For Quick Alerts
  ALLOW NOTIFICATIONS  
  For Daily Alerts

  ಮೆಗಾಸ್ಟಾರ್ ಚಿರಂಜೀವಿ ವಿರುದ್ಧ ತೊಡೆತಟ್ಟಲಿದ್ದಾರೆ ಕನ್ನಡದ ಪ್ರತಿಭಾವಂತ ನಟ

  |

  ತೆಲುಗಿನ ಮೆಗಾಸ್ಟಾರ್ ಚಿರಂಜೀವಿ 'ಸೈರಾ ನರಸಿಂಹಾ ರೆಡ್ಡಿ' ಬಳಿಕ ಮತ್ತೊಂದು ಐತಿಹಾಸಿಕ ಸಿನಿಮಾದಲ್ಲಿ ನಟಿಸುತ್ತಿದ್ದು, ಆ ಸಿನಿಮಾದಲ್ಲಿ ಮುಖ್ಯ ವಿಲನ್ ಭೂಮಿಕೆಯಲ್ಲಿ ಕನ್ನಡದ ಪ್ರತಿಭಾನ್ವಿತ ನಟ ಕಾಣಿಸಿಕೊಳ್ಳಲಿದ್ದಾರೆ.

  Recommended Video

  ವೈದ್ಯರಿಗೆ ಕಲ್ಲು ಹೊಡಯುವುದು ನಿಲ್ಲಿಸಿ ಎಂದ ಸಲ್ಮಾನ್ ಖಾನ್

  ಚಿರಂಜೀವಿ ಅವರ ಈ ಹಿಂದಿನ ಚಿತ್ರ ಸೈರಾ ನರಸಿಂಹಾ ರೆಡ್ಡಿ ಸಿನಿಮಾದಲ್ಲಿ ಕನ್ನಡಿದ ಸುದೀಪ್ ಮುಖ್ಯಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು. ಈಗ ಹೊಸ ಸಿನಿಮಾದಲ್ಲೂ ಕನ್ನಡಿಗ ನಟ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

  ಚಿರಂಜೀವಿ ಅವರು ಆಚಾರ್ಯ ಸಿನಿಮಾದಲ್ಲಿ ನಟಿಸುತ್ತಿದ್ದು, ಲಾಕ್‌ಡೌನ್ ಮುಗಿದ ಬಳಿಕ ಚಿತ್ರೀಕರಣ ಮುಂದುವರೆಯಲಿದೆ. ಈ ಸಿನಿಮಾದಲ್ಲಿ ವಿಲನ್ ಆಗಿ ಕನ್ನಡದ ಪ್ರತಿಭಾವಂತ ನಟ ಕಿಶೋರ್ ಕಾಣಿಸಿಕೊಳ್ಳಲಿದ್ದಾರೆ.

  ರಜನೀಕಾಂತ್, ಧನುಶ್ ಸಿನಿಮಾಗಳಲ್ಲಿ ನಟಿಸಿರುವ ಕಿಶೋರ್

  ರಜನೀಕಾಂತ್, ಧನುಶ್ ಸಿನಿಮಾಗಳಲ್ಲಿ ನಟಿಸಿರುವ ಕಿಶೋರ್

  ನಟ ಕಿಶೋರ್ ಅವರು ಈ ಹಿಂದೆ ರಜನೀಕಾಂತ್ ಸಿನಿಮಾದಲ್ಲೂ ಸಹ ವಿಲನ್ ಪಾತ್ರ ನಿರ್ವಹಿಸಿದ್ದರು. ಕಬಾಲಿ ಸಿನಿಮಾದಲ್ಲಿ ಅವರು ನಟಿಸಿದ್ದರು. ನಟ ಧನುಶ್ ಅವರೊಂದಿಗೆ ಆಡುಕುಲಂನಲ್ಲಿ ಪಾತ್ರ ಮಾಡಿದ್ದರು. ಕಿಶೋರ್ ಅವರಿಗೆ ಪರಭಾಷೆಯ ಪ್ರಮುಖ ಸಿನಿಮಾಗಳಲ್ಲಿ ಅವಕಾಶ ಸಿಗುತ್ತಿರುವುದು ಇದು ಮೊದಲೇನೂ ಅಲ್ಲ.

