For Quick Alerts
  ALLOW NOTIFICATIONS  
  For Daily Alerts

  ಒಂದೇ ಏಟಿಗೆ ರಾಮ್‌ಚರಣ್ ಹಿಂದಿಕ್ಕಿದ ಎನ್‌ಟಿಆರ್; ಟ್ವಿಟರ್‌ನಲ್ಲಿ ಹೊಸ ರೆಕಾರ್ಡ್

  |

  ಎಸ್. ಎಸ್ ರಾಜಮೌಳಿ ನಿರ್ದೇಶನದಲ್ಲಿ ರಾಮ್‌ಚರಣ್ ತೇಜಾ ಮತ್ತು ಜ್ಯೂ. ಎನ್‌ಟಿಆರ್ ಜೋಡಿಯ ಆರ್‌ಆರ್‌ಆರ್‌ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿ ದಾಖಲೆ ಬರೆದಿದ್ದು ಗೊತ್ತೇ ಇದೆ. 1000 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ಥಿಯೇಟರ್‌ಗಳಲ್ಲಿ ಧೂಳೆಬ್ಬಿಸಿದ ಸಿನಿಮಾ ಸದ್ಯ ಒಟಿಟಿಯಲ್ಲೂ ದೊಡ್ಡಮಟ್ಟದಲ್ಲಿ ಸೌಂಡ್ ಮಾಡ್ತಿದೆ. ನೆಟ್‌ಫ್ಲಿಕ್ಸ್ ಮೂಲಕ ವಿಶ್ವದಾದ್ಯಂತ ಆರ್‌ಆರ್‌ಆರ್‌ ಸಿನಿಮಾ ರೀಚ್ ಆಗಿದೆ. ಕಳೆದ ಕೆಲ ದಿನಗಳಿಂದ ಹಾಲಿವುಡ್ ಸಿನಿರಸಿಕರು ಸಿನಿಮಾ ನೋಡಿ ಬಹುಪರಾಕ್ ಹೇಳ್ತಿದ್ದಾರೆ. ಹಾಲಿವುಡ್ ಫಿಲ್ಮ್ ಮೇಕರ್ಸ್ ಕೂಡ ಸಿನಿಮಾ ಬಗ್ಗೆ ಮಾತನಾಡುತ್ತಿದ್ದಾರೆ. ರಾಜಮೌಳಿ ಟೇಕಿಂಗ್, ಚರಣ್ ಹಾಗೂ ತಾರಕ್ ಪರ್ಫಾರ್ಮೆನ್‌ನ ಕೊಂಡಾಡುತ್ತಿದ್ದಾರೆ. ಇತ್ತೀಚೆಗೆ ವಿದೇಶಿಗರೊಬ್ಬರು ಆರ್‌ಆರ್‌ಆರ್ ಚಿತ್ರದ ಇಂಟರ್‌ವಲ್ ಫೈಟ್‌ನ ಸಣ್ಣ ವೀಡಿಯೋ ತುಣುಕನ್ನು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ್ದಾರೆ. ಅಚ್ಚರಿ ಅನ್ನುವಂತೆ ಆ ವೀಡಿಯೋ 33 ಗಂಟೆಗಳಲ್ಲಿ 1೦ ಮಿಲಿಯನ್ ವೀವ್ಸ್ ಸಾಧಿಸಿದೆ. ಟ್ವಿಟ್ಟರ್‌ನಲ್ಲಿ ಈವರೆಗೆ ಭಾರತದ ಮತ್ಯಾವುದೇ ವಿಡಿಯೋ ಇಂತಹ ಸೆನ್ಸೇಷನ್ ಕ್ರಿಯೇಟ್ ಮಾಡಿರಲಿಲ್ಲ. ಆ ಮೂಲಕ ರಾಮ್‌ಚರಣ್ ಅಭಿಮಾನಿಗಳಿಗೆ ಶಾಕ್ ಕೊಟ್ಟಿದೆ.

