For Quick Alerts
  ALLOW NOTIFICATIONS  
  For Daily Alerts

  ಬಿಗ್‌ಬಾಸ್ ಆಯೋಜಕರ ಮೇಲೆ ಗಂಭೀರ ಆರೋಪ ಮಾಡಿದ ಸ್ಪರ್ಧಿ

  |

  ತೆಲುಗು ಬಿಗ್‌ಬಾಸ್ 4 ಪ್ರಸಾರವಾಗಲು ಪ್ರಾರಂಭವಾಗಿ ಎರಡು ವಾರಕ್ಕೂ ಹೆಚ್ಚಾಯಿತು. ನಿರೀಕ್ಷೆಯಂತೆಯೇ ಬಿಗ್‌ಬಾಸ್ ಶೋ ವಿವಾದಗಳಿಂದ ಗಮನಸೆಳೆಯುತ್ತಿದೆ.

  ತೆಲುಗು ಬಿಗ್‌ಬಾಸ್ ಮನೆಯೊಳಗಿನ ಆಂತರಿಕ ರಾಜಕೀಯ, ಪರಸ್ಪರ ಕಚ್ಚಾಟ ತುಸು ಹೆಚ್ಚೇ ಇವೆ. ಈಗಾಗಲೇ ಇಬ್ಬರು ಸ್ಪರ್ಧಾಳುಗಳು ಎಲಿಮಿನೇಟ್ ಆಗಿದ್ದು, ಹೊರಗೆ ಬಂದವರು ಒಳಗಿರುವವರ ವಿರುದ್ಧ ಕೆಲ ಆರೋಪಗಳನ್ನು ಸಹ ಮಾಡಿದ್ದಾರೆ.

  ಬಿಗ್‌ಬಾಸ್‌ನಿಂದ ಎರಡನೇ ವಾರ ಬಿಗ್‌ಬಾಸ್ ಮನೆಯಿಂದ ಎಲಿಮಿನೇಟ್ ಆದ ಸ್ಪರ್ಧಿ ಕರಾಟೆ ಕಲ್ಯಾಣಿ, ಹೊರಗೆ ಬಂದು ಬಿಗ್‌ಬಾಸ್ ಆಯೋಜಕರ ಮೇಲೆಯೇ ಆರೋಪ ಮಾಡಿದ್ದಾರೆ.

  'ಆಯೋಜಕರು ನನ್ನನ್ನು ಉದ್ದೇಶಪೂರ್ವಕವಾಗಿ ಹೊರಹಾಕಿದ್ದಾರೆ'

  'ಆಯೋಜಕರು ನನ್ನನ್ನು ಉದ್ದೇಶಪೂರ್ವಕವಾಗಿ ಹೊರಹಾಕಿದ್ದಾರೆ'

  'ಬಿಗ್‌ಬಾಸ್ ಶೋ ಆಯೋಜಕರು, ಉದ್ದೇಶಪೂರ್ವಕವಾಗಿ ನನ್ನನ್ನು ಎಲಿಮಿನೇಟ್ ಮಾಡಿದ್ದಾರೆ. ನನಗೆ ಬಂದ ಮತಗಳನ್ನು ಬೇರೆ ಸ್ಪರ್ಧಿಗೆ ನೀಡಿದ್ದಾರೆ. ನನಗೆ ಕಡಿಮೆ ಮತಗಳು ಬಂದಿವೆ ಎಂದು ತೋರಿಸಿ ನನ್ನನ್ನು ಎಲಿಮಿನೇಟ್ ಮಾಡಿದ್ದಾರೆ' ಎಂದು ಆರೋಪಿಸಿದ್ದಾರೆ ಕರಾಟೆ ಕಲ್ಯಾಣಿ.