  ಬಹು ಮಹತ್ವದ ಪಾತ್ರದಲ್ಲಿ ನಟನೆ

  ಬಹು ಮಹತ್ವದ ಪಾತ್ರದಲ್ಲಿ ನಟನೆ

  ಆಚಾರ್ಯ ಸಿನಿಮಾ ಬಗ್ಗೆ ಮಾಧ್ಯಮದೊಟ್ಟಿಗೆ ಮಾತಾಡಿರುವ ಅವರು, 'ಆಚಾರ್ಯದ ನನ್ನ ಭಾಗದ ಚಿತ್ರೀಕರಣ ಈಗಾಗಲೇ ಸ್ವಲ್ಪ ಮುಗಿದಿದೆ. ಲಾಕ್‌ಡೌನ್ ಮುಗಿದ ಬಳಿಕ ಇನ್ನುಳಿದ ಭಾಗದ ಚಿತ್ರೀಕರಣ ಆಗಲಿದೆ. ತುಂಬಾ ದೊಡ್ಡ ಪಾತ್ರವಲ್ಲದಿದ್ದರೂ ಬಹಳ ಮಹತ್ವದ ಪಾತ್ರ' ಎಂದು ಕಿಶೋರ್ ಹೇಳಿದ್ದಾರೆ.

  ''ಚಿರಂಜೀವಿ ಜೊತೆ ನಟಿಸುವ ಅವಕಾಶ ಬೇಡವೆನ್ನಲಿ ಹೇಗೆ''

  ''ಚಿರಂಜೀವಿ ಜೊತೆ ನಟಿಸುವ ಅವಕಾಶ ಬೇಡವೆನ್ನಲಿ ಹೇಗೆ''

  ಚಿರಂಜೀವಿ ಚಿತ್ರದಲ್ಲಿ ನಟಿಸುವ ಅವಕಾಶ ದೊರೆತ ಬಗೆಯ ಬಗ್ಗೆ ಮಾಹಿತಿ ನೀಡಿರುವ ಕಿಶೋರ್, ಆಚಾರ್ಯ ಸಿನಿಮಾದ ನಿರ್ದೇಶಕ ಕೊರಟಾಲ ಶಿವ ನನ್ನ ಗೆಳೆಯ , ಈ ಹಿಂದೆ ಎರಡು ಸಿನಿಮಾದಲ್ಲಿ ನಟಿಸಬೇಕಿತ್ತು, ಆದರೆ ಡೇಟ್ಸ್ ಹೊಂದಾಣಿಕೆ ಆಗಿರಲಿಲ್ಲ. ಈಗ ಚಿರಂಜೀವಿ ಅವರೊಟ್ಟಿಗೆ ನಟಿಸುವ ಅವಕಾಶ ದೊರೆತಾಗ ಬಿಡುವುದುಂಟೆ ಎಂದಿದ್ದಾರೆ ಕಿಶೋರ್.

  ಸ್ವಂತ ನಿರ್ಮಾಣ ಸಂಸ್ಥೆ ಆರಂಭಿಸಿರುವ ಕಿಶೋರ್ಸ

  ಸ್ವಂತ ನಿರ್ಮಾಣ ಸಂಸ್ಥೆ ಆರಂಭಿಸಿರುವ ಕಿಶೋರ್ಸ

  ಇನ್ನು ಕನ್ನಡದಲ್ಲಿ ಬೈ1 ಗೆಟ್ 1 ಫ್ರೀ ಎನ್ನುವ ಹೊಸ ಸಿನಿಮಾದಲ್ಲಿ ನಟಿಸುತ್ತಿರುವ ಕಿಶೋರ್, ಸ್ವಂತ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಅವರೇ ನಿರ್ದೇಶನದ ಬ್ಲಾಕ್ ಆಂಡ್ ವೈಟ್ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ನಲ್ಲಿದ್ದರೆ, ಸಹ ನಿರ್ಮಾಣದ ವೈಫೈ ಸಿನಿಮಾ ಬಿಡುಗಡೆಗೆ ತಯಾರಾಗುತ್ತಿದೆ.

  English summary
  Kannada's actor Kishore acting in Chiranjeevi next movie Acharya. He is producing Kannada movies from his own production house.
  Friday, May 1, 2020, 16:05
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X