For Quick Alerts
  ALLOW NOTIFICATIONS  
  For Daily Alerts

  'ಪುಷ್ಪ' ಮಾದರಿಯಲ್ಲಿರಲಿದೆ 'ಲೈಗರ್' ಕ್ಲೈಮ್ಯಾಕ್ಸ್!

  |

  ಪ್ಯಾನ್ ಸಿನಿಮಾಗಳ ಸಾಲಿನಲ್ಲಿ ದೊಡ್ಡ ಮಟ್ಟದ ಕ್ರೇಜ್ ಹುಟ್ಟು ಹಾಕಿರುವ ಮತ್ತೊಂದು ಸಿನಿಮಾ ಎಂದರೆ ಅದು 'ಲೈಗರ್'. ವಿಜಯ್ ದೇವರಕೊಂಡ ಅಭಿನಯದ 'ಲೈಗರ್' ಸಿನಿಮಾ ತೆರೆಗೆ ಬರಲಿರುವ ಮುಂದಿನ ಪ್ಯಾನ್ ಇಂಡಿಯಾ ಸಿನಿಮಾ.

  ಸಿನಿಮಾ ರಿಲೀಸ್ ದಿನಾಂಕ ಹತ್ತಿರ ಆಗುತ್ತಿದ್ದ ಹಾಗೆ, ಸಿನಿಮಾದ ಪ್ರಚಾರ ಕಾರ್ಯವನ್ನು ಸಿನಿಮಾತಂಡ ದೊಡ್ಡ ಮಟ್ಟದಲ್ಲಿ ಮಾಡುತ್ತಿದೆ. ಪ್ರಚಾರದ ಭಾಗವಾಗಿ ವಿಜಯ್ ದೇವರಕೊಂಡ, ಅನನ್ಯಾ ಪಾಂಡೆ ಮತ್ತು ಇಡೀ ಚಿತ್ರತಂಡ ಭಾರತದಾದ್ಯಂತ ಸುತ್ತಿದೆ.

  ಬೆಂಗಳೂರಿನಲ್ಲಿ 'ಲೈಗರ್' ತಂಡ: ಅಪ್ಪು ಆಶೀರ್ವಾದ ಪಡೆದ ವಿಜಯ್ ದೇವರಕೊಂಡ!ಬೆಂಗಳೂರಿನಲ್ಲಿ 'ಲೈಗರ್' ತಂಡ: ಅಪ್ಪು ಆಶೀರ್ವಾದ ಪಡೆದ ವಿಜಯ್ ದೇವರಕೊಂಡ!

  ಈ ನಡುವೆ ಸಿನಿಮಾದ ಬಗ್ಗೆ ಹೊಸ ಸುದ್ದಿ ಒಂದು ಹರಿದಾಡುತ್ತಾ ಇದೆ. ಲೈಗರ್ ಚಿತ್ರದ ಕ್ಲೈಮ್ಯಾಕ್ಸ್ ಹೇಗೆ ಇರಲಿದೆ ಎನ್ನುವ ವಿಚಾರ ಹೊರ ಬಂದಿದೆ. ಇದನ್ನು ಸ್ವತಃ ನಿರ್ದೇಶಕ ಪೂರಿ ಜಗನ್ನಾಥ್ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಆ ಸೀಕ್ರೇಟ್ ಏನು ಎನ್ನುವುದನ್ನು ಮುಂದೆ ಓದಿ...

  ಸೀಕ್ರೆಟ್ ಹೇಳಿದ ಲೈಗರ್ ಡೈರೆಕ್ಟರ್!

  ಸೀಕ್ರೆಟ್ ಹೇಳಿದ ಲೈಗರ್ ಡೈರೆಕ್ಟರ್!

  ಲೈಗರ್ ಸಿನಿಮಾ ಬಾಕ್ಸಾರ್ ಒಬ್ಬನ ಜೀವನದ ಕಥೆ ಎನ್ನುವುದು ಈಗಾಗಲೇ ಗೊತ್ತಾಗಿದೆ. ವಿಜಯ್ ದೇವರಕೊಂಡ ಕೂಡ ಬಾಕ್ಸರ್ ಆಗಿ ಅಬ್ಬರಿಸಿದ್ದಾರೆ. ಸಾಮಾನ್ಯವಾಗಿ ಸಿನಿಮಾದ ಕಥೆಯ ಬಗ್ಗೆ, ರಿಲೀಸ್‌ಗೂ ಮುನ್ನ ನಟ ತಂಡ ಹೆಚ್ಚಿನ ಮಾಹಿತಿಯನ್ನು ಬಿಟ್ಟು ಕೊಡುವುದಿಲ್ಲ. ಆದರೆ ನಿರ್ದೇಶಕ ಪೂರಿ ಜಗನ್ನಾಥ್ 'ಲೈಗರ್' ಚಿತ್ರದ ಕ್ಲೈಮ್ಯಾಕ್ಸ್ ಬಗ್ಗೆ ಹೇಳಿ ನಿರೀಕ್ಷೆ ಹೆಚ್ಚು ಮಾಡಿದ್ದಾರೆ. ಲೈಗರ್ ಕ್ಲೈ ಮ್ಯಾಕ್ಸ್ ಹೇಗೆ ಇರಲಿದೆ ಎನ್ನುವುದನ್ನು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ ಪೂರಿ ಜಗನ್ನಾಥ್.

  'ಲೈಗರ್' ಬಾಕ್ಸಾಫೀಸ್ ಭವಿಷ್ಯವೇನು? ಬಾಯ್‌ಕಾಟ್ ಮಧ್ಯೆ ಪ್ರೀಮಿಯರ್ ಬುಕಿಂಗ್ ಹೇಗಿದೆ?'ಲೈಗರ್' ಬಾಕ್ಸಾಫೀಸ್ ಭವಿಷ್ಯವೇನು? ಬಾಯ್‌ಕಾಟ್ ಮಧ್ಯೆ ಪ್ರೀಮಿಯರ್ ಬುಕಿಂಗ್ ಹೇಗಿದೆ?

