For Quick Alerts
  ALLOW NOTIFICATIONS  
  For Daily Alerts

  ಜಪಾನ್‌ನಲ್ಲಿ RRR ಬಾಕ್ಸಾಫೀಸ್‌ ಕಲೆಕ್ಷನ್ ಎಷ್ಟು? 'ಕೆಜಿಎಫ್ 2' ದಾಖಲೆ ಅಳಿಸಿ ಹಾಕುತ್ತಾ?

  |

  ರಾಜಮೌಳಿ ನಿರ್ದೇಶನ RRR ಸಿನಿಮಾ ಬಾಕ್ಸಾಫೀಸ್‌ ಕಲೆಕ್ಷನ್ ಅನ್ನು 'ಕೆಜಿಎಫ್ 2' ಅಳಿಸಿ ಹಾಕಿತ್ತು. ರಾಜಮೌಳಿ ಅಂತಹ ನಿರ್ದೇಶಕನ ಸಿನಿಮಾಗೆ ಟಕ್ಕರ್ ಕೊಟ್ಟ 'ಕೆಜಿಎಫ್ 2' ಈ ವರ್ಷ ಅತೀ ಹೆಚ್ಚು ಗಳಿಕೆ ಸಿನಿಮಾ.

  ಆದರೆ, RRR ಓಟಿಟಿಯಲ್ಲಿ ತೆರೆಕಂಡ ಬಳಿಕ ಅದರ ಜನಪ್ರಿಯತೆ ಮೂರು ಪಟ್ಟು ಹೆಚ್ಚಾಗಿತ್ತು. ಈ ಜನಪ್ರಿಯನ್ನು ಬಳಸಿಕೊಂಡು ರಾಜಮೌಳಿ ಹಾಗೂ ತಂಡ RRR ಸಿನಿಮಾವನ್ನು ಜಪಾನ್‌ನಲ್ಲಿ ಬಿಡುಗಡೆ ಮಾಡುವುದಕ್ಕೆ ಮುಂದಾಗಿದೆ.

  ಆಸ್ಕರ್ ವೇದಿಕೆ ಮೇಲೆ ಜೂ.ಎನ್‌ಟಿಆರ್ ಹಾಗೂ ರಾಮ್ ಚರಣ್ ಡ್ಯಾನ್ಸ್?ಆಸ್ಕರ್ ವೇದಿಕೆ ಮೇಲೆ ಜೂ.ಎನ್‌ಟಿಆರ್ ಹಾಗೂ ರಾಮ್ ಚರಣ್ ಡ್ಯಾನ್ಸ್?

  ಜಪಾನ್‌ನಲ್ಲಿ ಸಿನಿಮಾ ರಿಲೀಸ್ ಮಾಡುವುದಕ್ಕೆ ಅಂತಾನೇ ರಾಜಮೌಳಿ, ಜೂ.ಎನ್‌ಟಿಆರ್ ಹಾಗೂ ರಾಮ್‌ ಚರಣ್ ಜಪಾನ್‌ಗೆ ತೆರಳಿದ್ದರು. ಕೆಲವು ದಿನಗಳ ಕಾಲ ಸಿನಿಮಾ ಪ್ರಚಾರದಲ್ಲಿ ಭಾಗಿಯಾಗಿದ್ದರು. ಸದ್ಯ ಜಪಾನ್‌ನಲ್ಲಿ RRR ರಿಲೀಸ್ ಆಗಿದ್ದು, ಸುಮಾರು ನಾಲ್ಕು ದಿನಗಳ ಕಲೆಕ್ಷನ್ ಎಷ್ಟು ಅಂತ ಲೆಕ್ಕ ಹಾಕಲಾಗುತ್ತಿದೆ. ಅಷ್ಟಕ್ಕೂ ಜಪಾನ್‌ನಲ್ಲಿ RRR ಸಿನಿಮಾಗೆ ರೆಸ್ಪಾನ್ಸ್ ಹೇಗಿದೆ? ಅನ್ನುವುದನ್ನು ತಿಳಿಯಲು ಮುಂದೆ ಓದಿ.

  RRR ಜಪಾನ್‌ನಲ್ಲಿ ರಿಲೀಸ್‌

  RRR ಜಪಾನ್‌ನಲ್ಲಿ ರಿಲೀಸ್‌

  ರಾಜಮೌಳಿ ನಿರ್ದೇಶಿಸಿದ ಸಿನಿಮಾ RRR ವಿದೇಶದಲ್ಲಿಯೂ ಜನಪ್ರಿಯತೆ ಗಳಿಸಿದೆ. ಅಮೆರಿಕಾ ಸೇರಿದಂತೆ ಹಲವೆಡೆ ಈ ಸಿನಿಮಾ ನೋಡಿ ಮೆಚ್ಚುಗೆ ಸೂಚಿಸಿದ್ದಾರೆ. ಅಲ್ಲದೆ ಭಾರತದ ಸಿನಿಮಾಗಳಿಗೆ ಜಪಾನ್‌ನಲ್ಲಿ ಫ್ಯಾನ್ಸ್ ಇದ್ದಾರೆ. ಹೀಗಾಗಿ RRR ಸಿನಿಮಾವನ್ನು ಅಕ್ಟೋಬರ್ 21ರಂದು ಜಪಾನ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಇಂದಿಗೆ (ಅಕ್ಟೋಬರ್ 25) ಸಿನಿಮಾ ಬಿಡುಗಡೆಯಾಗಿ ಐದು ದಿನಗಳಾಗಿವೆ. ಕಳೆದ ನಾಲ್ಕು ದಿನಗಳಲ್ಲಿ RRR ಸಿನಿಮಾ ಕಲೆಕ್ಷನ್ ಆಶಾದಾಯಕವಾಗಿವೆ.

