For Quick Alerts
  ALLOW NOTIFICATIONS  
  For Daily Alerts

  ಕಾರಿನ ನಂಬರ್‌ಗೆ ಲಕ್ಷಾಂತರ ಹಣ ಕೊಟ್ಟ ಜೂ.ಎನ್‌ಟಿಆರ್

  |

  ಜೂ.ಎನ್‌ಟಿಆರ್ ಕಾರುಗಳ ಬಗ್ಗೆ ವಿಶೇಷ ಆಸಕ್ತಿ ಇರುವ ನಟ. ಕೆಲವು ದಿನಗಳ ಹಿಂದಷ್ಟೆ ಐಶಾರಾಮಿ, ದುಬಾರಿ ಲ್ಯಾಂಬೊರ್ಗಿನಿ ಉರುಸ್ ಕಾರನ್ನು ಜೂ.ಎನ್‌ಟಿಆರ್ ಖರೀದಿಸಿದ್ದಾರೆ.

  ಲ್ಯಾಂಬೊರ್ಗಿನಿ ಉರುಸ್ ಕಾರಿಗೆ 4 ಕೋಟಿಗೂ ಹೆಚ್ಚು ಹಣ ನೀಡಿರುವ ನಟ ಜೂ ಎನ್‌ಟಿಆರ್, ಆ ಉರುಸ್ ಕಾರಿನ ನಂಬರ್‌ಗೆ ಈಗ ಲಕ್ಷಾಂತರ ಹಣ ವ್ಯಯ ಮಾಡಿದ್ದಾರೆ.

  ಜೂ.ಎನ್‌ಟಿಆರ್, ಉರುಸ್‌ ಕಾರಿನ ತಮ್ಮ ಅದೃಷ್ಟದ ಸಂಖ್ಯೆಯನ್ನು ಹಾಕಿಸಿಕೊಂಡಿದ್ದಾರೆ. ಅದುವೇ 9999 ಈ ಸಂಖ್ಯೆಗೆ ದೊಡ್ಡ ಮೊತ್ತದ ಹಣವನ್ನು ಆರ್‌ಟಿಓಗೆ ನೀಡಿದ್ದಾರೆ ಜೂ.ಎನ್‌ಟಿಆರ್.

  ಬೇಡಿಕೆ ಇರುವ ಸಂಖ್ಯೆಗಳನ್ನು ಆರ್‌ಟಿಓ ಇಲಾಖೆ ಹರಾಜು ಹಾಕುತ್ತದೆ, ಸಂಖ್ಯೆ ಅವಶ್ಯಕತೆ ಇರುವವರು ಹರಾಜಿನಲ್ಲಿ ಕೂಗಿ ನಂಬರ್ ಪಡೆಯಬೇಕಾಗುತ್ತದೆ. 9999 ಬಹುಜನರ ಮೆಚ್ಚಿನ ನಂಬರ್ ಹಾಗಾಗಿ ಈ ಸಂಖ್ಯೆಗೆ ಬೇಡಿಕೆ ಹೆಚ್ಚು, ಹಾಗಾಗಿ ಹೆಚ್ಚು ಜನ ಈ ನಂಬರ್‌ಗೆ ಹರಾಜು ಕೂಗಿದ ಕಾರಣ ನಂಬರ್‌ನ ಬೆಲೆ ಏರಿದೆ. ಬೆಲೆ ಏರಿದರೂ ಬಿಡದ ಜೂ ಎನ್‌ಟಿಆರ್ ಬರೋಬ್ಬರಿ 17 ಲಕ್ಷ ನೀಡಿ ನಂಬರ್ ಅನ್ನು ಪಡೆದಿದ್ದಾರೆ.

  ಜೂ.ಎನ್‌ಟಿಆರ್ ಅವರ ಲ್ಯಾಂಬೊರ್ಗಿಸಿ ಉರುಸ್ ಕಾರಿನ ನಂಬರ್ ಈಗ ಟಿಎಸ್ 09 ಎಫ್‌ಎಸ್ 9999 ಆಗಿದೆ. 9 ಜೂ ಎನ್‌ಟಿಆರ್‌ಗೆ ಅದೃಷ್ಟದ ಸಂಖ್ಯೆಯಾಗಿದ್ದು, ನಂಬರ್ ಪ್ಲೇಟ್‌ನಲ್ಲಿ ಕೇವಲ 9 ಸಂಖ್ಯೆಗಳು ಮಾತ್ರವೇ ಇರುವಂತೆ ಮಾಡಿಕೊಂಡಿಕೊಂಡಿದ್ದಾರೆ ಜೂ ಎನ್‌ಟಿಆರ್.

  ಜೂ ಎನ್‌ಟಿಆರ್ ಖರೀದಿಸಿರುವ ಕಾರಿನ ಎಕ್ಸ್ ಶೋರೂಂ ಬೆಲೆ 3.16 ಕೋಟಿ. ಕಾರಿನ ಆನ್‌ರೋಡ್ ಬೆಲೆ ಅಂದಾಜು 5 ಕೋಟಿ ಇದೆ. ಲ್ಯಾಂಬೋರ್ಗಿನಿ ಉರುಸ್ ಗ್ರಾಫೈಟ್ ಕ್ಯಾಪ್ಸುಲ್ ಕಾರು ಇದಾಗಿದ್ದು, ಈ ಮಾದರಿಯ ಭಾರತದ ಮೊದಲ ಕಾರನ್ನು ಜೂ ಎನ್‌ಟಿಆರ್ ಖರೀದಿ ಮಾಡಿದ್ದರು. 'ದೇಶದ ಮೊದಲ ಲ್ಯಾಂಬೋರ್ಗಿನಿ ಉರುಸ್ ಗ್ರಾಫೈಟ್ ಕ್ಯಾಪ್ಸುಲ್ ಕಾರು ಹೈದರಾಬಾದ್‌ನಲ್ಲಿ ತನ್ನ ಮನೆ ಕಂಡುಕೊಂಡಿದೆ' ಎಂದು ಸಾಮಾಜಿಕ ಜಾಲತಾಣದ ಫ್ಯಾನ್ಸ್ ಖಾತೆಗಳಲ್ಲಿ ಫೋಟೋಗಳು ವೈರಲ್ ಆಗಿದ್ದವು.

  ಸ್ಯಾಂಡಲ್‌ವುಡ್‌ ನಟರಲ್ಲಿ ಮೂವರ ಬಳಿ ಲ್ಯಾಂಬರ್ಗಿನಿ ಉರುಸ್ ಕಾರಿದೆ, ಪುನೀತ್ ರಾಜ್‌ಕುಮಾರ್, ದರ್ಶನ್ ಹಾಗೂ ನಿಖಿಲ್ ಕುಮಾರಸ್ವಾಮಿ ಬಳಿಯೂ ಲ್ಯಾಂಬರ್ಗಿನಿ ಉರುಸ್ ಕಾರು ಇದೆ.

  English summary
  Jr NTR pays Rs 17 lakhs for a fancy number for his Lamborghini Urus car. He Purchased the car in this August.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X