  ಆರ್‌ಆರ್‌ಆರ್ ಸಿನಿಮಾದಲ್ಲಿ ಇಂಟರ್‌ವಲ್ ಫೈಟ್‌ ಸೀನ್ ಪ್ರೇಕ್ಷಕರಿಗೆ ಸಖತ್ ಕಿಕ್ ಕೊಟ್ಟಿತ್ತು. ಭೀಮ್ ಲಾರಿಯಲ್ಲಿ ಕಾಡು ಪ್ರಾಣಿಗಳ ಜೊತೆ ಬ್ರಿಟೀಷರ ಕೋಟೆ ಭೇದಿಸುವ ಸೀನ್ ಅದು. ಫಸ್ಟ್ ಟೈಂ ಸಿನಿಮಾ ನೋಡುವ ಪ್ರೇಕ್ಷಕರಿಗೆ ಈ ಸೀನ್ ಕೊಟ್ಟ ಸರ್ಪ್ರೈಸ್ ಅಷ್ಟಿಷ್ಟಲ್ಲ. ಇಡೀ ಸಿನಿಮಾ ಒಂದು ತೂಕವಾದ್ರೆ, ಇದೊಂದು ಸೀನ್ ಒಂದು ತೂಕ. ಮೌಳಿ ವಿಷನ್, ಮೇಕಿಂಗ್ ಸ್ಟೈಲ್, ಎಲಿವೇಷನ್ ಹೇಗಿರುತ್ತೆ ಅನ್ನೋದನ್ನು ಮತ್ತೊಮ್ಮೆ ಈ ಸನ್ನಿವೇಶ ಸಾರಿ ಹೇಳಿತ್ತು.ಸದ್ಯ ಒಟಿಟಿ ಮೂಲಕ ವಿದೇಶಿಗರು ಆರ್‌ಆರ್‌ಆರ್‌ ಸಿನಿಮಾ ನೋಡಿ ಎಂಜಾಯ್ ಮಾಡ್ತಿದ್ದಾರೆ. ಚಿತ್ರದ ಪ್ರತಿಯೊಂದು ದೃಶ್ಯದ ಕುರಿತು ಮಾತನಾಡುತ್ತಿದ್ದಾರೆ.ಸಿನಿಮಾ ನೋಡಿ ತಮ್ಮ ಅನಿಸಿಕೆಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ತಿದ್ದಾರೆ. ಅದರಲ್ಲೂ ಈ ಸೀನ್ ಬಗ್ಗೆ ಸಿಕ್ಕಾಪಟ್ಟೆ ಮಾತನಾಡ್ತಿದ್ದಾರೆ. ಸದ್ಯ ಈ ಸಣ್ಣ ವಿಡಿಯೋ 10 ಮಿಲಿಯನ್ ವೀವ್ಸ್ ಸಾಧಿಸಿರೋದು ನೋಡ್ತಿದ್ರೆ, ಪ್ರಪಂಚದ ಮೂಲೆ ಮೂಲೆಯಲ್ಲಿ ಆರ್‌ಆರ್‌ಆರ್ ಕ್ರೇಜ್ ಹೇಗಿದೆ ಅನ್ನೋದು ಗೊತ್ತಾಗುತ್ತೆ.

  ಆಸ್ಕರ್‌ಗೆ 'RRR'! ಇಲ್ಲಿದೆ ಇತರೆ ಸಂಭವನೀಯ ಸಿನಿಮಾಗಳ ಪಟ್ಟಿಆಸ್ಕರ್‌ಗೆ 'RRR'! ಇಲ್ಲಿದೆ ಇತರೆ ಸಂಭವನೀಯ ಸಿನಿಮಾಗಳ ಪಟ್ಟಿ

  ಚರಣ್ ಎದುರು ಮತ್ತೆ ತಾರಕ್ ಮೇಲುಗೈ

  ಚರಣ್ ಎದುರು ಮತ್ತೆ ತಾರಕ್ ಮೇಲುಗೈ

  ಆರ್‌ಆರ್‌ಆರ್‌ ಸಿನಿಮಾ ರಿಲೀಸ್ ಆದ ದಿನದಿಂದಲೂ ಚರಣ್ ಹಾಗೂ ತಾರಕ್ ಇಬ್ಬರಲ್ಲಿ ಯಾರ ಪಾತ್ರಕ್ಕೆ ಹೆಚ್ಚು ಸ್ಕೋಪ್ ಸಿಕ್ಕಿದೆ? ಯಾರು ಚೆನ್ನಾಗಿ ಪರ್ಫಾರ್ಮ್ ಮಾಡಿದ್ದಾರೆ? ಅನ್ನೋ ಚರ್ಚೆ ನಡೀತಾನೇ ಇದೆ. ಕೆಲವರ ಪ್ರಕಾರ, ರಾಮ್ ಚರಣ್ ಮಾಡಿರೋ ಅಲ್ಲೂರಿ ಸೀತಾರಾಮರಾಜು ಪಾತ್ರಕ್ಕೆ ಹೆಚ್ಚು ಇಂಪಾರ್ಟೆನ್ಸ್ ಇದೆ. ನಾಯಕ ರಾಮ್ ಎದುರು ಭೀಮ್ ಪೋಷಕ ಪಾತ್ರ ಅನ್ನೋದು ರಾಮ್‌ಚರಣ್ ಅಭಿಮಾನಿಗಳ ವಾದ. ನಮ್ಮ ಹೀರೊನ ಚಿತ್ರದಲ್ಲಿ ಬೇಕಂತಲೇ ರಾಜಮೌಳಿ ಡಮ್ಮಿ ಮಾಡಿದ್ದಾರೆ ಅಂತ ತಾರಕ್ ಅಭಿಮಾನಿಗಳು ಬೇಸರಗೊಂಡಿದ್ದರು. ಅದೇ ಕಾರಣಕ್ಕೆ ರಾಜಮೌಳಿನ ಮನಬಂದಂತೆ ಟ್ರೋಲ್ ಮಾಡಿದ್ದರು. ಆದರೆ ಕೆಲವರು ಮಾತ್ರ ತಾರಕ್ ಪಾತ್ರವೇ ಚೆನ್ನಾಗಿದೆ ಅಂತಾರೆ. ಆದರೆ ಇದೊಂದು ವಿಡಿಯೋ ಇಡೀ ಚಿತ್ರಣವನ್ನು ಬದಲಿಸಿದೆ. ಈ ಹೈವೋಲ್ಟೇಜ್ ಸೀನ್ ವಿಶ್ವದಾದ್ಯಂತ ಸಿನಿರಸಿಕರು ಮನಗೆದ್ದಿದೆ ಅನ್ನೋದನ್ನು ಸಾಬೀತು ಮಾಡಿದೆ.

