ನಟ ರಾಮ್ ಚರಣ್ ಗೆ ನಾಯಕಿಯಾಗ್ತಾರಾ 'ಮಹಾನಟಿ' ಕೀರ್ತಿ ಸುರೇಶ್?

ಟಾಲಿವುಡ್ ನ ಖ್ಯಾತ ನಟ ರಾಮ್ ಚರಣ್ ಸದ್ಯ ಆರ್ ಆರ್ ಆರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಅಭಿನಯದ ಜೊತೆಗೆ ನಿರ್ಮಾಣದಲ್ಲಿಯೂ ನಿರತರಾಗಿದ್ದಾರೆ. ಚಿರಂಜೀವಿ ಅಭಿನಯದ ಆಚಾರ್ಯ ಸಿನಿಮಾ ನಿರ್ಮಾಣದ ಹೊಣೆಹೊತ್ತಿರುವ ರಾಮ್ ಚರಣ್ ಅಪ್ಪನ ಸಿನಿಮಾದ ಕಡೆಯು ಗಮನ ಹರಿಸುತ್ತಿದ್ದಾರೆ.

Recommended Video

ರಾಜ್ ಕುಮಾರ್ ಅಪಹರಣ ಆದಾಗ ವಿಷ್ಣುದಾದಾ ಆಡಿದ್ದ ಮಾತುಗಳು ಇಂದಿಗೂ ಜೀವಂತ | Rajkumar | Filmibeat Kannada

ಆಚಾರ್ಯ ಸಿನಿಮಾದ ಚಿತ್ರೀಕರಣ ಈಗಾಗಲೆ ಪ್ರಾರಂಭವಾಗಿದೆ. ಆದರೆ ಕೊರೊನಾ ಲಾಕ್ ಡೌನ್ ನಿಂದ ಸಿನಿಮಾ ಚಿತ್ರೀಕರಣ ಸ್ಥಗಿತವಾಗಿದೆ. ಆಚಾರ್ಯ ಸಿನಿಮಾ ಕಲಾವಿದರ ಆಯ್ಕೆ ವಿಚಾರದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಚಿರಂಜೀವಿಗೆ ನಾಯಕಿಯಾಗಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿತ್ತು. ಆದರೀಗ ಕಾಜಲ್ ಅಗರವಾಲ್ ನಾಯಕಿಯಾಗಿ ಕಾಣಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ.

ಸಿನಿಮಾದಲ್ಲಿ ನಟ ರಾಮ್ ಚರಣ್ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಾಮ್ ಚರಣ್ ಗೆ ಯಾರು ನಾಯಕಿಯಾಗಲಿದ್ದಾರೆ ಎನ್ನುವ ಚರ್ಚೆ ಜೋರಾಗಿ ನಡೆಯುತ್ತಿದೆ. ಮೂಲಗಳ ಪ್ರಕಾರ ನಟಿ ಕೀರ್ತಿ ಸುರೇಶ್ ರಾಮ್ ಚರಣ್ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

Keerthy Suresh May Leading Opposite Ram Charan In Acharya

ಆದರೆ ಈ ಬಗ್ಗೆ ಸಿನಿಮಾತಂಡ ಅಥವಾ ಕೀರ್ತಿ ಸುರೇಶ್ ಎಲ್ಲಿಯೂ ಹೇಳಿಕೊಂಡಿಲ್ಲ. ಕೀರ್ತಿ ಸುರೇಶ್ ಅಥವಾ ಕಿಯಾರ ಅಡ್ವಾನಿ ಇಬ್ಬರಲ್ಲಿ ಒಬ್ಬರು ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಆದರೆ ಎಂದು ಇನ್ನೂ ಫೈನಲ್ ಆಗಿಲ್ಲ. ಕೀರ್ತಿ ಸುರೇಶ್ ಕಾಣಿಸಿಕೊಳ್ಳುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.

ಕೀರ್ತಿ ಸುರೇಶ್ ಸದ್ಯ ರಜನಿಕಾಂತ್ ಅಭಿನಯದ ಅಣ್ಣಾತೆ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ಮಹೇಶ್ ಬಾಬು ಸಿನಿಮಾದಲ್ಲಿಯೂ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದೀಗ ರಾಮ್ ಚರಣ್ ಗೂ ನಾಯಕಿಯಾಗಲಿದ್ದಾರೆ ಎನ್ನುವ ಮಾತು ಹರಿದಾಡುತ್ತಿದೆ. ಇದು ನಿಜವೇ ಆದರೆ ರಾಮ್ ಚರಣ್ ಅಭಿಮಾನಿಗಳ ಸಂತಸ ಇಮ್ಮಡಿಯಾಗಲಿದೆ.

More from Filmibeat

English summary
Actress Keerthy Suresh may key role in Chiranjeevi's Acharya film. She is leading opposite Ram Charan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X