twitter
    For Quick Alerts
    ALLOW NOTIFICATIONS  
    For Daily Alerts

    ರಾಜಮೌಳಿಯ ಬಲಹೀನತೆ ಬಗ್ಗೆ ಮಾತನಾಡಿದ ತಂದೆ ವಿಜಯೇಂದ್ರ ಪ್ರಸಾದ್

    |

    ನಿರ್ದೇಶಕ ರಾಜಮೌಳಿ ಭಾರತದ ಸೂಪರ್ ಸ್ಟಾರ್ ನಿರ್ದೇಶಕ. ಈವರೆಗೆ ರಾಜಮೌಳಿ ನಿರ್ದೇಶಿಸಿರುವ ಎಲ್ಲ ಸಿನಿಮಾಗಳೂ ಸೂಪರ್ ಹಿಟ್. ಯಾವ ಕೊರತೆಯೂ ಇಲ್ಲದ ಒಬ್ಬ ಪರಿಪೂರ್ಣ ನಿರ್ದೇಶಕ ರಾಜಮೌಳಿ ಎನ್ನಲಾಗುತ್ತದೆ.

    Recommended Video

    ಇದು ನನ್ನ ಮಗನ ಬಲಹೀನತೆ, ಎಷ್ಟು ಸಾರಿ ಹೇಳಿದ್ರು ಕೇಳೋಲ್ಲ

    ಆದರೆ ರಾಜಮೌಳಿಯ ತಂದೆ, ಅಪ್ರತಿಮ ಕತೆಗಾರ ಕೆವಿ ವಿಜಯೇಂದ್ರ ಪ್ರಸಾದ್ ಈ ಮಾತನ್ನು ಒಪ್ಪುವುದಿಲ್ಲ. ಮಗನ ಪ್ರತಿಭೆ ಬಗ್ಗೆ ಅಗಾಧ ಗೌರವ ವಿಜಯೇಂದ್ರ ಪ್ರಸಾದ್‌ಗೆ ಇದೆ ಆದರೆ ರಾಜಮೌಳಿಗೆ ಸಿನಿಮಾದ ಬಗ್ಗೆ ಇರುವ ಬಲಹೀನತೆ ಸಹ ವಿಜಯೇಂದ್ರ ಪ್ರಸಾದ್‌ಗೆ ಗೊತ್ತಿದೆ.

    ಇತ್ತೀಚೆಗೆ ಸಾಕಷ್ಟು ಸಂದರ್ಶನಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಕೆವಿ ವಿಜಯೇಂದ್ರ ಪ್ರಸಾದ್, ಇತ್ತೀಚೆಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡುತ್ತಾ ಆರ್‌ಆರ್‌ಆರ್ ಸಿನಿಮಾ, ಮಗ ರಾಜಮೌಳಿ, ರಾಜಮೌಳಿಯ ಬಲಹೀನತೆ, ತಮ್ಮ ಕತೆಗಳು, ಕತೆಗಳು ಹುಟ್ಟುವುದು ಹೇಗೆ ಹೀಗೆ ಹಲವಾರು ವಿಷಯಗಳನ್ನು ತೆರೆದಿಟ್ಟಿದ್ದಾರೆ.

    ''ಸಿನಿಮಾ ನಿರ್ದೇಶಕನದಲ್ಲಿ ರಾಜಮೌಳಿಗೆ ಇರುವ ಏಕೈಕ ಸಮಸ್ಯೆ ಎಂದರೆ ವೇಗ. ರಾಜಮೌಳಿ ಬಹಳ ನಿಧಾಣವಾಗಿ ಸಿನಿಮಾ ತೆಗೆಯುತ್ತಾರೆ. ನಾನು ಈವರೆಗೆ ಕನಿಷ್ಟ ನೂರು ಬಾರಿ ಈ ವಿಷಯವಾಗಿ ರಾಜಮೌಳಿಯನ್ನು ಎಚ್ಚರಿಸಿದ್ದೇನೆ. ಅದರೆ ಈಗಂತೂ ಬೇಗನೆ ಚಿತ್ರೀಕರಣ ಮಾಡು ಎಂದು ಹೇಳಲು ಸಹ ನನಗೆ ಬೇಸರವಾಗುತ್ತದೆ ಅಷ್ಟು ಬಾರಿ ಈ ವಿಷಯವನ್ನು ನಾನು ಅವನಿಗೆ ಹೇಳಿಬಿಟ್ಟಿದ್ದೇನೆ'' ಎಂದಿದ್ದಾರೆ ವಿಜಯೇಂದ್ರ ಪ್ರಸಾದ್.

