For Quick Alerts
  ALLOW NOTIFICATIONS  
  For Daily Alerts

  ಜ್ಯೂನಿಯರ್ ಎನ್‌ಟಿಆರ್ 30ನೇ ಸಿನಿಮಾ ನಿರ್ದೇಶಕ ಬದಲು!

  |

  ಆರ್‌ಆರ್‌ಆರ್‌ ಸಿನಿಮಾದ ಚಿತ್ರೀಕರಣ ಅಂತಿಮ ಹಂತಕ್ಕೆ ಬರುತ್ತಿದ್ದಂತೆ ಮುಂದಿನ ಪ್ರಾಜೆಕ್ಟ್‌ ಮೇಲೆ ಚಿತ್ತ ನೆಟ್ಟಿದ್ದಾರೆ ಜೂ.ಎನ್‌ಟಿಆರ್.

  ಆರ್‌ಆರ್‌ಆರ್‌ ನಂತರ ಜೂ.ಎನ್‌ಟಿಆರ್ ನಟಿಸುವ ಸಿನಿಮಾ ಅವರ ವೃತ್ತಿ ಬದುಕಿನ ಮೂವತ್ತನೇ ಸಿನಿಮಾ ಆಗಿರಲಿದ್ದು, ಆ ಸಿನಿಮಾಕ್ಕಾಗಿ ಸೂಪರ್-ಡೂಪರ್ ಹಿಟ್ ನಿರ್ದೇಶಕರೊಬ್ಬರ ಜೊತೆ ಕೈ ಜೋಡಿಸಲಿದ್ದಾರೆ ಆದರೆ ಅಂತಿಮ ಹಂತದಲ್ಲಿ ನಿರ್ದೇಶಕನ ಬದಲಾವಣೆ ಆಗಿದೆ ಎನ್ನಲಾಗುತ್ತಿದೆ.

  ನಿರ್ದೇಶಕನಾಗಿ ಬಹುತೇಕ ಹಿಟ್ ಸಿನಿಮಾಗಳನ್ನೇ ನೀಡಿರುವ ತ್ರಿವಿಕ್ರಮ್ ಅವರು ಜೂ.ಎನ್‌ಟಿಆರ್ ಅವರ 30ನೇ ಸಿನಿಮಾ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗಿತ್ತು. ಆದರೆ ಹಠಾತ್‌ ಆಗಿ ತ್ರಿವಿಕ್ರಮ್ ಜಾಗಕ್ಕೆ ನಿರ್ದೇಶಕ ಕೊರಟಾಲ ಶಿವ ಬಂದಿದ್ದಾರೆ.

  ಕೊರಟಾಲ ಶಿವ ನಿರ್ದೇಶನ ಮಾಡಲಿದ್ದಾರೆ

  ಕೊರಟಾಲ ಶಿವ ನಿರ್ದೇಶನ ಮಾಡಲಿದ್ದಾರೆ

  ಜೂ.ಎನ್‌ಟಿಆರ್ ನಟಿಸುತ್ತಿರುವ 30 ನೇ ಸಿನಿಮಾವನ್ನು ನಿರ್ದೇಶಕ ಕೊರಟಾಲ ಶಿವ ನಿರ್ದೇಶನ ಮಾಡಲಿದ್ದಾರೆ. ಈ ಹಿಂದೆ ಜೂ ಎನ್‌ಟಿಆರ್‌ಗಾಗಿ 'ಜನತಾ ಗ್ಯಾರೆಜ್' ಸಿನಿಮಾವನ್ನು ಕೊರಟಾಲ ಶಿವ ನಿರ್ದೇಶನ ಮಾಡಿದ್ದರು. ಆ ಸಿನಿಮಾ ಸೂಪರ್ ಹಿಟ್ ಆಗಿತ್ತು.

  ಜೂ.ಎನ್‌ಟಿಆರ್ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ

  ಜೂ.ಎನ್‌ಟಿಆರ್ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ

  ತಾವು ಮತ್ತೊಮ್ಮೆ ಜೂ.ಎನ್‌ಟಿಆರ್ ಸಿನಿಮಾವನ್ನು ನಿರ್ದೇಶನ ಮಾಡುತ್ತಿರುವ ಖುಷಿಯ ಸಂಗತಿಯನ್ನು ಕೊರಟಾಲ ಶಿವ ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಸಿನಿಮಾವನ್ನು ಜೂ.ಎನ್‌ಟಿಆರ್ ಅವರ ಸಹೋದರ ಕಲ್ಯಾಣ್ ರಾಮ್ ಅವರೇ ನಿರ್ಮಾಣ ಮಾಡಲಿದ್ದಾರೆ.

