For Quick Alerts
  ALLOW NOTIFICATIONS  
  For Daily Alerts

  ಪ್ರಭಾಸ್- ಅನುಷ್ಕಾ ಮದುವೆ ಬಗ್ಗೆ ಕೃಷ್ಣಂರಾಜು ಹೇಳಿದ್ದೇನು? ಕೊನೆಗೂ ಆ ಆಸೆ ಈಡೇರಲೇ ಇಲ್ಲ!

  |

  ತೆಲುಗು ನಟ ಕೃಷ್ಣಂರಾಜು ಅಗಲಿಕೆಯಿಂದ ಇಡೀ ಟಾಲಿವುಡ್ ಶೋಕ ಸಾಗರದಲ್ಲಿ ಮುಳುಗಿದೆ. ನಿನ್ನೆ(ಸೆಪ್ಟೆಂಬರ್ 11) ಇಡೀ ದಿನ ಅವರ ಸ್ವಗೃಹದಲ್ಲಿ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಇಂದು ಕೂಡ ಹಲವರು ಅಂತಿಮ ನಮನ ಸಲ್ಲಿಸಲಿದ್ದಾರೆ. ಮಧ್ಯಾಹ್ನ ಮುಯಿನಾಬಾದ್‌ನಲ್ಲಿರುವ ಫಾರ್ಮ್‌ ಹೌಸ್‌ನಲ್ಲಿ ಅಂತ್ಯಕ್ರಿಯೆಗೆ ಸಿದ್ಧತೆ ನಡೆದಿದೆ. ಪ್ರಭಾಸ್ ಮದುವೆ ಬಗ್ಗೆ ಕೃಷ್ಣಂ ರಾಜು ಬಹಳ ಕನಸು ಕಂಡಿದ್ದರು. ಆದರೆ ಆ ಆಸೆ ಈಡೇರಲೇ ಇಲ್ಲ.

  ದೊಡ್ಡಪ್ಪನ ಅಗಲಿಕೆಯಿಂದ ಪ್ರಭಾಸ್ ಕುಗ್ಗಿ ಹೋಗಿದ್ದಾರೆ. ಅವರನ್ನು ಸಮಾಧಾನ ಮಾಡಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ. ಇನ್ನು ಚಿತ್ರರಂಗದ ಗಣ್ಯರು, ರಾಜಕೀಯ ಮುಖಂಡರು ಕೃಷ್ಣಂರಾಜು ಪಾರ್ಥೀವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳುತ್ತಿದ್ದಾರೆ. ಹೈದರಾಬಾದ್‌ನ ಗಚ್ಚಿಬೊಲಿ AIG ಆಸ್ಪತ್ರೆಯಲ್ಲಿ ನಿನ್ನೆ(ಸೆಪ್ಟೆಂಬರ್ 11) ಬೆಳಗಿನ ಜಾವ 3.25ಕ್ಕೆ ಟಾಲಿವುಡ್ ರೆಬೆಲ್ ಸ್ಟಾರ್ ಕೊನೆಯುಸಿರೆಳೆದಿದ್ದರು. ವಿಚಾರ ತಿಳಿಯುತ್ತಿದ್ದಂತೆ ನಟಿ ಅನುಷ್ಕಾ ಶೆಟ್ಟಿ ಆಸ್ಪತ್ರೆಗೆ ಭೇಟಿ ನೀಡಿ ಕೃಷ್ಣಂರಾಜು ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದಿದ್ದರು.

  ಪ್ರಭಾಸ್ ಮಕ್ಕಳ ಜೊತೆ ನಟಿಸ್ಬೇಕು ಎಂದಿದ್ದ ಕೃಷ್ಣಂರಾಜು: ಪ್ರಭಾಸ್ ದುಃಖ ತಡೆಯಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ!ಪ್ರಭಾಸ್ ಮಕ್ಕಳ ಜೊತೆ ನಟಿಸ್ಬೇಕು ಎಂದಿದ್ದ ಕೃಷ್ಣಂರಾಜು: ಪ್ರಭಾಸ್ ದುಃಖ ತಡೆಯಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ!