    ಬಹಳ ನಿಧಾನವಾಗಿ ಚಿತ್ರೀಕರಣ ಮಾಡುತ್ತಾನೆ ರಾಜಮೌಳಿ: ವಿಜಯೇಂದ್ರ

    ಬಹಳ ನಿಧಾನವಾಗಿ ಚಿತ್ರೀಕರಣ ಮಾಡುತ್ತಾನೆ ರಾಜಮೌಳಿ: ವಿಜಯೇಂದ್ರ

    ''ರಾಜಮೌಳಿ ಬಹಳ ತಡವಾಗಿ ಚಿತ್ರೀಕರಣ ಮುಗಿಸುತ್ತಾರೆ. ಇದು ಹಲವು ಬಾರಿ ಚಿತ್ರೀಕರಣ ವೆಚ್ಚ ಹೆಚ್ಚು ಮಾಡುತ್ತದೆ. ಆದರೆ ರಾಜಮೌಳಿಗೆ ಗುಣಮಟ್ಟ ಬಹಳ ಮುಖ್ಯ ಹಾಗಾಗಿ ಆತ ಚಿತ್ರೀಕರಣ ತಡ ಮಾಡುತ್ತಾನೆ. ತೆಲುಗು ಸಿನಿ ಉದ್ಯಮದಲ್ಲಿನ ಮತ್ತೊಬ್ಬ ಪ್ರತಿಭಾವಂತ ನಿರ್ದೇಶಕ ಸುಕುಮಾರ್ ಸಹ ರಾಜಮೌಳಿಯಂತೆಯೇ ಬಹಳ ತಡವಾಗಿ ಚಿತ್ರೀಕರಣ ಮುಗಿಸುತ್ತಾನೆ'' ಎಂದು ವಿಜಯೇಂದ್ರ ಪ್ರಸಾದ್ ಹೇಳಿದ್ದಾರೆ.

    ಬಾಹುಬಲಿ ಮುಗಿಸಲು ನಾಲ್ಕು ವರ್ಷ!

    ಬಾಹುಬಲಿ ಮುಗಿಸಲು ನಾಲ್ಕು ವರ್ಷ!

    ರಾಜಮೌಳಿ ಬಹಳ ನಿಧಾನವಾಗಿ ಚಿತ್ರೀಕರಣ ಮಾಡುತ್ತಾರೆ. 11 ಸಿನಿಮಾಗಳಲ್ಲಿ ನಿರ್ದೇಶಿಸಿರುವ ರಾಜಮೌಳಿ ಯಾವ ಸಿನಿಮಾವನ್ನೂ ಸಹ ಒಂದು ವರ್ಷದಲ್ಲಿ ಮುಗಿಸಿಲ್ಲ. ಬಾಹಬಲಿಯ ಎರಡು ಭಾಗಗಳನ್ನು ಚಿತ್ರೀಕರಿಸಲು ನಾಲ್ಕು ವರ್ಷ ಸಮಯ ತೆಗೆದುಕೊಂಡಿದ್ದಾರೆ ರಾಜಮೌಳಿ. ರಾಜಮೌಳಿ ತಡವಾಗಿ ಚಿತ್ರೀಕರಣ ಮಾಡುವುದರಿಂದ ಕೆಲವು ನಾಯಕ ನಟರು ರಾಜಮೌಳಿ ಜೊತೆಗೆ ಜಗಳವಾಡಿದ್ದೂ ಇದೆ. ಬಾಹುಬಲಿ ಸಮಯದಲ್ಲಿ ನಟ ಪ್ರಭಾಸ್, ಈಗ 'ಆರ್‌ಆರ್‌ಆರ್' ಚಿತ್ರೀಕರಣ ಸಮಯದಲ್ಲಿ ಜೂ.ಎನ್‌ಟಿಆರ್ ರಾಜಮೌಳಿ ವಿರುದ್ಧ ಅಸಮಾಧಾನಗೊಂಡಿದ್ದರು.

