twitter
    For Quick Alerts
    ALLOW NOTIFICATIONS  
    For Daily Alerts

    ನಿತಿನ್ ಚಿತ್ರದಿಂದ ಬ್ರಹ್ಮಾನಂದಂಗೆ ಗೇಟ್ ಪಾಸ್!? ಏನು ಕಾರಣ?

    |

    ಬ್ರಹ್ಮಾನಂದಂ ಈ ಹೆಸರು ಕೇಳದೇ ಇರುವ ದಕ್ಷಿಣ ಭಾರತೀಯರು ಇರಲಿಕ್ಕೆ ಸಾಧ್ಯವಿಲ್ಲ. ಅಷ್ಟೇ ಯಾಕೆ ಇತ್ತೀಚಿನ ದಿನಗಳಲ್ಲಿ ಬಾಲಿವುಡ್‌ನಲ್ಲಿ ಕೂಡ ಇವರ ಹವಾ ಜೋರಾಗಿದೆ. ಹಿಂದಿಗೆ ಡಬ್ ಆಗುವ ತೆಲುಗು ಚಿತ್ರಗಳ ಮೂಲಕ ಈಗ ಬಾಲಿವುಡ್‌ನಲ್ಲೂ ಬ್ರಹ್ಮಾನಂದಂ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಯೂಟ್ಯೂಬ್ ಚಾನಲ್‌ಗಳಲ್ಲಂತೂ ಬ್ರಹ್ಮಾನಂದಂ ಅವರ ಕಾಮಿಡಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ. ದೇಶದ ಅತಿ ಹೆಚ್ಚು ಸಂಭಾವನೆ ಪಡೆಯುವ ಹಾಸ್ಯ ನಟರ ಪೈಕಿ ಬ್ರಹ್ಮಾನಂದಂ ಅಗ್ರಗಣ್ಯರು. ಕಳೆದ 30 ವರ್ಷಗಳಿಂದ ತೆಲುಗು ಚಿತ್ರರಂಗದಲ್ಲಿ ನಂಬರ್ ಒನ್ ಹಾಸ್ಯನಟನಾಗಿ ತಮಗೆ ತಾವೇ ಪೈಪೋಟಿಯಾಗಿರುವ ಬ್ರಹ್ಮಾನಂದಂ ಇಂದಿಗೂ ಕೂಡ ಸಿಕ್ಕಾಪಟ್ಟೆ ಡಿಮ್ಯಾಂಡ್ ಇರುವ ಹಾಸ್ಯನಟ.

    ತೆಲುಗು ಸಿನಿಮಾಗಳಲ್ಲಿ ಹಾಸ್ಯಕ್ಕೆ ಅಗ್ರತಾಂಬೂಲ ಇದ್ದ ಕಾಲವದು. 80ರ ದಶಕ ವಿಶೇಷವಾಗಿ 90ರ ದಶಕವನ್ನು ತೆಗೆದುಕೊಂಡರೆ ಈ ಮೂವರು ಇಲ್ಲದ ಚಿತ್ರಗಳೇ ನಿರ್ಮಾಣವಾಗಿಲ್ಲ. ಮೊದಲು ಈ ಮೂವರ ಕಾಲ್ ಶೀಟ್ ಕನ್ಫರ್ಮ್ ಆದಮೇಲೆ ಶೂಟಿಂಗ್ ಡೇಟ್ ಫಿಕ್ಸ್ ಮಾಡುತ್ತಿದ್ದ ಕಾಲವದು. ಹಾಸ್ಯ ತ್ರಿಮೂರ್ತಿಗಳ ಪರಿಸ್ಥಿತಿ ಹಾಗೂ ಬ್ರಹ್ಮಾನಂದಂ ವಿವಾದದ ವಿವರ ನಿಮ್ಮ ಮುಂದೆ...