  ಕೃಷ್ಣಂರಾಜು ಕುಟುಂಬದ ಜೊತೆ ನಟಿ ಅನುಷ್ಕಾ ಶೆಟ್ಟಿಗೆ ಆತ್ಮೀಯ ಒಡನಾಟವಿತ್ತು. ಪ್ರಭಾಸ್ ಹಾಗೂ ಅನುಷ್ಕಾ ಜೊತೆಯಾಗಿ 3 ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರಿಬ್ಬರು ಪ್ರೀತಿಯಲ್ಲಿ ಬಿದ್ದಿದ್ದಾರೆ. ಮದುವೆ ಅಗುತ್ತಾರೆ ಎನ್ನುವ ಗುಸುಗುಸು ಹಲವು ವರ್ಷಗಳಿಂದ ಕೇಳಿಬರುತ್ತಿದೆ. ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ದ ಕೃಷ್ಣಂರಾಜು, "ಅವರಿಬ್ಬರು ಒಳ್ಳೆ ಸ್ನೇಹಿತರು ಅಷ್ಟೇ" ಎಂದಿದ್ದರು. ಇನ್ನು "ಪ್ರಭಾಸ್‌ಗಾಗಿ ಒಳ್ಳೆ ಹುಡುಗಿಯನ್ನು ಹುಡುಕುತ್ತಿದ್ದೇವೆ. ಅವನು ಮದುವೆ ಆದರೆ ಎಲ್ಲರಿಗಿಂತ ಹೆಚ್ಚು ಸಂತೋಷಪಡುವವನು ನಾನೇ. ಈಗ ಅವನ ಜೊತೆ ನಟಿಸಿದ್ದೇನೆ. ಮುಂದೆ ಅವರ ಮಕ್ಕಳ ಜೊತೆಗೂ ನಟಿಸುವ ಆಸೆ ಇದೆ. ಮಕ್ಕಳನ್ನು ಎತ್ತಿ ಆಡಿಸಬೇಕು" ಎಂದು ಹೇಳಿದ್ದರು.

  ಇನ್ನು ಕೃಷ್ಣಂರಾಜು ಅಗಲಿಕೆಗೆ ಟ್ವೀಟ್ ಮಾಡಿ ಅನುಷ್ಕಾ ಸಂತಾಪ ಸೂಚಿಸಿದ್ದಾರೆ. "ಬಹಳ ಆತ್ಮೀಯರಾದ ಕೃಷ್ಣಂರಾಜು ಅವರ ಆತ್ಮಕ್ಕೆ ಶಾಂತಿ ಸಇಗಲಿ. ವಿಶಾಲ ಹೃದಯದ ದಿಗ್ಗಜರು ನೀವು. ನಮ್ಮ ಹೃದಯದಲ್ಲಿ ನೀವು ಸದಾ ಜೀವಂತ" ಎಂದು ಬರೆದುಕೊಂಡು ಕೃಷ್ಣಂ ರಾಜು ಜೊತೆಗಿನ ಫೋಟೊ ಶೇರ್ ಮಾಡಿದ್ದಾರೆ. ಪ್ರಭಾಸ್ ಜೊತೆ ಅನುಷ್ಕಾ 'ಬಿಲ್ಲಾ', 'ಮಿರ್ಚಿ' ಹಾಗೂ 'ಬಾಹುಬಲಿ' ಸರಣಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಿಲ್ಲಾ ಚಿತ್ರದಲ್ಲಿ ಕೃಷ್ಣಂರಾಜು ಕೂಡ ನಟಿಸಿದ್ದರು.

  ಕೃಷ್ಣಂರಾಜು ಅವರಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಪ್ರಭಾಸ್ ಮದುವೆ ನಂತರ ಮಕ್ಕಳಾದ ಪ್ರಸಿದ್ದ, ಪ್ರಕೀರ್ತಿ, ಪ್ರದೀಪ್ತಿ ಮದುವೆ ಮಾಡಲು ಕೃಷ್ಣಂರಾಜು ನಿರ್ಧರಿಸಿದ್ದರು. ಈ ಅವರ ಅನುಪಸ್ಥಿತಿಯಲ್ಲಿ ಪ್ರಭಾಸ್ ಸಹೋದರಿಯರ ಮದುವೆ ಜವಾಬ್ದಾರಿ ವಹಿಸಿಕೊಳ್ಳಬೇಕಿದೆ. ಜೊತೆಗೆ ತಮ್ಮ ಮದುವೆಯನ್ನು ಮಾಡಿಕೊಳ್ಳಬೇಕಿದೆ.

  English summary
  Krishnam Raju Clarity On Prabhas And Anushka Shetty Marriage. We all know that Krishnam Raju wanted to see the wedding of Prabhas, but that didn't happen.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X