    ಮಹಾಭಾರತ, ಚಂದಾಮಾಮ ಕತೆಗಳ ಪ್ರಭಾವ

    ಮಹಾಭಾರತ, ಚಂದಾಮಾಮ ಕತೆಗಳ ಪ್ರಭಾವ

    ಇನ್ನು ತಮ್ಮ ಕತೆಗಳ ಬಗ್ಗೆ ಮಾತನಾಡಿದ ಕೆವಿ ವಿಜಯೇಂದ್ರ ಪ್ರಸಾದ್, ''ನನ್ನ ಕತೆಗಳು ಚಂದಮಾಮ, ಮಹಾಭಾರತ, ರಾಮಾಯಣ, ಪಂಚತಂತ್ರ ಆ ಕತೆಗಳಿಂದಲೇ ಹುಟ್ಟುತ್ತವೆ. ಮಹಾಭಾರತದ ಕತೆಯನ್ನು ಈ ಸಂದರ್ಭಕ್ಕೆ ಒಗ್ಗಿಸಬೇಕು ಎಂದೇನೂ ನಾನು ಬಲವಂತವಾಗಿ ಕತೆ ಬರೆಯುವುದಿಲ್ಲವಾದರೂ ಆ ಕತೆಗಳ ಪ್ರಭಾವ ನನ್ನ ಮೇಲೆ ಎಷ್ಟಿದೆಯೆಂದರೆ ನನ್ನ ಕತೆಗಳ ಮೇಲೆ ಮಹಾಭಾರತ, ಚಂದಾಮಾಮ ಕತೆಗಳು ಪರೋಕ್ಷವಾಗಿ ಪ್ರಭಾವ ಬೀರಿಬಿಟ್ಟಿರುತ್ತವೆ. ನಾನು ಸಾಮಾನ್ಯವಾಗಿ ಯಾವ ಕತೆಯನ್ನೂ ಬರೆಯುವುದಿಲ್ಲ ಬದಲಾಗಿ ಹೇಳುತ್ತೇನೆ. ಎಲ್ಲವೂ ತಲೆಯೊಳಗೆ ಭದ್ರವಾಗಿರುತ್ತವೆ ಅದೇ ಕತೆಗಳನ್ನು ಹೇಳುತ್ತೇನೆ. ಯಾರಿಗೆ ಕತೆ ಇಷ್ಟವಾಗುತ್ತದೆಯೋ ಅವರು ಕತೆಯನ್ನು ಬರೆದುಕೊಳ್ಳುತ್ತಾರೆ'' ಎಂದಿದ್ದಾರೆ ಕೆವಿ ವಿಜಯೇಂದ್ರ ಪ್ರಸಾದ್.

    ಕನ್ನಡದ ಮೂರು ಸಿನಿಮಾಗಳಿಗೆ ಕತೆ

    ಕನ್ನಡದ ಮೂರು ಸಿನಿಮಾಗಳಿಗೆ ಕತೆ

    ವಿಜಯೇಂದ್ರ ಪ್ರಸಾದ್ ಬಹಳ ಹಿರಿಯ ಕತೆಗಾರರು. ಈ ವರೆಗೆ ನಾಲ್ಕು ಸಿನಿಮಾಗಳನ್ನು ವಿಜಯೇಂದ್ರ ಪ್ರಸಾದ್ ನಿರ್ದೇಶಿಸಿದ್ದಾರೆ. ಆದರೆ ಹಲವಾರು ಸೂಪರ್ ಹಿಟ್ ಸಿನಿಮಾಗಳಿಗೆ ಕತೆ ಒದಗಿಸಿದ್ದಾರೆ. ಕನ್ನಡದಲ್ಲಿ ಶಿವರಾಜ್ ಕುಮಾರ್ ನಟನೆಯ 'ಕುರುಬನ ರಾಣಿ', ವಿಷ್ಣುವರ್ಧನ್ ನಟಿಸಿರುವ ಸೂಪರ್ ಹಿಟ್ ಸಿನಿಮಾ 'ಅಪ್ಪಾಜಿ', ನಿಖಿ್ಲ್ ಕುಮಾರಸ್ವಾಮಿ ನಟಿಸಿದ ಮೊದಲ ಸಿನಿಮಾ 'ಜಾಗ್ವಾರ್‌'ಗೆ ಕತೆ ಕೊಟ್ಟಿರುವುದು ಇದೇ ವಿಜಯೇಂದ್ರ ಪ್ರಸಾದ್. ರಾಜಮೌಳಿ ನಿರ್ದೇಶಿಸಿರುವ 11 ಸಿನಿಮಾಗಳಲ್ಲಿ 9 ಸಿನಿಮಾಕ್ಕೆ ವಿಜಯೇಂದ್ರ ಪ್ರಸಾದ್ ಕತೆ ಒದಗಿಸಿದ್ದಾರೆ. ಹಿಂದಿಯಲ್ಲಿ ಸಲ್ಮಾನ್ ಖಾನ್, ಕಂಗನಾ ರಣೌತ್ ಸಿನಿಮಾಗಳಿಗೂ ಕತೆ ಒದಗಿಸಿದ್ದಾರೆ. ಇದೀಗ ಸೀತಾ ಮಾತೆಯ ಬಗ್ಗೆ ಭಾರಿ ಬಜೆಟ್‌ನ ಸಿನಿಮಾ ನಿರ್ದೇಶಿಸಲು ಮುಂದಾಗಿದ್ದು ನಾಯಕಿಯ ಹುಡುಕಾಟದಲ್ಲಿದ್ದಾರೆ.

    English summary
    Story writer KV Vijayendra Prasad talked about his son director Rajamouli's weakness. Vijayednra Prasad said Rajamouli take so much time to finish a movie.
    Friday, August 6, 2021, 9:42
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X