  ಮೆಗಾಸ್ಟಾರ್ ಚಿರಂಜೀವಿ ಸಿನಿಮಾ ನಿರ್ದೇಶಿಸುತ್ತಿರುವ ಶಿವ

  ಮೆಗಾಸ್ಟಾರ್ ಚಿರಂಜೀವಿ ಸಿನಿಮಾ ನಿರ್ದೇಶಿಸುತ್ತಿರುವ ಶಿವ

  ಮೆಗಾಸ್ಟಾರ್ ಚಿರಂಜೀವಿ ಮತ್ತು ರಾಮ್‌ಚರಣ್ ತೇಜ ಒಟ್ಟಿಗೆ ಅಭಿನಯಿಸುತ್ತಿರುವ 'ಆಚಾರ್ಯ' ಸಿನಿಮಾ ನಿರ್ದೇಶಿಸುತ್ತಿರುವ ಕೊರಟಾಲ ಶಿವ ಈ ಹಿಂದೆ, ಪ್ರಭಾಸ್ ನಟನೆಯ 'ಮಿರ್ಚಿ', ಮಹೇಶ್ ಬಾಬು ನಟನೆಯ 'ಶ್ರೀಮಂತುಡು', 'ಭರತ್ ಅನೆ ನೇನು' ಸಿನಿಮಾಗಳನ್ನು ನಿರ್ದೇಶಿಸಿದ್ದರು. 'ಆಚಾರ್ಯ' ಸಿನಿಮಾದ ಬಿಡುಗಡೆ ಬಳಿಕ ಜೂ.ಎನ್‌ಟಿಆರ್ ಜೊತೆಗಿನ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಲಿದೆ. ಆ ವೇಳೆಗೆ ಜೂ.ಎನ್‌ಟಿಆರ್ ಅವರು ಆರ್‌ಆರ್‌ಆರ್‌ ಸಿನಿಮಾ ಚಿತ್ರೀಕರಣ ಮುಗಿಸಿರುತ್ತಾರೆ.

  Drishyam 2 ಸಿನಿಮಾಗೆ ರೆಡಿ ಅಂದ್ರು ಕ್ರೇಜಿಸ್ಟಾರ್ ರವಿಚಂದ್ರನ್ | Filmibeat Kannada
  ಪ್ರಶಾಂತ್ ನೀಲ್ ಸಿನಿಮಾದಲ್ಲಿ ನಟಿಸಬೇಕಿತ್ತು ಜೂ.ಎನ್‌ಟಿಆರ್

  ಪ್ರಶಾಂತ್ ನೀಲ್ ಸಿನಿಮಾದಲ್ಲಿ ನಟಿಸಬೇಕಿತ್ತು ಜೂ.ಎನ್‌ಟಿಆರ್

  ಕರ್ನಾಟಕದ ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾದಲ್ಲಿ ಜೂ.ಎನ್‌ಟಿಆರ್ ನಟಿಸಲಿದ್ದಾರೆ ಎನ್ನಲಾಗಿತ್ತು, ಸಿನಿಮಾಕ್ಕೆ 'ನ್ಯೂಕ್ಲಿಯರ್' ಎಂಬ ಹೆಸರು ಸಹ ಫಿಕ್ಸ್ ಆಗಿತ್ತು. ಆದರೆ ಪ್ರಾಜೆಕ್ಟ್ ಮುಂದಕ್ಕೆ ಹೋಯಿತು. ಇದೀಗ ಪ್ರಶಾಂತ್ ನೀಲ್ ಅವರು ಪ್ರಭಾಸ್ ನಟನೆಯ 'ಸಲಾರ್' ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ.

  English summary
  Koratala Shiva directing Jr NTR's 30th movie. Trivikram roped to direct Jr NTR's 30th movie but due to some differences Korataka Shiva directing the movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X