  RRR ಸಲಿಂಗ ಪ್ರೇಮ ಎಂದ ಆಸ್ಕರ್ ವಿಜೇತ: ತಿರುಗೇಟು ಕೊಟ್ಟ ಬಾಹುಬಲಿ ನಿರ್ಮಾಪಕ!

  ಚರಣ್ ಪರ್ಫಾರ್ಮೆನ್ಸ್‌ಗೆ ಹಾಲಿವುಡ್ ಮಂದಿ ಫಿದಾ

  ಚರಣ್ ಪರ್ಫಾರ್ಮೆನ್ಸ್‌ಗೆ ಹಾಲಿವುಡ್ ಮಂದಿ ಫಿದಾ

  ಕಳೆದ ಕೆಲ ದಿನಗಳಿಂದ ಆರ್‌ಆರ್‌ಆರ್‌ ಸಿನಿಮಾ ಬಗ್ಗೆ ಟ್ವಿಟ್ಟರ್‌ನಲ್ಲಿ ಭಾರೀ ಚರ್ಚೆ ನಡೀತಿದೆ. ನಿಧಾನವಾಗಿ ಹಾಲಿವುಡ್ ಪ್ರೇಕ್ಷಕರು ಸಿನಿಮಾ ನೋಡಿ ರಿವ್ಯೂ ಕೊಡ್ತಿದ್ದಾರೆ. ಅದರಲ್ಲೂ ಅಲ್ಲೂರಿ ಸೀತಾ ರಾಮರಾಜು ಪಾತ್ರವನ್ನು ಡಿಸೈನ್ ಮಾಡಿರೋ ರೀತಿ, ರಾಮ್‌ಚರಣ್ ಪರ್ಫಾರ್ಮೆನ್ಸ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸ್ತಿದ್ದಾರೆ . ಚರಣ್ ಲುಕ್ಕು, ಎಂಟ್ರಿ ಸೀನ್, ಕ್ಲೈಮ್ಯಾಕ್ಸ್ ಫೈಟ್‌ ಎಲ್ಲದರ ಬಗ್ಗೆಯೂ ವಿಶೇಷವಾಗಿ ಕಾಮೆಂಟ್ ಮಾಡ್ತಿದ್ದಾರೆ. ಸ್ಕಾಟ್ ಡೆರಿಕ್ಸನ್, ಜೇಮ್ಸ್ ಗನ್ ಮತ್ತು ಆರನ್ ಸ್ಟೀವರ್ಟ್ ಅಹ್ನ್ ಸೇರಿದಂತೆ ಹಾಲಿವುಡ್ ಫಿಲ್ಮ್ ಮೇಕರ್ಸ್ ಕೂಡ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಇದನ್ನೆಲ್ಲಾ ನೋಡಿದ ಅಭಿಮಾನಿಗಳು ಶೀಘ್ರದಲ್ಲೇ ರಾಮ್‌ಚರಣ್ ಹಾಲಿವುಡ್ ಸಿನಿಮಾ ಮಾಡ್ತಾರೆ ಅಂತೆಲ್ಲಾ ಸಂತಸ ವ್ಯಕ್ತಪಡಿಸ್ತಿದ್ದಾರೆ.

  ಈ ಬಾರಿ ಆರ್‌ಆರ್‌ಆರ್‌ಗೆ ಆಸ್ಕರ್ ಅವಾರ್ಡ್ ಫಿಕ್ಸ್!