  RRRಗೆ ಜಪಾನ್‌ನಲ್ಲಿ ಪ್ರತಿಕ್ರಿಯೆ ಹೇಗಿದೆ?

  RRRಗೆ ಜಪಾನ್‌ನಲ್ಲಿ ಪ್ರತಿಕ್ರಿಯೆ ಹೇಗಿದೆ?

  ರಾಜಮೌಳಿ ನಿರ್ದೇಶನದ RRR ಸಿನಿಮಾ ಜಪಾನ್‌ನಲ್ಲಿ ಉತ್ತಮ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ. ಜಪಾನ್‌ನಲ್ಲಿ ಈ ಸಿನಿಮಾವನ್ನು ದೊಡ್ಡ ಮಟ್ಟದಲ್ಲಿಯೇ ಬಿಡುಗಡೆ ಮಾಡಿದ್ದಾರೆ. ಜಪಾನ್‌ನ ಸುಮಾರು 210ಕ್ಕೂ ಹೆಚ್ಚು ಸ್ಥಳಗಳಲ್ಲಿ ಸಿನಿಮಾ ರಿಲೀಸ್ ಆಗಿದೆ. ಬಹುತೇಕ ಕಡೆಗಳಲ್ಲಿ ಈ ಸಿನಿಮಾಗೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ. ಮೊದಲ ನಾಲ್ಕು ದಿನಗಳಲ್ಲಿ ಸುಮಾರು 3 ಕೋಟಿ 61 ಲಕ್ಷ ರೂಪಾಯಿ ಕಲೆಕ್ಷನ್ ಆಗಿದೆ ಎನ್ನಲಾಗಿದೆ. ಮೊದಲ ದಿನ 1 ಕೋಟಿ 06 ಲಕ್ಷ ರೂಪಾಯಿ ಗಳಿಕೆ ಕಂಡಿದೆ.

  'ಸಾಹೋ' ಹಿಂದಿಕ್ಕಿದ RRR

  'ಸಾಹೋ' ಹಿಂದಿಕ್ಕಿದ RRR

  ಜಪಾನ್‌ನಲ್ಲಿ RRR ಸಿನಿಮಾ ಮೊದಲ ದಿನವೇ ಪ್ರಭಾಸ್ ಸಿನಿಮಾದ ದಾಖಲೆಯನ್ನು ಮುರಿದಿದೆ. ಯಂಗ್ ರೆಬೆಲ್ ಸ್ಟಾರ್ ಅಭಿನಯದ 'ಸಾಹೋ' ಸಿನಿಮಾ ಜಪಾನ್‌ನಲ್ಲಿ ಮೊದಲ ದಿನ 90 ಲಕ್ಷ ರೂಪಾಯಿಯನ್ನು ಕಲೆ ಹಾಕಿತ್ತು. ಆ ದಾಖಲೆಯನ್ನು RRR ಹಿಂದಕ್ಕೆ ಹಾಕಿದ್ದು, ಫಸ್ಟ್ ಡೇನೇ 1.06 ಕೋಟಿ ರೂಪಾಯಿ ಕಲೆ ಹಾಕಿದೆ. ಈ ಮೂಲಕ ಜಪಾನ್‌ನಲ್ಲಿ ಮೊದಲ ದಿನವೇ ಅತೀ ಹೆಚ್ಚು ಗಳಿಕೆ ಕಂಡ ಭಾರತದ ಸಿನಿಮಾ ಎಂಬ ರೆಕಾರ್ಡ್ ಮಾಡಿದೆ.

  'ಕೆಜಿಎಫ್ 2' ದಾಖಲೆ ಮುರಿಯುತ್ತಾ?

  'ಕೆಜಿಎಫ್ 2' ದಾಖಲೆ ಮುರಿಯುತ್ತಾ?

  ರಾಕಿಂಗ್ ಸ್ಟಾರ್ ಯಶ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್‌ ಸಿನಿಮಾ 'ಕೆಜಿಎಫ್ 2' ಇದೂವರೆಗೂ 1250 ಕೋಟಿ ರೂ. ಕಲೆಕ್ಷನ್ ಮಾಡಿದೆ. ಅದೇ ಜೂ.ಎನ್‌ಟಿಆರ್ ಹಾಗೂ ರಾಮ್‌ ಚರಣ್‌ ಸಿನಿಮಾ RRR 1150 ಕೋಟಿ ಗಳಿಕೆ ಎಂದು ವರದಿಯಾಗಿತ್ತು. ಗಳಿಕೆಯಲ್ಲಿ 100 ಕೋಟಿ ರೂಪಾಯಿಯಷ್ಟು ಹಿಂದಿರುವ RRR ಜಪಾನ್‌ ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆಯುತ್ತಾ? 100 ಕೋಟಿ ಕಲೆಕ್ಷನ್ ಮಾಡಿದ್ರೆ, 'ಕೆಜಿಎಫ್ 2' ದಾಖಲೆಯನ್ನು ಹಿಂದಿಕ್ಕೆ ಹಾಕಬಹುದು. ಆದರೆ, ಜಪಾನ್‌ನಲ್ಲಿ ಆರಂಭದಲ್ಲಿ ಭರ್ಜರಿ ಗಳಿಕೆ ಕಾಣದೆ ಇರೋದ್ರಿಂದ 'ಕೆಜೆಎಫ್ 2' ದಾಖಲೆ ಮುರಿಯುತ್ತಾ? ಅನ್ನೋ ಅನುಮಾನವಿದೆ.

  English summary
  Jr NTR Ram Charan SS Rajamouli RRR Movie Box Office Collection In Japan, Know More.
  Tuesday, October 25, 2022, 18:57
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X