For Quick Alerts
  ALLOW NOTIFICATIONS  
  For Daily Alerts

  ಟಾಲಿವುಡ್ ನಟಿ ಕಾಜಲ್ ಅಗರ್ವಾಲ್ ಗರ್ಭಿಣಿನಾ? ಫೋಟೊ ಹೇಳಿದ ಕಥೆಯೇನು?

  |

  ಬಹುಭಾಷಾ ನಟಿ ಕಾಜಲ್ ಅಗರ್ವಾಲ್ ಸಿನಿಮಾರಂಗದಲ್ಲಿ ಸುದ್ದಿಯಲ್ಲಿದ್ದಾರೆ. ಹಾಗಂತ ಕಾಜಲ್ ಅಗರ್ವಾಲ್ ಹೊಸ ಸಿನಿಮಾವೇನು ಸೆಟ್ಟೇರಿಲ್ಲ. ವೈಯುಕ್ತಿಕ ವಿಚಾರಕ್ಕೆ 'ಮಗಧೀರ' ಸಿನಿಮಾದ ನಾಯಕಿ ಸುದ್ದಿಯಲ್ಲಿದ್ದಾರೆ. ಕಾಜಲ್ ಹಾಗೂ ಆಕೆಯ ಪತಿ ಗೌತಮ್ ಕಿಚ್ಲು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಸುದ್ದಿಯೊಂದು ಎಲ್ಲೆಡೆ ಹರಿದಾಡುತ್ತಿದೆ.

  ಕಾಜಲ್ ಅಗರ್ವಾಲ್ ದಕ್ಷಿಣ ಭಾರತದ ಫೇಮಸ್ ನಟಿ. ತೆಲುಗು ಹಾಗೂ ತಮಿಳು ಭಾಷೆಯಲ್ಲಿ ನಟಿಸಿರುವ ಕಾಜಲ್ ಸೂಪರ್‌ಸ್ಟಾರ್‌ಗಳ ಜೊತೆ ಸ್ಕ್ರೀನ್ ಶೇರ್ ಮಾಡಿದ್ದಾರೆ. ದಳಪತಿ ವಿಜಯ್, ಅಜಿತ್ ಕುಮಾರ್, ಸೂರ್ಯ, ಮಹೇಶ್ ಬಾಬು, ಅಲ್ಲು ಅರ್ಜುನ್, ರಾಮ್ ಚರಣ್ ತೇಜಾ ಸೇರಿದಂತೆ ಜೂ. ಎನ್‌ಟಿಆರ್ ಜೊತೆ ಕಾಜಲ್ ನಟಿಸಿದ್ದಾರೆ. ಈಗ ಬಾಲಿವುಡ್‌ನಲ್ಲೂ ಕಾಣಿಸಿಕೊಳ್ಳುತ್ತಿರುವ ಈ ನಟಿಯ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯನ್ನು ಹುಟ್ಟಾಕುತ್ತಿವೆ.

  ಮೊದಲ ಮಗುವಿನ ನಿರೀಕ್ಷೆಯಲ್ಲಿ ಕಾಜಲ್?

  ಮೊದಲ ಮಗುವಿನ ನಿರೀಕ್ಷೆಯಲ್ಲಿ ಕಾಜಲ್?

  ನಟಿ ಕಾಜಲ್ ಅಗರ್ವಾಲ್ ಮತ್ತು ಗೌತಮ್ ಕಿಚ್ಲು ಭಾರತದ ಕ್ಯೂಟ್ ಸೆಲೆಬ್ರೆಟಿ ಜೋಡಿಗಳಲ್ಲೊಂದು. ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ ಆಗಿರುವ ಕಾಜಲ್ ಅಗರ್ವಾಲ್ ಒಂದಲ್ಲಾ ಒಂದು ಫೋಟೊಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿಯೇ ತಮ್ಮ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇರುತ್ತಾರೆ. ಇತ್ತೀಚೆಗೆ ಕಾಜಲ್ ಅಗರ್ವಾಲ್ ತಮ್ಮ ಕುಟುಂಬದ ಜೊತೆಗಿದ್ದ ಫೋಟೊಗಳನ್ನು ಶೇರ್ ಮಾಡಿದ್ದರು. ಈ ಫೋಟೊಗಳನ್ನು ನೋಡಿದವರು ಕಾಜಲ್ ಅಗರ್ವಾಲ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಸುದ್ದಿ ಹಬ್ಬಿಸುತ್ತಿದ್ದಾರೆ.

  ಕಾಜಲ್ ಮಗುವಿನ ನಿರೀಕ್ಷೆಯಲ್ಲಿರುವ ಸುದ್ದಿ ಸುಳ್ಳಾ?

  ಕಾಜಲ್ ಮಗುವಿನ ನಿರೀಕ್ಷೆಯಲ್ಲಿರುವ ಸುದ್ದಿ ಸುಳ್ಳಾ?

