For Quick Alerts
  ALLOW NOTIFICATIONS  
  For Daily Alerts

  ಟಾಲಿವುಡ್ ಪ್ರೊಡಕ್ಷನ್ ಹೌಸ್ ಮೇಲೆ ಐಟಿ ದಾಳಿ:ನಿರ್ಮಾಪಕರಿಗೆ ನಡುಕ

  |

  ಸೂಪರ್‌ಸ್ಟಾರ್ ಮನೆಗಳ ಮೇಲೆ ಐಟಿ ದಾಳಿ ಆಗುತ್ತಿದ್ದ ಸುದ್ದಿಗಳೇ ಹೆಚ್ಚಾಗಿ ಕೇಳಿ ಬರುತ್ತಿತ್ತು. ಆದ್ರೀಗ ನಿರ್ಮಾಣ ಸಂಸ್ಥೆ ಹಾಗೂ ನಿರ್ಮಾಪಕ ಮನೆಗಳ ಮೇಲೆನೂ ಐಟಿ ಅಧಿಕಾರಿಗಳು ದಾಳಿ ನಡೆಸುತ್ತಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಂದ ನಿರ್ಮಾಣ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಹೆಚ್ಚಾಗಿ ದಾಳಿ ಮಾಡುತ್ತಿದ್ದಾರೆ.

  ಮಾಧ್ಯಮ ವರದಿಗಳ ಪ್ರಕಾರ, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಟಾಲಿವುಡ್‌ನ ಹೆಸರಾಂತ ನಿರ್ಮಾಣ ಸಂಸ್ಥೆ ಮೇಲೆ ದಾಳಿ ಮಾಡಿದ್ದಾರೆ. ಹಾರಿಕಾ & ಹಾಸಿನಿ ನಿರ್ಮಾಣ ಸಂಸ್ಥೆ ಮೇಲೆ ಐಟಿ ರೈಡ್ ಆಗಿದೆ ಎಂದು ವರದಿಯಾಗಿದೆ. ಈ ವೇಳೆ ನಾಗವಂಶಿಯನ್ನು ಹೆಚ್ಚಿನ ವಿಚಾರಣೆಗೆ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.

  ಹಾರಿಕಾ & ಹಾಸಿನಿ ನಿರ್ಮಾಣ ಸಂಸ್ಥೆ ಇತ್ತೀಚೆಗೆ ಸಿನಿಮಾವನ್ನು ನಿರ್ಮಾಣ ಮಾಡಿಲ್ಲ. ದೊಡ್ಡ ಸಿನಿಮಾವನ್ನು ನಿರ್ಮಾಣ ಮಾಡಿ ಬಾಕ್ಸಾಫೀಸ್ ದೋಚಿರುವ ಪ್ರೊಡಕ್ಷನ್ ಹೌಸ್ ಅನ್ನು ಬಿಟ್ಟು ಈ ಸಂಸ್ಥೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳ ದಾಳಿ ಆಗಿದ್ದು, ತೆಲುಗು ಮಂದಿಗೆ ಶಾಕ್ ಆಗಿದೆ.

  ಹಾರಿಕಾ & ಹಾಸಿನಿ ನಿರ್ಮಾಣ ಸಂಸ್ಥೆ ಹಾಗೂ ಸಿತಾರಾ ನಿರ್ಮಾಣ ಸಂಸ್ಥೆಗಳು ಇತ್ತೀಚೆಗೆ ದೊಡ್ಡ ಸಿನಿಮಾಗಳನ್ನು ನಿರ್ಮಾಣ ಮಾಡಿಲ್ಲ. ನಿರ್ಮಾಪಕ ನಾಗವಂಶಿ ಕೂಡ ಡಿಜೆ ಟಿಲ್ಲು ಅನ್ನೋ ಸಿನಿಮಾಗೆ ಕಳೆದ ವರ್ಷ ಹಣ ಹೂಡಿದ್ದರು. ಆದರೂ, ಈ ಸಿನಿಮಾ ಬಿಗ್ ಬಜೆಟ್‌ನಲ್ಲಿ ನಿರ್ಮಾಣ ಮಾಡಿರಲಿಲ್ಲ.

  IT Raid On Tollywood Production House Industry Gets Shock

  ಈ ಸಂಸ್ಥೆ ಮೂರು ವರ್ಷದ ಹಿಂದೆ ಅಲ್ಲು ಅರ್ಜುನ್ ಅಭಿನಯದ 'ಅಲಾ ವೈಕುಂಠಪುರಮುಲೋ' ಸಿನಿಮಾವನ್ನು ನಿರ್ಮಾಣ ಮಾಡಿತ್ತು. ಇದು ಬಾಕ್ಸಾಫೀಸ್‌ನಲ್ಲಿ ಬಿಗ್ ಹಿಟ್ ಅಂತ ಸಾಬೀತಾಗಿತ್ತು. ಸದ್ಯ ಐಟಿ ಅಧಿಕಾರಿಗಳು ದಾಳಿ ಮಾಡಿದ್ದೇಕೆ? ಅನ್ನೋದು ಇನ್ನಷ್ಟೇ ಗೊತ್ತಾಗಬೇಕಿದೆ.

  English summary
  IT Raid On Tollywood Production House: Industry Gets Shock, Know More.
  Wednesday, January 18, 2023, 23:51
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X