    80-90 ದಶಕಗಳಲ್ಲಿ ಅಕ್ಷರಶಃ ಆಳಿದ ತ್ರಿಮೂರ್ತಿಗಳು

    80-90 ದಶಕಗಳಲ್ಲಿ ಅಕ್ಷರಶಃ ಆಳಿದ ತ್ರಿಮೂರ್ತಿಗಳು

    ತೆಲುಗು ಸಿನಿಮಾರಂಗವನ್ನು ತೆಗೆದುಕೊಂಡರೆ ಅಲ್ಲಿ ಹಾಸ್ಯಕ್ಕೆ ಅಗ್ರತಾಂಬೂಲ. ಎನ್ ಟಿ ಆರ್, ಎ ಎನ್ ಆರ್ ಕಾಲದಲ್ಲಿ ಅಂದರೆ 50ರಿಂದ 70ರ ದಶಕದವರೆಗೂ ರೇಲಂಗಿ, ಪದ್ಮನಾಭನ್, ರಮಣ ರೆಡ್ಡಿ ಹಾಸ್ಯ ಚಕ್ರವರ್ತಿಗಳಾಗಿ ತೆಲುಗು ಚಿತ್ರರಂಗದಲ್ಲಿ ಮಿಂಚಿದರು. ಅದೇ 80ರ ದಶಕದಿಂದ ಆರಂಭವಾದಾಗ ಇವರ ಸ್ಥಾನಗಳಲ್ಲಿ ಬಂದು ಕಾಣಿಸಿಕೊಂಡವರು 'ಕೋಟ ಶ್ರೀನಿವಾಸರಾವ್ -ಬ್ರಹ್ಮಾನಂದಂ-ಬಾಬು ಮೋಹನ್ 'ಎಂಬ ತ್ರಿಮೂರ್ತಿಗಳು. ಅದು ಚಿರಂಜೀವಿ, ಬಾಲಕೃಷ್ಣ, ಮೋಹನ್ ಬಾಬು, ನಾಗಾರ್ಜುನ, ವೆಂಕಟೇಶ್ ಅಂತ ಸ್ಟಾರ್ ಗಳ ಚಿತ್ರಗಳೇ ಆಗಿರಲಿ ಇವರ ಪಾತ್ರಗಳು ಇಲ್ಲದೆ ನಡೆಯುತ್ತಿರಲಿಲ್ಲ. ಅಷ್ಟೇ ಯಾಕೆ ಹಾಸ್ಯ ನಿರ್ದೇಶಕರುಗಳಾದ S.V. ಕೃಷ್ಣಾರೆಡ್ಡಿ , EVV ಸತ್ಯನಾರಾಯಣ, ವಂಶಿ ಇವರೆಲ್ಲಾ ಈ ಹಾಸ್ಯಚಕ್ರವರ್ತಿಗಳನ್ನೇ ಮನಸ್ಸಿನಲ್ಲಿಟ್ಟುಕೊಂಡು ಸಿನಿಮಾಗಳನ್ನು ನಿರ್ದೇಶಿಸಿ, ಭಾರೀ ಹಣ ಮತ್ತು ಹೆಸರನ್ನು ಸಹ ಪಡೆದುಕೊಂಡರು.

