For Quick Alerts
  ALLOW NOTIFICATIONS  
  For Daily Alerts

  ಅಪರೂಪದ 'ಮಯೋಸೈಟಿಸ್' ಕಾಯಿಲೆಯಿಂದ ಬಳಲುತ್ತಿರೋ ಸಮಂತಾಗೆ ಜೂ.ಎನ್‌ಟಿಆರ್ ಹೇಳಿದ್ದೇನು?

  |

  ಸಮಂತಾ ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಿಂದ ದೂರವಿದ್ದರು. ಪ್ರತಿ ದಿನವೂ ತನ್ನ ಅಭಿಮಾನಿಗಳೊಂದಿಗೆ ಕನೆಕ್ಟ್ ಆಗುತ್ತಿದ್ದರು. ಹೊಚ್ಚ ಹೊಸ ಫೋಟೊಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದರು. ಸಿನಿಮಾ ಬಗ್ಗೆ ಮಾಹಿತಿ ನೀಡುತ್ತಿದ್ದರು.

  ಅಭಿಮಾನಿಗಳಿಂದ ದೂರವಿದ್ದ ನಟಿಯ ಆರೋಗ್ಯದ ಬಗ್ಗೆ ಚರ್ಚೆಯಾಗುತ್ತಿತ್ತು. ಸಮಂತಾ ಚರ್ಮ ರೋಗದಿಂದ ಬಳಲುತ್ತಿದ್ದಾರೆ. ಈ ಕಾರಣಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ ಅನ್ನೋ ಮಾತು ಕೇಳಿ ಬಂದಿತ್ತು. ಆದ್ರೀಗ ಸ್ವತ: ತಾನು ಅಪರೂಪದ 'ಮಯೋಸೈಟಿಸ್' ಕಾಯಿಲೆಯಿಂದ ಬಳಲುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

  ಡೈವೋರ್ಸ್.. ಡಿಪ್ರೆಷನ್.. ವರ್ಕೌಟ್.. ತಪ್ಪು ಮಾಡಿದ್ರಾ ಸಮಂತಾ? ಮೈಯೋಸಿಟಿಸ್ ಕಾಯಿಲೆ ಅಷ್ಟು ಡೇಂಜರಾ? ಡೈವೋರ್ಸ್.. ಡಿಪ್ರೆಷನ್.. ವರ್ಕೌಟ್.. ತಪ್ಪು ಮಾಡಿದ್ರಾ ಸಮಂತಾ? ಮೈಯೋಸಿಟಿಸ್ ಕಾಯಿಲೆ ಅಷ್ಟು ಡೇಂಜರಾ?

  ಇತ್ತೀಚೆಗೆ ಸಮಂತಾ ಸೋಶಿಯಲ್ ಮೀಡಿಯಾದಲ್ಲಿ ಫೋಟೊವೊಂದನ್ನು ಶೇರ್ ಮಾಡಿಕೊಂಡಿದ್ದರು. ಈ ಫೋಟೊ ಸಮಂತಾ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ. ಇನ್ನೊಂದು ಕಡೆ ಟಾಲಿವುಡ್‌ ಕೂಡ ಸಮಂತಾ ಬೇಗ ಗುಣಮುಖರಾಗಲಿ ಎಂದು ಹಾರೈಸುತ್ತಿದೆ. ಅದರಲ್ಲೂ ಸಮಂತಾಗೆ ಕೋರಂ ಭೀಮ್ ಖ್ಯಾತಿಯ ಜೂ.ಎನ್‌ಟಿಆರ್ ಧೈರ್ಯ ತುಂಬಿದ್ದಾರೆ.

  ಸಮಂತಾ ಭಾವನಾತ್ಮಕ ಪೋಸ್ಟ್

  ಸಮಂತಾ ಭಾವನಾತ್ಮಕ ಪೋಸ್ಟ್

  ಕೆಲವು ತಿಂಗಳಿಂದ ನಾನು 'ಮಯೋಸೈಟಿಸ್' ಅನ್ನೋ ಕಾಯಿಲೆಯಿಂದ ಬಳಲುತ್ತಿದ್ದೇನೆ. ಇದರಿಂದ ಗುಣಮುಖರಾದ ಬಳಿಕ ಈ ವಿಷಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕು ಎಂದಿದ್ದೆ. ಆದರೆ ಈ ಕಾಯಿಲೆಯಿಂದ ಗುಣಮುಖರಾಗುವುದಕ್ಕೆ ತಡವಾಗುತ್ತಿದೆ. ಧೈರ್ಯಾವಾಗಿ ಮುನ್ನುಗ್ಗುವ, ಗಟ್ಟಿ ಸ್ವಭಾವದ ನನಗೆ ದೌರ್ಬಲ್ಯಗಳನ್ನು ಒಪ್ಪಿಕೊಳ್ಳುವುದು ಕಷ್ಟ. ನಾನು ಸಂಪೂರ್ಣವಾಗು ಗುಣಮುಖರಾಗುತ್ತೇವೆ ಎಂಬ ವಿಶ್ವಾಸವನ್ನು ವೈದ್ಯರು ವ್ಯಕ್ತಪಡಿಸಿದ್ದಾರೆ. ಒಂದು ಸಮಯದಲ್ಲಿ ನನಗೆ ಇದನ್ನು ಸಹಿಸಿಕೊಳ್ಳಲಾಗುವುದಿಲ್ಲ ಎಂದು ಎನಿಸಿತ್ತು. ಆದರೆ, ಆ ಕೆಟ್ಟ ಅನುಭವ ಈಗಿಲ್ಲ. ಸದ್ಯ ಚೇತರಿಸಿಕೊಳ್ಳುತ್ತಿದ್ದೇನೆ." ಎಂದು ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ಬಳಿಕ ಜೂ.ಎನ್‌ಟಿಆರ್ ಸಮಂತಾಗೆ ಧೈರ್ಯ ತುಂಬಿದ್ದಾರೆ.