  'ಪುಷ್ಪ' ಮಾದರಿಯಲ್ಲಿ 'ಲೈಗರ್' ಕ್ಲೈಮ್ಯಾಕ್ಸ್!

  'ಪುಷ್ಪ' ಮಾದರಿಯಲ್ಲಿ 'ಲೈಗರ್' ಕ್ಲೈಮ್ಯಾಕ್ಸ್!

  'ಲೈಗರ್' ಸಿನಿಮಾದ ಕ್ಲೈಮ್ಯಾಕ್ಸ್ ಬಗ್ಗೆ ಪೂರಿ ಜಗನ್ನಾಥ್ ಹೇಳಿದ್ದಾರೆ. ಈ ಸಿನಿಮಾದ ಕ್ಲೈಮ್ಯಾಕ್ಸ್ 'ಪುಷ್ಪ' ಚಿತ್ರದ ಕ್ಲೈಮ್ಯಾಕ್ಸ್ ಮಾದರಿಯಲ್ಲಿ ಇರಲಿದೆಯಂತೆ. ಮೈಕ್ ಟೈಸನ್ ಮತ್ತು ವಿಜಯ್ ದೇವರಕೊಂಡ ನಡುವೆ ಕ್ಲೈಮ್ಯಾಕ್ಸ್‌ನಲ್ಲಿ ದೊಡ್ಡ ಮಟ್ಟದ ಫೈಟ್ ಇರಲಿದೆಯಂತೆ. ಪುಷ್ಪ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಮತ್ತು ಫಹಾದ್ ಫಾಸಿಲ್ ನಡುವೆ ಕ್ಲೈಮ್ಯಾಕ್ಸ್ ಫೈಟ್ ಇದೆ. ಅದೇ ಮಾದರಿಯಲ್ಲಿ ಲೈಗರ್ ಚಿತ್ರದಲ್ಲೂ ಫೈಟ್ ಇರಲಿದೆಯಂತೆ. ಜೊತೆಗೆ ನಟಿ ಅನನ್ಯಾ ಪಾಂಡೆ ಕೂಡ ಇರಲಿದ್ದಾರಂತೆ.

  ಪ್ರಚಾರದಲ್ಲಿ ಚಿತ್ರತಂಡ ಬ್ಯುಸಿ!

  ಪ್ರಚಾರದಲ್ಲಿ ಚಿತ್ರತಂಡ ಬ್ಯುಸಿ!

  'ಲೈಗರ್' ಸಿನಿಮಾ ಪ್ಯಾನ್ಇಂಡಿಯಾ ಸಿನಿಮಾ. ಹಾಗಾಗಿ ಕನ್ನಡದಲ್ಲೂ ಕೂಡ ಈ ಸಿನಿಮಾ ತೆರೆಗೆ ಬರುತ್ತಿದೆ. ಹಾಗಾಗಿ ಚಿತ್ರತಂಡ ಬೆಂಗಳೂಗೆ ಭೇಟಿ ಕೊಟ್ಟಿತ್ತು. ಆಗಸ್ಟ್ 19ರಂದು ಬೆಂಗಳೂರಿನಲ್ಲಿ 'ಲೈಗರ್' ಪತ್ರಿಕಾಗೋಷ್ಠಿ ನಡೆಯಿತು. ಜೊತೆಗೆ ಪ್ರೀ- ರಿಲೀಸ್ ಕಾರ್ಯಕ್ರಮ ಕೂಡ ನಡೆದಿದೆ. ಈ ವೇಳೆ ವಿಜಯ್ ದೇವರಕೊಂಡನನ್ನು ನೋಡಲು ಅಭಿಮಾನಿಗಳು ಮುತ್ತಿಕೊಂಡಿದ್ದರು.

  ಆಗಸ್ಟ್ 25ಕ್ಕೆ 'ಲೈಗರ್' ರಿಲೀಸ್!

  ಆಗಸ್ಟ್ 25ಕ್ಕೆ 'ಲೈಗರ್' ರಿಲೀಸ್!

  ಆಗಸ್ಟ್ 25ಕ್ಕೆ ಲೈಗರ್ ಸಿನಿಮಾ ವಿಶ್ವದಾದ್ಯಂತ ರಿಲೀಸಾಗುತ್ತಿದೆ. ಈ ಚಿತ್ರಕ್ಕೆ ಪುರಿ ಜಗನ್ನಾಥ್ ನಿರ್ದೇಶನವಿದ್ದು, ಚಾರ್ಮಿ ಕೌರ್ ಬಂಡವಾಳ ಹೂಡಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಚಿತ್ರದ ಟ್ರೈಲರ್ ಹಾಡು ಮತ್ತು ಟೀಸರ್ ಸಾಕಷ್ಟು ನಿರೀಕ್ಷೆಯನ್ನು ಮೂಡಿಸಿದೆ. ಈ ಚಿತ್ರದ ಮೂಲಕ ಪ್ಯಾನ್‌ಇಂಡಿಯಾ ಸ್ಟಾರ್ ಆಗಿ ವಿಜಯ್ ದೇವರಕೊಂಡ ಹೇಗೆ ಮಿಂಚಲಿದ್ದಾರೆ ಎನ್ನುವುದನ್ನು ನೋಡಬೇಕಿದೆ.

  English summary
  Liger Claimax Will Be Like Pushpa Claimax, Liger Claimax Review Is Here., Know More,
  Monday, August 22, 2022, 17:35
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X