    ಇಬ್ಬರು ನೇಪಥ್ಯಕ್ಕೆ ಸರಿದರು, ಬ್ರಹ್ಮಾನಂದಂ ಉಳಿದರು

    ಇಬ್ಬರು ನೇಪಥ್ಯಕ್ಕೆ ಸರಿದರು, ಬ್ರಹ್ಮಾನಂದಂ ಉಳಿದರು

    2000ರ ನಂತರ ತೆಲುಗು ಸಿನಿಮಾರಂಗದಲ್ಲಿ ಭಾರಿ ಬದಲಾವಣೆಗಳ ಕಂಡಿತು. ಒಂದೆಡೆ ಪವನ್ ಕಲ್ಯಾಣ್, ಮಹೇಶ್ ಬಾಬು, ಎನ್ ಟಿ ಆರ್, ಅಲ್ಲು ಅರ್ಜುನ್ ಅಂತಹ ಮಾಸ್ ಹೀರೋಗಳ ಸಿನಿಮಾಗಳು ಇನ್ನೊಂದೆಡೆ ತರುಣ್, ಉದಯ್ ಕಿರಣ್ ಅಂತಹ ಕ್ಲಾಸ್ ಹೀರೋಗಳ ಜಮಾನ ಮೊದಲಾಯಿತು. ತ್ರಿಮೂರ್ತಿ ಹಾಸ್ಯ ಚಕ್ರವರ್ತಿಗಳ ಸಮಕಾಲೀನ ನಟನಾಗಿದ್ದ ಆಲಿ ಹೆಚ್ಚು ಅವಕಾಶಗಳನ್ನು ಈ ಸಮಯದಲ್ಲಿ ಪಡೆದರು. ಜೊತೆಗೆ ಸುನಿಲ್ ಎಂಬ ಹಾಸ್ಯನಟ ಸುಂಟರಗಾಳಿಯಂತೆ ಸಿನಿಮಾರಂಗ ಆವರಿಸಿಕೊಂಡ. ಇದೇ ಸಮಯದಲ್ಲಿ ಬಾಬು ಮೋಹನ್, ಕೋಟ ಶ್ರೀನಿವಾಸ ರಾವ್ ರಾಜಕೀಯದಲ್ಲಿ ಒಂದಷ್ಟು ಕಾಲ ಸಕ್ರಿಯರಾದರು. ಬಾಬು ಮೋಹನ್ ತೆಲುಗುದೇಶಂ ಪಕ್ಷದಿಂದ, ಕೋಟ ಶ್ರೀನಿವಾಸ ರಾವ್ ಅವರು ಬಿಜೆಪಿ ಪಕ್ಷದಿಂದ ಗೆದ್ದು ಎಂಎಲ್ಎಗಳು ಸಹ ಆದರು. ಬಾಬು ಮೋಹನ್ ಚಂದ್ರಬಾಬುನಾಯ್ಡು ಸರ್ಕಾರದಲ್ಲಿ ಕಾರ್ಮಿಕ ಸಚಿವರಾಗಿ ಸಹ ಕೆಲಸ ಮಾಡಿದರು.

    ಕೋಟ ಶ್ರೀನಿವಾಸ ರಾವ್- ಬಾಬು ಮೋಹನ್

    ಕೋಟ ಶ್ರೀನಿವಾಸ ರಾವ್- ಬಾಬು ಮೋಹನ್

    ಮುಂದಿನ ಚುನಾವಣೆಯಲ್ಲಿ ಕೋಟ ಶ್ರೀನಿವಾಸ ರಾವ್ ಮತ್ತು ಬಾಬು ಮೋಹನ್ ಇಬ್ಬರೂ ಕೂಡ ಸೋತರು. ಅದಕ್ಕಿಂತ ಮುಖ್ಯವಾಗಿ ಜೀವನದ ದೊಡ್ಡ ದುರಂತವೆಂದರೆ ಇದೇ ಸಮಯದಲ್ಲಿ ಅವರಿಬ್ಬರ ಹಿರಿಯ ಪುತ್ರರು ಸಹ ಅಪಘಾತದಲ್ಲಿ ತೀರಿಕೊಂಡರು. 'ಪುತ್ರಶೋಕಂ ನಿರಂತರಂ' ಎಂಬಂತೆ ಇಬ್ಬರೂ ಕೂಡ ಅದೇ ದುಃಖದಲ್ಲಿ ಒಂದಷ್ಟು ಕಾಲ ಕಳೆದುಬಿಟ್ಟರೆ. ಇದೇ ಸಮಯಕ್ಕೆ ಚಿತ್ರರಂಗ ಬದಲಾಗಿತ್ತು , ಹೊಸ ಹಾಸ್ಯ ಕಲಾವಿದರ ದಂಡು ಸಿನಿಮಾರಂಗದಲ್ಲಿ ಸಕ್ರಿಯವಾಗಿತ್ತು. ಅವರಿಗೆ ಅವಕಾಶಗಳು ಸಂಪೂರ್ಣವಾಗಿ ಕಡಿಮೆಯಾಯಿತು. ಆದರೆ ಬುದ್ಧಿವಂತರಾದ ಬ್ರಹ್ಮಾನಂದಂ ರಾಜಕೀಯದ ಕಡೆಗೆ ಮಾಡಲಿಲ್ಲ . ಹೀಗಾಗಿ ಸಿಗುವ ಎಲ್ಲಾ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡರು, ಹೊಸ ಪೀಳಿಗೆಯ ನಿರ್ದೇಶಕರು ಕೂಡ ಅಚ್ಚುಮೆಚ್ಚಿನ ಹಾಸ್ಯ ನಟನೊಂದಿಗೆ ಸಿನಿಮಾಗಳನ್ನು ಮಾಡಿದರು. ದುರಂತವೆಂದರೆ ಇಂದು ಬಾಬು ಮೋಹನ್ ಕೋಟ ಶ್ರೀನಿವಾಸ ರಾವ್ ಅವರ ಕೈಯಲ್ಲಿ ಸಿನಿಮಾಗಳೇ ಇಲ್ಲ, ಆದರೆ ಬ್ರಹ್ಮಾನಂದಂಗೆ ಈಗಲೂ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ.

