For Quick Alerts
  ALLOW NOTIFICATIONS  
  For Daily Alerts

  ಶೀಘ್ರದಲ್ಲೇ ಸೌತ್ ಸಿನಿಮಾದಲ್ಲಿ ನಟಿಸುವ ಸುಳಿವು ಕೊಟ್ಟ ಜಾನ್ವಿ ಕಪೂರ್: ಯಾವ ಸಿನಿಮಾ, ಏನ್ ಕಥೆ?

  |

  ಅತಿಲೋಕ ಸುಂದರಿ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ದಕ್ಷಿಣದ ಸಿನಿಮಾದಲ್ಲಿ ನಟಿಸುವ ಬಗ್ಗೆ ಸುಳಿವು ಕೊಟ್ಟಿದ್ದಾರೆ. 'ಧಡಕ್' ಸಿನಿಮಾ ಮೂಲಕ ಬಣ್ಣದಲೋಕಕ್ಕೆ ಅಡಿಯಿಟ್ಟ ಜಾನ್ವಿ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ದೊಡ್ಡ ಬ್ರೇಕ್ ಮಾತ್ರ ಸಿಕ್ಕಿಲ್ಲ.

  ಜಾನ್ವಿ ಕಪೂರ್ ತೆಲುಗು ಸಿನಿಮಾಗಳಲ್ಲಿ ನಟಿಸುವ ಬಗ್ಗೆ ಸಾಕಷ್ಟು ದಿನಗಳಿಂದ ಚರ್ಚೆ ಆಗ್ತಿದೆ. ಆದರೂ ಯಾವುದು ಕೂಡ ಪಕ್ಕಾ ಆಗಿಲ್ಲ. 'ಜಗದೇಕ ವೀರುಡ ಅತಿಲೋಕ ಸುಂದರಿ' ಸೀಕ್ವೆಲ್‌ನಲ್ಲಿ ರಾಮ್‌ಚರಣ್- ಜಾನ್ವಿ ನಟಿಸ್ತಾರೆ ಎನ್ನಲಾಗಿತ್ತು. ಆದರೆ ಅದೆಲ್ಲ ಸುಳ್ಳು ಎಂದು ಬೋನಿ ಕಪೂರ್ ಈ ಹಿಂದೆ ಹೇಳಿದ್ದರು. ಕೊರಟಾಲ ಶಿವ ನಿರ್ದೇಶನದಲ್ಲಿ ಜ್ಯೂನಿಯರ್ ಎನ್‌ಟಿಆರ್ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಶ್ರೀದೇವಿ ಪುತ್ರಿ ನಾಯಕಿ ಎನ್ನುವ ಮಾತುಗಳು ಕೇಳಿಬರ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇನ್ನು ಸಿಕ್ಕಿಲ್ಲ.

  Janhvi Kapoor to make her tollywood debut? Dhadak actress drops major hint

  ಚೆನ್ನೈನಲ್ಲಿ ಅಂಗಡಿಯೊಂದರ ಉದ್ಘಾಟನೆಗೆ ಜಾನ್ವಿ ಕಪೂರ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ಜಾನ್ವಿ ಸಿನಿಮಾಗಳ ಬಗ್ಗೆ ಪ್ರಶ್ನೆ ಎದುರಾಗಿತ್ತು. ಇತ್ತೀಚೆಗೆ 'ಮಿಲಿ' ಸಿನಿಮಾ ರಿಲೀಸ್ ಆಯಿತು. 'ಬಾವಲ್' ಹಾಗೂ 'ಮಿಸ್ಟರ್ ಅಂಡ್ ಮಿಸ್ಸೆಸ್ ಮಾಹಿ' ಸಿನಿಮಾಗಳಲ್ಲಿ ನಟಿಸುತ್ತಿರುವುದಾಗಿ ಆಕೆ ಹೇಳಿದ್ದಾರೆ. 'ಬಾವಲ್' ಸಿನಿಮಾ ಶೀಘ್ರದಲ್ಲೇ ರಿಲೀಸ್ ಆಗುತ್ತೆ ಎಂದಿದ್ದಾರೆ. ಬೇರೆ ಭಾಷೆಗಳಲ್ಲಿ ನಟಿಸುವ ಬಗ್ಗೆ ಕೇಳಿದ ಪ್ರಶ್ನೆಗೆ ಶೀಘ್ರದಲ್ಲೇ ಸೌತ್ ಸಿನಿಮಾದಲ್ಲಿ ನಟಿಸುತ್ತಿದ್ದೇನೆ ಎಂದು 'ಧಡಕ್' ಬೆಡಗಿ ಹೇಳಿದ್ದಾರೆ.

  ಈ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಜಾನ್ವಿ ಕಪೂರ್ ತೆಲುಗು ಸಿನಿಮಾಗಳಲ್ಲಿ ನಟಿಸುವ ಬಗ್ಗೆ ಮಾತನಾಡಿದ್ದರು. ನಾನು ಜ್ಯೂನಿಯರ್ ಎನ್‌ಟಿಆರ್‌ಗೆ ದೊಡ್ಡ ಅಭಿಮಾನಿ. ಅವರ 'RRR' ಸಿನಿಮಾ ನೋಡಿ ಬೆರಗಾಗಿದ್ದೆ. ಕೊರಟಾಲ ಶಿವ ನಿರ್ದೇಶನದಲ್ಲೂ ನಟಿಸುವ ಆಸೆ ಇದೆ ಎಂದು ಹೇಳಿದ್ದರು. ಸದ್ಯ ಶೀಘ್ರದಲ್ಲೇ ಸೌತ್ ಸಿನಿಮಾದಲ್ಲಿ ನಟಿಸ್ತೀನಿ ಎಂದು ಹೇಳಿರುವುದು ಕೇಳಿ NTR30 ಚಿತ್ರದಲ್ಲಿ ಆಕೆ ನಟಿಸೊದಯ ಕನ್ಫರ್ಮ್ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಆದಷ್ಟು ಬೇಗ ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಸಿಗುತ್ತೆ ಎನ್ನಲಾಗ್ತಿದೆ. ಎನ್‌ಟಿಆರ್- ಕೊರಟಾಲ ಚಿತ್ರಕ್ಕೆ ಇನ್ನು ಹೆಸರು ಫೈನಲ್ ಆಗಿಲ್ಲ. ಇದು ತಾರಕ್ 30ನೇ ಸಿನಿಮಾ. ಹಾಗಾಗಿ ಇದನ್ನು NTR30 ಎಂದು ಕರೆಯಲಾಗ್ತಿದೆ.

  English summary
  Janhvi Kapoor to make her tollywood debut? Dhadak actress drops hint. Rumours are doing rounds in the film town that the makers of NTR30 are in talks with the Bollywood Actress. know more.
  Tuesday, December 27, 2022, 18:50
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X