Don't Miss!
- Sports
Ind Vs Aus Test: ಟೆಸ್ಟ್ ಸರಣಿಗೆ ಈ ರೀತಿ ಪಿಚ್ ಬೇಕು ಎಂದು ಕ್ಯುರೇಟರ್ಗಳಿಗೆ ಮನವಿ ಮಾಡಿದ ದ್ರಾವಿಡ್ ಮತ್ತು ರೋಹಿತ್ ಶರ್ಮಾ
- Lifestyle
Horoscope Today 5 Feb 2023: ಭಾನುವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ಗುಜರಾತ್ಗೆ ಬರಲಿದ್ದಾರೆ ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಬಹುಬೇಡಿಕೆಯ ಟೊಯೊಟಾ ಹೈರೈಡರ್ ಎಸ್ಯುವಿ
- Technology
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಬಾಲಿವುಡ್ ಪ್ರಾಜೆಕ್ಟ್‌ಗಳಿಂದ ಸಮಂತಾ ಹೊರಕ್ಕೆ? ಮ್ಯಾನೇಜರ್ ಹೇಳಿದಿಷ್ಟು!
ಮಯೋಸೈಟಿಸ್ ಕಾಯಿಲೆಯಿಂದ ಬಳಲುತ್ತಿರುವ ಸಮಂತಾ ಬಾಲಿವುಡ್ ಪ್ರಾಜೆಕ್ಟ್‌ಗಳನ್ನು ಕೈಬಿಟ್ಟಿದ್ದಾರೆ ಎನ್ನಲಾಗ್ತಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ನಡೀತಿದೆ. ಇದೀಗ ಈ ವಿಚಾರದ ಬಗ್ಗೆ ಆಕೆಯ ಮ್ಯಾನೇಜರ್ ಪ್ರತಿಕ್ರಿಯೆ ನೀಡಿದ್ದಾರೆ.
'ಫ್ಯಾಮಿಲಿಮ್ಯಾನ್'- 2 ವೆಬ್ ಸೀರಿಸ್‌ನಿಂದ ಚೆನ್ನೈ ಚೆಲುವೆ ಬಾಲಿವುಡ್ ಮಂದಿಗೂ ಪರಿಚಿತರಾಗಿದ್ದರು. ಇದರ ಬೆನ್ನಲ್ಲೇ ಕೆಲ ಅವಕಾಶಗಳು ಅರಸಿ ಬಂದಿತ್ತು. ವಿಜಯ್ ದೇವರಕೊಂಡ ಜೊತೆ ನಟಿಸುತ್ತಿರುವ 'ಖುಷಿ' ಸಿನಿಮಾ ಶೂಟಿಂಗ್ ಮುಗಿಸಿ, ಸ್ಯಾಮ್ ಬಾಲಿವುಡ್ ಪ್ರವೇಶಿಸುತ್ತಾರೆ ಎನ್ನಲಾಗಿತ್ತು. ಸಾಕಷ್ಟು ಕಥೆಗಳನ್ನು ಕೂಡ ಕೇಳುತ್ತಿದ್ದರು. ಆದರೆ ಮಯೋಸೈಟಿಸ್‌ನಿಂದ ಬಳಲುತ್ತಿರುವ ನಟಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತೀಚೆಗೆ ಬಂದ 'ಯಶೋಧ' ಚಿತ್ರಕ್ಕೂ ಅಷ್ಟಾಗಿ ಪ್ರಚಾರ ಮಾಡಲು ಸಾಧ್ಯವಾಗಿರಲಿಲ್ಲ.
ಯಾವುದೇ
ರಿಹೆರ್ಸಲ್
ಇಲ್ಲದೇ
ನಟಿಸುತ್ತಿದ್ದ
ಏಕೈಕ
ನಟನನ್ನು
ಹೊಗಳಿದ
ನಯನತಾರಾ!
ಸಮಂತಾ ಅನಾರೋಗ್ಯದ ಹಿನ್ನಲೆಯಲ್ಲಿ ಆಕೆಯ ಕರಿಯರ್ ಬಗ್ಗೆ ಬಗೆ ಬಗೆ ಸುದ್ದಿ ಹರಿದಾಡುತ್ತಿದೆ. ಆಕೆ ಚಿತ್ರರಂಗದಿಂದಲೇ ದೂರಾಗುತ್ತಾರೆ ಅಂತೆಲ್ಲಾ ಸುದ್ದಿಯಾಗುತ್ತಿದೆ. ಈ ಬಗ್ಗೆ ಇದೀಗ ಆಕೆಯ ಮ್ಯಾನೇಜರ್ ಆಂಗ್ಲ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಮೇನಲ್ಲಿ ಹಿಂದಿ ಪ್ರಾಜೆಕ್ಟ್ ಶುರು
"ಸದ್ಯ ಸಮಂತಾ ವಿಶ್ರಾಂತಿ ಪಡೆಯುತ್ತಿದ್ದಾರೆ. ಸಂಕ್ರಾಂತಿ ಹಬ್ಬದ ನಂತರ ವಿಜಯ್ ದೇವರಕೊಂಡ ಜೊತೆ 'ಖುಷಿ' ಸಿನಿಮಾ ಚಿತ್ರೀಕರಣದಲ್ಲಿ ಭಾಗಿ ಆಗಲಿದ್ದಾರೆ. ಆ ನಂತರ ಬಾಲಿವುಡ್ ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಜನವರಿಯಲ್ಲೇ ಬಾಲಿವುಡ್ ಸಿನಿಮಾ ಶುರುವಾಗಬೇಕಿತ್ತು. ಆದರೆ ತಡವಾಗುತ್ತಿದೆ. ಮೇ ವೇಳೆಗೆ ಚಿತ್ರೀಕರಣದಲ್ಲಿ ಸಮಂತಾ ನಟಿಸಲಿದ್ದಾರೆ" ಎಂದು ಹೇಳಿದ್ದಾರೆ.