    ಸಿನಿಮಾಗಳಲ್ಲಿ ನಟಿಸುವುದನ್ನು ಕಡಿಮೆ ಮಾಡಿದ ಬ್ರಹ್ಮಾನಂದಂ

    ಸಿನಿಮಾಗಳಲ್ಲಿ ನಟಿಸುವುದನ್ನು ಕಡಿಮೆ ಮಾಡಿದ ಬ್ರಹ್ಮಾನಂದಂ

    ಒಂದು ಕಾಲದಲ್ಲಿ ವರ್ಷವಿಡೀ ಡೇ ಅಂಡ್ ನೈಟ್ ಸಿನಿಮಾಗಳನ್ನು ಮಾಡುತ್ತಿದ್ದ ಟಾಲಿವುಡ್‌ನ ನಂಬರ್ ವನ್ ಹಾಸ್ಯನಟ ಬ್ರಹ್ಮಾನಂದಂ, ಕಳೆದ ಕೆಲವು ಸಮಯದಿಂದ ಸಿನಿಮಾಗಳ ಸಂಖ್ಯೆಯನ್ನು ಕಡಿಮೆ ಮಾಡಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಈಗ ಅವರ ವಯಸ್ಸು 60 ದಾಟಿರುವುದು. ವಯಸ್ಸಿನ ಕಾರಣ, ಅವರು ಪ್ರಸ್ತುತ ಚಲನಚಿತ್ರಗಳಲ್ಲಿ ಸೀಮಿತ ಸಮಯವನ್ನು ಮಾತ್ರ ಕಳೆಯುತ್ತಿದ್ದಾರೆ. ಅವರು ಇತ್ತೀಚೆಗೆ ನಟಿಸುತ್ತಿರುವ ಚಿತ್ರ 'ಮಾಚರ್ಲಾ ನಿಯೋಜಕವರ್ಗಮ್'. ನಿತಿನ್ ನಾಯಕನಾಗಿ, ರಾಜಶೇಖರ್ ನಿರ್ದೇಶನದ ಈ ಚಿತ್ರದಲ್ಲಿ ಬ್ರಹ್ಮಾನಂದಂ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನು ಈ ಚಿತ್ರವನ್ನು ಖುದ್ದು ನಾಯಕನಟ ನಿತಿನ್ ಅವರೇ ನಿರ್ಮಿಸುತ್ತಿದ್ದಾರೆ.

    ಈ ಸಿನಿಮಾಗೆ ಸಂಬಂಧಿಸಿದ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಬ್ರಹ್ಮಾನಂದಂ ಅವರನ್ನು ಸಿನಿಮಾದಿಂದ ತೆಗೆದು ನಿತಿನ್ ಶಾಕ್ ಕೊಟ್ಟಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಈ ಸುದ್ದಿ ಟಾಲಿವುಡ್ ನಲ್ಲಿ ಹಾಟ್ ಟಾಪಿಕ್ ಆಗಿದೆ. ನಿತಿನ್ ಮತ್ತು ಬ್ರಹ್ಮಿ ನಡುವೆ ಏನಾಯಿತು? ಅವರನ್ನು ಸಿನಿಮಾದಿಂದ ಹೊರಹಾಕುವಂತ ದೊಡ್ಡ ವಿಷಯ ಯಾವುದು? ಎಲ್ಲರೂ ವಿಚಾರಿಸತೊಡಗಿದರೆ.

     ಇಷ್ಟಕ್ಕೂ ಕಾರಣವೇನು?

    ಇಷ್ಟಕ್ಕೂ ಕಾರಣವೇನು?