  ನನಗೆ ಜನರ ಬೆಂಬಲ ಇತ್ತು: ಕರಾಟೆ ಕಲ್ಯಾಣಿ

  ನನಗೆ ಜನರ ಬೆಂಬಲ ಇತ್ತು: ಕರಾಟೆ ಕಲ್ಯಾಣಿ

  'ನಾನು ಒಳ್ಳೆಯ ಸ್ಪರ್ಧಿಯಾಗಿದ್ದೆ, ನನಗೆ ಜನರ ಬೆಂಬಲವೂ ಇತ್ತು, ಆದರೆ ನನಗೆ ಬಂದ ಮತಗಳನ್ನು ಬೇರೆ ಸ್ಪರ್ಧಿಗೆ ವರ್ಗಾವಣೆ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ನನ್ನ ಬಳಿ ಸಾಕ್ಷ್ಯವೂ ಇದೆ, ಇದು ಯಾರು, ಏಕೆ ಮಾಡಿದ್ದಾರೋ ಗೊತ್ತಿಲ್ಲ' ಎಂದಿದ್ದಾರೆ ನಟಿ ಕರಾಟೆ ಕಲ್ಯಾಣಿ.

  ಉದ್ದೇಶಪೂರ್ವಕವಾಗಿ ನನ್ನನ್ನು ನಾಮಿನೇಟ್ ಮಾಡಿದರು: ಕಲ್ಯಾಣಿ

  ಉದ್ದೇಶಪೂರ್ವಕವಾಗಿ ನನ್ನನ್ನು ನಾಮಿನೇಟ್ ಮಾಡಿದರು: ಕಲ್ಯಾಣಿ

  ಬಿಗ್‌ಬಾಸ್ ಮನೆಯಲ್ಲಿ ನಾನು ಅತ್ಯುತ್ತಮ ಸ್ಪರ್ಧಿ ಆಗಿದ್ದೆ. ನನ್ನನ್ನು ನೋಡಿದರೆ ಕೆಲವು ಸ್ಪರ್ಧಿಗಳು ಹೆದರುತ್ತಿದ್ದರು. ಹಾಗಾಗಿಯೇ ಅವರು ನನ್ನನ್ನು ಹೊರಗೆ ಕಳಿಸಲು ನಿರ್ಧರಿಸಿ ನನ್ನನ್ನು ನಾಮಿನೇಟ್ ಮಾಡಿದರು ಎಂದು ಸಹ ಕಲ್ಯಾಣಿ ಹೇಳಿದ್ದಾರೆ.

  DIRECTORS DIARY | ಅಜಯ್ ರಾವ್ ನೋಡದೆ ಇರೋ ಅಷ್ಟು ಸಂಭಾವನೆ ಕೊಡ್ಸಿದ್ದೆ| R Chandru |Part 3 |Filmibeat Kannada
  'ನನ್ನ ಮಾತುಗಳನ್ನನು ನೆಗೆಟಿವ್ ಆಗಿ ತೆಗೆದುಕೊಂಡರು'

  'ನನ್ನ ಮಾತುಗಳನ್ನನು ನೆಗೆಟಿವ್ ಆಗಿ ತೆಗೆದುಕೊಂಡರು'

  ಬಿಗ್‌ಬಾಸ್ ಆಯೋಜಕರು ಮೊದಲೇ ಸೀಸನ್‌ಗೆ ನನ್ನನ್ನು ಕೇಳಿದ್ದರು, ಆದರೆ ಸಿನಿಮಾ ಚಿತ್ರೀಕರಣ ಇದ್ದ ಕಾರಣ ನಾನು ಭಾಗವಹಿಸಿರಲಿಲ್ಲ. ಈ ಬಾರಿ ಬಿಗ್‌ಬಾಸ್ ಮನೆಯಲ್ಲಿ ನಾನು ಅಂದುಕೊಂಡತೆ ಇರಲು ಸಾಧ್ಯವಾಗಲಿಲ್ಲ. ಮನೆಯಲ್ಲಿ ನಾನು ಹೇಳಿದ ಮಾತುಗಳನ್ನು ನೆಗೆಟಿವ್ ಆಗಿ ತೆಗೆದುಕೊಂಡರು. ಹಾಗಾಗಿಯೇ ನನ್ನ ವಿರುದ್ಧ ಕೆಲವು ಜಗಳಗಳಾದವು' ಎಂದಿದ್ದಾರೆ ಕಲ್ಯಾಣಿ.

  English summary
  Biggboss 4 Telugu ex contestant Karate Kalyani alleges that BiggBoss makers intentionally eliminated her from the show.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X