಕೈ ಜೋಡಿಸಬಹುದು!

  ಯಶ್ ಜೊತೆ ಡಾರ್ಲಿಂಗ್ ಕೈ ಜೋಡಿಸಬಹುದು!

  ಕೆಜಿಎಫ್ ಚಾಪ್ಟರ್ 2 ರಿಲೀಸ್‌ಗೆ ಸಂಬಂಧಿಸಿದಂತೆ ಪ್ರಚಾರದ ಕಾರ್ಯಕ್ರಮಗಳಲ್ಲಿ ಪ್ರಭಾಸ್ ಪಾಲ್ಗೊಳ್ಳಬಹುದು. ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಕೆಜಿಎಫ್ ಸಿನಿಮಾದ ಬಗ್ಗೆ ಪೋಸ್ಟ್ ಹಾಕುವುದು, ಅಪ್‌ಡೇಟ್ ನೀಡಬಹುದು. ಒಂದು ವೇಳೆ ಕೆಜಿಎಫ್‌ಗೆ ಜೊತೆಯಾಗಿ ಪ್ರಭಾಸ್ ನಿಂತರೆ ಇನ್ನು ಹೆಚ್ಚಿನ ಪ್ರಚಾರ ಸಿಗಬಹುದು.

  'ಕೆಜಿಎಫ್-2' ಟೀಸರ್; 150 ಮಿಲಿಯನ್ ವೀಕ್ಷಣೆ ಕಂಡ ಸಂತಸದಲ್ಲಿ ಚಿತ್ರತಂಡ

  ಸಲಾರ್ ಚಿತ್ರಕ್ಕೂ ಯಶ್ ಸಾಥ್!

  ಸಲಾರ್ ಚಿತ್ರಕ್ಕೂ ಯಶ್ ಸಾಥ್!

  ಅದೇ ರೀತಿ ಸಲಾರ್ ಸಿನಿಮಾದ ಪ್ರತಿಯೊಂದು ವಿಷಯಕ್ಕೂ ರಾಕಿಂಗ್ ಸ್ಟಾರ್ ಯಶ್ ಬೆಂಬಲವಾಗಿ ನಿಲ್ಲಬಹುದು. ಯಶ್ ಅಭಿಮಾನಿಗಳು ಸಲಾರ್ ಚಿತ್ರವನ್ನು ಹೆಚ್ಚು ಪ್ರಮೋಟ್ ಮಾಡಬಹುದು. ಸಲಾರ್ ಪರವಾಗಿ ಕರ್ನಾಟಕ ಮಾರ್ಕೆಟ್‌ನಲ್ಲಿ ಯಶ್ ಕ್ಯಾಂಪೈನ್ ಮಾಡಬಹುದು. ಇದು ಸಲಾರ್ ಚಿತ್ರಕ್ಕೆ ಹೆಚ್ಚು ಶಕ್ತಿ ನೀಡಲಿದೆ.

  ನಿರ್ಮಾಪಕ-ನಿರ್ದೇಶಕರ ಪ್ಲಾನ್?

  ನಿರ್ಮಾಪಕ-ನಿರ್ದೇಶಕರ ಪ್ಲಾನ್?

  ಕೆಜಿಎಫ್ ಚಿತ್ರಕ್ಕೆ ಬಂಡವಾಳ ಹಾಕಿರುವ ವಿಜಯ್ ಕಿರಗಂದೂರ್ ಸಲಾರ್ ಸಿನಿಮಾ ನಿರ್ಮಿಸುತ್ತಿದ್ದಾರೆ. ಕೆಜಿಎಫ್ ಗೆ ನಿರ್ದೇಶನ ಮಾಡಿದ ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕೆಜಿಎಫ್ ತಂಡದಲ್ಲಿ ಕೆಲಸ ಮಾಡಿದ ಬಹುತೇಕ ತಂತ್ರಜ್ಞರು ಸಲಾರ್‌ನಲ್ಲೂ ಮುಂದುವರಿಯಲಿದ್ದಾರೆ. ಹೇಗೆ ನೋಡಿದ್ರೂ ಕೆಜಿಎಫ್ ಹಾಗೂ ಸಲಾರ್ ಸಿನಿಮಾಗಳ ನಡುವೆ ಹೆಚ್ಚು ಸಂಬಂಧ ಕಾಣುತ್ತಿದೆ.

  ಕೆಜಿಎಫ್ ಮೀರಿಸುವಂತೆ ಸಲಾರ್?

  ಕೆಜಿಎಫ್ ಮೀರಿಸುವಂತೆ ಸಲಾರ್?

  ಡಾರ್ಲಿಂಗ್ ಪ್ರಭಾಸ್ ಜೊತೆ ಪ್ರಶಾಂತ್ ನೀಲ್ ಸಿನಿಮಾ ಮಾಡ್ತಾರೋ ಎನ್ನುವ ಸುದ್ದಿ ಹೊರಬೀಳುತ್ತಿದ್ದಂತೆ ಈ ಪ್ರಾಜೆಕ್ಟ್ ಬಗ್ಗೆ ನಿರೀಕ್ಷೆ ಹೆಚ್ಚಾಯಿತು. ಸಲಾರ್ ಎಂದು ಹೆಸರು ಹಾಗೂ ಪ್ರಭಾಸ್ ಪೋಸ್ಟರ್ ನೋಡಿದ್ಮೇಲೆ ಫ್ಯಾನ್ಸ್ ಫಿಕ್ಸ್ ಆಗಬಿಟ್ಟಿದ್ದಾರೆ. ಕೆಜಿಎಫ್ ಚಿತ್ರವನ್ನು ಮೀರಿಸುವಂತೆ ಸಲಾರ್ ಬರಬೇಕು, ಬರಲಿದೆ ಎಂಬ ಕಾಯುತ್ತಿದ್ದಾರೆ. ಸದ್ಯಕ್ಕೆ ಕೆಜಿಎಫ್ ಚಾಪ್ಟರ್ 1 ಬಿಡುಗಡೆಯಾಗಿದೆ. ಈಗ ಚಾಪ್ಟರ್ 2 ಸಮಯ. ಈ ಸಿನಿಮಾ ತೆರೆಕಂಡ ಮೇಲೆ ಸಲಾರ್ ಮೇಲಿನ ಹೈಪ್ ಎರಡರಷ್ಟು ಹೆಚ್ಚಾಗಬಹುದು.

  English summary
  The much anticipated Salaar Movie launched in a grand manner at Hyderabad. here is the some Interesting facts between Kgf 2 and Salaar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X