  ಈ ಬಾರಿ ಆರ್‌ಆರ್‌ಆರ್‌ಗೆ ಆಸ್ಕರ್ ಅವಾರ್ಡ್ ಫಿಕ್ಸ್!

  ವರ್ಷಕ್ಕೆ ಭಾರತೀಯ ಚಿತ್ರದಲ್ಲಿ ನೂರಾರು ಸಿನಿಮಾಗಳು ನಿರ್ಮಾಣ ಆಗುತ್ತದೆ. ಆದರೆ ಆಸ್ಕರ್ ಅವಾರ್ಡ್ ಮಾತ್ರ ಇನ್ನು ಮರೀಚಿಕೆಯಾಗಿಯೇ ಇದೆ. ಪ್ರತಿ ವರ್ಷ 'ವಿದೇಶಿ ಭಾಷಾ ಚಿತ್ರ' ವಿಭಾಗಕ್ಕೆ ಒಂದು ಸಿನಿಮಾ ಕಳಿಸಿಕೊಡುತ್ತಾರೆ. 2023ರಲ್ಲಿ ಈ ವಿಭಾಗದಲ್ಲಿ ಆರ್‌ಆರ್‌ಆರ್‌ ಸಿನಿಮಾ ಕಳಿಸಿಕೊಟ್ಟರೆ ಪ್ರಶಸ್ತಿ ಗೆಲ್ಲುವ ಸಾಧ್ಯತೆ ಇದೆ ಅನ್ನೋದು ಕೆಲವರ ವಾದ. ಸಾಮಾನ್ಯವಾಗಿ ಭಾರತೀಯ ಚಿತ್ರಗಳು ಜಾಗತಿಕ ಮಟ್ಟದಲ್ಲಿ ಅಷ್ಟಾಗಿ ಸದ್ದು ಮಾಡೋದಿಲ್ಲ. ಆದರೆ ಆರ್‌ಆರ್‌ಆರ್‌ ಸಿನಿಮಾ ದೊಡ್ಡಮಟ್ಟದಲ್ಲಿ ಪ್ರಪಂಚದಾದ್ಯಂತ ತಲುಪಿದೆ. ಹಾಗಾಗಿ ಪ್ರಶಸ್ತಿ ಗೆಲ್ಲೋದು ಗ್ಯಾರೆಂಟಿ ಅಂತ ಅಂತರಾಷ್ಟ್ರೀಯ ಮಾಧ್ಯಮಗಳು ಹೇಳುತ್ತಿವೆ.

  ರಾಜಮೌಳಿ ನಿರ್ದೇಶನದ ಮಾಸ್ಟರ್‌ಪೀಸ್ ಸಿನಿಮಾ ಆರ್‌ಆರ್‌ಆರ್

  ರಾಜಮೌಳಿ ನಿರ್ದೇಶನದ ಮಾಸ್ಟರ್‌ಪೀಸ್ ಸಿನಿಮಾ ಆರ್‌ಆರ್‌ಆರ್

  ಸೋಲಿಲ್ಲದ ಸರದಾರ ಎಸ್‌. ಎಸ್‌ ರಾಜಮೌಳಿ ಅದ್ಭುತ ಪ್ರಯತ್ನ ಆರ್‌ಆರ್‌ಆರ್. ಸಾಮಾನ್ಯವಾಗಿ ಸ್ವಾತಂತ್ರ್ಯ ಹೋರಾಟಗಾರರ ಕಥೆಯನ್ನು ಸಿನಿಮಾ ಮಾಡುತ್ತಾರೆ. ಅವರ ಜೀವನ ಚರಿತ್ರೆಯನ್ನು ದೃಶ್ಯರೂಪಕ್ಕೆ ಇಳಿಸುತ್ತಾರೆ. ಆದರೆ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರ ಪಾತ್ರಗಳನ್ನು ತೆಗೆದುಕೊಂಡು ಒಂದು ಕಾಲ್ಪನಿಕ ಕಥೆಯನ್ನು ಹೆಣೆದು ಮೌಳಿ ಮ್ಯಾಜಿಕ್ ಮಾಡಿದ್ದಾರೆ. ರಾಮ್‌ಚರಣ್ ತೇಜಾ, ಜ್ಯೂ. ಎನ್‌ಟಿಆರ್‌ ಜೊತೆಗೆ ಆಲಿಯಾ ಭಟ್, ಓಲಿವಿಯಾ ಮೋರಿಸ್, ಅಜಯ್ ದೇವಗನ್, ಸಮುದ್ರ ಖನಿ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

  English summary
  RRR Movie Video Created New Record On Twitter, Bheem Entry Scean Reaches 10 Million Views,
  Wednesday, July 20, 2022, 10:33
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X