    ಬ್ರಹ್ಮಾನಂದಂ ಅವರನ್ನು 'ಮಾಚರ್ಲಾ ನಿಯೋಜಕವರ್ಗಮ್' ಚಿತ್ರದಿಂದ ತೆಗೆದುಹಾಕುವ ಅಂತಹ ಕಾರಣವಾದರೂ ಏನಿದೆ? ಎಂಬ ಪ್ರಶ್ನೆಗೆ ಇಲ್ಲೊಂದು ಸುದ್ದಿ ಹೊರಬಿದ್ದಿದೆ.ಈ ಚಿತ್ರದ ಶೂಟಿಂಗ್‌ಗಾಗಿ ಚಿತ್ರತಂಡ ವೈಜಾಗ್‌ಗೆ ತೆರಳಿದ್ದು, ನಿತಿನ್ ಜೊತೆಗೆ ಬ್ರಹ್ಮಾನಂದಂ ಈ 10 ದಿನಗಳ ಶೂಟಿಂಗ್ ಶೆಡ್ಯೂಲ್‌ನಲ್ಲಿ ಭಾಗವಹಿಸಬೇಕಾಗಿತ್ತು. ಆದರೆ ಅಂದುಕೊಂಡ ಸಮಯಕ್ಕೆ ಬ್ರಹ್ಮಾನಂದಂ ಶೂಟಿಂಗ್‌ಗೆ ಆಗಮಿಸದೇ, ನಿರ್ದೇಶಕರು ಹೇಳಿದಂತೆ ಮಾಡದೇ ಇದ್ದಾಗ ಚಿತ್ರದಿಂದ ಹೊರ ಹಾಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ಈ ಬಗ್ಗೆ ನಿರ್ದೇಶಕ ರಾಜಶೇಖರ್ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

    ಬ್ರಹ್ಮಾನಂದಂಗೆ ಗೇಟ್ ಪಾಸ್ ಕೊಟ್ಟ ನಿತಿನ್?

    ಬ್ರಹ್ಮಾನಂದಂಗೆ ಗೇಟ್ ಪಾಸ್ ಕೊಟ್ಟ ನಿತಿನ್?

    ಈ ಚಿತ್ರವನ್ನು ನಿತಿನ್ ತಮ್ಮದೇ ಬ್ಯಾನರ್‌ನಲ್ಲಿ ನಿರ್ಮಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಬ್ರಹ್ಮಾನಂದಂ ಅವರ ವರ್ತನೆಗಳಿಂದ ಬೇಸತ್ತಿರುವ ನಿತಿನ್ ಅವರೇ ಬ್ರಹ್ಮಾನಂದಂ ಅವರನ್ನು ತೆಗೆದುಹಾಕಿದ್ದಾರೆ ಎಂಬ ಸುದ್ದಿ ಬರುತ್ತಿದೆ. ಇತ್ತೀಚಿನ ಸುದ್ದಿಯ ಪ್ರಕಾರ, ಬ್ರಹ್ಮಾನಂದಂ ಈ ಚಿತ್ರಕ್ಕಾಗಿ ದಿನಕ್ಕೆ 5 ಲಕ್ಷ ರೂ. ಅಂದರೆ ರೂ. 50 ಲಕ್ಷ ಬೇಡಿಕೆ ಇಟ್ಟಿದ್ದು ಅಷ್ಟು ಹಣವನ್ನು ನಿತಿನ್ ಮುಂಗಡವಾಗಿ ಪಾವತಿಸಿದ್ದಾರೆ. 'ಕೊಟ್ಟಿರುವ ಹಣ ಹೋದರೂ ಪರವಾಗಿಲ್ಲ ಆದರೆ ಬ್ರಹ್ಮಾನಂದಂ ಅವರ ನಡವಳಿಕೆಯನ್ನು ಸಹಿಸಲು ಸಾಧ್ಯವಿಲ್ಲ' ಎಂಬುದು ನಿರ್ಮಾಪಕರ ಅಭಿಪ್ರಾಯ. ಮತ್ತು ಇದು ನಿಜವೇ ಎಂದು ತಿಳಿಯಬೇಕಾದರೆ ನಿತಿನ್ ಮತ್ತು ಚಿತ್ರತಂಡ ಈ ವದಂತಿಗಳಿಗೆ ಪ್ರತಿಕ್ರಿಯಿಸಬೇಕಾಗುತ್ತದೆ.

    English summary
    Brahmanandam is starring in Nitin's next film. But Brahmanandam has been ousted from film by the producers for failing to cooperate with the film.
    Friday, November 12, 2021, 9:43
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X