  ಕಾಜಲ್ ಅಗರ್ವಾಲ್ ಎರಡು ದಿನಗಳ ಹಿಂದಷ್ಟೇ ತನ್ನ ಇನ್‍ಸ್ಟಾಗ್ರಾಮ್ ಸ್ಟೋರಿಯಲ್ಲಿ ಸ್ನೇಹಿತರೊಂದಿಗೆ ಪ್ರವಾಸಕ್ಕೆ ಹೋಗಿದ್ದ ಕೆಲವು ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದರು. ಈ ಫೋಟೋಗಳಲ್ಲಿ ನಟಿ ಕಾಜಲ್ ಧರಿಸಿದ್ದ ಮಾಡರ್ನ್ ಡ್ರೆಸ್‌ನಲ್ಲಿ ಬೇಬಿ ಬಂಪ್ ಎಲ್ಲರ ಗಮನ ಸೆಳೆದಿದೆ. ಅದ್ಯಾವಾಗಾ ಇದು ಕಾಜಲ್ ಅಭಿಮಾನಿಗಳ ಗಮನಕ್ಕೆ ಬಂತೋ ಅಲ್ಲಿಂದ ಕಾಜಲ್ ಗರ್ಭಿಣಿಯಾಗಿದ್ದಾರೆ ಅನ್ನುವ ಬಗ್ಗೆನೇ ಚರ್ಚೆಯಾಗುತ್ತಿದೆ. ಆದರೆ, ಈ ಸುದ್ದಿ ಕಾಜಲ್ ಅಗರ್ವಾಲ್ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.

  3 ವರ್ಷ ಪ್ರೀತಿಸಿ ಮದುವೆಯಾದ ಕಾಜಲ್-ಗೌತಮ್

  3 ವರ್ಷ ಪ್ರೀತಿಸಿ ಮದುವೆಯಾದ ಕಾಜಲ್-ಗೌತಮ್

  ಕಾಜಲ್ ಅಗರ್ವಾಲ್ ಉದ್ಯಮಿ ಗೌತಮ್ ಕಿಚ್ಲು ಇಬ್ಬರೂ ಏಳು ವರ್ಷಗಳಿಂದ ಸ್ನೇಹಿತರಾಗಿದ್ದರು. ಆದರೆ, ಮೂರು ವರ್ಷಗಳಿಂದ ಡೇಟಿಂಗ್ ನಡೆಸಿದ್ದು, ಉದ್ಯಮಿಯ ಪ್ರೀತಿಗೆ ಮರುಳಾಗಿದ್ದ ನಟಿ, 2021, ಅಕ್ಟೋಬರ್ 30ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇವರ ವಿವಾಹದಲ್ಲಿ ಕಾಜಲ್ ಹಾಗೂ ಗೌತಮ್ ಕುಟುಂಬಸ್ಥರು ಹಾಗೂ ಆಪ್ತರು ಮಾತ್ರ ಭಾಗವಹಿಸಿದ್ದರು. ಮದುವೆ ಬಳಿಕ ಕಾಜಲ್ ಸಿನಿಮಾಗಳಿಂದ ದೂರ ಉಳಿಯುತ್ತಾರೆ ಎಂದೇ ಭಾವಿಸಲಾಗಿತ್ತು. ಆದರೆ, ಸಿನಿಮಾಗಳಲ್ಲೂ ನಟಿ ಕಾಣಿಸಿಕೊಳ್ಳುತ್ತಿದ್ದಾರೆ.

  ಸಿನಿಮಾಗಳಲ್ಲಿ ಕಾಜಲ್ ಬ್ಯುಸಿ

  ಸಿನಿಮಾಗಳಲ್ಲಿ ಕಾಜಲ್ ಬ್ಯುಸಿ

  ಕಾಜಲ್ ಅಗರ್ವಾಲ್ ಗರ್ಭಿಣಿ ಅನ್ನುವ ವಿಷಯ ಈ ಹಿಂದೆ ಕೂಡ ಕೇಳಿಬಂದಿತ್ತು. ಆ ವೇಳೆ ಕಾಜಲ್ ಅಂತಹ ಸಂದರ್ಭದಲ್ಲಿ ತಿಳಿಸಲಾಗುತ್ತೆ ಎಂದು ಹೇಳಿದ್ದರು. ಸದ್ಯ ಕಾಜಲ್ ಅಗರ್ವಾಲ್ ಈಗ ಇಂಡಿಯನ್ 2 ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ತಮಿಳಿನಲ್ಲಿ 'ಹೇ ಸಿನಾಮಿಕಾ', 'ಘೋಸ್ಟ್‌ಲಿ', ತೆಲುಗಿನಲ್ಲಿ 'ಆಚಾರ್ಯ' ಹಾಗೂ ಹಿಂದಿಯಲ್ಲಿ 'ಉಮಾ' ಸಿನಿಮಾಗಳಲ್ಲಿ ಕಾಜಲ್ ನಟಿಸುತ್ತಿದ್ದಾರೆ. ಒಂದು ವೇಳೆ ಕಾಜಲ್ ಗರ್ಭಿಣಿಯಾಗಿದ್ದರೆ, ಈ ಸಿನಿಮಾಗಳಿಂದ ದೂರ ಉಳಿಯಬೇಕಾಗುವ ಸಂದರ್ಭ ಬರಬಹುದು.

  English summary
  Kajal Aggarwal recently shared a few photos from her latest outing with friends. Kajal fans caught attention is her cute baby bump and saying Kajal Aggarwal is pregnant.
  Wednesday, December 22, 2021, 9:54
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X