ಹೊಸ ಪ್ರಾಜೆಕ್ಟ್ ಒಪ್ಪಿಕೊಳ್ಳುತ್ತಿಲ್ಲ
"ಸಮಂತಾ ಒಪ್ಪಿಕೊಂಡಿರುವ ಯಾವುದೇ ಪ್ರಾಜೆಕ್ಟ್‌ನಿಂದ ಹೊರ ಬರುವುದಿಲ್ಲ. ಆ ಬಗ್ಗೆ ಕೇಳಿಬರುತ್ತಿರುವ ವದಂತಿಗಳೆಲ್ಲಾ ಸುಳ್ಳು. ಕೈಯಲ್ಲಿರುವ ಪ್ರಾಜೆಕ್ಟ್‌ಗಳನ್ನೆಲ್ಲಾ ಅವರು ಕಂಪ್ಲೀಟ್ ಮಾಡುತ್ತಾರೆ. ಆದರೆ ಸದ್ಯಕ್ಕೆ ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುವುದಿಲ್ಲ. ಇರುವ ಸಿನಿಮಾಗಳನ್ನ ಮುಗಿಸಿ ನಂತರ ಹೊಸ ಕಥೆಗಳನ್ನು ಕೇಳುತ್ತಾರೆ" ಎಂದು ಮಾಹಿತಿ ನೀಡಿದ್ದಾರೆ.

ಸಮಂತಾಗೆ ಅಪರೂಪದ ಕಾಯಿಲೆ
ನಟಿ ಸಮಂತಾ ಮಯೋಸೈಟಿಸ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಕಾಯಿಲೆಯಿಂದ ನಿಲ್ಲಲು ತೊಂದರೆ ಆಗುತ್ತದೆ, ತುಸು ಸಮಯ ನಿಂತರೆ ಸುಸ್ತು ಎನಿಸಿಬಿಡುತ್ತದೆ. ಕೂತರೆ ಏಳಲು ಬಹಳ ತ್ರಾಸ ಪಡಬೇಕಾಗುತ್ತದೆ. ಕೈಗಳನ್ನು ಮೇಲೆತ್ತಲು ಸಹ ಬಹಳ ಕಷ್ಟಪಡಬೇಕಾಗುತ್ತದೆ. ಏನನ್ನಾದರೂ ನುಂಗಲು ಕಷ್ಟ, ಉಸಿರಾಟವೂ ಕಷ್ಟವಾಗುತ್ತದೆ. ಇದಕ್ಕಾಗಿ ಸಮಂತಾ ನುರಿತ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಯಾವುದೇ ಕಾರಣಕ್ಕೂ ಇದರ ವಿರುದ್ಧ ಹೋರಾಟ ಬಿಡಲ್ಲ. ಗೆದ್ದು ಬರುತ್ತೇನೆ ಎಂದು ಸ್ಯಾಮ್ ಹೇಳಿದ್ದರು.

ಶೀಘ್ರದಲ್ಲೇ 'ಶಾಕುಂತಲಂ' ರಿಲೀಸ್
ಗುಣಶೇಖರ್ ನಿರ್ದೇಶನದ 'ಶಾಕುಂತಲಂ' ಚಿತ್ರದಲ್ಲಿ ಸಮಂತಾ ನಟಿಸಿದ್ದಾರೆ. ಕಾಳೀದಾಸನ ಶಾಕುಂತಲ ನಾಟಕ ಆಧರಿಸಿ ಈ ಸಿನಿಮಾ ಮೂಡಿ ಬಂದಿದೆ. ಸದ್ಯ ಚಿತ್ರದ ಪೋಸ್ಟ್ ಪ್ರೊಡಕ್ಷನ್ ವರ್ಕ್ ನಡೀತಿದೆ. ಚಿತ್ರದಲ್ಲಿ 'ಶಾಕುಂತಲೆ' ಆಗಿ ಸ್ಯಾಮ್ ಮಿಂಚಿದ್ದಾರೆ. ಶೀಘ್ರದಲ್ಲೇ ಸಿನಿಮಾ ತೆರೆಗೆ ಬರ್ತಿದೆ. ಬ್ರಿಟನ್‌ನ ಖ್ಯಾತ ನಿರ್ದೇಶಕ ಫಿಲಿಪ್ ಜಾನ್ ಅವರ 'ಅರೇಂಜ್‌ಮೆಂಟ್ಸ್ ಆಫ್ ಲವ್' ಹಾಲಿವುಡ್ ಚಿತ್ರದಲ್ಲೂ ಸಮಂತಾ ನಟಿಸ್ತಾರೆ ಎನ್ನಲಾಗಿತ್ತು.