  ಸಮಂತಾಗೆ ಜೂ.ಎನ್‌ಟಿಆರ್ ಹೇಳಿದ್ದೇನು?

  ಸಮಂತಾಗೆ ಜೂ.ಎನ್‌ಟಿಆರ್ ಹೇಳಿದ್ದೇನು?

  ಇಷ್ಟು ದಿನ ಮಾನಸಿಕವಾಗಿ ಕುಗ್ಗಿದ್ದ ಸಮಂತಾ ಈಗ ದೈಹಿಕವಾಗಿ ನೋವು ಅನುಭವಿಸುತ್ತಿದ್ದಾರೆ. ತನಗೆ ಎದುರಾಗಿರುವ ಸಂಕಷ್ಟವಾನ್ನು ಧೈರ್ಯವಾಗಿಯೇ ಎದುರಿಸುತ್ತಿದ್ದಾರೆ. ಹೀಗಾಗಿ ಸಮಂತಾ ತನ್ನ ಅನಾರೋಗ್ಯದ ಬಗ್ಗೆ ಪೋಸ್ಟ್ ಮಾಡುತ್ತಿದ್ದಂತೆ ಜೂ.ಎನ್‌ಟಿಆರ್ ತನ್ನ ಟ್ವಿಟರ್ ಖಾತೆಯ ಮೂಲಕ ಧೈರ್ಯ ತುಂಬಿದ್ದಾರೆ. "ಸ್ಯಾಮ್ ಆದಷ್ಟು ಬೇಗ ಗುಣಮುಖರಾಗಿ, ನಿಮಗಾಗಿ ಎಲ್ಲಾ ಶಕ್ತಿಯನ್ನು ಕಳಿಸಿಕೊಡುತ್ತಿದ್ದೇನೆ" ಎಂದು ಜೂ.ಎನ್‌ಟಿಆರ್ ಟ್ವೀಟ್ ಮಾಡಿದ್ದಾರೆ.

  ಜೂ.ಎನ್‌ಟಿಆರ್ ಜೊತೆ ಸಮಂತಾ ನಟನೆ

  ಜೂ.ಎನ್‌ಟಿಆರ್ ಜೊತೆ ಸಮಂತಾ ನಟನೆ

  ಸಮಂತಾ ಹಾಗೂ ಜೂ.ಎನ್‌ಟಿಆರ್ ಇಬ್ಬರೂ ಟಾಲಿವುಡ್‌ನಲ್ಲಿ ಒಳ್ಳೆಯ ಸ್ನೇಹಿತರು. ಇಬ್ಬರೂ ಹಲವು ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದಾರೆ. ಈಗಾಗಲೇ ಸೂಪರ್ ಹಿಟ್ ಸಿನಿಮಾಗಳಾದ 'ಬೃಂದಾವನಂ', 'ರಾಮಯ್ಯ ವಸ್ತಾವಯ್ಯ', 'ರಭಸ' ಹಾಗೂ 'ಜನತಾ ಗ್ಯಾರೇಜ್' ಅಂತಹ ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದಾರೆ. ಹೀಗಾಗಿ ಇಬ್ಬರಲ್ಲೂ ಉತ್ತ ಬಾಂಧವ್ಯವಿದೆ. ಈ ಕಾರಣಕ್ಕೆ ಜೂ.ಎನ್‌ಟಿಆರ್ 'ಗೆಟ್‌ ವೆಲ್ ಸೂನ್..' ಸಂದೇಶವನ್ನು ರವಾನಿಸಿದ್ದಾರೆ.

  'ಯಶೋದಾ' ರಿಲೀಸ್‌ಗೆ ರೆಡಿ

  'ಯಶೋದಾ' ರಿಲೀಸ್‌ಗೆ ರೆಡಿ

  ಸಮಂತಾ ಅನಾರೋಗ್ಯದ ಬೆನ್ನಲ್ಲೇ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಆಸ್ಪತ್ರೆಯಲ್ಲಿ ಇದ್ದುಕೊಂಡೇ ಆ ಸಿನಿಮಾಗೆ ಡಬ್ಬಿಂಗ್ ಕೂಡ ಮಾಡುತ್ತಿದ್ದಾರೆ. ಅದೇ ಫೋಟೊವನ್ನು ಸಮಂತಾ ಶೇರ್ ಮಾಡಿಕೊಂಡಿದ್ದಾರೆ. 'ಯಶೋದಾ' ಸಿನಿಮಾ ನವೆಂಬರ್ 11ರಂದು ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. ಈ ಬೆನ್ನಲ್ಲೇ ಸಮಂತಾ ಪ್ರಚಾರಕ್ಕೆ ಬರಲು ಸಾಧ್ಯವಾಗುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ, ಪರೋಕ್ಷವಾಗಿ ಸಿನಿಮಾ ಪ್ರಚಾರಕ್ಕೆ ಮುಂದಾಗಿದ್ದಾರೆ.

  English summary
  Jr Ntr Gave Courage to Samantha On her Recent Post On Illness, Know More
  Sunday, October 30, 2022, 20:02
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X