For Quick Alerts
  ALLOW NOTIFICATIONS  
  For Daily Alerts

  ಜನವರಿ 10 ಮಹೇಶ್ & ಪವನ್ ಇಬ್ಬರ ಅಭಿಮಾನಿಗಳಿಗೂ ಬೇಸರದ ದಿನ

  |

  ಮಹೇಶ್ ಬಾಬು ಹಾಗೂ ಪವನ್ ಕಲ್ಯಾಣ್ ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ನಟರು. ಈ ಇಬ್ಬರ ಚಿತ್ರಗಳೆಂದರೆ ಮಿಶ್ರ ವಿಮರ್ಶೆ ಬಂದರೂ ಸಹ ನಿರ್ಮಾಕರಿಗೆ ಮಿನಿಮಮ್ ಗ್ಯಾರಂಟಿ ಕಲೆಕ್ಷನ್‌ ಅಂತೂ ಪಕ್ಕಾ.

  ಇನ್ನು ಚಿತ್ರಗಳಿಗೆ ಚೆನ್ನಾಗಿದೆ, ಕುಟುಂಬ ಸಮೇತ ವೀಕ್ಷಿಸಬಹುದು ಎಂಬ ರಿಪೋರ್ಟ್ ಬಂದರಂತೂ ಬಾಕ್ಸ್ ಆಫೀಸ್ ಧೂಳ್ ಎಬ್ಬಿಸಿಬಿಡ್ತಾರೆ ಈ ಬಾಕ್ಸ್ ಆಫೀಸ್ ಕಿಂಗ್ಸ್. ಪ್ಯಾನ್ ಇಂಡಿಯಾ ಟ್ರೆಂಡ್ ಶುರುವಾಗುವುದಕ್ಕೂ ಮುನ್ನವೇ ಭಾರತದಾದ್ಯಂತ ಒಳ್ಳೆಯ ಗಳಿಕೆ ‌ಮಾಡಿ ವಿತರಕರ ಜೇಬು ತುಂಬಿಸುತ್ತಿದ್ದ ಈ ನಟರ ಕೆಲ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಯಾರೂ ಊಹಿಸಿರದ ರೀತಿಯಲ್ಲಿ ಮಕಾಡೆ ಮಲಗಿದ ಉದಾಹರಣೆಗಳೂ ಸಹ ಇವೆ.

  ಹೌದು, ಜನವರಿ ತಿಂಗಳ 10ನೇ ತಾರೀಖಿನಂದೇ ಈ ಹಿಂದೆ ಬಿಡುಗಡೆಯಾಗಿದ್ದ ಈ ಇಬ್ಬರ ಸಿನಿಮಾಗಳು ಈ ರೀತಿ ಫ್ಲಾಪ್ ಆಗಿ ದುರಂತ ಕಂಡಿದ್ದವು. 2014ರ ಜನವರಿ 10ರಂದು ಸಂಕ್ರಾಂತಿ ಪ್ರಯುಕ್ತ ಚಿತ್ರಮಂದಿರದ ಅಂಗಳಕ್ಕೆ ಬಂದಿದ್ದ ಮಹೇಶ್ ಬಾಬು ಅಭಿನಯದ '1 ನೇನೊಕ್ಕಡಿನೆ' ಸೋತಿತ್ತು. ಚಿತ್ರ ಬಿಡುಗಡೆಯಾಗಿ ಸೋತು ಹಲವು ವರ್ಷಗಳ ಬಳಿಕ ಇಂಥ ಒಳ್ಳೆ ಚಿತ್ರ ಸೋಲುಂಡಿತಲ್ಲ ಎಂದು ಸಿನಿ ಪ್ರಿಯರು ಚಿತ್ರ ಅಂಡರ್‌ರೇಟೆಡ್ ಎಂದರು. ಆದರೆ ಕಾಲ ಆಗಲೇ ಮಿಂಚಿ ಹೋಗಿತ್ತು. ಬಹುಶಃ ಮಹೇಶ್ ಬಾಬು ಹಾಗೂ ನಿರ್ದೇಶಕ ಸುಕುಮಾರ್ ಕಾಂಬಿನೇಶನ್ ಎಂಬ ಅತಿ ನಿರೀಕ್ಷೆಯೇ ಚಿತ್ರಕ್ಕೆ ಮುಳುವಾಯಿತೇನೋ.

  ಇನ್ನು ಇದೇ ರೀತಿ 2018ರ ಜನವರಿ 10ರಂದು ಬಿಡುಗಡೆಯಾಗಿದ್ದ ಪವನ್ ಕಲ್ಯಾಣ್ ಹಾಗೂ ತ್ರಿವಿಕ್ರಮ್ ಶ್ರೀನಿವಾಸ್ ಜೋಡಿಯ ಅಜ್ಞಾತವಾಸಿ ಸಹ ಬಾಕ್ಸ್ ಆಫೀಸ್‌ನಲ್ಲಿ ಕೆಟ್ಟ ಸೋಲು ಕಂಡಿತ್ತು‌. ಈ ಹಿಂದೆ ಇದೇ ಜೋಡಿ ಕೊನೆಯದಾಗಿ 'ಅತ್ತಾರಿಂಟಿಕಿ ದಾರೇದಿ' ಎಂಬ ಇಂಡಸ್ಟ್ರಿ ಹಿಟ್ ನೀಡಿತ್ತು. ಆದರೆ ಈ ಬಾರಿ ಸರಿಯಾದ ಚಿತ್ರಕಥೆ, ಎಂಟರ್ಟೈನ್ಮೆಂಟ್ ಇಲ್ಲದೇ ಬಂದ ಜೋಡಿ ಫ್ಯಾನ್ಸ್ ಮನ ಗೆಲ್ಲುವಲ್ಲೂ ವಿಫಲಗೊಂಡಿತ್ತು. ಹೀಗಾಗಿ ಜನವರಿ 10 ಮಹೇಶ್ ಬಾಬು ಹಾಗೂ ಪವನ್ ಕಲ್ಯಾಣ್ ಇಬ್ಬರ ಅಭಿಮಾನಿಗಳಿಗೂ ಸಹ ಕರಾಳ ದಿನವೆಂದೇ ಹೇಳಬಹುದು‌.

  English summary
  January 10 black day for Mahesh Babu and Pawan Kalyan fans . Read on
  Tuesday, January 10, 2023, 20:42
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X